Viral Video: ಭರ್ಜರಿ ಬಾಡೂಟ ತಿಂದು ತೇಗಿದ್ರು- 23,000 ರೂ. ಬಿಲ್ ಕೊಡದೆ ಓಡಿ ಹೋದ ಯುವಕರು; ಇಲ್ಲಿದೆ ವಿಡಿಯೊ
Group Of Men Run Out of Restaurant: ಭಾರತೀಯ ಮೂಲದ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ಯುವಕರ ಗುಂಪೊಂದು ಬಿಲ್ ಪಾವತಿಸದೆ ಓಡಿಹೋಗಿದ್ದಾರೆ. ಇಂಗ್ಲೆಂಡ್‌ನ ನಾರ್ಥಾಂಪ್ಟನ್‌ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆಗಿದೆ. ಈ ಘಟನೆ ಆಗಸ್ಟ್ 4 ರಂದು ಸ್ಯಾಫ್ರಾನ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ರೆಸ್ಟೋರೆಂಟ್ ಫೇಸ್‌ಬುಕ್‌ನಲ್ಲಿ ವಿಡಿಯೊ ಹಂಚಿಕೊಂಡಿದೆ.


ನಾರ್ಥಾಂಪ್ಟನ್: ಭಾರತೀಯ ಮೂಲದ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ಯುವಕರ ಗುಂಪೊಂದು ಬಿಲ್ ಪಾವತಿಸದೆ ಓಡಿಹೋಗಿದ್ದಾರೆ. ಇಂಗ್ಲೆಂಡ್‌ನ ನಾರ್ಥಾಂಪ್ಟನ್‌ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್(Viral Video) ಆಗಿದೆ. ಈ ಘಟನೆ ಆಗಸ್ಟ್ 4 ರಂದು ಸ್ಯಾಫ್ರಾನ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ರೆಸ್ಟೋರೆಂಟ್ ಫೇಸ್‌ಬುಕ್‌ನಲ್ಲಿ ವಿಡಿಯೊ ಹಂಚಿಕೊಂಡಿದೆ. ನಾಲ್ವರು ಯುವಕರು ರೆಸ್ಟೋರೆಂಟ್‌ಗೆ ಪ್ರವೇಶಿಸಿ ತಮ್ಮ ಆಹಾರ ಆರ್ಡರ್‌ಗಳನ್ನು ನೀಡಿದ್ದಾರೆ.
ಊಟ ಮಾಡಿದ ನಂತರ ತಮ್ಮ ಟೇಬಲ್ ಬಿಟ್ಟು ರೆಸ್ಟೋರೆಂಟ್‌ನ ಬಾಗಿಲಿನಿಂದ ಹೊರಗೆ ಓಡಿಹೋಗಿದ್ದಾರೆ. ಒಬ್ಬ ಮಾಣಿ ಅವರನ್ನು ಬೆನ್ನಟ್ಟುತ್ತಾ ಹಿಂಬಾಲಿಸಿದ್ದಾರೆ. ಈ ಗುಂಪು 197.30 ಪೌಂಡ್‌ಗಳ (ಸುಮಾರು 23,000 ರೂ.) ಮೌಲ್ಯದ ಆಹಾರವನ್ನು ಸೇವಿಸಿದ್ದಾರೆ. ಇದರಲ್ಲಿ ಕುರಿ, ಕುರಿಮರಿ ಮಾಂಸ ಮತ್ತು ಇತರೆ ಭಕ್ಷ್ಯಗಳಿವೆ ಎಂದು ರೆಸ್ಟೋರೆಂಟ್ ತಿಳಿಸಿದೆ.
ಘಟನೆಯ ನಂತರ ಶಂಕಿತರನ್ನು ಗುರುತಿಸಲು , ರೆಸ್ಟೋರೆಂಟ್ ಮನವಿ ಮಾಡಿದೆ. “ನಿನ್ನೆ ರಾತ್ರಿ ಸರಿಸುಮಾರು 10:15ಕ್ಕೆ, ನಾಲ್ವರು ಯುವಕರು ನಮ್ಮ ರೆಸ್ಟೋರೆಂಟ್‌ಗೆ ಪ್ರವೇಶಿಸಿ ಊಟ ಮಾಡಿದ್ದಾರೆ. ಆದರೆ, ಹಣ ಪಾವತಿಸದೆ ಅವರು ಹೊರಟುಹೋದರು. ಈ ರೀತಿಯ ನಡವಳಿಕೆಯು ಕೇವಲ ಕಳ್ಳತನವಲ್ಲ, ಇದು ನಮ್ಮ ಸ್ಥಳೀಯ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ರೆಸ್ಟೋರೆಂಟ್ ತಿಳಿಸಿದೆ.
ವಿಡಿಯೊ ವೀಕ್ಷಿಸಿ:
The Great British Curry Robbery: History Repeats Itself as UK Dinners Dash from Restaurant Without Paying!
— RT_India (@RT_India_news) August 11, 2025
CCTV captured the moment four customers are chased from the "Saffron" restaurant in Northampton 🇬🇧 - after running up a bill of almost £200. pic.twitter.com/8SkagwvFRq
“ನಾವು ಘಟನೆಯ ಬಗ್ಗೆ ಪೊಲೀಸರಿಗೆ ವರದಿ ಮಾಡಿದ್ದೇವೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಹಸ್ತಾಂತರಿಸಲಾಗಿದೆ. ನೀವು ಈ ವ್ಯಕ್ತಿಗಳನ್ನು ಗುರುತಿಸಿದರೆ ಅಥವಾ ಯಾವುದೇ ಮಾಹಿತಿಯನ್ನು ಹೊಂದಿದ್ದರೆ, ದಯವಿಟ್ಟು ನಮ್ಮನ್ನು ನೇರವಾಗಿ ಸಂಪರ್ಕಿಸಿ ಅಥವಾ ಪೊಲೀಸರಿಗೆ ವರದಿ ಮಾಡಿ. ಪರಸ್ಪರ ರಕ್ಷಿಸೋಣ” ಎಂದು ರೆಸ್ಟೋರೆಂಟ್ ತಿಳಿಸಿದೆ. ಇನ್ನು ನಾರ್ಥಾಂಪ್ಟನ್‌ಶೈರ್ ಪೊಲೀಸರು ಈ ಘಟನೆಯನ್ನು ಕಳ್ಳತನವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಮಾಹಿತಿ ಇರುವ ಯಾರಾದರೂ 101 ಗೆ ಕರೆ ಮಾಡಿ ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಮರಿಗಳನ್ನು ಕಾಪಾಡಲು ತಾಯಿ ಕರಡಿಯ ಪರದಾಟ ನೋಡಿದ್ರೆ ನೀವೂ ಕಂಬನಿ ಮಿಡಿಯುವಿರಿ; ಹೃದಯಸ್ಪರ್ಶಿ ವಿಡಿಯೊ ವೈರಲ್
ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹಣ ಖರ್ಚು ಮಾಡಲು ಸಾಧ್ಯವಾಗದಿದ್ದರೆ, ಮನೆಯಲ್ಲಿಯೇ ಊಟ ಮಾಡಿ. ಇತ್ತೀಚಿನ ದಿನಗಳಲ್ಲಿ ಜನರು ಅಡುಗೆ ಮಾಡಲು ಏಕೆ ಸೋಮಾರಿಗಳಾಗಿದ್ದಾರೆ? ಎಂದು ಒಬ್ಬ ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ಆಹಾರ ಆರ್ಡರ್ ಮಾಡುವಾಗಲೇ ಹಣ ತೆಗೆದುಕೊಳ್ಳಿ ಎಂದು ಇನ್ನು ಕೆಲವರು ಸಲಹೆ ನೀಡಿದ್ದಾರೆ.