ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮರಿಗಳನ್ನು ಕಾಪಾಡಲು ತಾಯಿ ಕರಡಿಯ ಪರದಾಟ ನೋಡಿದ್ರೆ ನೀವೂ ಕಂಬನಿ ಮಿಡಿಯುವಿರಿ; ಹೃದಯಸ್ಪರ್ಶಿ ವಿಡಿಯೊ ವೈರಲ್‌

ಮಧ್ಯ ಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಗಾಯಗೊಂಡಿದ್ದ ತನ್ನ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ತಾಯಿ ಕರಡಿಯ ಹೃದಯ ವಿದ್ರಾವಕ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ತಾಯಿ ಕರಡಿಯೊಂದು ತನ್ನ ಒಂದು ಮರಿಯನ್ನು ಬೆನ್ನಿನ ಮೇಲೆ ಇಟ್ಟುಕೊಂಡು ಗಾಯಗೊಂಡಿರುವ ಇನ್ನೊಂದು ಮರಿಯನ್ನು ರಸ್ತೆಬದಿಗೆ ಎಳೆದೊಯ್ಯುತ್ತಿರುವ ಕರುಣಾಜನಕ ದೃಶ್ಯವಿದು.

ತಾಯಿ ಕರಡಿಯ ಈ ವಿಡಿಯೊ ನೋಡಿದ್ರೆ ನೀವೂ ಕಂಬನಿ ಮಿಡಿಯುವಿರಿ

Priyanka P Priyanka P Aug 9, 2025 2:30 PM

ಭೋಪಾಲ್‌: ತಾಯಿಯ ಪ್ರಪಂಚ ಅಂದರೆ ಅದು ಮಕ್ಕಳು. ತಮಗೆಷ್ಟೇ ಕಷ್ಟ ಬಂದರೂ ಸರಿ, ತಮ್ಮ ಮಕ್ಕಳಿಗಾಗಿ ತಾಯಿ ಜೀವನ ಸಾಗಿಸುತ್ತಾಳೆ. ತನ್ನ ಮಕ್ಕಳಿಗೆ ಯಾವುದೇ ಕಷ್ಟ ಬರದಂತೆ ನೋಡಿಕೊಳ್ಳುತ್ತಾಳೆ. ಮಕ್ಕಳಿಗೇನಾದರೂ ಸಮಸ್ಯೆಯಾದರೆ ಅವಳಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ತಾಯಿಯನ್ನು ಕರುಣಾಮಯಿ ಎಂದು ಕರೆಯೋದು. ಮನುಷ್ಯರಲ್ಲಷ್ಟೇ ಅಲ್ಲ ಪ್ರಾಣಿಗಳಲ್ಲೂ ಕೂಡ ಹೀಗೆಯೇ (Viral Video೦). ಮಕ್ಕಳನ್ನು ಕಳೆದುಕೊಳ್ಳುವುದು ಅಂದ್ರೆ ಅದು ಸಹಿಸಲಸಾಧ್ಯ. ಇದೀಗ ಮಧ್ಯ ಪ್ರದೇಶದಲ್ಲಿ ನಡೆದ ಘಟನೆ ಇದಕ್ಕೆ ಉತ್ತಮ ಉದಾಹರಣೆ ಎನಿಸಿಕೊಂಡಿದೆ.

ಮಧ್ಯ ಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಗಾಯಗೊಂಡಿದ್ದ ತನ್ನ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ತಾಯಿ ಕರಡಿಯ ಹೃದಯ ವಿದ್ರಾವಕ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಭೀತಿಗೊಂಡಿರುವ ತಾಯಿ ಕರಡಿಯೊಂದು ತನ್ನ ಒಂದು ಮರಿಯನ್ನು ಬೆನ್ನಿನ ಮೇಲೆ ಇಟ್ಟುಕೊಂಡು ಗಾಯಗೊಂಡಿರುವ ಇನ್ನೊಂದು ಮರಿಯನ್ನು ರಸ್ತೆಬದಿಗೆ ಎಳೆದೊಯ್ಯುತ್ತಿರುವ ಕರುಣಾಜನಕ ದೃಶ್ಯವಿದು.

ಈ ವಿಡಿಯೊ ನೋಡಿದ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. ಇನ್ನು ಕೆಲವರು ಸಿಡಿದೆದ್ದಿದ್ದಾರೆ. ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದನ್ನು ಹಲವು ಮಂದಿ ಖಂಡಿಸಿದ್ದು, ಸುರಕ್ಷಿತ ಚಾಲನೆಗೆ ಕರೆ ನೀಡಿದ್ದಾರೆ.

ಗೋಹ್ಪರ್-ಜೈತ್‌ಪುರದಲ್ಲಿ ವೇಗವಾಗಿ ಬಂದ ವಾಹನವು ಕರಡಿ ಮರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮರಿ ಗಂಭೀರವಾಗಿ ಗಾಯಗೊಂಡಿದೆ. ತನ್ನ ಮರಿಗೆ ಗಾಯವಾಗಿರುವುದನ್ನು ನೋಡಿ, ತಾಯಿ ಕರಡಿ ಅದಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಲೇ ಇತ್ತು. ಗಾಯಗೊಂಡ ಮರಿ ಅರ್ಧ ಪ್ರಜ್ಞಾಹೀನವಾಗಿ ರಸ್ತೆಯ ಮೇಲೆ ಬಿದ್ದಿದ್ದರಿಂದ ಚಲಿಸಲು ಸಾಧ್ಯವಾಗದೆ ಸುಮಾರು ಒಂದು ಗಂಟೆಗಳ ಕಾಲ ಅದರ ಪಕ್ಕದಲ್ಲಿಯೇ ಇತ್ತು.

ಇನ್ನೊಂದು ಮರಿ ತಾಯಿ ಕರಡಿಯ ಬೆನ್ನಿಗೆ ಅಂಟಿಕೊಂಡಿತ್ತು. ಗಾಯಗೊಂಡಿರುವ ಮರಿಯನ್ನು ತಾಯಿ ಕರಡಿ ರಸ್ತೆ ಬದಿಗೆ ಎಳೆದೊಯ್ಯಲು ಪ್ರಯತ್ನಿಸಿದೆ. ಈ ಭಾವನಾತ್ಮಕ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ತಾಯಿಯ ಪ್ರೀತಿ ಮತ್ತು ನೋವನ್ನು ಪ್ರತಿಬಿಂಬಿಸಿದೆ.

ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಾಯಿ ಕರಡಿ ಮತ್ತು ಅದರ ಬದುಕುಳಿದ ಮರಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ವಿಷಾದದ ಸಂಗತಿಯೆಂದರೆ ಗಾಯಗೊಂಡ ಮರಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಘಟನೆಯು ಅರಣ್ಯ ಪ್ರದೇಶಗಳಲ್ಲಿ ವಾಹನಗಳನ್ನು ವೇಗವಾಗಿ ಓಡಿಸುವುದರಿಂದ ಮತ್ತು ಅವು ವನ್ಯಜೀವಿಗಳಿಗೆ ಉಂಟುಮಾಡುವ ಅಪಾಯಗಳ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.