ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kashmiri Pandit Murder: 35 ವರ್ಷಗಳ ಹಿಂದಿನ ಪ್ರಕರಣಕ್ಕೆ ಮತ್ತೆ ಜೀವ; ಕಾಶ್ಮೀರಿ ಪಂಡಿತ ಮಹಿಳೆಯ ಕೊಲೆ ಕೇಸ್‌ ರಿಓಪನ್‌

35 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತ್ ಮಹಿಳೆಯ ಹತ್ಯೆಯ ತನಿಖೆ ಇದೀಗ ಮತ್ತೆ ಪ್ರಾರಂಭವಾಗಿದೆ. ಏಪ್ರಿಲ್ 1990 ರಲ್ಲಿ ಸೌರಾದಲ್ಲಿರುವ ಶೇರ್-ಎ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ ಸರಳಾ, ಶ್ರೀನಗರದ ಡೌನ್‌ಟೌನ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಕಾಶ್ಮೀರಿ ಪಂಡಿತ ಮಹಿಳೆಯ ಕೊಲೆ ಕೇಸ್‌ ರಿಓಪನ್‌

Vishakha Bhat Vishakha Bhat Aug 12, 2025 12:12 PM

ಬರೋಬ್ಬರಿ 35 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತ್ ಮಹಿಳೆಯ ಹತ್ಯೆಯ ತನಿಖೆ ಇದೀಗ ಮತ್ತೆ ಪ್ರಾರಂಭವಾಗಿದೆ. ತನಿಖೆಯ ಭಾಗವಾಗಿ ರಾಜ್ಯ ತನಿಖಾ ಸಂಸ್ಥೆ ಮಂಗಳವಾರ ಮಧ್ಯ ಕಾಶ್ಮೀರದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದೆ. ಕೊಲೆಯಾದ ಮಹಿಳೆ ಸರಳಾ ಭಟ್‌ ಎಂಬುವವರಾಗಿದ್ದು, ಹತ್ಯೆಗೆ ಸಂಬಂಧಿಸಿದಂತೆ ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ನೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದ ಹಲವಾರು ವ್ಯಕ್ತಿಗಳ ನಿವಾಸಗಳ ಮೇಲೆ ಏಜೆನ್ಸಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 1990 ರಲ್ಲಿ ಸೌರಾದಲ್ಲಿರುವ ಶೇರ್-ಎ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ ಸರಳಾ, ಶ್ರೀನಗರದ ಡೌನ್‌ಟೌನ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದೀಗ ಆ ಪ್ರಕರಣವನ್ನು ಮತ್ತೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುವ ಏಜೆನ್ಸಿಯ ಅಧಿಕಾರಿಗಳು ಜೆಕೆಎಲ್‌ಎಫ್‌ನ ಮಾಜಿ ನಾಯಕ ಪೀರ್ ನೂರುಲ್ ಹಕ್ ಶಾ ಅಲಿಯಾಸ್ ಏರ್ ಮಾರ್ಷಲ್ ಅವರ ಮನೆಗಳನ್ನು ಶೋಧಿಸಿದ್ದಾರೆ.

ಯಾರು ಈ ಸರಳಾ ಭಟ್‌?

ಅನಂತನಾಗ್ ಜಿಲ್ಲೆಯವರಾದ ಭಟ್, SKIMS ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸೌರಾದ ಶೇರ್-ಎ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆ (SKIMS) ನಲ್ಲಿರುವ ಅವರ ಹಾಸ್ಟೆಲ್‌ನಿಂದ ಅವರನ್ನು ಅಪಹರಿಸಲಾಯಿತು. ಕೆಲವು ದಿನಗಳ ನಂತರ, ಏಪ್ರಿಲ್ 19, 1990 ರಂದು, ಶ್ರೀನಗರದ ಮಾಲ್ಬಾಗ್ ಪ್ರದೇಶದಲ್ಲಿ ಅವರ ದೇಹ ಪತ್ತೆಯಾಗಿತ್ತು. ಅವರನ್ನು ಅತ್ಯಾಚಾರ ಮಾಡಿ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯ ಹಿಂದೆ ಜೆಕೆಎಲ್‌ಎಫ್ ಸಂಘಟನೆಯಿದೆ ಎಂದು ಹೇಳಲಾಗಿದೆ. ಇದು ಕೇವಲ ಅತ್ಯಾಚಾರ ಪ್ರಕರಣವಲ್ಲ, ಬದಲಾಗಿ ಕಾಶ್ಮೀರಿ ಪಂಡಿತರನ್ನು ಭಯಗೊಳಿಸಲು ಮಾಡಿದ್ದ ಯೋಜನೆಯಾಗಿತ್ತು ಎಂದು ಆರೋಪವಿತ್ತು.

ಈ ಸುದ್ದಿಯನ್ನೂ ಓದಿ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಗ್ರಾಮಸ್ಥರಿಂದ ಭಾರಿ ಆಕ್ರೋಶ, ವಾಹನಗಳು ಧ್ವಂಸ

ಇತ್ತೀಚೆಗೆ ಪ್ರಕರಣವನ್ನು ಕೈಗೆತ್ತಿಕೊಂಡ ಏಜೆನ್ಸಿಯು ಜೆಕೆಎಲ್‌ಎಫ್‌ನ ಮಾಜಿ ಮುಖ್ಯಸ್ಥ ಯಾಸಿನ್ ಮಲಿಕ್ ಅವರ ಶ್ರೀನಗರದ ಮೈಸುಮಾ ಪ್ರದೇಶದಲ್ಲಿನ ನಿವಾಸದ ಮೇಲೂ ದಾಳಿ ನಡೆಸಿತ್ತು. ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಮಲಿಕ್ ಪ್ರಸ್ತುತ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ದಾಳಿಗಳ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.