ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಭಾರತೀಯ ಆಟಗಾರರು ನಿರ್ಮಿಸಬಹುದಾದ ದಾಖಲೆ ವಿವರ ಇಲ್ಲಿದೆ

IND vs ENG 4th Test: ಮ್ಯಾಂಚೆಸ್ಟರ್‌ನಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆಯಿದೆ. ಮೊದಲ ದಿನ(ಜು.23) ಶೇ.60ರಷ್ಟು ಮಳೆ ನಿರೀಕ್ಷೆಯಿದೆ. ಉಳಿದ 4 ದಿನಗಳಲ್ಲೂ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

4ನೇ ಟೆಸ್ಟ್‌ನಲ್ಲಿ ಭಾರತೀಯ ಆಟಗಾರರು ನಿರ್ಮಿಸಬಹುದಾದ ದಾಖಲೆ ಪಟ್ಟಿ

Profile Abhilash BC Jul 23, 2025 9:23 AM

ಮ್ಯಾಂಚೆಸ್ಟರ್‌: ಲಾರ್ಡ್ಸ್ ಟೆಸ್ಟ್‌ನಲ್ಲಿ 22 ರನ್‌ಗಳ ಸೋಲಿನ ನಂತರ, ಸರಣಿಯನ್ನು ಗೆಲ್ಲುವ ತಮ್ಮ ಆಕಾಂಕ್ಷೆಯನ್ನು ಉಳಿಸಿಕೊಳ್ಳಲು ಭಾರತವು(IND vs ENG 4th Test) ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ(Manchester ) ಗೆಲುವು ಸಾಧಿಸಲೇಬೇಕು. ಇಂದಿನಿಂದ ಆರಂಭವಾಗುವ ಈ ಟೆಸ್ಟ್‌ ಪಂದ್ಯದಲ್ಲಿ ಭಾರತೀಯ ತಂಡದ ಹಲವು ಆಟಗಾರರು ವಿಶೇಷ ದಾಖಲೆ ಬರೆಯುವ ಸನಿಹದಲ್ಲಿದಾರೆ. ದಾಖಲೆಯ ಪಟ್ಟಿ ಹೀಗಿದೆ.

ಸೆಹವಾಗ್‌ ದಾಖಲೆ ಮೇಲೆ ಕಣ್ಣಿಟ್ಟ ಪಂತ್‌

ರಿಷಭ್ ಪಂತ್ ಅವರು ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಪಂತ್‌ ಪಂದ್ಯದಲ್ಲಿ ನಾಲ್ಕು ಸಿಕ್ಸರ್‌ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಭಾರತ ಪರ ಅತ್ಯಧಿಕ ಟೆಸ್ಟ್‌ ಬಾರಿಸಿದ ಬ್ಯಾಟರ್‌ ಎನಿಸಿಕೊಳ್ಳಲಿದಾರೆ. ಸದ್ಯ ದಾಖಲೆ ಸೆಹವಾಗ್‌ ಹೆಸರಿನಲ್ಲಿದೆ. ಸೆಹವಾಗ್‌ 91 ಸಿಕ್ಸರ್‌ ಬಾರಿಸಿದಾರೆ. ಪಂತ್‌ 88 ಸಿಕ್ಸ್‌ ಬಾರಿಸಿದ್ದಾರೆ. ಇದು ಮಾತ್ರವಲ್ಲದೆ ಪಂತ್, 40 ರನ್ ಬಾರಿಸಿದರೆ, ಭಾರತ ತಂಡದ ಪರ ಡಬ್ಲ್ಯುಟಿಸಿ ಇತಿಹಾಸದಲ್ಲಿ ಅತ್ಯಧಿಕ ರನ್‌ ಗಳಿಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ರೋಹಿತ್‌ ಶರ್ಮ (2,716 ರನ್) ಹೆಸರಿನಲ್ಲಿದೆ. ಪಂತ್‌ 2,677 ರನ್ ಗಳಿಸಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಪಂತ್ ಮೂರು ಪಂದ್ಯಗಳಿಂದ 425 ರನ್‌ ಗಳಿಸಿದ್ದಾರೆ.

9000 ಅಂತಾರಾಷ್ಟ್ರೀಯ ರನ್‌ ಸನಿಹ ರಾಹುಲ್‌

ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ನೂತನ ಮೈಲುಗಲ್ಲೊಂದನ್ನು ನೆಡುವ ಹಾದಿಯಲ್ಲಿದ್ದಾರೆ. ಭಾರತ ಪರ 9000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರ್ತಿಗೊಳಿಸಲು ಕೇವಲ 60 ರನ್‌ಗಳ ಅಗತ್ಯವಿದೆ. ಇಲ್ಲಿಯವರೆಗೆ, ರಾಹುಲ್ 218 ಪಂದ್ಯಗಳಿಂದ 75.01 ರ ಸರಾಸರಿಯಲ್ಲಿ 8,940 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 58 ಅರ್ಧಶತಕ ಒಳಗೊಂಡಿದೆ.

ಗ್ಯಾರಿ ಸೋಬರ್ಸ್ ಜತೆ ಎಲೈಟ್‌ ಪಟ್ಟಿ ಸೇರಲು ಜಡೇಜಾ ರೆಡಿ

ರವೀಂದ್ರ ಜಡೇಜಾ, ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದಲ್ಲಿ ಕೇವಲ 58 ರನ್‌ ಗಳಿಸಿದರೆ, ಇಂಗ್ಲೆಂಡ್‌ನಲ್ಲಿ 1000 ಟೆಸ್ಟ್ ರನ್ ಪೂರೈಸಿದ ಲೆಜೆಂಡರಿ ಗ್ಯಾರಿ ಫೀಲ್ಡ್‌ ಸೋಬರ್ಸ್ ಅವರನ್ನು ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಲಿದ್ದಾರೆ. ಜಡೇಜಾ ಈಗಾಗಲೇ 27 ಇನಿಂಗ್ಸ್‌ಗಳಲ್ಲಿ 40.95ರ ಸರಾಸರಿಯಲ್ಲಿ 942 ರನ್ ಗಳಿಸಿದ್ದು, ಒಂದು ಶತಕ ಹಾಗೂ ಏಳು ಅರ್ಧಶತಕ ಬಾರಿಸಿದ್ದಾರೆ.

ಏಷ್ಯನ್‌ ದಾಖಲೆ ಮೇಲೆ ಗಿಲ್‌ ಕಣ್ಣು

ಟೀಮ್‌ ಇಂಡಿಯಾ ನಾಯಕ ಶುಭಮನ್ ಗಿಲ್ ಈ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುವ ಸನಿಹದಲ್ಲಿದ್ದಾರೆ. ಇಂಗ್ಲಿಷ್ ನೆಲದಲ್ಲಿ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಏಷ್ಯನ್ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ರನ್‌ಗಳ ದಾಖಲೆ ಬರೆಯಲು ಅವರಿಗೆ 25 ರನ್‌ಗಳ ಅವಶ್ಯವಿದೆ. ಪ್ರಸ್ತುತ ದಾಖಲೆ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಹೆಸರಿನಲ್ಲಿದೆ. ಅವರು ನಾಲ್ಕು ಪಂದ್ಯಗಳಲ್ಲಿ 90.14 ಸರಾಸರಿಯಲ್ಲಿ 631 ರನ್ ಗಳಿಸಿದ್ದರು. ಗಿಲ್ ಪ್ರಸ್ತುತ ಮೂರು ಪಂದ್ಯಗಳಿಂದ 607 ರನ್ ಗಳಿಸಿದ್ದಾರೆ.

ಪಾಕ್‌ ವೇಗಿಯ ದಾಖಲೆ ಮುರಿಯಲು ಬುಮ್ರಾ ಸಜ್ಜು

ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಈ ಪಂದ್ಯದಲ್ಲಿ ಪಾಕಿಸ್ತಾನದ ದಿಗ್ಗಜ ಆಟಗಾರ ವಾಸಿಂ ಅಕ್ರಮ್ ದಾಖಲೆ ಮುರಿಯುವ ಅವಕಾಶವಿದೆ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಐದು ವಿಕೆಟ್‌ ಕಿತ್ತರೆ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಮೊದಲ ಏಷ್ಯನ್ ಬೌಲರ್‌ ಎಂಬ ದಾಖಲೆ ನಿರ್ಮಿಸಲಿದಾರೆ. ಸದ್ಯ ಈ ದಾಖಲೆ ವಾಸಿಂ ಅಕ್ರಮ್ ಹೆಸರಿನಲ್ಲಿದೆ. ಅಕ್ರಮ್ 53 ವಿಕೆಟ್‌ ಕಿತ್ತಿದ್ದಾರೆ. ಬುಮ್ರಾ 49* ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇದನ್ನೂ ಓದಿ IND vs ENG: 4ನೇ ಪಂದ್ಯದ ಪಿಚ್‌ ರಿಪೋರ್ಟ್‌; ಹವಾಮಾನ ವರದಿ ಹೀಗಿದೆ