ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UPI Rules: ಆ. 1 ರಿಂದ UPI ನಿಯಮದಲ್ಲಿ ಭಾರೀ ಬದಲಾವಣೆ; ಏನೆಲ್ಲ ರೂಲ್ಸ್‌ ಗೊತ್ತಾ?

ಯುಪಿಐ (UPI) ಬಳಕೆದಾರರಿಗೆ ಹೊಸ ನಿಯಮಗಳು ಜಾರಿಯಾಗಲಿವೆ. ಆಗಸ್ಟ್ 1 ರಿಂದ UPI ವಹಿವಾಟುಗಳ ವೇಗ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸುವ ಸಲುವಾಗಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಈ ನವೀಕರಣಗಳನ್ನು ಪರಿಚಯಿಸುತ್ತಿದೆ.

ಆ. 1 ರಿಂದ UPI ನಿಯಮದಲ್ಲಿ ಭಾರೀ ಬದಲಾವಣೆ

Vishakha Bhat Vishakha Bhat Jul 25, 2025 7:29 PM

ನವದೆಹಲಿ: ಯುಪಿಐ ಬಳಕೆದಾರರಿಗೆ ಹೊಸ ನಿಯಮಗಳು ಜಾರಿಯಾಗಲಿವೆ. ಆಗಸ್ಟ್ 1 ರಿಂದ UPI ವಹಿವಾಟುಗಳ ವೇಗ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು (UPI Rules) ಸುಧಾರಿಸುವ ಸಲುವಾಗಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಈ ನವೀಕರಣಗಳನ್ನು ಪರಿಚಯಿಸುತ್ತಿದೆ. ಗೂಗಲ್‌ ಪೇ, ಫೋನ್‌ ಪೇ ಸೇರಿದಂತೆ ಹಲವು ಅಪ್ಲಿಕೇಶನ್‌ಗಳನ್ನು ಸಕ್ರಿಯವಾಗಿ ಬಳಸುತ್ತಿದ್ದರೆ, ಈ ಬದಲಾವಣೆಗಳು ನೀವು ಬ್ಯಾಲೆನ್ಸ್‌ಗಳನ್ನು ಪರಿಶೀಲಿಸುವ, ಪಾವತಿಗಳನ್ನು ಮಾಡುವ ಮತ್ತು ನಿಮ್ಮ ವಹಿವಾಟುಗಳನ್ನು ನಿರ್ವಹಿಸುವ ವಿಧಾನದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.

ಯುಪಿಐ ನಿಯಮಗಳು ಯಾವುವು?

  • ನೀವು ದಿನಕ್ಕೆ ಎಷ್ಟು ಬಾರಿ ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಬಹುದು ಎಂಬುದಕ್ಕೆ ಮಿತಿ ಇರುತ್ತದೆ (ದಿನಕ್ಕೆ 50 ಬಾರಿ ಮಾತ್ರ)
  • ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳನ್ನು ವೀಕ್ಷಿಸಲು ದಿನಕ್ಕೆ 25 ಬಾರಿ ಮಾತ್ರ ಮಿತಿ ಇರುತ್ತದೆ.
  • ಆಟೋಪೇ ವಹಿವಾಟುಗಳಿಗೆ ನಿಗದಿತ ಸಮಯ ಸ್ಲಾಟ್‌ಗಳು ಇರುತ್ತವೆ.
  • ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸುವುದಕ್ಕೂ ಮಿತಿ ಇರುತ್ತದೆ, ಏಕೆಂದರೆ ನೀವು ಸ್ಥಿತಿಯನ್ನು 3 ಬಾರಿ ಮಾತ್ರ ಪರಿಶೀಲಿಸಲು ಅನುಮತಿಸಲಾಗುತ್ತದೆ ಮತ್ತು ಪ್ರತಿ ಚೆಕ್ ನಡುವೆ ಕನಿಷ್ಠ 90 ಸೆಕೆಂಡುಗಳ ಅಂತರವಿರಬೇಕು.

ಭಾರತದಲ್ಲಿ 6 ಬಿಲಿಯನ್‌ಗಿಂತಲೂ ಹೆಚ್ಚು ವಹಿವಾಟುಗಳನ್ನು UPI ಬಳಕೆದಾರರಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಯುಪಿಐ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಅದರಲ್ಲಿ ಹೆಚ್ಚಿನವು ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಬ್ಯಾಲೆನ್ಸ್ ಪರಿಶೀಲಿಸುವುದು ಅಥವಾ ಪಾವತಿ ಸ್ಥಿತಿಯನ್ನು ಹಲವು ಬಾರಿ ರಿಫ್ರೆಶ್ ಮಾಡುವುದು ಮುಂತಾದವುಗಳಿಂದ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಲಾಗಿತ್ತು. ಹಾಗಾಗಿ ಒಂದು ಮಿತಿಯನ್ನು ನಿಗದಿ ಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Stock Market: ಟ್ರಂಪ್‌ ಟಾರಿಫ್‌ ಮುಂದೂಡಿಕೆ, ಟೆಕ್ಸ್‌ಟೈಲ್‌ ಷೇರುಗಳಿಗೆ ಶುಕ್ರದೆಸೆ! ಬಾಂಗ್ಲಾಗೆ ಬಿತ್ತು ಟ್ರಂಪ್‌ ಟ್ಯಾಕ್ಸ್‌

ಯುಪಿಐ ಉಚಿತವಲ್ಲ?

ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಮೂಲಕ ಸಂಪೂರ್ಣವಾಗಿ ಉಚಿತ ಡಿಜಿಟಲ್ ವಹಿವಾಟುಗಳ ಯುಗ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಮುಂಬೈನಲ್ಲಿ ನಡೆದ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಬಿಎಫ್‌ಎಸ್‌ಐ ಕಾರ್ಯಕ್ರಮದಲ್ಲಿ ಸುಳಿವು ನೀಡಿದ್ದಾರೆ. ಯುಪಿಐ ವ್ಯವಸ್ಥೆಯು ಬಳಕೆದಾರರಿಗೆ ಉಚಿತವಾಗಿದ್ದರೂ, ಸೇವೆಯ ಹಿಂದಿನ ಪಾವತಿ ಮೂಲಸೌಕರ್ಯವನ್ನು ನಿರ್ವಹಿಸುವ ವೆಚ್ಚವನ್ನು ಸರ್ಕಾರವು ಸಬ್ಸಿಡಿ ನೀಡುವ ಬ್ಯಾಂಕುಗಳು ಮತ್ತು ಇತರ ಪಾಲುದಾರರ ಮೂಲಕ ಭರಿಸುತ್ತದೆ ಎಂದು ಅವರು ಹೇಳಿದ್ದಾರೆ.