ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಘನಘೋರ ಘಟನೆ! ಆನೆ ದಾಳಿಗೆ ಕೋಟ್ಯಾಧಿಪತಿ ಸಿಇಒ ಬಲಿ

CEO dies in tragic: ಕಾಡು ಆನೆ ದಾಳಿಗೆ ದಕ್ಷಿಣ ಆಫ್ರಿಕಾದ ಗೊಂಡ್ವಾನ ಖಾಸಗಿ ಗೇಮ್ ರಿಸರ್ವ್‌ನ ಸಹ-ಮಾಲೀಕರೂ ಆಗಿರುವ ಬಹು-ಕೋಟ್ಯಧಿಪತಿ ಸಿಇಒ ಎಫ್‌ಸಿ ಕಾನ್ರಾಡಿ ಬಲಿಯಾಗಿರುವ ದುರಂತ ಸಂಭವಿಸಿದೆ. 39 ವರ್ಷದ ಕಾನ್ರಾಡಿ ಆನೆ ದಾಳಿಗೆ ಬಲಿಯಾಗಿದ್ದಾರೆ.

ಘನಘೋರ ಘಟನೆ! ಆನೆ ದಾಳಿಗೆ ಕೋಟ್ಯಾಧಿಪತಿ ಸಿಇಒ ಬಲಿ

Priyanka P Priyanka P Jul 25, 2025 3:54 PM

ಗೊಂಡ್ವಾನ: ಕಾಡು ಆನೆ ದಾಳಿಗೆ ಬಹು- ಕೋಟ್ಯಾಧಿಪತಿ ಸಿಇಒ ಎಫ್‌ಸಿ ಕಾನ್ರಾಡಿ ಬಲಿಯಾಗಿರುವ ದುರಂತ ಸಂಭವಿಸಿದೆ. ದಕ್ಷಿಣ ಆಫ್ರಿಕಾದ ಗೊಂಡ್ವಾನ ಖಾಸಗಿ ಗೇಮ್ ರಿಸರ್ವ್‌ನ ಸಹ-ಮಾಲೀಕರೂ ಆಗಿರುವ ಕಾನ್ರಾಡಿ ಸಾವಿಗೀಡಾಗಿದ್ದಾರೆ. ಜುಲೈ 22ರ ಸೋಮವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಾನ್ರಾಡಿ ಆನೆಗಳನ್ನು ಪ್ರವಾಸಿ ವಸತಿಗೃಹಗಳಿಂದ ದೂರ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆನೆಗಳಲ್ಲಿ ಒಂದು ಕಾನ್ರಾಡಿ ಮೇಲೆ ದಾಳಿ ಮಾಡಿ ಅವರನ್ನು ತುಳಿದು ಕೊಂದಿದೆ. 39 ವರ್ಷದ ಕಾನ್ರಾಡಿ ಆನೆ ದಾಳಿಗೆ ಬಲಿಯಾಗಿದ್ದಾರೆ.

ಈ ದುರಂತ ಘಟನೆಯಿಂದ ಸ್ಥಳೀಯರು ಮತ್ತು ಪ್ರವಾಸಿಗರು ದಿಗ್ಭ್ರಮೆಗೊಂಡಿದ್ದಾರೆ. ಏಕೆಂದರೆ ಇದು ಸುತ್ತಮುತ್ತಲಿನ ಜನರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಳವಳವನ್ನು ಮೂಡಿಸಿದೆ. ದಾಳಿ ನಡೆದ ಕೂಡಲೇ ಕಾನ್ರಾಡಿ ಅವರನ್ನು ರಕ್ಷಿಸಲು ಮುಂದಾದರೂ ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಇಂತಹ ಘಟನೆಗಳು ಅಪರೂಪವಾದರೂ, ಕಾನ್ರಾಡಿ ಸಾವು ಅರಣ್ಯ ಪ್ರದೇಶಗಳಲ್ಲಿ ಸುರಕ್ಷತಾ ಪ್ರೋಟೋಕಾಲ್‌ಗಳ ಕುರಿತು ಚರ್ಚೆಗಳನ್ನು ಮತ್ತೆ ಹುಟ್ಟುಹಾಕಿದೆ. ಅನುಭವಿ ಪ್ರಾಣಿ ತಜ್ಞರು ಕಾಡು ಪ್ರಾಣಿಗಳ ಬಗ್ಗೆ, ವಿಶೇಷವಾಗಿ ಆನೆಗಳ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಒತ್ತಿ ಹೇಳುತ್ತಾರೆ. ಏಕೆಂದರೆ ಅವುಗಳು ಸಾಮಾನ್ಯವಾಗಿ ಶಾಂತ ಸ್ವಭಾವವನ್ನು ಹೊಂದಿದ್ದರೂ ಸಹ ಇದು ಅನಿರೀಕ್ಷಿತವಾಗಿರುತ್ತದೆ.

ಗೊಂಡ್ವಾನ ಖಾಸಗಿ ಗೇಮ್ ರಿಸರ್ವ್‌ನ ಸಿಇಒ ಫ್ರಾಂಕೋಯಿಸ್ ಕ್ರಿಸ್ಟಿಯಾನ್ ಕಾನ್ರಾಡಿ ಜುಲೈ 22 ರಂದು ಬೆಳಿಗ್ಗೆ 8 ಗಂಟೆಗೆ ಆನೆ ದಾಳಿಗೆ ಮೃತಪಟ್ಟಿದ್ದು, ಇವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. ಈ ಮಧ್ಯೆ ಕುಟುಂಬವು ಗೌಪ್ಯತೆಯನ್ನು ಬಯಸುತ್ತದೆ.



ಗೊಂಡ್ವಾನ ಖಾಸಗಿ ಮೀಸಲು ಅಧಿಕೃತ ಹೇಳಿಕೆ

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ತನ್ನ ಅಧಿಕೃತ ಹೇಳಿಕೆಯಲ್ಲಿ, ಗೊಂಡ್ವಾನಾ ಖಾಸಗಿ ಮೀಸಲು ಸಂಸ್ಥೆಯು ಕಾನ್ರಾಡಿಯನ್ನು ದೂರದೃಷ್ಟಿಯ ನಾಯಕ ಮತ್ತು ಪ್ರೀತಿಯ ಸ್ನೇಹಿತ ಎಂದು ಉಲ್ಲೇಖಿಸಿದೆ. ಹೇಳಿಕೆಯಲ್ಲಿ, “ಒಬ್ಬ ಶ್ರದ್ಧಾಭರಿತ ಪತಿ, ಮೂರು ಚಿಕ್ಕ ಮಕ್ಕಳ ತಂದೆ ಮತ್ತು ಅನೇಕರಿಗೆ ಪ್ರೀತಿಯ ಸ್ನೇಹಿತನಾಗಿದ್ದ, ಗೊಂಡ್ವಾನಾ ಮತ್ತು ಸಮುದಾಯದಾದ್ಯಂತ ಪ್ರೀತಿಯ ಮತ್ತು ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಅವರ ನಿಧನವು ಎಲ್ಲರಲ್ಲೂ ತೀವ್ರ ಆಘಾತ ಮತ್ತು ದುಃಖದಲ್ಲಿ ಮುಳುಗಿಸಿದೆ” ಎಂದು ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Malaika Arora: ವಯಸ್ಸು 51 ಆದ್ರೂ ಈಕೆಯ ಸೌಂದರ್ಯಕ್ಕೆ ಯುವತಿಯೇ ನಾಚಬೇಕು! ಮಲೈಕಾ ಹಾಟ್‌ ಫೋಟೋಸ್‌ ಮತ್ತೆ ವೈರಲ್‌

ಇನ್ನು ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಸುತ್ತಲಿನಲ್ಲಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ರೇಂಜರ್‌ಗಳಾದ ಡೇವಿಡ್ ಕಾಂಡೇಲಾ ಮತ್ತು ಫಿಲಾನಿ ಸಿಬಿಯಾ ಅವರ ಸಾವಿನ ಬಳಿಕ ಒಂದು ವರ್ಷದೊಳಗೆ ಅಭಯಾರಣ್ಯದಲ್ಲಿ ನಡೆದ ಮೂರನೇ ಭೀಕರ ಸಾವು ಇದಾಗಿದೆ.