Viral Video: ನೀರಿನಲ್ಲಿ ಮುಳುಗಿ ವೃದ್ಧ ಸಾವು- ಮೃತದೇಹವನ್ನು ಬೆನ್ನಿನ ಮೇಲೆ ಹೊತ್ತುಸಾಗಿದ ಸ್ಥಳೀಯರು
Elderly man Dead body: ಭಾರಿ ನೀರು ಸಂಗ್ರಹವಾಗಿದ್ದರಿಂದ ವೃದ್ಧರೊಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಯಾವುದೇ ಅಧಿಕಾರಿಗಳು ಸ್ಥಳಕ್ಕೆ ತಲುಪಲಿಲ್ಲ. ಹೀಗಾಗಿ ಸ್ಥಳೀಯರೇ ಮೃತದೇಹವನ್ನು ಹೊತ್ತುಕೊಂಡು ಸಾಗಿದ್ದಾರೆ. ಲಾಲ್ಸೋಟ್ ಪಟ್ಟಣದ ಸೆಡುಲೈ ಕಾಲೋನಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.


ಜೈಪುರ: ನೀರಿನಲ್ಲಿ ಮುಳುಗಿ ಮೃತಪಟ್ಟ ವೃದ್ಧನ ಮೃತದೇಹವನ್ನು ಸರ್ಕಾರಿ ಸಂಸ್ಥೆಗಳು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಸ್ಥಳೀಯರೇ ಹೊತ್ತುಕೊಂಡು ಸಾಗಿದ್ದಾರೆ. ರಾಜಸ್ತಾನ (Rajasthan) ದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಜಿಲ್ಲಾಡಳಿತದ ವಿರುದ್ಧ ಜನರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಲಾಲ್ಸೋಟ್ ಪಟ್ಟಣದ ಸೆಡುಲೈ ಕಾಲೋನಿಯಲ್ಲಿ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಆ ಪ್ರದೇಶದಲ್ಲಿ ಭಾರಿ ನೀರು ಸಂಗ್ರಹವಾಗಿದ್ದರಿಂದ ವೃದ್ಧರೊಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಆಂಬ್ಯುಲೆನ್ಸ್ ಹೊರತುಪಡಿಸಿ ಯಾವುದೇ ಅಧಿಕಾರಿ ಸ್ಥಳಕ್ಕೆ ತಲುಪಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಆ ಆಂಬ್ಯುಲೆನ್ಸ್ ಕೂಡ 150 ಮೀಟರ್ ದೂರದಲ್ಲಿ ನಿಂತಿತು ಎಂದು ವರದಿಯಾಗಿದೆ. ಇದರಿಂದಾಗಿ ನಿವಾಸಿಗಳು ಒಳಗೆ ಬರಬೇಕಾಯಿತು. ಅಲ್ಲದೆ, ಆಂಬ್ಯುಲೆನ್ಸ್‌ನಲ್ಲಿ ಸ್ಟ್ರೆಚರ್ ಇರಲಿಲ್ಲ ಎಂದು ವರದಿಯಾಗಿದೆ. ನಾಗರಿಕ ರಕ್ಷಣಾ, ಎಸ್‌ಡಿಆರ್‌ಎಫ್ ಅಥವಾ ಆಡಳಿತ ಸಿಬ್ಬಂದಿ ಯಾರೂ ಬಾರದ ಕಾರಣ, ಸ್ಥಳೀಯರು ಶವವನ್ನು ತಾವೇ ಎತ್ತಿದರು ಎನ್ನಲಾಗಿದೆ. ಮೃತ ವ್ಯಕ್ತಿಯ ದೇಹದ ಒಂದು ಭಾಗವನ್ನು ಭುಜದ ಮೇಲೆ ಮತ್ತು ಉಳಿದ ಭಾಗವನ್ನು ನೆಲದ ಮೇಲೆ ಎಳೆದುಕೊಂಡು ನಿವಾಸಿಗಳು ಹೊತ್ತೊಯ್ದರು.
ಘಟನೆಯ ವಿಡಿಯೊವನ್ನು ಕೆಲವರು ಸೆರೆಹಿಡಿದಿದ್ದು, ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಥಳೀಯ ಆಡಳಿತದ ದುರಾಡಳಿತದ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
In a distressing incident that has sparked outrage across Rajasthan, the body of an elderly man who drowned in waterlogged streets was left to be carried by locals after government agencies allegedly failed to respond#Rajasthan #Floods #Body #News https://t.co/p7j4hn0pHr pic.twitter.com/xlBX2Rj11Q
— News18 (@CNNnews18) July 30, 2025
ಈ ಸುದ್ದಿಯನ್ನೂಓದಿ: Rajinikanth: ಕಾಲು ಜಾರಿ ಬಿದ್ರಾ ನಟ ರಜನಿಕಾಂತ್? ವೈರಲ್ ವಿಡಿಯೊದ ಅಸಲಿಯತ್ತೇನು?
ಘಟನೆಯನ್ನು ಗಮನಿಸಿದ ಬ್ಲಾಕ್ ಮುಖ್ಯ ವೈದ್ಯಾಧಿಕಾರಿ ಡಾ. ಪವನ್ ಕುಮಾರ್ ಜೈನ್, ಇಎಂಟಿ, ಜೆಇಎನ್ ಮೀನಾ ಮತ್ತು ಆಂಬ್ಯುಲೆನ್ಸ್ ಚಾಲಕ ಶಿವಚರಣ್ ಮೀನಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. 108 ತುರ್ತು ಆಂಬ್ಯುಲೆನ್ಸ್ ಸೇವೆಯನ್ನು ನಿರ್ವಹಿಸುವ ಸಂಸ್ಥೆಗೆ ಪತ್ರ ಕಳುಹಿಸಲಾಗಿದ್ದು, ಇಬ್ಬರ ನಡವಳಿಕೆಯನ್ನು ತೀವ್ರ ನಿರ್ಲಕ್ಷ್ಯ ಮತ್ತು ಅಮಾನವೀಯ ಎಂದು ವಿವರಿಸಲಾಗಿದೆ.
ಅಂದಹಾಗೆ, ಲಾಲ್ಸೊಟ್‌ನಲ್ಲಿನ ನೀರಿನ ಸಮಸ್ಯೆ ಬಗೆಹರಿಯದೆ ಹಾಗೆಯೇ ಉಳಿದಿದೆ. ಈ ಪ್ರದೇಶವು ಹಲವು ವರ್ಷಗಳಿಂದ ಒಳಚರಂಡಿ ಸಮಸ್ಯೆಯನ್ನು ಬಗೆಹರಿಸಲು ಹೋರಾಡುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.