ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ಗಣೇಶ ಹಬ್ಬದ ದಿನ ಈ ರಾಶಿಗೆ ವಿನಾಯಕನ ಅನುಗ್ರಹ!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿ, ಚಿತ್ತ ನಕ್ಷತ್ರದ ಆಗಸ್ಟ್ 27 ನೇ ತಾರೀಖಿನ ಈ ದಿನದಂದು ಗಣೇಶ ಚತುರ್ಥಿ.. ಈ ದಿನ ಅನೇಕ ರಾಶಿಗೆ ಶುಭ ಫಲ ಇರಲಿದೆ. ವರ್ಷಾವಧಿ ಹಬ್ಬ ಗಣೇಶನ ಪೂಜೆ ಮಾಡಿದರೆ ವರ್ಷ ಪೂರ್ತಿ ಇದರ ಫಲ ಕೂಡ ಪಡೆಯುತ್ತೀರಿ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ಗಣೇಶ ಹಬ್ಬದಂದು ಯಾವ ರಾಶಿಗೆ ಶುಭ ಫಲವಾಗಲಿದೆ?

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿ, ಚಿತ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಗಣೇಶ ಹಬ್ಬ ಚಿತ್ತ ನಕ್ಷತ್ರ ಇದ್ದು ಈ ದಿನ ಮೇಷ ರಾಶಿ ಅವರಿಗೆ ಉತ್ತಮವಾದ ದಿನ ಆಗಲಿದೆ. ಈ ದಿನ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದ್ದು ಸಂಸಾರ ದಾಂಪತ್ಯದಲ್ಲೂ ಕೂಡ ನೆಮ್ಮದಿ ಯನ್ನು ಕಾಣಲಿದ್ದೀರಿ.‌ ಎಲ್ಲದರಲ್ಲೂ ಜಯ ಪ್ರಾಪ್ತಿ ಯಾಗಲಿದ್ದು ನೆಮ್ಮದಿಯನ್ನು ಕಾಣುತ್ತೀರಿ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಮಧ್ಯಾಹ್ನದವರೆಗೂ ಸ್ವಲ್ಪ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ.‌ ಎಷ್ಟೇ ಕೆಲಸ ಮಾಡಿದ್ರೂ ಅದಕ್ಕೆ ಸರಿಯಾದ ಪ್ರತಿಫಲ ಪ್ರಾಪ್ತಿಯಾಗುವುದಿಲ್ಲ.‌ ಆದರೆ ಮಧ್ಯಾಹ್ನ ಬಳಿಕ ಎಲ್ಲವೂ ಸರಿಯಾಗಲಿದೆ. ಜಯವನ್ನು ಕೂಡ ಕಾಣಲಿದ್ದೀರಿ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮಧ್ಯಾಹ್ನದವರೆಗೂ ನಾನಾ ಯೋಚನೆಗಳು, ಮನೆಯ ಬಗ್ಗೆ, ತಾಯಿಯ ಆ ಆರೋಗ್ಯದ ಬಗ್ಗೆ ಆಸ್ತಿ ಪಾಸ್ತಿ ವಿಚಾರ ಬಗ್ಗೆ ಯೋಚನೆಗಳು ಇರುತ್ತವೆ. ಆದರೆ ಮಧ್ಯಾಹ್ನ ಬಳಿಕ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಜೊತೆಗೆ ಕೆಲವೊಂದು ಸಮಸ್ಯೆ ಗೆ ಪರಿಹಾರ ಕೂಡ ಸಿಗಲಿದ್ದು, ಮಾರ್ಗದರ್ಶನ ಕೂಡ ಪ್ರಾಪ್ತಿಯಾಗಲಿದೆ

ಕಟಕ ರಾಶಿ: ಕಟಕ ರಾಶಿ ಅವರಿಗೆ ಮಧ್ಯಾಹ್ನದವರೆಗೂ ಒಳಿತು ಆಗಲಿದ್ದು ನೀವು ಅಂದು ಕೊಂಡದೆಲ್ಲ ನೇರವೇರಲಿದೆ.‌ ಮಧ್ಯಾಹ್ನದ ಬಳಿಕ ಸ್ವಲ್ಪ ಕಿರಿ- ಕಿರಿ ಆಗಲಿದೆ. ಅನೇಕ ವಿಚಾರಗಳಲ್ಲಿ ಮನಸ್ಸಿಗೆ ಕ್ಲೇಷ ಆಗಲಿದ್ದು, ಆಸ್ತಿ ಪಾಸ್ತಿ ವಿಚಾರದಲ್ಲೂ ತೊಡಕು ಉಂಟಾಗಬಹುದು.

ಇದನ್ನು ಓದಿ:Daily Horoscope: ಸ್ವರ್ಣ ಗೌರಿಯ ವ್ರತದ ಈ ದಿನ ಯಾವ ರಾಶಿಗೆಲ್ಲ ಶುಭವಾಗಲಿದೆ?

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಮಧ್ಯಾಹ್ನದವರೆಗೂ ಸಂಸಾರದ ಜವಾಬ್ದಾರಿಗಳು ತಾಪತ್ರ ಯಗಳು ಕಾಡುತ್ತಿರುತ್ತದೆ.‌ ಮಧ್ಯಾಹ್ನ ಬಳಿಕ ಬಂಧುಗಳ ಸಮಾಗಮ ಇದ್ದು ಬಹಳಷ್ಟು ಖುಷಿ ನೀಡಲಿದೆ. ಮನಸ್ಸಿಗೆ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಮಧ್ಯಾಹ್ನದವರೆಗೂ ಕೂಡ ಮನಸ್ಸಿಗೂ ನೆಮ್ಮದಿ ಇದ್ದು ಮಧ್ಯಾಹ್ನ ಬಳಿಕ ಸಂಸಾರದ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಸಂಸಾರದಲ್ಲಿ ಸ್ವಲ್ಪ ತೊಡಕು ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಮಧ್ಯಾಹ್ನದವರೆಗೂ ಅನೇಕ ಯೋಚನೆಗಳು ,ಮನಸ್ಸಿಗೆ ಬೇಸರ ಇತ್ಯಾದಿ ಇರಲಿದೆ. ಮಧ್ಯಾಹ್ನದ ಬಳಿಕ ಚಂದ್ರ ನಿಮ್ಮ ರಾಶಿಯನ್ನು ಪ್ರವೇಶ ಮಾಡುವುದರಿಂದ ಎಲ್ಲ ವಿಚಾರದಲ್ಲೂ ನಿಮಗೆ ಒಂದು ಕ್ಲಾರಿಟಿ ಸಿಗಲಿದೆ.‌ ಮುಂದಿನ ಮಾರ್ಗದರ್ಶನ ಕೂಡ ಚೆನ್ನಾಗಿ ಪ್ರಾಪ್ತಿ ಯಾಗಲಿದೆ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ದಿನ ಬಹಳಷ್ಟು ಸುಖಕರವಾಗಿದೆ. ಆದರೆ ಮಧ್ಯಾಹ್ನ ಬಳಿಕ ಮಾತ್ರ ಸ್ನೇಹಿತರ ಜೊತೆ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂದು ಯಾರ ಜೊತೆಗೂ ಮಾತನಾಡುವ ಮುನ್ನ ಯೋಚಿಸಿ ಮಾತನಾಡುವುದು ಉತ್ತಮ. ಮಧ್ಯಾಹ್ನ ಬಳಿಕ ಯಾವುದೇ ಮುಖ್ಯ ನಿರ್ಧಾರ ಬೇಡ..

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಮಧ್ಯಾಹ್ನದವರೆಗೂ ಕೂಡ ಕಾರ್ಯ ಕ್ಷೇತ್ರದ ಜವಾಬ್ದಾರಿಗಳಿಂದಲೇ ತುಂಬಿ ಹೋಗಿರುತ್ತದೆ. ಮಧ್ಯಾಹ್ನ ಬಳಿಕ ನೀವು ಮಾಡಿದ ಎಲ್ಲ ಕೆಲಸಗಳಿಗೂ ಪ್ರತಿಫಲ ನೋಡಿ ಬಹಳ ಖುಷಿಯಾದ ಸಮಯವನ್ನು ಕಳೆಯಬಹುದು.

ಮಕರ ರಾಶಿ: ಮಕರ ರಾಶಿ ಅವರಿಗೆ ಮಧ್ಯಾಹ್ನದವರೆಗೂ ಕೂಡ ಏನೊ ಒಂದು ಅಂದು ಕೊಂಡಿದ್ದು ನೇರವೇರುತ್ತಾ ಇಲ್ಲ ಎನ್ನುವ ಬೇಸರ ಕಾಡಬಹುದು. ಆದರೆ ಮಧ್ಯಾಹ್ನ ಬಳಿಕ ಅದೆಲ್ಲವೂ ನಿವಾರಣೆಯಾಗಿ ಖುಷಿಯನ್ನು ಕಾಣಲಿದ್ದೀರಿ.‌ ನೀವು ಅಂದುಕೊಂಡ ಎಲ್ಲ ಕೆಲಸಗಳು ಕಾರ್ಯಗತ ವಾಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಮಧ್ಯಾಹ್ನದವರೆಗೂ ಸ್ವಲ್ಪ ಕಷ್ಟಕರವಾದ ದಿನ. ಮಧ್ಯಾಹ್ನ ಬಳಿಕ ಭಾಗ್ಯೋದಯವಾಗಲಿದ್ದು ಕಷ್ಟಗಳೆಲ್ಲವೂ ಮಯವಾಗುತ್ತದೆ. ಭಗವಂತನ ಮತ್ತು ಹಿರಿಯರ ಅನುಗ್ರಹ ನಿಮಗೆ ಪ್ರಾಪ್ತಿ ಯಾಗಲಿದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಮಧ್ಯಾಹ್ನದವರೆಗೂ ಅತ್ಯುತ್ತಮವಾದ ದಿನವಾಗಲಿದೆ. ಎಲ್ಲರಿಂದಲೂ ಸಹಕಾರ ಪ್ರಾಪ್ತಿ ಯಾಗಲಿದೆ. ಮಧ್ಯಾಹ್ನ ಬಳಿಕ ಸ್ವಲ್ಪ ತೊಂದರೆ ಒಳಗಾಗ ಬಹುದು. ಆದರೆ ಈ ದಿನ ಗಣಪತಿಯ ಆರಾಧನೆ ‌ಮಾಡುವ ಮೂಲಕ ಸಮಸ್ಯೆ ಗೆ ಪರಿಹಾರ ಕಂಡು ಕೊಳ್ಳ ಬಹು. ಆದ್ದರಿಂದ ವಿಘ್ನ ಗಳನ್ನು ಕೂಡ ನಿವಾರಿಸಿ ಕೊಳ್ಳಬಹುದು. ಕೆಲಸದಲ್ಲೂ ಯಶಸ್ಸು ಸಿಗಲಿದೆ. ನಿತ್ಯ ಶ್ಲೋಕ,ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯ ಲಿದ್ದೀರಿ.