Viral News: ಈ ಹೋಟೆಲ್‍ಗೆ ಭೇಟಿ ನೀಡಿದರೆ ನೀವು ಒಂಟಿಯಾಗಿರಲ್ಲ; ನಿಮಗಾಗಿ ಆತ್ಮೀಯ ಸ್ನೇಹಿತನೊಬ್ಬ ಇಲ್ಲಿರ್ತಾನೆ!
This Hotel Won't Let You Be Lonely: ಚೀನಾದ ವುಹಾನ್‌ನಲ್ಲಿರುವ ಹೋಟೆಲ್‍ವೊಂದು ವಿಶಿಷ್ಟ ಸೇವೆಯನ್ನು ಪರಿಚಯಿಸಿದ್ದು, ಅದು ಶ್ವಾನಪ್ರಿಯರ ಹೃದಯಗಳನ್ನು ಗೆಲ್ಲುತ್ತಿದೆ. ಈ ಹೋಟೆಲ್ ಕೋಣೆಯನ್ನು ನೀಡುವುದು ಮಾತ್ರವಲ್ಲದೆ, ಒಂಟಿತನ, ಬೇಸರ ಕಳೆಯಲು ಒಬ್ಬ ಅತಿಥಿಯನ್ನು ಕಳುಹಿಸುತ್ತಿದ್ದಾನೆ.


ಬೀಜಿಂಗ್: ಚೀನಾದ ವುಹಾನ್‌ನಲ್ಲಿರುವ ಹೋಟೆಲ್‍ವೊಂದು ವಿಶಿಷ್ಟ ಸೇವೆಯನ್ನು ಪರಿಚಯಿಸಿದ್ದು, ಅದು ಶ್ವಾನಪ್ರಿಯರ ಹೃದಯಗಳನ್ನು ಗೆಲ್ಲುತ್ತಿದೆ. ಯಾಕೆಂದರೆ ಕಂಟ್ರಿ ಗಾರ್ಡನ್ ಫೀನಿಕ್ಸ್ ಎಂಬ ಹೋಟೆಲ್ ಈಗ ಕೇವಲ ಒಂದು ಕೋಣೆಯನ್ನು ನೀಡುವುದು ಮಾತ್ರವಲ್ಲದೆ ಉತ್ತಮ ತರಬೇತಿ ಪಡೆದ ನಾಯಿಯನ್ನೂ ನೀಡುತ್ತದೆ. ಈ ಹೋಟೆಲ್‍ನಲ್ಲಿ ಒಂದು ರಾತ್ರಿಗೆ ಸುಮಾರು 4,700 ರೂ.ಗಳಿಗೆದ್ದು, ಅತಿಥಿಗಳು ಗೋಲ್ಡನ್ ರಿಟ್ರೈವರ್, ಹಸ್ಕೀಸ್ ಅಥವಾ ವೆಸ್ಟ್ ಹೈಲ್ಯಾಂಡ್ ಟೆರಿಯರ್‌ಗಳಂತಹ ತಳಿಗಳೊಂದಿಗೆ ತಮ್ಮ ವಾಸ್ತವ್ಯವನ್ನು ಹಂಚಿಕೊಳ್ಳಬಹುದು. ಒಂಟಿತನ ಅಥವಾ ಯಾವುದೇ ರೀತಿಯ ಬೇಸರದಿಂದ ಹೊರಬರಲು ಉತ್ತಮವಾಗಿದೆ. ಇದೀಗ ಈ ವಿಚಾರ ಬಹಳ ವೈರಲ್(Viral News) ಆಗುತ್ತಿದೆ.
ಜುಲೈನಲ್ಲಿ ಪ್ರಾರಂಭವಾದ ಈ ಸೇವೆಯು ಈಗಾಗಲೇ 300ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಕಂಡಿದೆ. ಹೋಟೆಲ್ ವ್ಯವಸ್ಥಾಪಕ ಡಾಂಗ್ ಅವರ ಪ್ರಕಾರ, ಹೆಚ್ಚಿನ ಗ್ರಾಹಕರು ಈ ಪರಿಕಲ್ಪನೆಯನ್ನು ಇಷ್ಟಪಟ್ಟಿದ್ದಾರಂತೆ. ಹೋಟೆಲ್‍ನ ಈ ಕ್ರಮವು ಬಹಳ ಲಾಭದಾಯಕವಾಗಿದೆ. 2024ರಲ್ಲಿ ನಗರ ಪ್ರದೇಶಗಳಲ್ಲಿ 300 ಬಿಲಿಯನ್ ಯುವಾನ್ ತಲುಪಿದ್ದರೆ, 2027 ರ ವೇಳೆಗೆ, ಇದು 400 ಬಿಲಿಯನ್ ಯುವಾನ್ ಅನ್ನು ತಲುಪುವ ನಿರೀಕ್ಷೆಯಿದೆ.
ಹೋಟೆಲ್ ಗ್ರಾಹಕರಿಗೆ ಶ್ವಾನಗಳ ಸೇವೆಯನ್ನು ನೀಡುತ್ತಿರುವುದು ಕಳವಳಕಾರಿಯಾಗಿದೆ ಎಂದು ಗ್ರಾಹಕರೊಬ್ಬರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇಲ್ಲಿ ನಾಯಿಗಳು ಶಾಂತವಾಗಿ, ವಿಧೇಯ ಹಾಗೂ ಪ್ರೀತಿಯಿಂದ ವರ್ತಿಸುವುದನ್ನು ನೋಡಿ ಅಚ್ಚರಿಗೊಂಡಿದ್ದಾರಂತೆ. ಹೋಟೆಲ್ ಪ್ರಸ್ತುತ ರಿಟ್ರೈವರ್, ಹಸ್ಕೀಸ್ ಮತ್ತು ಟೆರಿಯರ್ ತಳಿಯ ಶ್ವಾನಗಳು ಸೇರಿದಂತೆ 10 ನಾಯಿಗಳನ್ನು ಹೊಂದಿದೆ. ಕೆಲವು ಶ್ವಾನಗಳು ಹೋಟೆಲ್‌ಗೆ ಸೇರಿದ್ದಾಗಿವೆ. ಇನ್ನು ಕೆಲವು ತರಬೇತುದಾರರು ಅಥವಾ ಖಾಸಗಿ ಮಾಲೀಕರದ್ದಾಗಿದೆ. ಅತಿಥಿಗಳು ಮತ್ತು ಪ್ರಾಣಿಗಳಿಗೆ ಸಕಾರಾತ್ಮಕ ಅನುಭವವನ್ನು ಪಡೆಯಲು ಎಲ್ಲಾ ಶ್ವಾನಗಳಿಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ನೀಡಲಾಗುತ್ತದೆ. ಅತಿಥಿಗಳಿಗೆ ಭಾವನಾತ್ಮಕ ಬೆಂಬಲ ಮತ್ತು ನಾಯಿಗಳಿಗೆ ಚಟುವಟಿಕೆಯನ್ನು ಒದಗಿಸುವುದು ಗುರಿಯಾಗಿದೆ.
ನಾಯಿ ಮಾಲೀಕರು ಸಹ ಈ ವ್ಯವಸ್ಥೆಯಿಂದ ಸಂತೋಷಗೊಂಡಿದ್ದಾರೆ. ತನ್ನ 14 ತಿಂಗಳ ನಾಯಿಮರಿ ಸಮಾಯ್ಡ್ ನೈಚಾನನ್ನು ಹೋಟೆಲ್‌ಗೆ ಕಳುಹಿಸಿದ ಮಿಸ್ ಫಾಂಗ್, ಈ ಅನುಭವವು ಪ್ರತಿಫಲದಾಯಕವಾಗಿದೆ ಎಂದು ಹೇಳಿದರು. “ಮೊದಲು, ನಾನು ಅವನನ್ನು ಸಾಕುಪ್ರಾಣಿ ಕೆಫೆಗೆ ಕಳುಹಿಸುತ್ತಿದ್ದೆ, ಆದರೆ ಈಗ ನೈಚಾವು ಹೋಟೆಲ್‌ನಲ್ಲಿ ಹೆಚ್ಚು ಸಂತೋಷವಾಗಿದ್ದಾನೆ. ಸಿಬ್ಬಂದಿಯು ಅತಿಥಿಗಳೊಂದಿಗೆ ನೈಚಾ ಆಟವಾಡುವ ವಿಡಿಯೊಗಳನ್ನು ನನಗೆ ಕಳುಹಿಸುತ್ತಾರೆ. ನಾನು ತುಂಬಾ ಸಂತೋಷಗೊಂಡಿದ್ದೇನ” ಎಂದು ಹೇಳಿದ್ದಾನೆ.
ಇದರ ಜನಪ್ರಿಯತೆಯ ಹೊರತಾಗಿಯೂ, ಕಾನೂನು ತಜ್ಞರು ಕೆಲವು ತೊಡಕುಗಳ ಬಗ್ಗೆ ಎಚ್ಚರಿಸಿದ್ದಾರೆ. ನಾಯಿಗೆ ಯಾವುದೇ ಅಪಘಾತ ಸಂಭವಿಸಿದಲ್ಲಿ, ಹೋಟೆಲ್ ಅನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ವಕೀಲ ಡು ಕ್ಸಿಂಗ್ಯು ಹೇಳಿದ್ದಾರೆ. ಆದ್ದರಿಂದ ಹೋಟೆಲ್‌ಗಳು ವೃತ್ತಿಪರ ತರಬೇತುದಾರರನ್ನು ನೇಮಿಸಿಕೊಳ್ಳಲು ಮತ್ತು ಸುರಕ್ಷತೆಗೆ ಆದ್ಯತೆ ನೀಡಲು ಸಲಹೆ ನೀಡಿದ್ದಾರೆ. ಮಾಹಿತಿಯೊಂದರ ಪ್ರಕಾರ, ಚೀನಾದಲ್ಲಿ ಈಗ ಮಕ್ಕಳಿಗಿಂತ ಹೆಚ್ಚು ಸಾಕುಪ್ರಾಣಿಗಳಿವೆ ಎಂದು ಹೇಳಲಾಗಿದೆ. 2024 ರಲ್ಲಿ, ಅಂಕಿಅಂಶಗಳು ಸಾಕುಪ್ರಾಣಿಗಳ ಸಂಖ್ಯೆ ನಾಲ್ಕು ವರ್ಷದೊಳಗಿನ ಮಕ್ಕಳನ್ನು ಮೀರಿಸಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Viral Video: ಕ್ಲಾಸ್‌ರೂಂನಲ್ಲಿ ಮಕ್ಕಳ ರ‍್ಯಾಂಪ್ ವಾಕ್! ಕ್ಯೂಟ್ ವಿಡಿಯೊ ಇಲ್ಲಿದೆ ನೋಡಿ