ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Infiltration In JK: ಬಾರಾಮುಲ್ಲಾದಲ್ಲಿ ಪಾಕ್‌ನಿಂದ ಒಳಸುಳುವಿಕೆಗೆ ಯತ್ನ; ಕಾರ್ಯಾಚರಣೆಯಲ್ಲಿ ಸೈನಿಕ ಹುತಾತ್ಮ

ಆಗಸ್ಟ್ 12 ಮತ್ತು 13 ರ ಮಧ್ಯರಾತ್ರಿ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ಟಿಕ್ಕಾ ಪೋಸ್ಟ್ ಬಳಿಯ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭಯೋತ್ಪಾದಕರು ನಡೆಸಿದ ಪ್ರಮುಖ ಒಳನುಸುಳುವಿಕೆ ಪ್ರಯತ್ನ ಮತ್ತು ದಾಳಿಯನ್ನು ಭಾರತೀಯ ಸೇನಾ ಪಡೆಗಳು ವಿಫಲಗೊಳಿಸಿವೆ.

ಪಾಕ್‌ನಿಂದ ಒಳಸುಳುವಿಕೆಗೆ ಯತ್ನ; ಕಾರ್ಯಾಚರಣೆಯಲ್ಲಿ ಸೈನಿಕ ಹುತಾತ್ಮ

Vishakha Bhat Vishakha Bhat Aug 13, 2025 12:21 PM

ಶ್ರೀನಗರ: ಆಗಸ್ಟ್ 12 ಮತ್ತು 13 ರ ಮಧ್ಯರಾತ್ರಿ ಬಾರಾಮುಲ್ಲಾ ಜಿಲ್ಲೆಯ (Infiltration In JK) ಉರಿ ಸೆಕ್ಟರ್‌ನ ಟಿಕ್ಕಾ ಪೋಸ್ಟ್ ಬಳಿಯ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭಯೋತ್ಪಾದಕರು ನಡೆಸಿದ ಪ್ರಮುಖ ಒಳನುಸುಳುವಿಕೆ ಪ್ರಯತ್ನ ಮತ್ತು ದಾಳಿಯನ್ನು ಭಾರತೀಯ ಸೇನಾ ಪಡೆಗಳು ವಿಫಲಗೊಳಿಸಿವೆ. ಉರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಭಾರತೀಯ ಸೇನಾ ಸೈನಿಕರ ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕರು ಮುಂಚೂಣಿಯ ಪೋಸ್ಟ್ ಮೇಲೆ ಬಿಎಟಿ ದಾಳಿ ನಡೆಸಲು ಪ್ರಯತ್ನಿಸಿದರು, ಆದರೆ ಜಾಗೃತ ಪಡೆಗಳು ಪ್ರತಿದಾಳಿ ನಡೆಸಿ, ಅವರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದವು ಎಂದು ಸೇನೆ ತಿಳಿಸಿದೆ.

ದಟ್ಟಾರಣ್ಯದಲ್ಲಿ ಅಡಗಿದ್ದ ನುಸುಳುಕೋರರನ್ನು ಪತ್ತೆಹಚ್ಚಲು ಆ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ನುಸುಳು ಕೋರರು ಹಾಗೂ ಭದ್ರತಾಪಡೆಗಳ ನಡುವೆ ಗುಂಡಿನ ಚಕಮಕಿ ಏರ್ಪಟ್ಟಿತ್ತು. ಗುಂಡಿನ ಚಕಮಕಿಯಲ್ಲಿ, ಹವಾಲ್ದಾರ್ ಅಂಕಿತ್ ಮತ್ತು ಸಿಪಾಯಿ ಬಾನೋತ್ ಅನಿಲ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಏತನ್ಮಧ್ಯೆ, ನಿನ್ನೆ ಬಾರಾಮುಲ್ಲಾದಲ್ಲಿ ಕರ್ತವ್ಯದ ವೇಳೆ ಒಳನುಸುಳುಕೋರರನ್ನು ತಡೆಯುವ ಕಾರ್ಯಾಚರಣೆಯಲ್ಲಿ, ಓರ್ವ ಸೈನಿಕ ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಸಿದೆ. "ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಕರ್ತವ್ಯದ ವೇಳೆ ಪ್ರಾಣ ತ್ಯಾಗ ಮಾಡಿದ ಸಿಪಾಯಿ ಬನೋತ್ ಅನಿಲ್ ಕುಮಾರ್ ಅವರ ಅತ್ಯುನ್ನತ ತ್ಯಾಗಕ್ಕೆ ಭಾರತೀಯ ಸೇನೆಯ ಸಿಒಎಎಸ್ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಎಲ್ಲಾ ಶ್ರೇಣಿಗಳು ಗೌರವ ಸಲ್ಲಿಸುತ್ತದೆ ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.

ಈ ಸುದ್ದಿಯನ್ನೂ ಓದಿ: Kashmiri Pandit Murder: 35 ವರ್ಷಗಳ ಹಿಂದಿನ ಪ್ರಕರಣಕ್ಕೆ ಮತ್ತೆ ಜೀವ; ಕಾಶ್ಮೀರಿ ಪಂಡಿತ ಮಹಿಳೆಯ ಕೊಲೆ ಕೇಸ್‌ ರಿಓಪನ್‌

ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಲೇ ಇದೆ. ಆಪರೇಷನ್‌ ಅಖಾಲ್‌ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಲ್ಲಿ ಈ ವರೆಗೆ ಐದು ಉಗ್ರರನ್ನು ಹೊಡೆದುರುಳಿಸಾಲಾಗಿದ್ದು, ಇಬ್ಬರನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಕಳೆದ ವಾರ ಶ್ರೀನಗರದ ದಾಚಿಗಾಮ್‌ನಲ್ಲಿ ದಾಳಿಯ ಮಾಸ್ಟರ್‌ಮೈಂಡ್ ಸುಲೇಮಾನ್ ಶಾ ಸೇರಿದಂತೆ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ಮರುದಿನ, ‘ಆಪರೇಷನ್ ಶಿವ ಶಕ್ತಿ’ ಅಡಿಯಲ್ಲಿ ಪೂಂಚ್ ವಲಯದ ಗಡಿರೇಖೆಯಲ್ಲಿ ಒಳನುಸುಳಲು ಯತ್ನಿಸಿದ ಇನ್ನಿಬ್ಬರು ಭಯೋತ್ಪಾದಕರನ್ನು ನಿಷ್ಕ್ರಿಯಗೊಳಿಸಲಾಯಿತು. ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಹಲವು ಭಯೋತ್ಪಾದಕರು ಮತ್ತು ಬೆಂಬಲಿಗರನ್ನು ಬಂಧಿಸಲಾಗಿದೆ.