AFG vs HK: ಹಾಂಕಾಂಗ್ ವಿರುದ್ದ ಗೆದ್ದು ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಶುಭಾರಂಭ!
AFG vs HK Match Highlights: ಸೆಡಿಕುಲ್ಹಾ ಅಟಲ್ ಹಾಗೂ ಅಝಮತ್‌ವುಲ್ಹಾ ಒಮರ್ಜಾಯ್ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಅಫ್ಘಾನಿಸ್ತಾನ ತಂಡ, ಎದುರಾಳಿ ಹಾಂಕಾಂಗ್ ವಿರುದ್ದ 94 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಏಷ್ಯಾ ಕಪ್ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಹಾಂಕಾಂಗ್ ವಿರುದ್ದ ಏಷ್ಯಾ ಕಪ್ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಜಯ. -

ಅಬುದಾಬಿ: ಸೆಡಿಕುಲ್ಹಾ ಅಟಲ್ (Sediqullah Atal) ಹಾಗೂ ಅಝಮತ್‌ವುಲ್ಹಾ ಒಮರ್ಜಾಯ್ (Azmatullah Omarzai) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಅಫ್ಘಾನಿಸ್ತಾನ ತಂಡ, 2025ರ ಏಷ್ಯಾ ಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ (AFG vs HK Match Highlights) ಕ್ರಿಕೆಟ್ ಶಿಶು ಹಾಂಕಾಂಗ್ ವಿರುದ್ಧ 94 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 20 ಓವರ್‌ಗಳ ಮಹತ್ವದ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 53 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆಫ್ಘನ್ ನೀಡಿದ್ದ 189 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಹಾಂಕಾಂಗ್, ಬಾಬರ್ ಹಯಾತ್ (39 ರನ್) ಅವರ ಬ್ಯಾಟಿಂಗ್ ಹೊರತಾಗಿಯೂ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಅಫ್ಘಾನಿಸ್ತಾನ ಬೌಲರ್‌ಗಳು ಶಿಸ್ತುಬದ್ದ ಬೌಲಿಂಗ್ ದಾಳಿ ನಡೆಸಿ ಹಾಂಕಾಂಗ್ ತಂಡವನ್ನು ಕಟ್ಟಿ ಹಾಕಿದರು. ಯಾಸಿಮ್ ಮುರ್ತಾಝ್ (16) ಅವರನ್ನು ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.
Asia Cup 2025: ಯುಎಇ ವಿರುದ್ದದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ಕೆ ಶ್ರೀಕಾಂತ್!
188 ರನ್ ಗಳಿಸಿದ ಅಫ್ಘಾನಿಸ್ತಾನ
ಇದಕ್ಕೂ ಮುನ್ನ ಇಲ್ಲಿನ ಶೇಖ್ ಝಾವೇದ್ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಏಷ್ಯಾ ಕಪ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವಂತಾಗಿದ್ದ ಅಫ್ಘಾನಿಸ್ತಾನ ತಂಡ, ಸೆಡಿಕುಲ್ಹಾ ಅಟಲ್ (73* ರನ್) ಹಾಗೂ ಅಝಮತ್‌ವುಲ್ಹಾ ಒಮರ್ಜಾಯ್ (53 ರನ್) ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 188 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಹಾಂಕಾಂಗ್ ತಂಡಕ್ಕೆ 189 ರನ್‌ಗಳ ಗುರಿಯನ್ನು ನೀಡಿತು.
IND vs UAE: ಏಷ್ಯಾ ಕಪ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಆರಂಭಿಕ ಆಘಾತ ಅನುಭವಿಸಿದ್ದ ಆಫ್ಘನ್
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಅಫ್ಘಾನಿಸ್ತಾನ ತಂಡಕ್ಕೆ ಹೇಳಿಕೊಳ್ಳುವಂಥ ಆರಂಭ ಸಿಕ್ಕಿರಲಿಲ್ಲ. ತಂಡದ ಮೊತ್ತ 26 ರನ್ ಆಗುವಷ್ಟರಲ್ಲಿ ರೆಹಮಾನುಲ್ಹಾ ಗುರ್ಬಾಜ್ ಹಾಗೂ ಇಬ್ರಾಹಿಂ ಝರ್ಡಾನ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಆಫ್ಘನ್ ತಂಡ ಆರಂಭಿಕ ಆಘಾತ ಅನುಭವಿಸಿತ್ತು.
RESULT | AFGHANISTAN WON BY 94 RUNS 🚨#AfghanAtalan were clinical with both bat and ball as they went past Hong Kong by 94 runs to start their run at the #AsiaCup2025 on a winning note. 👏#AFGvHK | #GloriousNationVictoriousTeam pic.twitter.com/iKi8J4G6vG
— Afghanistan Cricket Board (@ACBofficials) September 9, 2025
ಅರ್ಧಶತಕ ಬಾರಿಸಿದ ಸೆಡಿಕುಲ್ಹಾ ಅಟಲ್
ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡರೂ ಎದೆಗುಂದದೆ ಬ್ಯಾಟ್ ಮಾಡಿದ ಸೆಡಿಕುಲ್ಹಾ ಅಟಲ್ ಹಾಂಕಾಂಗ್ ಬೌಲರ್‌ಗಳನ್ನು ದಂಡಿಸಿದರು, ಅವರು ಆಡಿದ 52 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಆರು ಬೌಂಡರಿಗಳೊಂದಿಗೆ ಅಜೇಯ 73 ರನ್‌ಗಳನ್ನು ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ನಬಿ ಮಿಂಚಿದರು. ಅವರು 33 ರನ್ ಸಿಡಿಸಿದರು. ಆರಂಭಿಕ ಆಘಾತ ಅನುಭವಿಸಿದ್ದ ಆಫ್ಘನ್ ತಂಡವನ್ನು ಮೇಲೆತ್ತಿದ್ದರು.
ಅಝಮತ್‌ವುಲ್ಹಾ ಒಮರ್ಜಾಯ್ ಸ್ಪೋಟಕ ಅರ್ಧ ಶತಕ
ಅಟಲ್ ಜೊತೆ ಕೆಲಕಾಲ ಸ್ಪೋಟಕ ಬ್ಯಾಟ್ ಮಾಡಿದ ಅಝಮತ್‌ವುಲ್ಹಾ ಒಮರ್ಜಾಯ್, ಹಾಂಕಾಂಗ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅವರು ಡೆತ್ ಓವರ್‌ಗಳಲ್ಲಿ ಆಡಿದ ಕೇವಲ 21 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 53 ರನ್‌ಗಳನ್ನು ಬಾರಿಸಿದರು. ಆ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಲು ನೆರವು ನೀಡಿದರು.