Raju Adakalli Column: ಸ್ನೇಹಸಾಗರ ವಿದ್ಯಾಸಂಸ್ಥೆ
ದೂರ ದೂರದ ಊರುಗಳಿಂದ ಮಕ್ಕಳು ಇಲ್ಲಿಗೆ ಬಂದು ಅಧ್ಯಯನ ಮಾಡುವುದಕ್ಕೆ ಅನುಕೂಲ ಆಗುವಂತೆ ಇಲ್ಲಿಯೇ ಊಟ ವಸತಿಗೂ ಸೂಕ್ತ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ತಂಗುವ ವಿದ್ಯಾ ರ್ಥಿಗಳ ಆರೋಗ್ಯ ತಪಾಸಣೆಗೆ ವೈದ್ಯರಿಂದ ಹಿಡಿದು, ಮಕ್ಕಳಿಗೆ ಅಗತ್ಯ ವಾದರೆ ಟ್ಯೂಷನ್ ಹೇಳಿಕೊಡುವ ಅನುಕೂಲದ ತನಕ ಸಕಲ ವ್ಯವಸ್ಥೆಗಳನ್ನು ಒದಗಿಸ ಲಾಗಿದೆ

ಮಲೆನಾಡಿನ ಮಡಿಲಲ್ಲಿ ಮಾದರಿ ವಿದ್ಯಾಶಾಲೆ

ರಾಜು ಅಡಕಳ್ಳಿ
ಹಳ್ಳಿಗಳಲ್ಲಿ ಸಾಮಾನ್ಯವಾಗಿ ಶಾಲೆ, ಹೈಸ್ಕೂಲ್‌ಗಳು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ ಎಂದು ಅಲ್ಲಿಯ ಮಕ್ಕಳನ್ನು ಪೇಟೆ ಪಟ್ಟಣಗಳಿಗೆ ಕಳುಹಿಸುವುದು ರೂಡಿ. ಆದರೆ ಪೇಟೆ ಪಟ್ಟಣಗಳ ಮಕ್ಕಳೇ ಹಳ್ಳಿಗೆ ಬಂದು ಶಾಲೆಗೆ ಸೇರುವ ಅಪರೂಪದ ಬೆಳವಣಿಗೆಯನ್ನು ಯಲ್ಲಾಪುರ ಸಮೀಪದ ಇಡಗುಂದಿ ಎಂಬ ಹಳ್ಳಿಯ ‘ಸ್ನೇಹಸಾಗರ’ ಶಿಕ್ಷಣ ಸಂಸ್ಥೆಯಲ್ಲಿ ನೋಡಬಹುದು ಹಳ್ಳಿಯ ಪರಿಸರ ನಿಸರ್ಗ, ಹೊಳೆ, ಹಳ್ಳ ಕಾನನಗಳ ಬೀಡು, ಅಡಿಕೆ ತೆಂಗು ಬಾಳೆ ತೋಟಗಳ ನೆಲೆ, ಶಾಂತ ಸಮೃದ್ಧ ನಿರ್ಮಲ ಆರೋಗ್ಯಪೂರ್ಣ ವಾತಾವರಣ- ಇಂತಹ ಹಲವು ಸೊಗಡು-ಸೊಗಸುಗಳು ಕಾಡು ಕಣಿವೆಯಲ್ಲಿರುವ ಈ ಸ್ನೇಹಸಾಗರ ವಿದ್ಯಾ ಶಾಲೆಯಲ್ಲಿ ಐದನೇ ತರಗತಿಯಿಂದ 10ನೇ ತರಗತಿವರೆಗೂ ಕಲಿಯಲು ಅವಕಾಶ ಉಂಟು.
ಇದನ್ನೂ ಓದಿ: Dr Prabhu Basarakoda Column: ಉದ್ಯೋಗಗಳ ನವೀನ ಯುಗಕ್ಕೆ ಮುನ್ನುಡಿ
ದೂರ ದೂರದ ಊರುಗಳಿಂದ ಮಕ್ಕಳು ಇಲ್ಲಿಗೆ ಬಂದು ಅಧ್ಯಯನ ಮಾಡುವುದಕ್ಕೆ ಅನುಕೂಲ ಆಗುವಂತೆ ಇಲ್ಲಿಯೇ ಊಟ ವಸತಿಗೂ ಸೂಕ್ತ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ತಂಗುವ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ವೈದ್ಯರಿಂದ ಹಿಡಿದು, ಮಕ್ಕಳಿಗೆ ಅಗತ್ಯ ವಾದರೆ ಟ್ಯೂಷನ್ ಹೇಳಿಕೊಡುವ ಅನುಕೂಲದ ತನಕ ಸಕಲ ವ್ಯವಸ್ಥೆಗಳನ್ನು ಒದಗಿಸ ಲಾಗಿದೆ.
ಕ್ಯಾಂಪಸ್ಸಿನಲ್ಲಿ ತಂಗುವ ಶಿಕ್ಷಕರು
ಈ ಶಾಲೆಯ ಶಿಕ್ಷಕರೂ ಸಹಾ ಶಾಲೆಯ ಕ್ಯಾಂಪಸ್ಸಿನಲ್ಲೇ ತಂಗುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಆಟ ಪಾಠಗಳ ಮೇಲೆಯೂ ಪ್ರತ್ಯಕ್ಷವಾಗಿ ನಿಗಾ ವಹಿಸಿ, ಆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ನೆರವಾಗುವುದು ಸಾಧ್ಯವಾಗಿದೆ. ಶುಚಿ, ರುಚಿಯಾದ ಸಸ್ಯಾ ಹಾರದ ಊಟೋಪಚಾರ ಇಲ್ಲಿಯ ಮತ್ತೊಂದು ಆಕರ್ಷಣೆ. ಸ್ನೇಹ ಸಾಹರ ಶಾಲೆ ಗ್ರಾಮೀಣ ಪರಿಸರದಲ್ಲಿದ್ದರೂ, ಮಕ್ಕಳ ಕಲಿಕೆ ಆಟ ಪಾಠ ಮತ್ತವರ ಕ್ರಿಯಾಶೀಲ ಚಟು ವಟಿಕೆಗಳಿಗೆ ಯಾವುದೇ ಕೊರತೆಯಾಗದಂತೆ ಎಲ್ಲಾ ಆಧುನಿಕ ಕಲಿಕಾ ಸೌಲಭ್ಯಗಳನ್ನು ಒದಗಿಸುತ್ತಿರುವುದು ವಿಶೇಷ.
ಇಪ್ಪತ್ತೈದು ವರ್ಷಗಳ ಸೇವೆ
ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದಾತ್ತ ಧ್ಯೇಯದೊಂದಿಗೆ ಪ್ರಾರಂಭವಾದ ಈ ಸ್ನೇಹಸಾಗರ ಶಿಕ್ಷಣ ಸಂಸ್ಥೆಯು ಈಗ 25 ವರ್ಷಗಳ ಸಾರ್ಥಕ ಸಂಭ್ರಮದಲ್ಲಿದೆ. ಈ ಅವಧಿಯಲ್ಲಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೆಷ್ಟೋ, ಬಲಿತ ವಿದ್ಯಾರ್ಥಿನಿಯರೆಷ್ಟೋ, ಇವರೆಲ್ಲ ಈಗ ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ದುಡಿಯುತ್ತಿರುವುದು ಈ ಸಂಸ್ಥೆಗೆ ಹೆಮ್ಮೆ.
ಸ್ನೇಹ ಸಾಗರವು ಹೀಗೆ ಹಲವು ವೈಶಿಷ್ಟತೆಗಳ ಸಂಗಮವಾಗಿರುವುದರಿಂದ ದೂರದ ಕಾಶಿ, ಗೋವಾ, ಬೆಂಗಳೂರು, ಗುಲಬರ್ಗಾ, ಬೀದರ್, ಮಹಾರಾಷ್ಟ್ರ, ಕೊಪ್ಪಳ, ಹುಬ್ಬಳ್ಳಿ ಮುಂತಾ ದ ಅನೇಕ ಊರು-ನಗರಗಳಿಂದ ಇಲ್ಲಿಗೆ ಬಂದು ಶಿಕ್ಷಣ ಪಡೆದು ತೆರಳುವುದು ಪ್ರತಿವರ್ಷದ ಪರಿಪಾಠ.
ಸ್ನೇಹಸಾಗರ ಶಿಕ್ಷಣ ಸಂಸ್ಥೆಯು ಕಳೆದ 25 ವರ್ಷಗಳಿಂದ ಹೀಗೆ ಯಶಸ್ವಿ ಪಥದಲ್ಲಿ ಮುಂದುವರೆಯುತ್ತಿರುವುದ ಹಿಂದೆ, ಈ ಸಂಸ್ಥೆಯ ಆಡಳಿತ ಮಂಡಳಿಯ ವಿಶೇಷ ಪರಿಶ್ರಮವಿದೆ. ಇದರ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಎಲ್. ಭಟ್ ಮತ್ತು ನಿರ್ದೇಶಕ ಎನ್. ಜಿ. ಭಟ್ ಅವರು ಈ ವಿದ್ಯಾ ಸಂಸ್ಥೆಗೆ ಆಗಾಗ ಹೊಸ ಹೊಸ ಯೋಜನೆಗಳನ್ನು ಸೇರಿಸುತ್ತಾ ಇದನ್ನು ಒಂದು ವಿಭಿನ್ನ ಸೃಜನಶೀಲ ಕೇಂದ್ರದಂತೆ ರೂಪಿಸಿರುವುದು ವಿಶೇಷ.
ವಿಶ್ವವಾಣಿ ಗ್ಲೋಬಲ್ ಪ್ರಶಸ್ತಿ
ಈ ಎಲ್ಲಾ ಅನನ್ಯ ಗುಣ ವಿಶೇಷ ಗಳಿಂದಾಗಿ ಇತ್ತೀಚೆಗೆ ಸ್ನೇಹಸಾಗರ ಶಿಕ್ಷಣ ಸಂಸ್ಥೆಗೆ ‘ವಿಶ್ವ ವಾಣಿ’ ಮತ್ತು ‘ಮಸ್ಕತ್ ಕರ್ನಾಟಕ ಸಂಘ’ವು ಒಮಾನಿನಲ್ಲಿ ಅಂತರಾಷ್ಟ್ರೀಯ ಗೌರವ ವಾದ ‘ವಿಶ್ವವಾಣಿ ಗ್ಲೋಬಲ್ ಅಚೀವರ್ಸ್’ ಪ್ರಶಸ್ತಿ ನೀಡಿ ಗೌರವಿಸಿದೆ. ಸ್ನೇಹ ಸಾಗರದ ಪರವಾಗಿ ಸುರೇಶ್ ಎಲ್. ಭಟ್ ಅವರು ಮಸ್ಕತ್‌ನಲ್ಲಿ ಹಲವು ಗಣ್ಯರು ಸೇರಿದ ಅಂತ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದು ವಿಶೇಷ ವಾಗಿತ್ತು. ಸಂಪರ್ಕ 9449067602.
*
‘ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕೇವಲ ಹಣ ಅಥವಾ ಆಸ್ತಿ ಮಾಡುವಂತಹ ಯಂತ್ರ ಗಳಾಗಬಾರದು. ಸಮಾಜಕ್ಕೆ ಮತ್ತು ದೇಶಕ್ಕೆ ಅವರೇ ದೊಡ್ಡ ಆಸ್ತಿ ಆಗುವಂತೆ ಅವರನ್ನು ರೂಪಿಸುವುದೇ ನಮ್ಮ ಶಿಕ್ಷಣ ಸಂಸ್ಥೆಯ ಧ್ಯೇಯ.
- ಸುರೇಶ್ ಎಲ್.ಭಟ್