Viral Video: ಬಿಲಿಯನೇರ್ vs ಅಪ್ಪನಾಗಿರುವುದು! ಮಗನನ್ನು ಹೆಗಲ ಮೇಲೆ ಹೊತ್ತುಕೊಂಡ ಎಲಾನ್ ಮಸ್ಕ್; ವಿಡಿಯೊ ವೈರಲ್
Elon Musk Carrying Son: ಅಮೆರಿಕ ಉದ್ಯಮಿ ಎಲಾನ್ ಮಸ್ಕ್ ತಮ್ಮ ಸಾಹಸಗಳು ಮತ್ತು ದಿಟ್ಟ ಆಲೋಚನೆಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮಗನೊಂದಿಗೆ ಮಗುವಂತಾದ ಅವರ ವರ್ತನೆಯು ನೆಟ್ಟಿಗರ ಮನಗೆದ್ದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ಎಲಾನ್ ಮಸ್ಕ್ ಅವರ ಇನ್ನೊಂದು ಮುಖವನ್ನು ಪ್ರದರ್ಶಿಸಿದೆ.

-

ವಾಷಿಂಗ್ಟನ್: ಉದ್ಯಮಿ ಎಲಾನ್ ಮಸ್ಕ್ (Elon Musk) ತಮ್ಮ ಸಾಹಸಗಳು ಮತ್ತು ದಿಟ್ಟ ಆಲೋಚನೆಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಆದರೆ ಮಕ್ಕಳೊಂದಿಗೆ ಅವರು ಇರುವ ರೀತಿಯು ತಮ್ಮ ವೈಯಕ್ತಿಕ ಜೀವನವನ್ನು ಬಹಿರಂಗಪಡಿಸುತ್ತದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯೂ (Richest person) ಆಗಿರುವ ಎಲಾನ್ ಮಸ್ಕ್, ತನ್ನ ಮಕ್ಕಳಿಗೆ ಒಬ್ಬ ಸಾಮಾನ್ಯ ತಂದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊ (Viral Video)ವೊಂದು ಎಲಾನ್ ಮಸ್ಕ್ ಅವರ ಇನ್ನೊಂದು ಮುಖವನ್ನು ಪ್ರದರ್ಶಿಸಿದೆ.
ಈ ವಿಡಿಯೊದಲ್ಲಿ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಮಸ್ಕ್ ತಮ್ಮ ಚಿಕ್ಕ ಮಗನೊಂದಿಗೆ ಇರುವ ಕ್ಷಣವನ್ನು ಸೆರೆ ಹಿಡಿಯಲಾಗಿದೆ. ತಂದೆ-ಮಗನ ಈ ವಿಡಿಯೊ ತ್ವರಿತವಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯಿತು.
ಈ ವಿಡಿಯೊದಲ್ಲಿ ಎಲಾನ್ ಮಸ್ಕ್ ತನ್ನ ಮಗನನ್ನು ಹೆಗಲ ಮೇಲೆ ಹೊತ್ತುಕೊಂಡು ಒಂದು ಕಾರ್ಯಕ್ರಮಕ್ಕೆ ಹಾಜರಾಗುತ್ತಿರುವುದನ್ನು ಸೆರೆಹಿಡಿಯಲಾಗಿದೆ. ತಂದೆ ಮತ್ತು ಮಗ ಇಬ್ಬರೂ ಕಪ್ಪು ಟಿ ಶರ್ಟ್‌ಗಳನ್ನು ಧರಿಸಿದ್ದಾರೆ. ಮಗು ತನ್ನ ಪುಟ್ಟ ಕೈಗಳನ್ನು ತಂದೆ ಮಸ್ಕ್‌ನ ಮುಖ ಮತ್ತು ಹಣೆಯ ಮೇಲೆ ಇಡುವುದನ್ನು ಕಾಣಬಹುದು. ಮಸ್ಕ್ ತನ್ನ ಮಗನನ್ನು ಸಮತೋಲನದಲ್ಲಿಡಲು ತನ್ನ ಕಾಲುಗಳನ್ನು ಎಚ್ಚರಿಕೆಯಿಂದ ಹಿಡಿದುಕೊಂಡಿದ್ದಾರೆ.
ವಿಡಿಯೊ ವೀಕ್ಷಿಸಿ:
ವಿಡಿಯೊದಲ್ಲಿ ಬಿಲಿಯನೇರ್ vs ಬೀಯಿಂಗ್ ಎ ಡ್ಯಾಡ್ ಎಂದು ಬರೆಯಲಾಗಿದೆ. ತಂದೆ-ಮಗನ ಈ ಭಾವನಾತ್ಮಕ ಬಂಧವು ನೆಟ್ಟಿಗರ ಹೃದಯ ಕದ್ದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊಕ್ಕೆ ಕಮೆಂಟ್‌ಗಳ ವಿಭಾಗದಲ್ಲಿ ಪ್ರತಿಕ್ರಿಯೆಗಳ ಅಲೆಯೇ ಹರಿದುಬಂದಿದೆ. ಅನೇಕರು ತಂದೆಯಾಗಿ ಮಸ್ಕ್ ಅವರ ಕಾಳಜಿ, ಶ್ರದ್ಧೆಯನ್ನು ಶ್ಲಾಘಿಸಿದ್ದು, ಅವರನ್ನು ಉತ್ತಮ ತಂದೆ ಎಂದು ಕರೆದಿದ್ದಾರೆ.
ಒಬ್ಬ ಬಳಕೆದಾರರು, ಮಸ್ಕ್ ವಿಶ್ವದ ಅತ್ಯುತ್ತಮ ತಂದೆಗಳಲ್ಲಿ ಒಬ್ಬರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬಹಳ ಒಳ್ಳೆಯ ತಂದೆ ಹಾಗೆ ಕಾಣುತ್ತಾರೆ ಎಂದು ಹೇಳಿದ್ದಾರೆ. ಶ್ರೀಮಂತ ವ್ಯಕ್ತಿಯಾದರೂ ತನ್ನ ಮಕ್ಕಳಿಗೆ ತಾನು ತಂದೆ ಎಂಬುದನ್ನು ನಿರೂಪಿಸಿದ್ದಾರೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಮಸ್ಕ್ ತನ್ನ ಮಗನನ್ನು ಹೆಗಲ ಮೇಲೆ ಹೊತ್ತು ಮೆರೆಸಿರುವುದು ಇದೇ ಮೊದಲಲ್ಲ. ಫೆಬ್ರವರಿಯಲ್ಲಿ, ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮಗನನ್ನು ಓವಲ್ ಕಚೇರಿಗೆ ಕರೆತಂದಾಗ ಇದೀ ರೀತಿ ಸುದ್ದಿಯಾಗಿದ್ದರು.
ಮಸ್ಕ್ ಮಾತ್ರವಲ್ಲ ಅವರ ಪುತ್ರ ಕೂಡ ಎಲ್ಲರ ಗಮನ ಸೆಳೆದಿದ್ದಾನೆ. ಮೇಜಿನ ಮೇಲಿದ್ದ ವಸ್ತುಗಳೊಂದಿಗೆ ಆಟವಾಡುತ್ತಾ, ತನ್ನ ತಂದೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕ್ಕದಲ್ಲಿ ನಿಂತು, ವರದಿಗಾರರೊಂದಿಗೆ ಮಾತನಾಡುವಾಗ ತನ್ನ ತಂದೆಗೆ ಅಡ್ಡಿಪಡಿಸಿದ್ದ. ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುವಾಗ ಮಸ್ಕ್ ಪೋಷಕ ಪಾತ್ರವನ್ನೂ ನಿರ್ವಹಿಸಿದ್ದರು.
ಅಂದಹಾಗೆ, ಮಸ್ಕ್ ವಿವಾಹವಾಗದಿದ್ದರೂ 2020ರಿಂದ ಮ್ಯೂಸಿಶಿಯನ್ ಗ್ರಿಮ್ಸ್ ಅವರೊಂದಿಗೆ ಸಂಬಂಧದಲ್ಲಿದ್ದಾರೆ. 2021ರಲ್ಲಿ ಇವರಿಗೆ ಬಾಡಿಗೆ ತಾಯಿಯ ಮೂಲಕ ಮಗಳು ಎಕ್ಸಾ ಡಾರ್ಕ್ ಸೈಡೆರೆಲ್ ಜನಿಸಿದಳು. 2022ರಲ್ಲಿ ಮಗ ಟೆಕ್ನೋ ಮೆಕ್ಯಾನಿಕಸ್‍ನನ್ನು ಇವರು ಪಡೆದರು. ಮಸ್ಕ್ ಒಟ್ಟು 9 ಮಕ್ಕಳ ತಂದೆ.
ಇದನ್ನೂ ಓದಿ: Viral Video: ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಮುಳುಗುವ ನಾಟಕ: ಪೊಲೀಸರು ‘ಶವ’ ತೆಗೆಯಲು ಬಂದಾಗ ಎದ್ದ ವ್ಯಕ್ತಿ