ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Solar Eclipse: ನಾಳೆ ಶತಮಾನದ ಸಂಪೂರ್ಣ ಸೂರ್ಯಗ್ರಹಣ- ನಾಸಾ ಹೇಳಿದ್ದೇನು?

ಈ ಬಾರಿ ಆಗಸ್ಟ್ 2ರಂದು ಅತ್ಯಂತ ಅಪರೂಪದ ಸಂಪೂರ್ಣ ಸೂರ್ಯಗ್ರಹಣ (Solar Eclipse) ಸಂಭವಿಸಲಿದೆ. ಇದು ಶತಮಾನದ ಅದ್ಬುತ ಘಟನೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಇದೀಗ ಸ್ಪಷ್ಟನೆಯನ್ನು ನೀಡಿರುವ ನಾಸಾ, ಶತಮಾನದ ಸೂರ್ಯಗ್ರಹಣವು ಈ ಬಾರಿ ಅಲ್ಲ 2027ರ ಆಗಸ್ಟ್ 2ರಂದು ಸಂಭವಿಸಲಿದೆ ಎಂದು ಹೇಳಿದೆ. ಹಾಗಾದರೆ ಈ ಬಾರಿ ಸೂರ್ಯಗ್ರಹಣ ಯಾವಾಗ ನಡೆಯಲಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ನಾಳೆ ಸಂಭವಿಸಲಿದೆಯೇ ಸಂಪೂರ್ಣ ಸೂರ್ಯಗ್ರಹಣ ?

ಬೆಂಗಳೂರು: ಈ ವರ್ಷ ಶತಮಾನದ ಸೂರ್ಯಗ್ರಹಣ ಎಂದು ಕರೆಯಲ್ಪಡುವ ಸಂಪೂರ್ಣ ಸೂರ್ಯಗ್ರಹಣ (Solar Eclipse) ನಾಳೆ ಸಂಭವಿಸಲಿದೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದು, ಇದು ತಪ್ಪು ಮಾಹಿತಿ ಎಂದು ನಾಸಾ (NASA) ಸ್ಪಷ್ಟಪಡಿಸಿದೆ. ಈ ಬಾರಿ ಸೂರ್ಯಗ್ರಹಣವು (Longest Solar Eclipse) ಸೆಪ್ಟೆಂಬರ್ ನಲ್ಲಿ ನಡೆಯಲಿದೆ. ಅದು ಸಂಪೂರ್ಣ ಸೂರ್ಯಗ್ರಹಣವಲ್ಲ. ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಅಟ್ಲಾಂಟಿಕ್ ಸಾಗರದಲ್ಲಿ ಈ ಸೂರ್ಯಗ್ರಹಣವನ್ನು ವೀಕ್ಷಿಸಬಹುದಾಗಿದೆ ಎಂದು ನಾಸಾ ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಈ ಬಾರಿ ಆಗಸ್ಟ್ 2ರಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಇದೀಗ ನಾಸಾ ಸ್ಪಷ್ಟನೆಯನ್ನು ನೀಡಿದೆ. ಈ ಬಾರಿ ಆಗಸ್ಟ್ 2ರಂದು ಸೂರ್ಯಗ್ರಹಣ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನಾಸಾ, ಶತಮಾನದ ಸೂರ್ಯಗ್ರಹಣವು 2027ರಲ್ಲಿ ನಡೆಯಲಿದೆ. ಇದನ್ನು "ಶತಮಾನದ ಗ್ರಹಣ" ಎಂದು ಕರೆಯಲಾಗುತ್ತದೆ.

ಈ ಸೂರ್ಯಗ್ರಹಣವು ಅತ್ಯಂತ ಅಪರೂಪದ ದೃಶ್ಯವನ್ನು ಆಗಸದಲ್ಲಿ ಚಿತ್ರಿಸಲಿದೆ. ಇದರಲ್ಲಿ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ನೇರವಾಗಿ ಹಾದುಹೋಗುತ್ತಾನೆ. ಇದರಿಂದ ಸೂರ್ಯನ ಬೆಳಕಿನ ಒಂದು ಭಾಗ ಅಥವಾ ಸಂಪೂರ್ಣ ನಿರ್ಬಂಧವಾಗಲಿದೆ. ಇದು ಅಮಾವಾಸ್ಯೆಯಂದು ಸಂಭವಿಸಲಿದೆ.

ಸೂರ್ಯಗ್ರಹಣಗಳ ವಿಧಗಳು

  • ಸೂರ್ಯಗ್ರಹಣವು ಹಲವು ರೀತಿಯಲ್ಲಿ ನಡೆಯುತ್ತದೆ. ಇದರಲ್ಲಿ ಸಂಪೂರ್ಣ, ಉಂಗುರಾಕಾರ, ಭಾಗಶಃ, ಹೈಬ್ರಿಡ್ ಸೂರ್ಯಗ್ರಹಣ ಸೇರಿದೆ.
  • ಸಂಪೂರ್ಣ ಸೂರ್ಯಗ್ರಹಣದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುತ್ತಾನೆ. ಕೇವಲ ಸೂರ್ಯನ ಇರುವಿಕೆಯನ್ನು ಮಾತ್ರ ತೋರ್ಪಡಿಸುತ್ತದೆ.
  • ಉಂಗುರಾಕಾರದ ಸೂರ್ಯಗ್ರಹಣದಲ್ಲಿ ಚಂದ್ರನು ಸೂರ್ಯನಿಗಿಂತ ಚಿಕ್ಕದಾಗಿ ಗೋಚರಿಸುತ್ತದೆ. ಚಂದ್ರನ ಸುತ್ತ ಬೆಳಕಿನ ಉಂಗುರ ಸೃಷ್ಟಿಯಾಗುತ್ತದೆ.
  • ಭಾಗಶಃ ಸೂರ್ಯಗ್ರಹಣದಲ್ಲಿ ಚಂದ್ರನು ಸೂರ್ಯನನ್ನು ಭಾಗಶಃ ಆವರಿಸಿತ್ತಾನೆ. ಇದರಿಂದ ಭೂಮಿಯ ಮೇಲ್ಮೈಯಲ್ಲಿ ಸೂರ್ಯನ ಭಾಗಶಃ ನೆರಳು ಮಾತ್ರ ಬೀಳುತ್ತದೆ.
  • ಹೈಬ್ರಿಡ್ ಸೂರ್ಯಗ್ರಹಣವು ಅಪರೂಪದ ಗ್ರಹಣವಾಗಿದ್ದು, ಕೆಲವು ಸ್ಥಳಗಳಿಂದ ಸಂಪೂರ್ಣ ಸೂರ್ಯಗ್ರಹಣವಾದರೆ, ಇನ್ನು ಕೆಲವೆಡೆ ಉಂಗುರಾಕಾರದ ಸೂರ್ಯಗ್ರಹಣ ಗೋಚರವಾಗುವುದು.


ಈ ವರ್ಷದ ಸೂರ್ಯಗ್ರಹಣ

ಈ ವರ್ಷದ ಸೂರ್ಯಗ್ರಹಣವು ಸೆಪ್ಟೆಂಬರ್ 21ರಂದು ಸಂಭವಿಸಲಿದೆ. ಇದು ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಅಟ್ಲಾಂಟಿಕ್ ಸಾಗರದಲ್ಲಿ ಗೋಚರವಾಗಲಿದೆ. ಇದರ ಬಳಿಕ ಮುಂದಿನ ವರ್ಷದ ಫೆಬ್ರವರಿ 17ರಂದು ವಾರ್ಷಿಕ ಸೂರ್ಯಗ್ರಹಣ ಸಂಭವಿಸಲಿದ್ದು, ಇದು ಅಂಟಾರ್ಕ್ಟಿಕಾದಲ್ಲಿ ಗೋಚರಿಸಲಿದೆ. ಅಂಟಾರ್ಕ್ಟಿಕಾ, ಆಫ್ರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರದಲ್ಲಿ ಭಾಗಶಃ ಗ್ರಹಣ ಗೋಚರಿಸುವುದು.

ಆಗಸ್ಟ್ 12ರಂದು ಸಂಪೂರ್ಣ ಗ್ರಹಣವು ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಸ್ಪೇನ್, ರಷ್ಯಾ ಮತ್ತು ಪೋರ್ಚುಗಲ್‌ನ ಒಂದು ಸಣ್ಣ ಪ್ರದೇಶದಲ್ಲಿ ಗೋಚರಿಸಲಿದೆ. ಅಲ್ಲದೇ ಯುರೋಪ್, ಆಫ್ರಿಕಾ, ಉತ್ತರ ಅಮೆರಿಕಾ, ಅಟ್ಲಾಂಟಿಕ್ ಮಹಾಸಾಗರ, ಆರ್ಕ್ಟಿಕ್ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ ಎಂದು ನಾಸಾ ತಿಳಿಸಿದೆ.

ಇದನ್ನೂ ಓದಿ: Yuzvendra Chahal: ಧನಶ್ರೀ ವರ್ಮಾ ವಿಚ್ಛೇದನ, ವಂಚನೆ ಆರೋಪದ ಬಗ್ಗೆ ಮೌನ ಮುರಿದ ಚಾಹಲ್

ಸಂಪೂರ್ಣ ಸೂರ್ಯಗ್ರಹಣ

2027ರ ಆಗಸ್ಟ್ 2ರಂದು ಸಂಪೂರ್ಣ ಸೂರ್ಯ ಗ್ರಹಣವು ಅಲ್ಜೀರಿಯಾ, ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶ, ಈಜಿಪ್ಟ್, ಜಿಬ್ರಾಲ್ಟರ್, ಲಿಬಿಯಾ, ಮೊರಾಕೊ, ಸೌದಿ ಅರೇಬಿಯಾ, ಸೊಮಾಲಿಯಾ, ಸ್ಪೇನ್, ಸುಡಾನ್, ಟುನೀಶಿಯಾ, ಯೆಮೆನ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಗೋಚರಿಸಲಿದೆ. ಈ ವೇಳೆ ಹಲವು ದೇಶಗಳು ಭಾಗಶಃ ಗ್ರಹಣಕ್ಕೆ ಸಾಕ್ಷಿಯಾಗಲಿದೆ.