GSLV-F17 ಯಶಸ್ವಿ ಉಡಾವಣೆ: EOS-05 'ಆಕಾಶದಲ್ಲಿ ಭಾರತದ ಕಣ್ಣು'!
GSLV-F17 ರಾಕೆಟ್ ಮೂಲಕ EOS-05 ಭೂ ವೀಕ್ಷಣಾ ಉಪಗ್ರಹದ ಯಶಸ್ವಿ ಉಡಾವಣೆ. 36,000 ಕಿ.ಮೀ. ಎತ್ತರದ ಜಿಯೋಸ್ಟೇಷನರಿ ಕಕ್ಷೆಯಲ್ಲಿರುವ EOS-05 ಕೃಷಿ, ಹವಾಮಾನ ಮತ್ತು ವಿಪತ್ತು ನಿರ್ವಹಣೆಗೆ ಹೇಗೆ ನೆರವಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ ಹೊಂದಿರುವ ವಿಜಯೇತ್ ಕುಮಾರ್ ಡಿ.ಎನ್ ಕ್ರೀಡೆ, ತಂತ್ರಜ್ಞಾನ, ಸಿನೆಮಾ, ರಾಜಕೀಯ ಮತ್ತು ರಿಯಲ್ ಎಸ್ಟೇಟ್ ವಿಚಾರಗಳಲ್ಲಿ ಕಥೆ ಹೇಳುವ ವಿಭಿನ್ನ ಧಾಟಿ ಹೊಂದಿದ್ದಾರೆ. ವಿಜಯ ಕರ್ನಾಟಕದಿಂದ ವೃತ್ತಿಜೀವನ ಆರಂಭಿಸಿ, ಟೈಮ್ಸ್ ಇಂಟರ್ನೆಟ್ ಹಾಗೂ ಒನ್‌ಇಂಡಿಯಾ ಮೂಲಕ ಡಿಜಿಟಲ್ ಮಾಧ್ಯಮದಲ್ಲಿ ತಮ್ಮ ಗುರುತು ಮೂಡಿಸಿದ್ದಾರೆ. ನಿಖರತೆ, ಉತ್ಸಾಹ ಮತ್ತು ನವೀನ ವರದಿ ಶೈಲಿಯಿಂದ ವಿಶ್ವಾಸಾರ್ಹ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ.
ಪಿಎಂ ಕಿಸಾನ್ ಪೋರ್ಟಲ್ ಮೂಲಕ ರೈತರಿಗೆ ಆನ್‌ಲೈನ್ ನೋಂದಣಿ, ಪಾವತಿ ಸ್ಥಿತಿ ಪರಿಶೀಲನೆ ಸೇರಿದಂತೆ ಹಲವು ಡಿಜಿಟಲ್ ಸೇವೆಗಳು ಲಭ್ಯ. ಸಂಪೂರ್ಣ ಮಾಹಿತಿ ಇಲ್ಲಿದೆ. ದೇಶದ ರೈತರಿಗೆ ಪ್ರಧಾನ ಮಂತ್ರಿಗಳ ಯೋಜನೆಯ ಸಂಪೂರ್ಣ ಲಾಭ ಸಿಗುವಂತೆ ಮಾಡುವುದು ಈ ಆನ್‌ಲೈನ್ ಸೇವೆಯ ಪ್ರಮುಖ ಉದ್ದೇಶವಾಗಿದೆ.
2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ಗ್ಲಾಸ್ಗೋದ ಭಾರತೀಯ ರೆಸ್ಟೋರೆಂಟ್‌ನಲ್ಲಿ ಬಳಸಲಾದ ನ್ಯಾಪ್‌ಕಿನ್‌ನಲ್ಲಿ ಭಾರತದ ನಕ್ಷೆಯಿಂದ ಈಶಾನ್ಯ ರಾಜ್ಯಗಳು ಕಾಣಿಸದಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬೆಳ್ಳಿ ಪದಕ ವಿಜೇತೆ ಲವ್ಲಿನಾ ಬೋರ್ಗೊಹೇನ್ ಆಕ್ಷೇಪ ವ್ಯಕ್ತಪಡಿಸಿದ್ದು, ಬಳಿಕ ರೆಸ್ಟೋರೆಂಟ್ ಆಡಳಿತ ತಪ್ಪು ಸರಿಪಡಿಸುವುದಾಗಿ ತಿಳಿಸಿದೆ.
ಫಿಫಾ ವಿಶ್ವಕಪ್ ಗೆದ್ದ ತಂಡಕ್ಕೆ ಅಸಲಿ ಟ್ರೋಫಿ ಯಾಕೆ ಸಿಗುವುದಿಲ್ಲ? ಮೊದಲು ನೀಡಲಾಗುತ್ತಿದ್ದ ಅಪ್ಪಟ ಚಿನ್ನದ ಜೂಲ್ಸ್ ರಿಮೆಟ್ ಟ್ರೋಫಿಯ ಇತಿಹಾಸ, ಎರಡು ಬಾರಿ ಟ್ರೋಫಿಯ ಕಳುವು ಮತ್ತು ರೆಪ್ಲಿಕಾ ಟ್ರೋಫಿಯ ಹಿಂದಿನ ಕುತೂಹಲಕಾರಿ ರಹಸ್ಯವನ್ನು ಈ ಲೇಖನದಲ್ಲಿ ತಿಳಿಯಿರಿ.
ರೋಹಿತ್ ಶರ್ಮಾ ನಿವೃತ್ತಿ ಕುರಿತು ಹರಿದಾಡುತ್ತಿರುವ ಊಹಾಪೋಹಗಳ ನಡುವೆ, ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿ ಎಲ್ಲ ಪ್ರಶ್ನೆಗಳಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿದ್ದಾರೆ. ಲಾರ್ಡ್ಸ್‌ನಲ್ಲಿ ಒಡಿಐ ಶತಕ ಬಾರಿಸಿದ ಮೊದಲ ಭಾರತೀಯ ಎನಿಸಿದ ಹಿಟ್‌ಮ್ಯಾನ್ ಖಾತಿಯ ಚಾಂಪಿಯನ್ ಆಟಗಾರನ ದಾಖಲೆಗಳು ಮತ್ತು 2027ರ ವಿಶ್ವಕಪ್ ಭವಿಷ್ಯದ ವಿಶ್ಲೇಷಣೆ ಇಲ್ಲಿದೆ.
2026ರ ಫಿಫಾ ವಿಶ್ವಕಪ್ ಫೈನಲ್ ಬಳಿಕ ಅರ್ಜೆಂಟೀನಾ ವಿರುದ್ಧ ಏಕೆ ಟೀಕೆ ವ್ಯಕ್ತವಾಯಿತು? ಸ್ಪೇನ್‌ನ ಐತಿಹಾಸಿಕ ಗೆಲುವು, ಪಂದ್ಯದ ವಿವಾದಗಳು ಮತ್ತು ಅಭಿಮಾನಿಗಳ ಪ್ರತಿಕ್ರಿಯೆಯ ವಿಶ್ಲೇಷಣೆ ಇಲ್ಲಿದೆ. 2022ರಲ್ಲಿ ಅರ್ಜೆಂಟೀನಾ ಗೆಲ್ಲಲಿ ಎಂದು ಪ್ರಾರ್ಥಿಸಿದ್ದ ಅಭಿಮಾನಿಗಳೇ ಇಂದು ಅರ್ಜೆಂಟೀನಾ ಸೋಲಲಿ ಎಂದು ಶಾಪ ಹಾಕಿದ್ದೇಕೆ? ಇಲ್ಲಿದೆ ಸಂಪೂರ್ಣ ವಿವರ.
ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯ ಭಾವುಕ ಪಯಣ, 2014ರ ನಿರಾಶೆಯಿಂದ 2022ರ ವಿಶ್ವಕಪ್ ಗೆಲುವಿನವರೆಗೆ ಮತ್ತು 2026ರ ಕಣ್ಣೀರ ವಿದಾಯದ ಕಥೆಯನ್ನು ಈ ಲೇಖನದಲ್ಲಿ ತಿಳಿಯಿರಿ. ಅರ್ಜೆಂಟೀನಾದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಏಕೆ 'ದಿ GOAT' (ಗ್ರೇಟೆಸ್ಟ್ ಆಫ್ ಆಲ್ ಟೈಮ್) ಎಂದು ಕರೆಯಲ್ಪಡುತ್ತಾರೆ ಎಂಬುದನ್ನು ಓದಿ.
ಲಮೀನ್ ಯಮಾಲ್ ಅವರ ಜೀವನಯಾನ, ಮೆಸ್ಸಿಯೊಂದಿಗೆ ವೈರಲ್ ಆದ ಬಾಲ್ಯದ ಫೋಟೋ, ಕುಟುಂಬದ ಹಿನ್ನೆಲೆ ಮತ್ತು ವಿಶ್ವ ಫುಟ್ಬಾಲ್‌ನಲ್ಲಿ ಅವರ ವೇಗದ ಬೆಳವಣಿಗೆಯ ಸಂಪೂರ್ಣ ಕಥೆ ಈ ಲೇಖನದಲ್ಲಿದೆ. 2026ರ ಫಿಫಾ ವಿಶ್ವಕಪ್ ಫೈನಲ್‌ಗೂ ಮುನ್ನ ಮೆಸ್ಸಿ ಮತ್ತು ಯಮಾಲ್ ನಡುವಣ ಜಟಾಪಟಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಫಿಫಾ ವಿಶ್ವಕಪ್ 2026ರ ಫೈನಲ್ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಫುಟ್ಬಾಲ್ ಅಭಿಮಾನಿಗಳಿಗೆ ವಿಶೇಷ ಅವಕಾಶ. ಜುಲೈ 20 ರಂದು ನಡೆಯಲಿರುವ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಣ ಫೈನಲ್, ಮಧ್ಯರಾತ್ರಿ ಸಂಭ್ರಮ ಹಾಗೂ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಸಂಪೂರ್ಣ ಮಾಹಿತಿ ಇಲ್ಲಿದೆ.
2026ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಕಣಕ್ಕಿಳಿದರೆ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಇತಿಹಾಸದ ಅಪರೂಪದ ದಾಖಲೆಯನ್ನು ಸರಿಗಟ್ಟುವ ಅವಕಾಶ ಹೊಂದಿದ್ದಾರೆ. ಗೋಲ್ಡನ್ ಬೂಟ್ ರೇಸ್, ಅರ್ಜೆಂಟೀನಾದ ಫೈನಲ್ ಪ್ರವೇಶ ಮತ್ತು ಮೆಸ್ಸಿಯ ಐತಿಹಾಸಿಕ ಸಾಧನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಸತತ ಸೋಲಿನ ಹಿಂದೆ ಫ್ಲ್ಯಾಟ್ ಪಿಚ್‌ಗಳ ಪರಿಣಾಮ ಇದೆಯೇ? ಆಟಗಾರರ ಆಯ್ಕೆ, ಐಪಿಎಲ್ ಪಿಚ್‌ಗಳು ಮತ್ತು ಬಿಸಿಸಿಐ ಮುಂದೆ ಇರುವ ಸವಾಲುಗಳ ವಿಶ್ಲೇಷಣೆ ಈ ಲೇಖನದಲ್ಲಿದೆ. ಟೀಮ್ ಇಂಡಿಯಾದ ಇತ್ತೀಚಿನ ಪ್ರದರ್ಶನ ಮಟ್ಟದ ಬಗೆಗಿನ ಗಂಭೀರ ಚರ್ಚೆ ಇಲ್ಲಿದೆ.
7 ನಿಮಿಷಗಳ ಕಾಲ ಕ್ಲಿನಿಕಲಿ ಡೆಡ್ ಆಗಿದ್ದ ನಾರ್ವೆ ಫುಟ್ಬಾಲ್ ತಂಡದ ಕೋಚ್ ಸ್ಟೇಲ್ ಸೋಲ್ಬಾಕೆನ್ ಹೇಗೆ ಸಾವಿನ ಅಂಚಿನಿಂದ ಮರಳಿ ಯಶಸ್ವಿ ಕೋಚ್ ಆದರು? ಅವರ ಪ್ರೇರಣಾದಾಯಕ ಕಥೆಯನ್ನು ಈ ಲೇಖನದಲ್ಲಿ ಓದಿ. ಆಟಗಾರನಾಗಿ ಸಾಧಿಸಲು ಸಾಧ್ಯವಾಗದ್ದನ್ನು ಕೋಚ್ ಆಗಿ ಸಾಧಿಸಿದ ಅಪೂರ್ವ ಸಾಧಕನ ಕಥೆಯಿದು.
ಫಿಫಾ ವಿಶ್ವಕಪ್ 2026ರಲ್ಲಿ ಕಿಲಿಯಾನ್ ಎಂಬಾಪ್ಪೆ 8 ಗೋಲುಗಳೊಂದಿಗೆ ಅಬ್ಬರಿಸುತ್ತಿದ್ದಾರೆ. ಗೋಲ್ಡನ್ ಬೂಟ್ ರೇಸ್‌ನಲ್ಲಿ ಮುನ್ನಡೆ ಸಾಧಿಸಿರುವ ಫ್ರಾನ್ಸ್ ಸ್ಟಾರ್, ಜಸ್ಟ್ ಫಾಂಟೈನ್ ಅವರ 13 ಗೋಲುಗಳ ವಿಶ್ವದಾಖಲೆಯನ್ನು ಮುರಿಯಲಿದ್ದಾರಾ? ಸಂಪೂರ್ಣ ವಿವರ ಈ ಲೇಖನದಲ್ಲಿದೆ.
2026ರ ಸಾಲಿನ ಫಿಫಾ ವಿಶ್ವಕಪ್‌ನಲ್ಲಿ ನಾರ್ವೆ ತಂಡದ ಸ್ಟಾರ್ ಸ್ಟ್ರೈಕರ್ ಎರ್ಲಿಂಗ್ ಹಾಲ್ಯಾಂಡ್ ಅಬ್ಬರಿಸಿದ್ದಾರೆ. ಐದು ಬಾರಿಯ ಚಾಂಪಿಯನ್ಸ್ ಬಲಿಷ್ಠ ಬ್ರೆಜಿಲ್ ವಿರುದ್ಧ 2 ಗೋಲು ಬಾರಿಸಿ ನಾರ್ವೆಯನ್ನು ಮೊದಲ ಬಾರಿ ಅಂತಿಮ 8ರ ಘಟ್ಟ ಅಂದರೆ ಕ್ವಾರ್ಟರ್ ಫೈನಲ್‌ಗೆ ಕೊಂಡೊಯ್ದ ಸ್ಟಾರ್ ಆಟಗಾರನ ದಾಖಲೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.
2026ರ ಸಾಲಿನ ಫಿಫಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಆಟಗಾರರು ವಯಾಗ್ರ ಬಳಸಿದ್ದಾರೆ ಎಂಬ ವದಂತಿ ಎಷ್ಟು ಸತ್ಯ? ವಿಶ್ವ ಡೋಪಿಂಗ್ ತಡೆ ಸಂಸ್ಥೆ (ವಾಡಾ) ನಿಯಮಗಳು ಏನು ಹೇಳುತ್ತವೆ? ವಯಾಗ್ರ ನಿಜಕ್ಕೂ ಆಟಗಾರ ಸಾಮರ್ಥ್ಯ ಹೆಚ್ಚಿಸುತ್ತಾ? ಇವೆಲ್ಲದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಫಿಫಾ ವಿಶ್ವಕಪ್‌ನಲ್ಲಿ 2003ರಿಂದ ಮುಂದುವರಿದಿರುವ ವಿಚಿತ್ರ ಪ್ಯಾಟರ್ನ್ ಮತ್ತೆ ಚರ್ಚೆಗೆ ಬಂದಿದೆ. ಜಪಾನ್ ತಂಡವನ್ನು ಸೋಲಿಸಿದ ತಂಡವನ್ನು ಮಣಿಸಿದವರೇ ಚಾಂಪಿಯನ್ ಆಗುತ್ತಾರೆ ಎಂಬ ಟ್ರೆಂಡ್ ಈ ಬಾರಿಯೂ ನಿಜವಾಗುತ್ತದೆಯೇ? ಇದರ ವಿಶ್ಲೇಷಣೆ ಈ ಲೇಖನದಲ್ಲಿ ಪಡೆಯಬಹುದಾಗಿದೆ.
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕ್ರಿಕೆಟ್ ಡೈರೆಕ್ಟರ್ ಮೊ ಬೋಬಾಟ್ ವಿಶೇಷ ಸಂದೇಶ ಒಂದನ್ನು ರವಾನಿಸಿದ್ದಾರೆ. ತಂಡಗಳು ಟ್ರೋಫಿ ಗೆಲ್ಲುತ್ತವೆ, ಆದರೆ, ದೈತ್ಯ ತಂಡಗಳು ಟ್ರೋಫಿಗಳನ್ನು ಗೆಲ್ಲುತ್ತಾ ಹೋಗುತ್ತವೆ ಅಂತಹ ಚಾಂಪಿಯನ್ ತಂಡ ಆರ್‌ಸಿಬಿ ಆಗಬೇಕೆಂದು ಬೋಬಾಟ್ ಕರೆ ನೀಡಿದ್ದಾರೆ.
ಇಷ್ಟು ವರ್ಷಗಳ ಕಾಲ ಮಲಗಿದ್ದ ಘಟ ಸರ್ಪ ಈಗ ಎದ್ದಾಗಿದೆ. 17 ವರ್ಷಗಳ ಕಾಲ ಟ್ರೋಫಿ 'ಗೆಲ್ಲದ ದೈತ್ಯ' ಎನಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್ ಎನಿಸಿಕೊಂಡಿದೆ. ಕಮ್ ಬ್ಯಾಕ್ ಅಂದರೆ ಇದು, ಇದು ಇಲ್ಲಿಗೆ ಮುಗಿಯುವಂಥದ್ದಲ್ಲ ಇಲ್ಲಿಂದ ಆರಂಭ ಎನ್ನುವ ದಿಟ್ಟ ಸಂದೇಶವನ್ನು ಆರ್‌ಸಿಬಿ ರವಾನಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿ ಟ್ರೋಫಿ ಗೆದ್ದಾಗ ಅದನ್ನು 'ಫ್ಲೂಕ್' ಎಂದು ಉಡಾಫೆ ಮಾಡಿದವರೂ ಇದ್ದಾರೆ. ಹೀಗೆ ಆರ್‌ಸಿಬಿ ಎಂದರೆ ಹೊಟ್ಟೆ ಉರಿದುಕೊಳ್ಳೋ ಅದೆಷ್ಟೂ ಹೇಟರ್ಸ್‌ಗೆ ಚಾಲೆಂಜರ್ಸ್ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆಲುವಿನೊಂದಿಗೆ ಖಡಕ್ ಉತ್ತರವನ್ನೇ ಕೊಟ್ಟಿದೆ. ಟೀಕಾಕಾರರ ಬಾಯಿಗೆ ಬೀಗ ಜಡಿದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿದೆ. ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ಬಳಿಕ ಬ್ಯಾಕ್ ಟು ಬ್ಯಾಕ್ ಐಪಿಎಲ್ ಟ್ರೋಫಿ ಗೆದ್ದ ತಂಡ ಎನಿಸಿಕೊಂಡಿರುವುದು, ಅಭಿಮಾನಿಗಳ ಸಂಭ್ರವನ್ನು ಮುಗಿಲು ಮುಟ್ಟುವಂತೆ ಮಾಡಿದೆ. ಅಂದಹಾಗೆ ಈ ಸಂಭ್ರಮದ ಸಮಯ ಸೂತಕದ ಮನೆಯಾಗದಂತೆ ನೋಡಿಕೊಳ್ಳುವುದು ಅಭಿಮಾನಿಗಳ ಮೇಲಿರುವ ಹೊಣೆಗಾರಿಕೆ ಕೂಡ ಅನ್ನೋದನ್ನ ಮರೆಯಬಾರದು.
ಆರ್‌ಸಿಬಿ ತಂಡದ ಕನಸಿಗೆ ಟ್ರೋಫಿಯ ರೂಪ ತಂದುಕೊಟ್ಟ ನಾಯಕ ರಜತ್ ಪಾಟಿದಾರ್. ನಾವು ಡಿಫೆಂಡಿಂಗ್ ಚಾಂಪಿಯನ್ಸ್ ಅಂತ ಆಡೋದಿಲ್ಲ, ನಾವು ಬಂದಿರುವುದು ಟ್ರೋಫಿಗಳನ್ನು ಗೆಲ್ಲಲು. ಅದಕ್ಕೆ ಬೇಕಾದ ಆಟವಾಡಲಿದ್ದೇವೆ ಎಂದೇ ಹೇಳಿಕೊಂಡು ಬಂದಿದ್ದ ರಜತ್, ಇದೀಗ ಕ್ವಾಲಿಫೈಯರ್ 1 ಪಂದ್ಯದಲ್ಲಿ ಅಬ್ಬರಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ.