ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನೆ ಕಟ್ಟಲು 3ಡಿ ಡಿಸೈನ್

ಹೊರಾಂಗಣ ವಿನ್ಯಾಸ ಸರಿಯಿಲ್ಲ, ಈ ಬಣ್ಣ ಚೆನ್ನಾಗಿಲ್ಲ, ಒಳಾಂಗಣ ವಿನ್ಯಾಸದಲ್ಲಿ ಏನೋ ಕೊರತೆ ಯಿದೆ ಅಂತೆಲ್ಲಾ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರೀತಿಯಿಂದ ಕಟ್ಟಿದ ಮನೆ ಆತ್ಮತೃಪ್ತಿ ಯಿಲ್ಲದೆ ಭೂತಬಂಗಲೆಯಂತೆ ಕಾಣಬಹುದು. ಅಂದ ಹಾಗೆ ಇಷ್ಟೊಂದು ಪರಿಶ್ರಮ ಪಟ್ಟು ಕಟ್ಟಿದ ಮನೆ ನಮ್ಮ ಎಣಿಕೆಯಂತೆ ರೂಪುಗೊಳ್ಳದಿರಲು ಮುಖ್ಯ ಕಾರಣ ಅದರ ವಿನ್ಯಾಸದ ಕೊರತೆ.

ಮನೆ ಕಟ್ಟಲು 3ಡಿ ಡಿಸೈನ್

Profile Ashok Nayak Jun 10, 2025 3:56 PM

ಅಕ್ಷಿತ್‌ ದೇವಾಡಿಗ ಎಲ್ಲೂರು

ಮನೆಯ ವಿನ್ಯಾಸವನ್ನು 3ಡಿ ತಂತ್ರಜ್ಞಾನದ ಮೂಲಕ ಮುಂಚಿತವಾಗಿ ಖಚಿತಪಡಿಸಿ ಕೊಂಡರೆ, ಮನಸ್ಸಿಗೂ ತೃಪ್ತಿ, ಖರ್ಚೂ ಕಡಿಮೆ.

ಅಕ್ಷಿತ್ ದೇವಾಡಿಗ ಎಲ್ಲೂರು ಜೀವನದಲ್ಲಿ ಸ್ವಂತ ಮನೆ ನಿರ್ಮಿಸಬೇಕು, ಅದರಲ್ಲಿ ತನ್ನ ಪುಟ್ಟ ಸಂಸಾರದೊಂದಿಗೆ ನಗುನಗುತಾ ಬಾಳಬೇಕು ಅನ್ನೋದು ಮನುಷ್ಯನ ಸಹಜ ಆಸೆ. ಆದರೆ ಗೃಹ ನಿರ್ಮಾಣ ಅನ್ನೋದು ಸುಲಭದ ಮಾತೇನು? ಅಡಿಪಾಯದಿಂದ ಹಿಡಿದು ಗೃಹಪ್ರವೇಶದ ತನಕ ಪ್ರತಿಯೊಂದು ಕೆಲಸಾನೂ ಶ್ರದ್ಧೆ-ಭಕ್ತಿಯಿಂದ ಮಾಡ್ಬೇಕಾಗುತ್ತೆ; ಪ್ರತೀ ಹಂತದಲ್ಲೂ ದುಡ್ಡಿನ ಕಂತೆ-ಕಂತೆ ಎಣಿಸಿ ಸುರಿಯಬೇಕಾಗುತ್ತೆ. ಇಷ್ಟೆಲ್ಲಾ ಖರ್ಚು ಮಾಡಿ ಕಟ್ಟಿದ ಮನೆ ಎಷ್ಟೋ ಸಲ ನಾವೆಣಿಸಿದಂತೆ ಬರಲಾರದು.

ಹೊರಾಂಗಣ ವಿನ್ಯಾಸ ಸರಿಯಿಲ್ಲ, ಈ ಬಣ್ಣ ಚೆನ್ನಾಗಿಲ್ಲ, ಒಳಾಂಗಣ ವಿನ್ಯಾಸದಲ್ಲಿ ಏನೋ ಕೊರತೆಯಿದೆ ಅಂತೆಲ್ಲಾ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರೀತಿಯಿಂದ ಕಟ್ಟಿದ ಮನೆ ಆತ್ಮತೃಪ್ತಿ ಯಿಲ್ಲದೆ ಭೂತಬಂಗಲೆಯಂತೆ ಕಾಣಬಹುದು. ಅಂದ ಹಾಗೆ ಇಷ್ಟೊಂದು ಪರಿಶ್ರಮ ಪಟ್ಟು ಕಟ್ಟಿದ ಮನೆ ನಮ್ಮ ಎಣಿಕೆಯಂತೆ ರೂಪುಗೊಳ್ಳದಿರಲು ಮುಖ್ಯ ಕಾರಣ ಅದರ ವಿನ್ಯಾಸದ ಕೊರತೆ. ನಮಗೆ ರುಚಿಸಿದ ಯಾವುದಾದರೊಂದು ನಕ್ಷೆಯನ್ನು ಇಂಜಿನಿಯರ್‌ಗೆ ಆಯ್ದು ಕೊಟ್ಟರೆ ಮುಗಿಯಿತು ಎಂಜಿನಿಯರುಗಳು ಗೃಹ ನಿರ್ಮಾಣಕ್ಕೆ ಮುಂದಡಿಯಿಡುತ್ತಾರೆ.

ಇದನ್ನೂ ಓದಿ: Vishweshwar Bhat Column: ಯಿಡ್ಡಿಷ್‌ ಭಾಷೆ ವೈಶಿಷ್ಠ್ಯ

ಆದರೆ ಕಟ್ಟಡದ ಸ್ಪಷ್ಟ ಚಿತ್ರಣ ಸಿಗುವುದು ಅದು ಮುಕ್ತಾಯದ ಹಂತಕ್ಕೆ ಬಂದಾಗಲೇ. ಆಗ ನಾವು ಅದು ಸರಿ ಇಲ್ಲ, ಇದು ಹೀಗಾಗಬೇಕಿತ್ತು ಅಂತ ತಗಾದೆ ತೆಗೆಯೋ ಹಾಗಿಲ್ಲ. ಒಂದು ಪಕ್ಷ ಅಂತಿಮ ಘಟ್ಟದಲ್ಲಿ ಹೊರಾಂಗಣ ವಿನ್ಯಾಸ ಬದಲಿಸಿದಲ್ಲಿ ಕಟ್ಟಡವನ್ನು ಅಲ್ಲಲ್ಲಿ ಒಡೆಯಬೇಕಾದೀತು; ಇದರಿಂದ ಸಮಯ-ದುಡ್ಡು ಎಲ್ಲಾ ವ್ಯರ್ಥ, ಅಂತೆಯೇ ಕಟ್ಟಡದ ಗುಣಮಟ್ಟಕ್ಕೂ ಕೊಡಲಿ ಯೇಟು ಕೊಟ್ಟಂತೆ.

ಹಾಗಾದರೆ ಇದಕ್ಕೇನು ಪರಿಹಾರ? ನಮ್ಮ ಕನಸಿನ ಮನೆಯ ಚಿತ್ರಣ ಮೊದಲೇ ಸಿಕ್ಕಿಬಿಟ್ಟರೆ ಎಷ್ಟು ಚೆನ್ನ ಅಲ್ವಾ? ಅದಕ್ಕಿದೆ ಸಿಂಪಲ್ ಪರಿಹಾರ, ಅದೇ ೩ಡಿ ಡಿಸೈನ್ ಅರ್ಥಾತ್ ಮೂರು ಆಯಾಮದ ವಿನ್ಯಾಸ. ಕಟ್ಟಡ ಯಾವುದೇ ಇರಲಿ, ಅದು ರೂಪುಗೊಳ್ಳುವ ಮೊದಲೇ ಅದರ ಅಂದ-ಚೆಂದವನ್ನು ಕಣ್ತುಂಬಿಕೊಳ್ಳಲು ಇರುವ ಮಾರ್ಗವೇ 3ಡಿ ಡಿಸೈನ್.

ಮೊದಲೆಲ್ಲಾ ಕಟ್ಟಡದ ಹೊರಾಂಗಣ ವಿನ್ಯಾಸವನ್ನು 2ಡಿ(ಎರಡು ಆಯಾಮ) ವಿಧಾನದ ಮೂಲಕ ಚಿತ್ರಿಸುತ್ತಿದ್ದರು. ಈಗ 3ಡಿ ಡಿಸೈನ್ ತಂತ್ರಜ್ಞಾನದಿಂದ ಮೂರು ಆಯಾಮದ ಚಿತ್ರವನ್ನು ಪಡೆಯಬಹುದು. ಇದರಿಂದ ಕಟ್ಟಡದ ಬಣ್ಣ, ವಿನ್ಯಾಸ, ಕಿಟಕಿ-ಬಾಗಿಲುಗಳ ಸ್ಥಾನ ಎಲ್ಲವನ್ನೂ ಸ್ಪಷ್ಟವಾಗಿ ಕಂಡುಕೊಳ್ಳಬಹುದು; ಅಭಿರುಚಿಗೆ ತಕ್ಕಂತೆ ಮಾರ್ಪಡಿಸಲೂಬಹುದು.

3ಡಿ ಡಿಸೈನ್ ಮಾಡಲು ತಗಲುವ ವೆಚ್ಚ

ಇದೊಂದು ತಾಳ್ಮೆ ಬೇಡುವ ಕೆಲಸ, ಹಲವು ಗಂಟೆಗಳ ಕಾಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಬೇಕಾಗುತ್ತದೆ. ಸುಮಾರು 5 ಸಾವಿರ ರೂಪಾಯಿಂದ ಹಿಡಿದು ಲಕ್ಷಗಟ್ಟಲೆ ತನಕ ಶುಲ್ಕ ವಿಧಿಸಬಹುದು. ಅದು ಕಟ್ಟಡದ ಗಾತ್ರ, ವಿನ್ಯಾಸದ ಮೇಲೆ ಅವಲಂಭಿತವಾಗಿರುತ್ತದೆ. ಎರಡಂತಸ್ತಿನ ಮನೆಯ ವಿನ್ಯಾಸ ತಯಾರಿಸಲು ಸುಮಾರು 10 ರಿಂದ 15 ಸಾವಿರದವರೆಗೆ ಖರ್ಚಾಗ ಬಹುದು. ಅಪಾರ್ಟ್‌ಮೆಂಟ್, ವಾಣಿಜ್ಯ ಕಟ್ಟಡವಾದರೆ ಈ ಬೆಲೆ ಇನ್ನೂ ಹೆಚ್ಚು. ಕೆಲವು ವೃತ್ತಿಪರ ವಿನ್ಯಾಸ ಗಾರರೂ 3 ಆಯಾಮದ ಚಿತ್ರ ತಯಾರಿಸುತ್ತಾರೆ; ಅದಕ್ಕಾಗಿ ಟ್ರೈನಿಂಗ್ ಕೊಡುವ ಕೆಲವು ಖಾಸಗಿ ಸಂಸ್ಥೆಗಳಿವೆ.

ಇಂತಹ ವಿನ್ಯಾಸಗಾರರು ಇನ್ನೂ ಕಡಿಮೆ ಬೆಲೆಗೆ 3ಡಿ ಚಿತ್ರ ತಯಾರಿಸಿಕೊಡುತ್ತಾರೆ. ಆರಂಭದಲ್ಲಿ ಒಂದಿಷ್ಟು ಖರ್ಚು ಮಾಡಿ, 3 ಡಿ ವಿನ್ಯಾಸವನ್ನು ಮಾಡಿಕೊಂಡರೆ, ಮನೆ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು. ಅಂದಹಾಗೆ 3 ಆಯಾಮದ ಚಿತ್ರ ರಚಿಸಿದಂತೆ 3 ಆಯಾಮದ ದೃಶ್ಯ ವನ್ನೂ ತಯಾರಿಸಬಹುದು: ಅದುವೇ 3ಡಿ ವಾಕ್‌ಥ್ರೂ!

3 ಆಯಾಮದ ವಿನ್ಯಾಸದಿಂದ ಉಪಯೋಗಗಳು

೧. ಕಟ್ಟಡದ ಸ್ಪಷ್ಟ ಚಿತ್ರಣ ಸಿಗುವುದರಿಂದ ಅಂತಿಮ ಸ್ಪರ್ಷದ(ಫೈನಲ್ ಟಚ್) ಬಗ್ಗೆ ಆತಂಕ ವಿರದು.

೨. ಕಿಟಕಿ-ಬಾಗಿಲುಗಳ ವಿನ್ಯಾಸ, ಗೋಡೆಗಳ ಬಣ್ಣದ ಆಯ್ಕೆಗೆ ನೀವು ಸ್ವತಂತ್ರರು.

೩. ಅಭಿರುಚಿಗೆ ತಕ್ಕಂತೆ ಹೊರಾಂಗಣ ವಿನ್ಯಾಸ, ಪಾರ್ಕಿಂಗ್ ಜಾಗ ಮುಂತಾದ ಅಗತ್ಯಗಳ ಬಗ್ಗೆ

ನಿರ್ಧರಿಸುವ ಆಯ್ಕೆ.

೪. ಖರ್ಚು-ವೆಚ್ಚಗಳ ಬಗ್ಗೆ ನಿಖರ ಮಾಹಿತಿ ಪಡೆದುಕೊಳ್ಳಬಹುದು.

೫. ಮನೆಯ ಒಳಾಂಗಣ ವಿನ್ಯಾಸವನ್ನು ಇದೇ ತಂತ್ರಜ್ಞಾನದಿಂದ ರಚಿಸಬಹುದು. ಇದರಿಂದ ಅಗತ್ಯ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಕೊಠಡಿಗಳ ಜಾಗ ವ್ಯರ್ಥವಾಗುವುದನ್ನು ತಪ್ಪಿಸಬಹುದು.