ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೊಟ್ಟೆ ಬೇಯಿಸುವಾಗ ಈ ತಪ್ಪು ಮಾಡ್ಲೇಬೇಡಿ... ಜಸ್ಟ್‌ ಮಿಸ್‌ ಆದ್ರೂ ಬ್ಲಾಸ್ಟ್‌ ಆಗುತ್ತೆ!

Boiled Eggs Can Explode Like Bombs: ಮಹಿಳೆಯೊಬ್ಬಳು ಬೇಯಿಸಿದ ಮೊಟ್ಟೆಯನ್ನು ಮತ್ತೆ ಬಿಸಿ ಮಾಡಲು ಹೋಗಿ ಮೈ-ಕೈ ಸುಟ್ಟುಕೊಂಡಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬೇಯಿಸಿದ ಮೊಟ್ಟೆಯನ್ನು ಮೈಕ್ರೋವೇವ್‌ನಲ್ಲಿ ಮತ್ತೆ ಬಿಸಿಮಾಡಲು ಪ್ರಯತ್ನಿಸಿದ್ದಾಳೆ. ನಂತರ ಅದನ್ನು ತೆಗೆದು ಚಾಕುವಿನಿಂದ ಹೋಳು ಮಾಡಿದ ಕ್ಷಣ, ಮೊಟ್ಟೆಯು ಬಾಂಬ್‌ನಂತೆ ಸ್ಫೋಟಗೊಂಡಿದೆ.

ಮೊಟ್ಟೆ ಬೇಯಿಸುವಾಗ ಎಚ್ಚರ... ಜಸ್ಟ್‌ ಮಿಸ್‌ ಆದ್ರೂ ಬ್ಲಾಸ್ಟ್‌ ಆಗುತ್ತೆ!

-

Priyanka P Priyanka P Oct 3, 2025 4:15 PM

ವಾಷಿಂಗ್ಟನ್: ಅಡುಗೆಮನೆಯಲ್ಲಿನ ಸಣ್ಣ ತಪ್ಪು ಕೆಲವೊಮ್ಮೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊ (Viral Video) ಮತ್ತೊಮ್ಮೆ ಈ ಅಪಾಯವನ್ನು ಎತ್ತಿ ತೋರಿಸಿದೆ. ಮಹಿಳೆಯೊಬ್ಬಳು ಬೇಯಿಸಿದ ಮೊಟ್ಟೆಯನ್ನು (Boiled Egg) ಮತ್ತೆ ಬಿಸಿ ಮಾಡಲು ಹೋಗಿ ಮೈ-ಕೈ ಸುಟ್ಟುಕೊಂಡಿದ್ದಾಳೆ. ಇದು ಹೇಗಾಯ್ತು ಘಟನೆ ಎಂಬ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

ಒಬ್ಬ ಮಹಿಳೆ ಬೇಯಿಸಿದ ಮೊಟ್ಟೆಯನ್ನು ಮೈಕ್ರೋವೇವ್‌ನಲ್ಲಿ ಮತ್ತೆ ಬಿಸಿಮಾಡಲು ಪ್ರಯತ್ನಿಸಿದ್ದಾಳೆ. ಆದರೆ, ಅವಳು ಅದನ್ನು ತೆಗೆದು ಚಾಕುವಿನಿಂದ ಹೋಳು ಮಾಡಿದ ಕ್ಷಣ, ಮೊಟ್ಟೆಯು ಬಾಂಬ್‌ನಂತೆ ಸ್ಫೋಟಗೊಂಡಿದೆ. ಈ ವೇಳೆ ಹೊಗೆ ಹೊರಹೊಮ್ಮಿದೆ. ಮೊಟ್ಟೆ ಸ್ಫೋಟಗೊಂಡ ವೇಳೆ ಮಹಿಳೆಯ ಕಣ್ಣು ಹಾಗೂ ಮುಖವನ್ನು ಸುಟ್ಟಿದೆ. ಹಾಗಂತ ಮೊಟ್ಟೆ ಸ್ಫೋಟವಾಗುವುದು ವಿಚಿತ್ರ ಅಪಘಾತವೇನಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ.

ಈ ವೈರಲ್ ವಿಡಿಯೊದಲ್ಲಿ, ಮೊಟ್ಟೆಗಳು ಒಂದೇ ರೀತಿಯಲ್ಲಿ ಸ್ಫೋಟಗೊಳ್ಳುವ ಹಲವಾರು ರೀತಿಯ ಘಟನೆಗಳು ಸೇರಿವೆ. ಪ್ರತಿಯೊಂದು ಸಂದರ್ಭದಲ್ಲೂ, ಮೊಟ್ಟೆಯನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಮತ್ತೆ ಮೈಕ್ರೋವೇವ್‍ನಲ್ಲಿ ಬೇಯಲು ಇಡಲಾಗುತ್ತದೆ. ನಂತರ ಅದನ್ನು ಹೊರತೆಗೆದು ಚಾಕುವಿನಿಂದ ಕತ್ತರಿಸಿದಾಗ ಮೊಟ್ಟೆ ಕ್ಷಣ ಮಾತ್ರದಲ್ಲಿ ಸಿಡಿಯುತ್ತದೆ. ಆದರೆ ಇದು ಏಕೆ ಸಂಭವಿಸುತ್ತದೆ? ಬೇಯಿಸಿದ ಮೊಟ್ಟೆಗಳು ಸ್ಫೋಟಕಗಳಾಗಿ ಬದಲಾಗುತ್ತವೆಯೇ? ಎಂಬಂತಹ ಪ್ರಶ್ನೆಗಳು ಮೂಡುವುದು ಸಹದ. ಇದೀಗ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ತಜ್ಞರು ವೈಜ್ಞಾನಿಕ ವಿವರಣೆಯನ್ನು ಹಂಚಿಕೊಂಡಿದ್ದಾರೆ.

ವಿಡಿಯೊ ವೀಕ್ಷಿಸಿ:

ಬೇಯಿಸಿದ ಮೊಟ್ಟೆಗಳು ಏಕೆ ಸ್ಫೋಟಗೊಳ್ಳುತ್ತವೆ?

ವೈಜ್ಞಾನಿಕವಾಗಿ ಹೇಳುವುದಾದರೆ, ಕಾರಣ ಬಹಳ ಸರಳವಾಗಿದೆ. ಬೇಯಿಸಿದ ಮೊಟ್ಟೆಯನ್ನು ಮೈಕ್ರೋವೇವ್‌ನಲ್ಲಿ ಮತ್ತೆ ಬಿಸಿ ಮಾಡಿದಾಗ, ಅದರೊಳಗಿನ ನೀರು ಮತ್ತು ಸ್ವಲ್ಪ ಗಾಳಿ ಇರುವುದರಿಂದ ಉಗಿಯನ್ನು ಉತ್ಪಾದಿಸುತ್ತವೆ. ಮೈಕ್ರೋವೇವ್‌ಗಳು ನೀರಿನ ಅಣುಗಳನ್ನು ಬಹಳ ವೇಗವಾಗಿ ಬಿಸಿಮಾಡುತ್ತವೆ. ಆದರೆ ಮೊಟ್ಟೆಯ ಚಿಪ್ಪು ಅಥವಾ ಪೊರೆಯು ಈ ಉಗಿಯನ್ನು ಹಿಡಿದಿಟ್ಟುಕೊಳ್ಳಬಹುದು. ಒಳಗೆ ಒತ್ತಡ ಹೆಚ್ಚಾದಂತೆ, ತಾಪಮಾನದಲ್ಲಿನ ಹಠಾತ್ ಏರಿಕೆಯಿಂದಾಗಿ ಹೊರಗಿನ ರಚನೆಯು ದುರ್ಬಲಗೊಳ್ಳುತ್ತದೆ. ನಂತರ, ಮೊಟ್ಟೆಯನ್ನು ಚುಚ್ಚಿದ ಅಥವಾ ಹೋಳು ಮಾಡಿದ ತಕ್ಷಣ, ಒತ್ತಡವು ಹಿಂಸಾತ್ಮಕವಾಗಿ ಬಿಡುಗಡೆಯಾಗುತ್ತದೆ. ಇದರಿಂದಾಗಿ ಅದು ಸ್ಫೋಟಗೊಳ್ಳುತ್ತದೆ.

ಅಮೆರಿಕನ್ ಅಕಾಡೆಮಿ ಆಫ್ ನೇತ್ರಶಾಸ್ತ್ರದ ಪ್ರಕಾರ, ಇಂತಹ ಸ್ಫೋಟಗಳು ಕಣ್ಣುಗಳಿಗೆ ಸುಟ್ಟಗಾಯಗಳನ್ನು ಉಂಟುಮಾಡಬಹುದು. ಇದು ವ್ಯಕ್ತಿಯ ದೃಷ್ಟಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇಂತಹ ಘಟನೆಗಳು ಹಲವು ಬಾರಿ ಸಂಭವಿಸಿದೆ. ಜನರು ಬೇಯಿಸಿದ ಮೊಟ್ಟೆಗಳನ್ನು ಮೈಕ್ರೊವೇವ್‌ನಲ್ಲಿ ಹಾಕಿ ನಂತರ ತಕ್ಷಣವೇ ತಿನ್ನುತ್ತಾರೆ. ಇದರಿಂದ ಅಪಾಯ ಕಟ್ಟಿಟ್ಟಬುತ್ತಿ. ಆಂತರಿಕ ಮತ್ತು ಬಾಹ್ಯ ತಾಪಮಾನದಲ್ಲಿನ ವ್ಯತ್ಯಾಸದಿಂದಾಗಿ, ಮೊಟ್ಟೆಯು ಅನಿರೀಕ್ಷಿತವಾಗಿ ಸ್ಫೋಟಗೊಳ್ಳಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಅವಘಡಗಳ ವಿಡಿಯೊಗಳೇ ಹೆಚ್ಚಾಗಿವೆ. ಇತರರು ಈ ತಪ್ಪನ್ನು ಪುನಾರಾವರ್ತಿಸದಂತೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ಒಂದು ಮೊಟ್ಟೆಯು ಹೇಗೆ ಅಪಾಯಕಾರಿಗಬಲ್ಲದು ಎಂಬುದಕ್ಕೆ ಈ ವೈರಲ್ ವಿಡಿಯೊ ಸಾಕ್ಷಿಯಾಗಿದೆ.

ಇದನ್ನೂ ಓದಿ: Viral Video: ಬೆಂಗಳೂರು ಮೆಟ್ರೋದಲ್ಲಿ ಕನ್ನಡ-ಹಿಂದಿ ವಿವಾದ: ಮಹಿಳೆಯರ ನಡುವೆ ವಾಕ್ಸಮರ