Dasara 2025: ದಸರಾ: ಹತ್ತು ದಿನ ಯುವಪಡೆಗೆ ಸಾಂಸ್ಕೃತಿಕ ಹಬ್ಬ
ರಾಜ್ಯದ ೨೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ತಂಡಗಳು, ಪಿಯು, ಐಟಿಐ, ವೈದ್ಯಕೀಯ, ಇಂಜಿ ನಿಯರಿಂಗ್, ನಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ವಿಶ್ವವಿದ್ಯಾಲಯಗಳು ತಲಾ ಒಂದೊಂದು ತಂಡವನ್ನು ಆಯ್ಕೆ ಮಾಡಿ ಕಳಿಸಿಕೊಡಲಿವೆ.

-

ಕೆ.ಜೆ.ಲೋಕೇಶ್ ಬಾಬು, ಮೈಸೂರು
ರಾಜ್ಯದ 400 ರಿಂದ 450 ತಂಡಗಳು ನೋಂದಣಿ
ಮೈಸೂರು ಯುವ ಸಂಭ್ರಮಕ್ಕೆ ದಿನಗಣನೆ ಆರಂಭ
ಸಾಂಸ್ಕೃತಿಕ ನಗರಿ ಮೈಸೂರು ದಿನೇ ದಿನೇ ಕಳೆಗಟ್ಟತೊಡಗಿದೆ. ವರ್ಷವಿಡೀ ತನ್ನತ್ತ ಪ್ರವಾಸಿಗ ರನ್ನು ಕೈಬೀಸಿ ಕರೆಯುವ ನಗರದಲ್ಲೀಗ ದಸರೆಯ ಸಂಭ್ರಮ ಮೇಳೈಸಿದೆ. ನಾಡಹಬ್ಬ ದಸರಾ ಮಹೋತ್ಸವ ಸೆ.22ರಿಂದ ಆರಂಭವಾಗಲಿದೆಯಾದರೂ, ಅದಕ್ಕೆ ಮುನ್ನವೇ ಯುವ ಹೃದಯ ಗಳಲ್ಲಿ ಕಿಚ್ಚು ಹಚ್ಚುವ ಯುವ ಸಂಭ್ರಮದ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.
ಅದಕ್ಕಾಗಿ ಅಂದಾಜು 400 ರಿಂದ 450 ತಂಡಗಳು ಇನ್ನಿಲ್ಲದ ತಯಾರಿ ನಡೆಸಿವೆ. ಯುವ ಪಡೆಯನ್ನು ಕುಣಿಸುವ ಸಲುವಾಗಿಯೇ ಯುವ ಸಂಭ್ರಮದ ಆಯೋಜನಾ ಸಮಿತಿ ಕೂಡ ಹಗಲಿ ರುಳೆನ್ನದೆ ಪೂರ್ವ ತಯಾರಿ ಕೈಗೊಂಡಿದೆ. ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ: ಗೆಲುವು-ಸೋಲೆಂಬು ದಿರದ ಹತ್ತು ದಿನಗಳ ಬೃಹತ್ ಕಾರ್ಯಕ್ರಮದಲ್ಲಿ ದಕ್ಷಿಣದ ಚಾಮರಾಜನಗರದಿಂದ ಉತ್ತರದ ಬೀದರ್ ವರೆಗೆ ರಾಜ್ಯದ ಎಲ್ಲ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಅಣಿಗೊಂಡಿದೆ.
ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ.೧೦ರಿಂದ ೨೦ರವರೆಗೆ ನಡೆ ಯವ ಯುವ ಸಂಭ್ರಮಕ್ಕೆ ಈ ಬಾರಿ ರಾಜ್ಯದ ಮೂಲೆ ಮೂಲೆಯಲ್ಲಿನ ಕಾಲೇಜುಗಳ ತಂಡಗಳು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಿವೆ.
ಇದನ್ನೂ ಓದಿ: Mysuru Dasara 2025: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ಗೆ ಆಹ್ವಾನ; ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ
ರಾಜ್ಯದ ೨೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ತಂಡಗಳು, ಪಿಯು, ಐಟಿಐ, ವೈದ್ಯಕೀಯ, ಇಂಜಿ ನಿಯರಿಂಗ್, ನಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ವಿಶ್ವವಿದ್ಯಾಲಯಗಳು ತಲಾ ಒಂದೊಂದು ತಂಡವನ್ನು ಆಯ್ಕೆ ಮಾಡಿ ಕಳಿಸಿಕೊಡಲಿವೆ.
ಪ್ರತಿದಿನ ಸಂಜೆ : ನಿತ್ಯ ಸಂಜೆ ೬ ರಿಂದ ೧೦ ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ೪೦೦ಕ್ಕೂ ಹೆಚ್ಚು ಕಾಲೇಜುಗಳ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿದಿನ ತಲಾ ೪೦ರಿಂದ ೫೦ ತಂಡಗಳು ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡಗಳನ್ನು ಯುವ ದಸರಾಕ್ಕೆ ಆಯ್ಕೆ ಮಾಡಲು ಚಿಂತಿಸಲಾಗಿದೆ.
ವಿಷಯಾಧಾರಿತ ನೃತ್ಯ: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆ, ಕಾನೂನು ಸುವ್ಯವಸ್ಥೆ, ಸಂವಿಧಾನ ಮತ್ತು ಶಾಸನ, ಹಕ್ಕು ಮತ್ತು ಕರ್ತವ್ಯಗಳು, ಮಾದಕ ವ್ಯಸನ ಮುಕ್ತ ಸಮಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ದಸರಾ, ಡಾ.ಬಿ.ಆರ್. ಅಂಬೇಡ್ಕರ್, ಕರ್ನಾಟಕ ಜಾನಪದ ವೈವಿದ್ಯತೆ, ಪರಂಪರೆ, ಕನ್ನಡ ಸಾಹಿತ್ಯ-ಕವಿ, ಕರ್ನಾಟಕ ಸಾಹಿತ್ಯ ಪರಂಪರೆ, ದೇಶಭಕ್ತಿ, ಸ್ವಾತಂತ್ರ್ಯ ಚಳವಳಿ, ಹೋರಾಟಗಾರರ ಕೊಡುಗೆ ಸೇರಿ ಸಾಕಷ್ಟು ಸಾಮಾಜಿಕ ಸಂದೇಶ ಸಾರುವ ಗುರಿಯುವ ಸಂಭ್ರಮದ್ದಾಗಿದೆ.
ಗೋಲ್ಡ್ ಕಾರ್ಡ್, ಟಿಕೆಟ್ ಬಿಡುಗಡೆ
ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದಸರಾ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿದೆ ಎಂದು ಜಿಲ್ಲಾಽಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ. ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ಹಾಗೂ ಗೋಲ್ಡ್ ಕಾರ್ಡುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಟಿಕೆಟ್ ಮತ್ತು ಗೋಲ್ಡ್ ಕಾರ್ಡುಗಳನ್ನು ಮಾರಾಟಕ್ಕೆ ಬಿಡುಗಡೆಗೊಳಿಸಲಾಗಿದೆ. ಎಲ್ಲ ಕಾರ್ಯಕ್ರಮಗಳನ್ನು ವೀಕ್ಷಿಸಲು ಒಂದು ಕಾರ್ಡಿಗೆ ೬೫೦೦ ರೂ ದರ ನಿಗದಿ ಮಾಡಲಾಗಿದೆ. ಕೇವಲ ಜಂಬೂಸವಾರಿ ನೋಡುವ ಕಾರ್ಡಿಗೆ ೩೫೦೦ ರೂ, ಪಂಜಿನ ಕವಾಯಿತಿಗೆ ೧೫೦೦ ರೂ ದರ ನಿಗದಿ ಮಾಡಲಾಗಿದೆ. ನಾಡಹಬ್ಬ ಮೈಸೂರು ದಸರಾ ಅಽಕೃತ ಜಾಲತಾಣ ಲ್ಲಿ ಗೋಲ್ಡನ್ ಕಾರ್ಡ್, ಟಿಕ್ಕ್ ಖರೀದಿ ಲಭ್ಯವಿರುತ್ತದೆ.
*
ಯುವ ಸಂಭ್ರಮದ ಪೂರ್ವಭಾವಿ ಸಿದ್ದತೆ ಕೊನೆಯ ಹಂತದಲ್ಲಿದೆ ಸೆ.೧೦ರಿಂದ 20ರ ನಡೆಯುವ ಯುವ ಸಂಭ್ರಮಕ್ಕೆ ಈ ಬಾರಿ ಹೆಚ್ಚಿನ ತಂಡಗಳು ಆಗಮಿಸುತ್ತಿವೆ. ಅದಕ್ಕೆ ಅಗತ್ಯವಾದ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಮಿತಿಯ ಉಪವಿಶೇಷಾಧಿಕಾರಿ ಹಾಗೂ ಎಸ್‌ಪಿ ವಿಷ್ಣುವರ್ಧನ್ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸಭೆ ನಡೆಸಿ ಮಾಹಿತಿ ನೀಡಲಾಗಿದೆ.
-ಅಶ್ವತ್ಥ್ ಪ್ರಸಾದ್, ಸಹ ಕಾರ್ಯಾಧ್ಯಕ್ಷ, ಯುವ ಸಂಭ್ರಮ ಉಪ ಸಮಿತಿ