'ಸೈಯಾರ' ಚಿತ್ರ ವೀಕ್ಷಿಸಲು ಬಂದವರಿಗೆ ಸಿಕ್ತು ಪುಕ್ಸಟ್ಟೆ ಮನರಂಜನೆ! ಕಂಪ್ಲೀಟ್ ಹಣ ವಸೂಲಿ ಎಂದ ನೆಟ್ಟಿಗರು; ಅಷ್ಟಕ್ಕೂ ಆಗಿದ್ದೇನು?
Saiyaara Movie: 'ಸೈಯಾರ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರು ಜೋರಾಗಿ ಹರ್ಷೋದ್ಗಾರಗಳನ್ನು ಕೂಗುತ್ತಾ, ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರ ಜತೆಗೆ ಸಿನಿಮಾ ಥಿಯೇಟರ್ನಲ್ಲಿ ಯುವತಿಯೊಬ್ಬಳ ಇಬ್ಬರು ಗೆಳೆಯರು ಪರಸ್ಪರ ಜಗಳವಾಡಿದ ದೃಶ್ಯದ ವಿಡಿಯೊ ವೈರಲ್ ಆಗಿದೆ.


ಮುಂಬೈ: ಬಾಲಿವುಡ್‍ನ ʼಸೈಯಾರʼ ಚಿತ್ರ (Saiyaara Movie) ಸಖತ್ ಸದ್ದು ಮಾಡುತ್ತಿದ್ದು, ಬಾರಿ ಕ್ರೇಜ್ ಹುಟ್ಟುಹಾಕಿದೆ. ಹೊಸಬರಾದ ಅಹಾನ್ ಪಾಂಡೆ (Ahaan Panday) ಮತ್ತು ಅನೀತ್ ಪಡ್ಡಾ (Aneet Padda) ನಟಿಸಿರುವ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಆರಂಭದೊಂದಿಗೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮೋಹಿತ್ ಸೂರಿ ನಿರ್ದೇಶನದ 'ಸೈಯಾರ' ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಕಾಡುತ್ತಿದೆ. ಈ ನಡುವೆ ಥಿಯೇಟರ್‌ವೊಂದರಲ್ಲಿ ಚಿತ್ರ ವೀಕ್ಷಿಸಲು ಬಂದ ಯುವಕರಿಬ್ಬರು ಜಗಳವಾಡಿದ ಘಟನೆ ನಡೆದಿದೆ. ಆ ಮೂಲಕ ನೆರೆದವರಿಗೆ ಪುಕ್ಸಟ್ಟೆ ಮನರಂಜನೆ ನೀಡಿದ್ದಾರೆ.
ʼಸೈಯಾರʼ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಕ್ಷಕರು ಜೋರಾಗಿ ಹರ್ಷೋದ್ಗಾರಗಳನ್ನು ಕೂಗುತ್ತಾ, ಕುಣಿದು ಕುಪ್ಪಳಿಸಿದ್ದಾರೆ. ಇದರ ಜತೆಗೆ ಸಿನಿಮಾ ಥಿಯೇಟರ್ನಲ್ಲಿ ಯುವತಿಯೊಬ್ಬಳ ಇಬ್ಬರು ಗೆಳೆಯರು ಪರಸ್ಪರ ಜಗಳವಾಡಿದ ದೃಶ್ಯದ ವಿಡಿಯೊ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಪ್ರೇಕ್ಷಕರೆಲ್ಲರೂ ಸಿನಿಮಾಗೆ ಮನಸೋತಿದ್ದರೆ, ಯುವತಿಯ ಇಬ್ಬರು ಗೆಳೆಯರು ಜಗಳವಾಡಿದ್ದಾರೆ. ಯುವತಿಯೊಬ್ಬಳು ಇಬ್ಬರು ಯುವಕರೊಂದಿಗೆ ಡೇಟಿಂಗ್ ಮಾಡುತ್ತಿದ್ದಳು ಎನ್ನಲಾಗಿದೆ. ಚಿತ್ರ ಪ್ರದರ್ಶನದ ಸಮಯದಲ್ಲಿ ಅನಿರೀಕ್ಷಿತವಾಗಿ ಮುಖಾಮುಖಿಯಾಗಿದ್ದರಿಂದ ಇದು ಇಬ್ಬರು ಯುವಕರ ಮಧ್ಯೆ ಜಗಳಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೊದ ಆರಂಭದಲ್ಲಿ ಇಬ್ಬರು ಪುರುಷರು ಅನಿರೀಕ್ಷಿತವಾಗಿ ಮುಖಾಮುಖಿಯಾಗುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಪ್ರಕಾರ, ಇಬ್ಬರೂ ಒಂದೇ ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಸಿನಿಮಾ ಪ್ರಸಾರವಾಗುತ್ತಿದ್ದಂತೆ ಇಬ್ಬರು ಯುವಕರ ಮಧ್ಯೆ ಜಗಳ ಆರಂಭವಾಗಿದೆ. ಪರಸ್ಪರ ಒದೆಯುತ್ತಾ, ಗುದ್ದಾಡಿದ್ದಾರೆ. ಇತರ ಪ್ರೇಕ್ಷಕರು ಸುತ್ತಲೂ ಗುಂಪುಗೂಡುವುದನ್ನು ಕಾಣಬಹುದು. ಕೆಲವರು ಜಗಳ ಬಿಡಿಸಲು ಮುಂದಾಗುತ್ತಾರೆ. ಆದರೆ ಇತರರು ತಮ್ಮ ಫೋನ್‌ಗಳನ್ನು ಹೊರತೆಗೆದು ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.
ವಿಡಿಯೊ ಇಲ್ಲಿದೆ:
ಸದ್ಯ ಈ ಪೋಸ್ಟ್ ಭಾರಿ ವೈರಲ್ ಆಗಿದ್ದು, ಸಿನಿಮಾ ವೀಕ್ಷಣೆಗೆ ಕೊಟ್ಟ ಹಣ ವಸೂಲಾಗಿದೆ ಎಂದು ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ನೋಡಲು ಕಾಯಬಹುದು, ಮೊದಲು ಜಗಳವನ್ನು ನೋಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಬಹಳ ಅದ್ಭುತವಾಗಿತ್ತು. ಇಲ್ಲಿ ನಡೆಯುತ್ತಿರುವುದು ಸಿನಿಮಾಕ್ಕಿಂತ ಹೆಚ್ಚು ಮನರಂಜನೆಯಾಗಿತ್ತು ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ ʼಸೈಯಾರʼ ಚಿತ್ರ
ಇನ್ನು ʼಸೈಯಾರʼ ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದು, ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಹೀಗಾಗಿ ಸಿನಿಮಾ ನಿರ್ಮಾಪಕರು ಹೆಚ್ಚುವರಿ ಪ್ರದರ್ಶನಗಳನ್ನು ನೀಡಲು ಮುಂದಾಗಿದ್ದಾರೆ. ಆರಂಭದಲ್ಲಿ ಈ ಚಿತ್ರವು ಕೇವಲ 800 ಪರದೆಗಳು ಮತ್ತು 8,000 ಪ್ರದರ್ಶನಗಳಿಗೆ ಸೀಮಿತವಾಗಿತ್ತು. ಆದರೆ ಈಗ ಅದು 2,000ಕ್ಕೂ ಹೆಚ್ಚು ಪರದೆಗಳು ಮತ್ತು ದಿನಕ್ಕೆ 11,000ಕ್ಕೂ ಹೆಚ್ಚು ಪ್ರದರ್ಶನಗಳಿಗೆ ವಿಸ್ತರಿಸಿದೆ. ʼಸೈಯಾರʼ ನಿರಂತರವಾಗಿ ಪ್ರತಿದಿನ 20 ಕೋಟಿ ರೂ.ಗಳಿಗಿಂತ ಹೆಚ್ಚು ಹಣ ಗಳಿಸಿದೆ. ಇದು ಅನೇಕ ದೊಡ್ಡ ಬಜೆಟ್ ಚಿತ್ರಗಳು ಸಹ ತಲುಪಲು ವಿಫಲವಾದ ಅಪರೂಪದ ಸಾಧನೆ ಎನಿಸಿಕೊಂಡಿದೆ.
ಬಿಡುಗಡೆಯಾದ ಕೇವಲ 7 ದಿನಗಳಲ್ಲಿ, ಸೈಯಾರಾ ಬಾಕ್ಸ್ ಆಫೀಸ್‌ನಲ್ಲಿ 153.25 ಕೋಟಿ ರೂ.ಗಳನ್ನು ಬಾಚಿಕೊಂಡಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಈ ಚಿತ್ರವು ವರ್ಷದ ಅತಿ ದೊಡ್ಡ ಆರಂಭಿಕ ಗಳಿಕೆಯನ್ನು ಕಂಡಿದ್ದು, ಮೊದಲ ದಿನವೇ 21.5 ಕೋಟಿ ರೂ. ಗಳಿಸಿದೆ.