Season Fashion 2025: ಟ್ರೆಂಡಿಯಾದ ಟ್ರೈಬಲ್ ಲುಕ್ ನೀಡುವ ಕವಡೆ ಆಕ್ಸೆಸರೀಸ್
Season Fashion 2025: ಟ್ರೈಬಲ್ ಲುಕ್ ನೀಡುವ ಕವಡೆಯ ಆಕ್ಸೆಸರೀಸ್ ಇದೀಗ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ನಾನಾ ಶೈಲಿಯ ಕವಡೆಯ ಬ್ರೇಸ್ಲೇಟ್, ನೆಕ್ಲೇಸ್ಗಳು, ಕವಡೆ ಚೈನ್ ಮತ್ತು ಹಾರಗಳು ಇದೀಗ ಫಂಕಿ ಫ್ಯಾಷನ್ ಜ್ಯುವೆಲರಿ ಲಿಸ್ಟ್ನಲ್ಲಿ ಟಾಪ್ ಸ್ಥಾನ ಗಳಿಸಿವೆ. ಈ ಕುರಿತ ವರದಿ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್ -


ಟ್ರೈಬಲ್ ಲುಕ್ ನೀಡುವ ಕವಡೆಯ ಆಕ್ಸೆಸರೀಸ್ಗಳು ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಹೌದು, ನಾನಾ ಶೈಲಿಯ ಕವಡೆಯ ಬ್ರೇಸ್ಲೇಟ್, ನೆಕ್ಲೇಸ್ಗಳು, ಕವಡೆ ಚೈನ್ ಮತ್ತು ಹಾರಗಳು ಇದೀಗ ಫಂಕಿ ಫ್ಯಾಷನ್ ಜ್ಯುವೆಲರಿ ಲಿಸ್ಟ್ನಲ್ಲಿ ಟಾಪ್ ಸ್ಥಾನ ಗಳಿಸಿವೆ.

ಟ್ರೆಂಡ್ ಲಿಸ್ಟ್ನಲ್ಲಿರುವ ಫಂಕಿ ಜ್ಯುವೆಲರಿಗಳಿವು
ಈಗಾಗಲೇ ಜೆನ್ ಜಿ ಹುಡುಗಿಯರನ್ನು ಹಾಗೂ ಕಾಲೇಜು ಯುವತಿಯರನ್ನುಆಕರ್ಷಿಸಿರುವ ಈ ಕವಡೆಯ ಆಕ್ಸೆಸರೀಸ್ ಫಂಕಿ ಲುಕ್ಗೆ ಸಾಥ್ ನೀಡುತ್ತಿವೆ. ಅಂದಹಾಗೆ, ಈ ಕವಡೆಯ ಈ ನೆಕ್ಲೇಸ್ಗಳು ಮೊದಲು ಕಾಣಿಸಿಕೊಂಡದ್ದು, ಬಾಲಿವುಡ್ ತಾರೆಯರ ಕೆಲವು ಫೋಟೋಶೂಟ್ಗಳಲ್ಲಿ ಹಾಗೂ ಅವರ ಫಂಕಿ ಲುಕ್ನಲ್ಲಿ. ನಂತರ ಇವು ಟ್ರೆಂಡ್ ಸೆಟ್ ಆದವು. ಇದೀಗ ಸಾಮಾನ್ಯ ಹುಡುಗಿಯರನ್ನು ಇವು ಸೆಳೆದಿವೆ. ನೋಡಲು ಡಿಫರೆಂಟ್ ಲುಕ್ ನೀಡುವ ಇವು ಬಗೆಬಗೆಯ ಡಿಸೈನ್ನಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಜ್ಯುವೆಲ್ ವಿನ್ಯಾಸಕಿ ರಾಣಿ.

ಟ್ರೈಬಲ್ ಕೆಟಗರಿ ಜ್ಯುವೆಲರಿಗಳಿವು
ಕವಡೆಯ ಆಭರಣಗಳು ಈ ಮೊದಲು ಟ್ರೈಬಲ್ ಜನಾಂಗದವರ ಆಭರಣಗಳಾಗಿದ್ದವು. ಇದೀಗ ಅವುಗಳಿಂದ ಸ್ಫೂರ್ತಿಗೊಂಡ ಫಂಕಿ ಜ್ಯುವೆಲರ್ ಡಿಸೈನರ್ಗಳು ಇವಕ್ಕೆ ಹೊಸ ರೂಪ ಕೊಟ್ಟು ಕೊಂಚ ಡಿಸೈನ್ ಬದಲಿಸಿ, ಫಂಕಿ ಲುಕ್ ನೀಡಿ ಸಾಮಾನ್ಯ ಫ್ಯಾಷನ್ ಪ್ರಿಯರು ಧರಿಸುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಳಿಸಿದ್ದಾರೆ.

ಚಾಲ್ತಿಯಲ್ಲಿರುವ ವಿನ್ಯಾಸಗಳಿವು
ಬ್ರೇಸ್ಲೇಟ್, ಆಂಕ್ಲೇಟ್, ಚೋಕರ್ ಕವಡೆ, ಕವಡೆ ಚೈನ್, ಕವಡೆ ಹಾರ, ಕವಡೆ ಲೇಯರ್ ಹಾರ, ಕವಡೆ ನೆಕ್ಲೇಸ್, ಕವಡೆ ಹ್ಯಾಂಗಿಂಗ್ ನೆಕ್ ಚೈನ್ ಸೇರಿದಂತೆ ನಾನಾ ಬಗೆಯ ಆಕ್ಸೆಸರೀಸ್ಗಳು ಚಾಲ್ತಿಯಲ್ಲಿವೆ. ಇನ್ನು ಕೆಲವು ಪ್ಲಾಸ್ಟಿಕ್ ಕವಡೆಯ ಆಕ್ಸೆಸರೀಸ್ಗಳು ಕೂಡ ದೊರೆಯುತ್ತಿವೆ. ಇವುಗಳ ಬೆಲೆಯೂ ಕಡಿಮೆ. ನೂರು ರೂ. ಗಳಿಂದ ಆರಂಭವಾಗಿ ಐನೂರು ರೂ.ಗಳ ಒಳಗೆ ದೊರೆಯುತ್ತವೆ ಎನ್ನುತ್ತಾರೆ ಮಾರಾಟಗಾರರು.

ಟ್ರೈಬಲ್ ಲುಕ್ ನೀಡುವ ಕವಡೆಯ ಆಕ್ಸೆಸರೀಸ್ ಇದೀಗ ಹುಡುಗಿಯರನ್ನು ಆಕರ್ಷಿಸುತ್ತಿವೆ.