ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನೂರು ವರ್ಷಗಳ ಸಾರ್ಥಕ ದೇಶಸೇವೆ

ಸಂಘವು ನಮ್ಮ ರಾಷ್ಟ್ರದ ಪ್ರತಿಯೊಂದು ಭಾಗವನ್ನು, ನಮ್ಮ ಸಮಾಜದ ಪ್ರತಿ ಯೊಂದು ವರ್ಗವನ್ನು ಪೋಷಿಸಿದೆ. ಒಂದು ನದಿಯು ಅನೇಕ ತೊರೆಗಳಾಗಿ ತನ್ನ ಪ್ರಭಾವವನ್ನು ವಿಸ್ತರಿಸುತ್ತದೆ. ಸಂಘದ ಪ್ರಯಾಣದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಸಂಘವು ತನ್ನ ವಿವಿಧ ಅಂಗಸಂಸ್ಥೆಗಳ ಮೂಲಕ, ಶಿಕ್ಷಣ, ಕೃಷಿ, ಸಮಾಜ ಕಲ್ಯಾಣ, ಬುಡಕಟ್ಟು ಕಲ್ಯಾಣ, ಮಹಿಳಾ ಸಬಲೀಕರಣ ಮುಂತಾದ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿದೆ.

ನೂರು ವರ್ಷಗಳ ಸಾರ್ಥಕ ದೇಶಸೇವೆ

-

Ashok Nayak Ashok Nayak Oct 3, 2025 11:37 AM

ಸಂಘ ಸಾಧನೆ

ನರೇಂದ್ರ ಮೋದಿ, ಪ್ರಧಾನಿ

ಸ್ವಯಂಸೇವಕರು ಪ್ರತಿ ವಿಪತ್ತಿನಲ್ಲಿ, ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ಮೊದಲು ಸ್ಪಂದಿಸುವವರಾಗಿರುತ್ತಾರೆ. ಅವರ ಪಾಲಿಗೆ ಇದು ಕೇವಲ ಪರಿಹಾರ ಕಾರ್ಯವಲ್ಲ, ಆದರೆ ರಾಷ್ಟ್ರದ ಆತ್ಮವನ್ನು ಬಲಪಡಿಸುವ ಕೆಲಸವಾಗಿರುತ್ತದೆ. ವೈಯಕ್ತಿಕ ಕಷ್ಟಗಳನ್ನು ಸಹಿಸಿ, ಇತರರ ನೋವನ್ನು ತಗ್ಗಿಸುವುದು ಇವರ ಧ್ಯೇಯವಾಗಿದೆ.

ನೂರು ವರ್ಷಗಳ ಹಿಂದೆ, ವಿಜಯದಶಮಿಯ ಶುಭ ಸಂದರ್ಭದಂದು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಲಾಯಿತು. ಇದು ಸಂಪೂರ್ಣವಾಗಿ ಹೊಸ ಸೃಷ್ಟಿಯೇನೂ ಆಗಿರಲಿಲ್ಲ. ಇದು ಪ್ರಾಚೀನ ಪರಂಪರೆಯ ಹೊಸ ಅಭಿವ್ಯಕ್ತಿಯಾಗಿತ್ತು. ಭಾರತದ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯು ಕಾಲಕಾಲಕ್ಕೆ, ಕಾಲದ ಸವಾಲುಗಳನ್ನು ಎದುರಿಸಲು ವಿಭಿನ್ನ ರೂಪಗಳಲ್ಲಿ ಪ್ರಕಟವಾಗುತ್ತದೆ.

ನಮ್ಮ ಕಾಲದಲ್ಲಿ, ಸಂಘವು ಆ ಕಾಲಾತೀತ ರಾಷ್ಟ್ರೀಯ ಪ್ರeಯ ಸಾಕಾರವಾಗಿದೆ. ಸಂಘದ ಶತಮಾನೋತ್ಸವಕ್ಕೆ ಸಾಕ್ಷಿಯಾಗುತ್ತಿರುವುದು ನಮ್ಮ ಪೀಳಿಗೆಯ ಸ್ವಯಂಸೇವಕರ ಸೌಭಾಗ್ಯ ವಾಗಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ರಾಷ್ಟ್ರ ಮತ್ತು ಜನರ ಸೇವೆಗಾಗಿ ಸಮರ್ಪಿತರಾಗಿರುವ ಅಸಂಖ್ಯಾತ ಸ್ವಯಂಸೇವಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಸಂಘದ ಸಂಸ್ಥಾಪಕರು, ನಮ್ಮ ಆದರ್ಶ ಮಾರ್ಗದರ್ಶಕರಾದ ಪರಮಪೂಜ್ಯ ಡಾ.ಹೆಡ್ಗೆವಾರ್ ಜಿ ಅವರಿಗೆ ನಾನು ಗೌರವಯುತ ನಮನ ಸಲ್ಲಿಸುತ್ತೇನೆ. ನೂರು ವರ್ಷಗಳ ಈ ಅದ್ಭುತ ಪ್ರಯಾಣದ ಸ್ಮರಣಾರ್ಥವಾಗಿ, ಭಾರತ ಸರಕಾರವು ವಿಶೇಷ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: Dr Vijay Darda Column: ತಂಪು ಮರುಭೂಮಿಯಲ್ಲಿ ಬೆಂಕಿಯ ಕಿಡಿ ಹೊತ್ತಿಸಿದವರಾರು ?

ಮಾನವ ನಾಗರಿಕತೆಗಳು ಮಹಾನದಿಗಳ ತಟಗಳಲ್ಲಿ ಪ್ರವರ್ಧಮಾನಕ್ಕೆ ಬಂದಿವೆ. ಅದೇ ರೀತಿ, ಸಂಘದ ಪ್ರಭಾವದಿಂದ ಅಸಂಖ್ಯಾತ ಜೀವಗಳು ಪ್ರವರ್ಧಮಾನಕ್ಕೆ ಬಂದಿವೆ. ಒಂದು ನದಿಯು ತಾನು ಹರಿಯುವ ನೆಲದ ಪ್ರತಿಯೊಂದು ಭಾಗವನ್ನು ತನ್ನ ನೀರಿನಿಂದ ಸಮೃದ್ಧಗೊಳಿಸುತ್ತದೆ.

ಅದೇ ರೀತಿ, ಸಂಘವು ನಮ್ಮ ರಾಷ್ಟ್ರದ ಪ್ರತಿಯೊಂದು ಭಾಗವನ್ನು, ನಮ್ಮ ಸಮಾಜದ ಪ್ರತಿ ಯೊಂದು ವರ್ಗವನ್ನು ಪೋಷಿಸಿದೆ. ಒಂದು ನದಿಯು ಅನೇಕ ತೊರೆಗಳಾಗಿ ತನ್ನ ಪ್ರಭಾವವನ್ನು ವಿಸ್ತರಿಸುತ್ತದೆ. ಸಂಘದ ಪ್ರಯಾಣದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಸಂಘವು ತನ್ನ ವಿವಿಧ ಅಂಗಸಂಸ್ಥೆಗಳ ಮೂಲಕ, ಶಿಕ್ಷಣ, ಕೃಷಿ, ಸಮಾಜ ಕಲ್ಯಾಣ, ಬುಡಕಟ್ಟು ಕಲ್ಯಾಣ, ಮಹಿಳಾ ಸಬಲೀಕರಣ ಮುಂತಾದ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿದೆ.

ಅವುಗಳ ಕಾರ್ಯಕ್ಷೇತ್ರಗಳು ವೈವಿಧ್ಯಮಯವಾಗಿದ್ದರೂ, ಅವುಗಳೆಲ್ಲವೂ ‘ರಾಷ್ಟ್ರ ಮೊದಲು’ ಎಂಬ ಏಕೈಕ ಮನೋಭಾವ ಮತ್ತು ಸಂಕಲ್ಪವನ್ನು ಹೊಂದಿವೆ. ಆರಂಭದಿಂದಲೂ ಸಂಘವು ರಾಷ್ಟ್ರ ನಿರ್ಮಾಣಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ಇದನ್ನು ಸಾಧಿಸಲು, ಅದು ವ್ಯಕ್ತಿತ್ವ ನಿರ್ಮಾಣದ ಮಾರ್ಗವನ್ನು ಆರಿಸಿಕೊಂಡಿದೆ. ‘ವ್ಯಕ್ತಿನಿರ್ಮಾಣ್ ಸೇ ರಾಷ್ಟ್ರನಿರ್ಮಾಣ್’- ‘ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ’- ಇದು ಸಂಘದ ಮಾರ್ಗವಾಗಿದೆ.

RSS_ Modi

ಈ ಉದ್ದೇಶಕ್ಕಾಗಿ ಅದು ದೈನಂದಿನ ಶಾಖೆಯ ವಿಶಿಷ್ಟ, ಸರಳ ಮತ್ತು ಸುಸ್ಥಿರ ವ್ಯವಸ್ಥೆಯನ್ನು ಸೃಷ್ಟಿಸಿತು. ಶಾಖೆಯು ಪ್ರತಿಯೊಬ್ಬ ಸ್ವಯಂಸೇವಕನು ‘ನಾನು’ ಎಂಬುದರಿಂದ ‘ನಾವು’ ಎಂಬುದರ ಕಡೆಗೆ ಪ್ರಯಾಣವನ್ನು ಪ್ರಾರಂಭಿಸುವ ಮತ್ತು ವೈಯಕ್ತಿಕ ಪರಿವರ್ತನೆಯ ಪ್ರಕ್ರಿಯೆಗೆ ಒಳಗಾಗುವ ಸೂರ್ತಿದಾಯಕ ಸ್ಥಳವಾಗಿದೆ.

ಸಂಘದ 100 ವರ್ಷಗಳ ಪ್ರಯಾಣವು ಒಂದು ಉನ್ನತ ರಾಷ್ಟ್ರೀಯ ಧ್ಯೇಯ, ವೈಯಕ್ತಿಕ ಪರಿವರ್ತನೆ ಯ ಮಾರ್ಗ ಮತ್ತು ಶಾಖೆಯ ಪ್ರಾಯೋಗಿಕ ವಿಧಾನವನ್ನು ಆಧರಿಸಿದೆ. ಇವುಗಳ ಮೂಲಕ, ಸಂಘವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಮುಂದಕ್ಕೆ ಕೊಂಡೊ ಯ್ಯುತ್ತಿರುವ ಲಕ್ಷಾಂತರ ಸ್ವಯಂಸೇವಕರನ್ನು ರೂಪಿಸಿದೆ.

ಸ್ಥಾಪನೆಯಾದ ಕ್ಷಣದಿಂದಲೇ, ಸಂಘವು ದೇಶದ ಆದ್ಯತೆಯನ್ನು ತನ್ನದೇ ಆದ ಆದ್ಯತೆಯಾಗಿ ಪರಿಗಣಿಸಿದೆ. ಪರಮ ಪೂಜ್ಯ ಡಾ.ಹೆಡ್ಗೆವಾರ್ ಜಿ ಮತ್ತು ಅನೇಕ ಸ್ವಯಂಸೇವಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಡಾ. ಹೆಡ್ಗೆವಾರ್ ಜಿ ಸ್ವತಃ ಹಲವಾರು ಬಾರಿ ಜೈಲುಶಿಕ್ಷೆ ಅನುಭವಿಸಿದರು.

ಸಂಘವು ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ಮತ್ತು ರಕ್ಷಣೆಯನ್ನು ಸಹ ನೀಡಿತು. ಸ್ವಾತಂತ್ರ್ಯದ ನಂತರ, ಸಂಘವು ರಾಷ್ಟ್ರಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಿತು. ಈ ಪ್ರಯಾಣದ ಸಮಯದಲ್ಲಿ, ಸಂಘವನ್ನು ಹತ್ತಿಕ್ಕಲು ಪಿತೂರಿಗಳು ಮತ್ತು ಪ್ರಯತ್ನಗಳು ನಡೆದವು. ಅದರ ಎರಡನೇ ಸರಸಂಘಚಾಲಕ ಪರಮ ಪೂಜ್ಯ ‘ಗುರೂಜಿ’ಯವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಯಿತು ಮತ್ತು ಜೈಲಿಗೆ ಹಾಕಲಾಯಿತು.

ಆದರೆ ಸಂಘವು ಎಂದಿಗೂ ಕಹಿ ಭಾವನೆಗಳು ಬೇರೂರಲು ಬಿಡಲಿಲ್ಲ, ಏಕೆಂದರೆ ಸ್ವಯಂ ಸೇವಕರು ‘ನಾವು ಸಮಾಜದಿಂದ ಬೇರ್ಪಟ್ಟಿಲ್ಲ. ಸಮಾಜವು ನಮ್ಮಿಂದಲೇ ರೂಪುಗೊಂಡಿದೆ’ ಎಂದು ನಂಬು ತ್ತಾರೆ. ಸಮಾಜದೊಂದಿಗಿನ ಈ ಏಕತೆಯ ಪ್ರe, ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಅಚಲ ನಂಬಿಕೆ ಸ್ವಯಂ ಸೇವಕರಿಗೆ ಮಾನಸಿಕ ಸ್ಥಿರತೆಯನ್ನು ನೀಡಿತು ಮತ್ತು ಅತ್ಯಂತ ಗಂಭೀರ ಬಿಕ್ಕಟ್ಟುಗಳಲ್ಲಿಯೂ ಅವರನ್ನು ಸಮಾಜದ ಬಗ್ಗೆ ಸಂವೇದನಾಶೀಲರನ್ನಾಗಿ ಮಾಡಿತು.

ಸಂಘವು ಯಾವಾಗಲೂ ದೇಶಭಕ್ತಿ ಮತ್ತು ಸೇವೆಗೆ ಸಮಾನಾರ್ಥಕವಾಗಿದೆ. ದೇಶ ವಿಭಜನೆ ಯಿಂದಾಗಿ ಲಕ್ಷಾಂತರ ಕುಟುಂಬಗಳು ನಿರಾಶ್ರಿತರಾದಾಗ, ಅವರಿಗೆ ಸೇವೆ ಸಲ್ಲಿಸಲು ಸ್ವಯಂ ಸೇವಕರು ಮುಂದೆ ಬಂದರು. ಪ್ರತಿ ವಿಪತ್ತಿನಲ್ಲಿ, ಸೀಮಿತ ಸಂಪನ್ಮೂಲಗಳ ಹೊರತಾಗಿಯೂ, ಸ್ವಯಂ ಸೇವಕರು ಮೊದಲು ಸ್ಪಂದಿಸುವವರಾಗಿರುತ್ತಾರೆ ಮತ್ತು ಮುಂಚೂಣಿ ಯಲ್ಲಿ ಕೆಲಸ ಮಾಡುತ್ತಾರೆ.

ಅವರಿಗೆ, ಇದು ಕೇವಲ ಪರಿಹಾರ ಕಾರ್ಯವಲ್ಲ, ಆದರೆ ರಾಷ್ಟ್ರದ ಆತ್ಮವನ್ನು ಬಲಪಡಿಸುವ ಕೆಲಸ ವಾಗಿರುತ್ತದೆ. ವೈಯಕ್ತಿಕವಾದ ಕಷ್ಟಗಳನ್ನು ಸಹಿಸಿಕೊಂಡು ಇತರರ ನೋವನ್ನು ಕಡಿಮೆ ಮಾಡು ವುದು ಪ್ರತಿಯೊಬ್ಬ ಸ್ವಯಂಸೇವಕರ ಧ್ಯೇಯವಾಗಿದೆ.

ತನ್ನ ಶತಮಾನದ ಪ್ರಯಾಣದಲ್ಲಿ, ಸಂಘವು ಸಮಾಜದ ವಿವಿಧ ವರ್ಗಗಳಲ್ಲಿ ಸ್ವಯಂ ಅರಿವು ಮತ್ತು ಆತ್ಮವಿಶ್ವಾಸವನ್ನು ಜಾಗೃತಗೊಳಿಸಿದೆ. ದೇಶದ ಅತ್ಯಂತ ದೂರದ ಮತ್ತು ಪ್ರವೇಶಿಸಲಾಗದ ಪ್ರದೇಶಗಳಲ್ಲಿಯೂ ಇದು ಕೆಲಸ ಮಾಡಿದೆ. ದಶಕಗಳಿಂದ, ಬುಡಕಟ್ಟು ಸಮುದಾಯಗಳ ಸಂಪ್ರದಾಯಗಳು, ಪದ್ಧತಿಗಳು ಮತ್ತು ಮೌಲ್ಯಗಳನ್ನು ಸಂರಕ್ಷಿಸಲು ಮತ್ತು ಪೋಷಿಸಲು ಅದು ತನ್ನನ್ನು ಸಮರ್ಪಿಸಿಕೊಂಡಿದೆ.

ಇಂದು, ಸೇವಾಭಾರತಿ, ವಿದ್ಯಾಭಾರತಿ ವಿದ್ಯಾಲಯಗಳು ಮತ್ತು ವನವಾಸಿ ಕಲ್ಯಾಣ ಆಶ್ರಮದಂಥ ಸಂಸ್ಥೆಗಳು ಬುಡಕಟ್ಟು ಸಮುದಾಯಗಳಿಗೆ ಸಬಲೀಕರಣದ ಪ್ರಬಲ ಸ್ತಂಭಗಳಾಗಿವೆ. ಶತಮಾನ ಗಳಿಂದ, ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯಂಥ ಸಾಮಾಜಿಕ ಅನಿಷ್ಟಗಳು ಹಿಂದೂ ಸಮಾಜಕ್ಕೆ ಸವಾಲುಗಳಾಗಿವೆ. ಡಾ. ಹೆಡ್ಗೆವಾರ್ ಜಿ ಅವರ ಕಾಲದಿಂದ ಇಂದಿನವರೆಗೆ, ಸಂಘದ ಪ್ರತಿಯೊಬ್ಬ ಸದಸ್ಯರು, ಸರಸಂಘ ಚಾಲಕರು ಈ ತಾರತಮ್ಯದ ವಿರುದ್ಧ ಹೋರಾಡಿದ್ದಾರೆ.

ಪರಮಪೂಜ್ಯ ಗುರೂಜಿಯವರು ‘ನ ಹಿಂದೂ ಪತಿತೋ ಭವೇತ್’ ಅಂದರೆ ‘ಯಾವುದೇ ಹಿಂದೂ ಪತಿತನಲ್ಲ’ ಎಂಬ ಮನೋಭಾವವನ್ನು ನಿರಂತರವಾಗಿ ಉತ್ತೇಜಿಸಿದರು. ಪೂಜ್ಯ ಬಾಳಾ ಸಾಹೇಬ್ ದೇವರಸ್ ಅವರು ‘ಅಸ್ಪೃಶ್ಯತೆ ತಪ್ಪಲ್ಲ ದಿದ್ದರೆ, ಜಗತ್ತಿನಲ್ಲಿ ಯಾವುದೂ ತಪ್ಪಲ್ಲ’ ಎಂದು ಘೋಷಿಸಿ ದರು. ನಂತರ, ಪೂಜ್ಯ ರಜ್ಜು ಭಯ್ಯಾಜಿ ಮತ್ತು ಪೂಜ್ಯ ಸುದರ್ಶನ್ ಜಿ ಕೂಡ ಈ ಸಂದೇಶವನ್ನು ಮುಂದುವರಿಸಿದರು.

ಪ್ರಸ್ತುತ ಸರಸಂಘಚಾಲಕರಾದ ಗೌರವಾನ್ವಿತ ಮೋಹನ್ ಭಾಗವತ್ ಜಿ ಅವರು ಏಕತೆಗೆ ಸ್ಪಷ್ಟ ಕರೆ ನೀಡಿದ್ದಾರೆ, ‘ಎಲ್ಲರಿಗೂ ಒಂದು ಬಾವಿ, ಒಂದು ದೇವಾಲಯ, ಒಂದು ಸ್ಮಶಾನ’ಕ್ಕಾಗಿ ಕರೆ ನೀಡಿ ದ್ದಾರೆ. ಒಂದು ಶತಮಾನದ ಹಿಂದೆ ಸಂಘ ಸ್ಥಾಪನೆ ಯಾದಾಗ, ಅಗತ್ಯಗಳು ಮತ್ತು ಹೋರಾಟ ಗಳು ಇಂದಿಗಿಂತ ಭಿನ್ನವಾಗಿದ್ದವು.

ಇಂದು, ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿರುವಾಗ, ಹೊಸ ಸವಾಲುಗಳು ಹೊರಹೊಮ್ಮುತ್ತಿವೆ. ವಿದೇಶಗಳ ಮೇಲಿನ ಅವಲಂಬನೆ, ನಮ್ಮ ಏಕತೆಯನ್ನು ಛಿದ್ರಗೊಳಿಸುವ ಪಿತೂರಿಗಳು, ಒಳನುಸುಳುವಿಕೆಯ ಮೂಲಕ ಜನಸಂಖ್ಯಾ ಬದಲಾವಣೆ ಮತ್ತು ಇನ್ನೂ ಹಲವು ಸವಾಲುಗಳಿವೆ.

ನಮ್ಮ ಸರಕಾರ ಇವುಗಳನ್ನು ಸಕ್ರಿಯವಾಗಿ ನಿಭಾಯಿಸುತ್ತಿದೆ. ಅವುಗಳನ್ನು ಎದುರಿಸಲು ಆರ್‌ಎಸ್‌ಎಸ್ ಕೂಡ ಒಂದು ದೃಢವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಎಂದು ನನಗೆ ಸಂತೋಷವಾಗಿದೆ. ಸಂಘದ ‘ಪಂಚಪರಿವರ್ತನೆ’ ಪ್ರತಿಯೊಬ್ಬ ಸ್ವಯಂ ಸೇವಕರಿಗೂ ಇಂದಿನ ಸವಾಲುಗಳನ್ನು ಜಯಿಸಲು ಹಾದಿಯನ್ನು ತೋರುತ್ತವೆ. ಅವೆಂದರೆ: ಸ್ವ-ಬೋಧ: ಈ ಸ್ವಯಂ ಅರಿವು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತರಾಗಲು, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಲು ಮತ್ತು ಸ್ವದೇಶಿ ತತ್ವವನ್ನು ಮುನ್ನಡೆಸಲು ನಮಗೆ ಸಹಾಯ ಮಾಡುತ್ತದೆ.

ಸಾಮಾಜಿಕ ಸಾಮರಸತಾ: ವಂಚಿತರಿಗೆ ಆದ್ಯತೆ ನೀಡಿ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿ ಕೊಳ್ಳುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಸಾಧಿಸಲಾಗುತ್ತದೆ. ಇಂದು, ನಮ್ಮ ಸಾಮಾಜಿಕ ಸಾಮರಸ್ಯವು ಒಳನುಸುಳುವಿಕೆಯಿಂದ ಉಂಟಾಗುವ ಜನಸಂಖ್ಯಾ ಅಸಮತೋಲನದಿಂದ ಗಂಭೀರ ಸವಾಲನ್ನು ಎದುರಿಸುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು, ರಾಷ್ಟ್ರವು ಉನ್ನತಾಧಿ ಕಾರದ ಜನಸಂಖ್ಯಾ ಮಿಷನ್ ಅನ್ನು ಘೋಷಿಸಿದೆ.

ಕುಟುಂಬ ಪ್ರಬೋಧನ್: ಕೌಟುಂಬಿಕ ಮೌಲ್ಯಗಳು ನಮ್ಮ ಸಂಸ್ಕೃತಿಯ ಅಡಿಪಾಯವಾಗಿರುವ ಕುಟುಂಬ ವ್ಯವಸ್ಥೆಯನ್ನು ಬಲಪಡಿಸುತ್ತವೆ.

ನಾಗರಿಕ್ ಶಿಷ್ಟಾಚಾರ್: ಪ್ರತಿಯೊಬ್ಬ ನಾಗರಿಕ ನಲ್ಲೂ ನಾಗರಿಕ ಪ್ರe ಮತ್ತು ಜವಾಬ್ದಾರಿಯ ಪ್ರಜ್ಞೆ ಜಾಗೃತಗೊಳ್ಳಬೇಕು.

ಪರ್ಯಾವರಣ್: ಮುಂಬರುವ ಪೀಳಿಗೆಯ ಭವಿಷ್ಯವನ್ನು ಸುರಕ್ಷಿತಗೊಳಿಸಲು ಪರಿಸರವನ್ನು ರಕ್ಷಿಸುವುದು ಅತ್ಯಂತ ಮಹತ್ವದ್ದಾಗಿದೆ. ಈ ಸಂಕಲ್ಪಗಳ ಮಾರ್ಗದರ್ಶನದೊಂದಿಗೆ, ಸಂಘವು ಈಗ ಮುಂದಿನ ಶತಮಾನದತ್ತ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಅಭಿಯಾನದಲ್ಲಿ ಸಂಘದ ಕೊಡುಗೆ ನಿರ್ಣಾಯಕ ವಾಗಿರುತ್ತದೆ. ಮತ್ತೊಮ್ಮೆ, ಪ್ರತಿಯೊಬ್ಬ ಸ್ವಯಂಸೇವಕರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು.