ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಾರತ-ಪಾಕ್‌ ಉದ್ವಿಗ್ನತೆ ಬೆನ್ನಲ್ಲೇ ಕರಾಚಿಯಿಂದ ದಾವೂದ್‌ ಪಲಾಯನ?

ಹಲವು ವರ್ಷಗಳಿಂದ ಪಾಕಿಸ್ತಾನದ ಕರಾಚಿ ನಗರದಲ್ಲಿ ದಾವೂದ್ ಇಬ್ರಾಹಿಂ ಸೇರಿ ಅವನ ವಿಶೇಷ ಸಹಾಯಕರಾದ ಚೋಟಾ ಶಕೀಲ್ ಮತ್ತು ಮುನ್ನಾ ಜಿಂಗ್ರಾರನ್ನು ಪಾಕ್‌ ಅಡಗಿಸಿಟ್ಟಿದೆ. ಆದರೆ ಕರಾಚಿ ಮೇಲೆಯೇ ಭಾರತ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ಮಾಡಿದ ಕಾರಣ ಈ ಮೂವರೂ ಪಾಕಿಸ್ತಾನವನ್ನು ತೊರೆದು ಬೇರೆ ದೇಶಕ್ಕೆ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.

ಭಾರತ-ಪಾಕ್‌ ಉದ್ವಿಗ್ನತೆ ಬೆನ್ನಲ್ಲೇ  ಕರಾಚಿಯಿಂದ ದಾವೂದ್‌ ಪಲಾಯನ?

Profile Abhilash BC May 10, 2025 9:21 AM

ಕರಾಚಿ: ಭಾರತ ನಡೆಸಿದ ‘ಆಪರೇಷನ್‌ ಸಿಂದೂರ’ದಿಂದ(Operation Sindoor) ಕಂಗೆಟ್ಟು ಹತಾಶವಾಗಿ ಪ್ರತಿದಾಳಿ ನಡೆಸುತ್ತಿರುವ ಪಾಕಿಸ್ತಾನ ಕಳೆದ ಎರಡು ದಿನಗಳಿಂದ ಭಾರತದ ಮೇಲೆ ಡ್ರೋನ್ ದಾಳಿ ಮುಂದುವರಿಸಿದೆ. ಆದರೆ ಪಾಕ್‌ನ ಎಲ್ಲ ದಾಳಿಗಳನ್ನು ಭಾರತ ವಿಫಲಗೊಳಿಸಿದೆ. ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಭೀತಿ(india pakistan tension) ಉಂಟಾಗಿದ್ದು, ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ(dawood ibrahim) ಪಾಕಿಸ್ತಾನದಿಂದ ಪಲಾಯನ ಮಾಡಿದ್ದಾನೆ ಎಂದು ವರದಿಗಳು ಹೇಳಿವೆ.

ಹಲವು ವರ್ಷಗಳಿಂದ ಪಾಕಿಸ್ತಾನದ ಕರಾಚಿ ನಗರದಲ್ಲಿ ದಾವೂದ್ ಇಬ್ರಾಹಿಂ ಸೇರಿ ಅವನ ವಿಶೇಷ ಸಹಾಯಕರಾದ ಚೋಟಾ ಶಕೀಲ್ ಮತ್ತು ಮುನ್ನಾ ಜಿಂಗ್ರಾರನ್ನು ಪಾಕ್‌ ಅಡಗಿಸಿಟ್ಟಿದೆ. ಆದರೆ ಕರಾಚಿ ಮೇಲೆಯೇ ಭಾರತ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ಮಾಡಿದ ಕಾರಣ ಈ ಮೂವರೂ ಪಾಕಿಸ್ತಾನವನ್ನು ತೊರೆದು ಬೇರೆ ದೇಶಕ್ಕೆ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.

ರಜೌರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು

ಶನಿವಾರ ಜಮ್ಮು–ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ಭಾಗಗಳಲ್ಲಿ ಪಾಕಿಸ್ತಾನದ ಸೇನಾ ಪಡೆ ನಡೆಸಿದ ತೀವ್ರ ಗುಂಡಿನ ದಾಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜ್ ಕುಮಾರ್ ಮೃತಪಟ್ಟಿದ್ದು, ಇಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಜೌರಿ ನಗರದಲ್ಲಿರುವ ಜಿಲ್ಲಾಧಿಕಾರಿಗಳ ನಿವಾಸಕ್ಕೆ ಪಾಕ್‌ನ ಶೆಲ್ ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರಾಜ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ರಾಜ್ ಕುಮಾರ್ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ Operation Sindoor: ಪಾಕಿಸ್ತಾನಿಂದ ನಾಗರಿಕ ಪ್ರದೇಶದ ಮೇಲೆ ಶೆಲ್‌ ದಾಳಿ; ಆಡಳಿತಾಧಿಕಾರಿ ಬಲಿ, ಹಲವರಿಗೆ ಗಾಯ

ಪಾಕ್‌ನ 4 ವಾಯುನೆಲೆ ಧ್ವಂಸ

ಭಾರತೀಯ ಸಶಸ್ತ್ರ ಪಡೆಗಳು ಶನಿವಾರ ಬೆಳಗ್ಗಿನ ಜಾವ ಕ್ಷಿಪಣಿ ದಾಳಿ ನಡೆಸಿದ್ದು ಇಸ್ಲಾಮಾಬಾದ್‌ನ ನಾಲ್ಕು ವಾಯುನೆಲೆಗಳನ್ನು ಧ್ವಂಸ ಮಾಡಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಮಿಲಿಟರಿ ವರದಿಯ ಪ್ರಕಾರ, ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ ಸೇರಿದಂತೆ ಮೂರು ವಾಯುಪಡೆಯ ನೆಲೆಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎನ್ನಲಾಗಿದೆ.