ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕ್ಲಾಸ್‌ರೂಂನಲ್ಲಿ ಮಕ್ಕಳ ರ‍್ಯಾಂಪ್‌ ವಾಕ್‌! ಕ್ಯೂಟ್‌ ವಿಡಿಯೊ ಇಲ್ಲಿದೆ ನೋಡಿ

Teacher Turns Classroom into Fashion Show: ನಿಯಮಿತ ಅಧ್ಯಯನ ಅವಧಿಯ ಬದಲು, ಶಾಲೆಯೊಂದರ ತರಗತಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರ್ಯಾಂಪ್ ವಾಕ್ ಮಾಡಿದ್ದಾರೆ. ಮೇಘಾಲಯದ ಗರೋಬಾಧದ ಸೇಂಟ್ ಡೊಮಿನಿಕ್ ಸವಿಯೊ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ವಿಡಿಯೊ ಭಾರಿ ವೈರಲ್ ಆಗಿದೆ.

ಕ್ಲಾಸ್‌ರೂಂನಲ್ಲಿ ಮಕ್ಕಳ ರ‍್ಯಾಂಪ್‌ ವಾಕ್‌ ಹೇಗಿತ್ತು ನೋಡಿ...

Priyanka P Priyanka P Aug 25, 2025 1:31 PM

ಶಿಲ್ಲಾಂಗ್: ದಿನನಿತ್ಯ ಓದು, ಪರೀಕ್ಷೆ ಎಂದು ಯಾವಾಗಲೂ ಮಕ್ಕಳನ್ನು ಬ್ಯುಸಿಯಾಗಿಡಲಾಗುತ್ತದೆ. ಆದರೆ, ಮಕ್ಕಳು ತಮ್ಮ ಜೀವನವನ್ನು ಆನಂದಿಸುವುದು ಬಹಳ ಮುಖ್ಯ. ಇದೀಗ ಶಾಲೆಯೊಂದರ (school) ತರಗತಿಯಲ್ಲಿ ಚಿಕ್ಕ ಮಕ್ಕಳ ಫ್ಯಾಷನ್ ಶೋ (Fashion Show) ಮಾಡುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಮೇಘಾಲಯದ ಗರೋಬಾಧದ ಸೇಂಟ್ ಡೊಮಿನಿಕ್ ಸವಿಯೊ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ವಿಡಿಯೊವನ್ನು ರೆಕಾರ್ಡ್‌ ಮಾಡಲಾಗಿದೆ.

ನಿಯಮಿತ ಅಧ್ಯಯನ ಅವಧಿಯ ಬದಲು, ತಮ್ಮ ತರಗತಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರ‍್ಯಾಂಪ್‌ ವಾಕ್ ಮಾಡಿದ್ದಾರೆ. ಈ ಚಟುವಟಿಕೆಯು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯಕವಾಗಿದೆ. ಉತ್ಸಾಹದಿಂದ ಭಾಗವಹಿಸಿದ ಮಕ್ಕಳು, ಆತ್ಮವಿಶ್ವಾಸದಿಂದ ಡೆಸ್ಕ್‌ಗಳ ನಡುವೆ ನಡೆದಿದ್ದಾರೆ. ಈ ವೇಳೆ ಅವರ ಸಹಪಾಠಿಗಳು ಹುರಿದುಂಬಿಸಿದ್ದಾರೆ. ಕೆಲವರು ತಮ್ಮದೇ ಆದ ಪ್ರತಿಭೆಯನ್ನು ತೋರಿಸಿದರೆ, ಇನ್ನು ಕೆಲವರು ನೃತ್ಯ ಮಾಡಿದರು, ಕೆಲವರು ತಮಾಷೆಯ ಭಂಗಿಗಳನ್ನು ಪ್ರದರ್ಶಿಸಿದರು.

ವಿಡಿಯೊ ವೀಕ್ಷಿಸಿ:

ಇದನ್ನೂ ಓದಿ: Viral Video: ಬಿಹಾರದಲ್ಲಿ ರಾಹುಲ್ ಗಾಂಧಿ ಕೆನ್ನೆಗೆ ಮುತ್ತು ಕೊಟ್ಟು ಏಟು ತಿಂದ ಯುವಕ; ವಿಡಿಯೊ ಇಲ್ಲಿದೆ

ಶಿಕ್ಷಣ ಎಂದರೆ ಕೇವಲ ಓದುವುದಷ್ಟೇ ಅಲ್ಲ. ಮಕ್ಕಳಿಗೆ ಮನರಂಜನಾ ಚಟುವಟಿಕೆಗಳನ್ನು ನೀಡಬೇಕು ಎಂಬುದಕ್ಕೆ ಈ ವಿಡಿಯೊ ಒಂದು ಸುಂದರ ಉದಾಹರಣೆಯಾಗಿದೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದ್ದು, ಶಿಕ್ಷಕರ ಪ್ರಯತ್ನಕ್ಕೆ ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು, ತುಂಬಾ ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. “ನಾನು ನನ್ನ ಶಾಲಾ ಮಕ್ಕಳಿಗೂ ತರಗತಿಯಲ್ಲಿ ಇದೇ ರೀತಿಯ ಚಟುವಟಿಕೆ ಆಯೋಜಿಸಿದ್ದೆ. ಕಿಟಕಿಗಳನ್ನು ಮುಚ್ಚಿ, ದೀಪಗಳನ್ನು ಆಫ್ ಮಾಡಿ, ಸ್ವಲ್ಪ ವೇಷಭೂಷಣಗಳೊಂದಿಗೆ ನೃತ್ಯ ಆಯೋಜಿಸಿದ್ದೆ. ಆದರೆ, ಶಾಲೆಯಲ್ಲಿ ಪ್ರಾಂಶುಪಾಲರು ಸೇರಿದಂತೆ ಯಾರಿಗೂ ಇದರ ಬಗ್ಗೆ ತಿಳಿದಿರಲಿಲ್ಲ. ಇದು ರಹಸ್ಯವಾಗಿತ್ತು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಇದು ಬಹಳ ಮುಖ್ಯ. ಇದರಿಂದ ಅವರು ವಯಸ್ಕರಾದ ನಂತರ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡುವಾಗ ಭಯಪಡುವುದಿಲ್ಲ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.ಮೇಘಾಲಯದ ಶಾಲೆಯೊಂದರಲ್ಲಿ ನಡೆದ ಈ ಚಟುವಟಿಕೆಯು ನೆಟ್ಟಿಗರಿಗೆ ಖುಷಿ ತರಿಸಿದೆ. ಅದೇ ರೀತಿ ಮುಂಬೈನ ಮತ್ತೊಂದು ವಿಡಿಯೊ ನೆಟ್ಟಿಗರನ್ನು ಸಂತೋಷಪಡಿಸಿದೆ. ನಾರ್ಸೀ ಮಾಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (NMIMS) ನಲ್ಲಿ, ಒಬ್ಬ ಶಿಕ್ಷಕಿ ರ‍್ಯಾಂಪ್ ವಾಕ್ ಮೂಲಕ ತನ್ನ ವಿದ್ಯಾರ್ಥಿಗಳನ್ನು ರಂಜಿಸಿದರು.

ಅವರ ಅಭಿನಯದಿಂದ ಪ್ರೇರಿತರಾದ ವಿದ್ಯಾರ್ಥಿಯೊಬ್ಬರು, ಓಂ ಶಾಂತಿ ಓಂ ಚಿತ್ರದ ಪ್ರಸಿದ್ಧ ದೃಶ್ಯವನ್ನು ಹಾಸ್ಯಮಯವಾಗಿ ಮರುಸೃಷ್ಟಿಸಿದರು. ಅಲ್ಲಿ ದೀಪಿಕಾ ಪಡುಕೋಣೆಯನ್ನು ನೋಡಿ ಶಾರುಖ್ ಖಾನ್ ಮೂರ್ಛೆ ಹೋಗುವಂತೆ ವಿದ್ಯಾರ್ಥಿಯೊಬ್ಬರು ಮೂರ್ಛೆ ತಪ್ಪಿ ಬೀಳುವಂತೆ ನಟಿಸಿದ್ದಾರೆ.

ವಿಡಿಯೊ ವೀಕ್ಷಿಸಿ: