ಯೋಗಬನ: ಆರೋಗ್ಯಕ್ಕೊಂದು ಹೊಸ ಆಯಾಮ
Yogabana: ವಿವೇಕಾನಂದ ಚಿಂತನೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ನಿಟ್ಟಿನಲ್ಲಿ ಡಿವೈನ್ ಪಾರ್ಕ್ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಯೋಗಬನ (Yogabana) ಎಂಬ ಅತಿವಿಶಿಷ್ಟ ಮಾದರಿಯ ಚಿಕಿತ್ಸಾ ಕೇಂದ್ರವನ್ನು ಮುನ್ನೆಲೆಗೆ ತಂದು ಯೋಗ, ಅಧ್ಯಾತ್ಮ, ಪ್ರಕೃತಿ, ಆಯುರ್ವೇದ ಚಿಕಿತ್ಸೆಯ ಜತೆಗೆ ವಿವೇಕಾನಂದರ ಚಿಂತನೆಗಳನ್ನು ಜೀವಂತವಾಗಿರಿಸುವ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ ಡಾ. ವಿವೇಕ್. ಇದು ಇರುವುದು ಉಡುಪಿ ಜಿಲ್ಲೆಯ ಕುಂದಾಪುರ ಬಳಿಯ ಸಾಲಿಗ್ರಾಮದಿಂದ ಕೇವಲ ಐದು ಕಿಮೀ ದೂರದಲ್ಲಿ.