ನೆಪೋ ವಿರುದ್ಧ ಜೆನ್ ಝೀ ನೇಪಾಳ ಧಗ-ಧಗ
1996 ರಿಂದ 2010 ಕಾಲಾವಧಿಯಲ್ಲಿ ಜನಿಸಿದ ಜೆನ್‌ಝೀ. ಸದಾ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾದಲ್ಲೇ ಮುಳುಗಿದ ಯುವ ಸಮೂಹ. ಸೋಷಿಯಲ್ ಮೀಡಿಯಾ ನಿಷೇಧ ಜೀರ್ಣಿಸಿ ಕೊಳ್ಳಲು ಇವರಿಗೆ ಆಗಲಿಲ್ಲ. ಸರಕಾರದ ಭ್ರಷ್ಟಾಚಾರ, ಸೋಷಿಯಲ್ ಮೀಡಿಯಾ ನಿಷೇಧ ಸೇರಿ ಹಲವು ಕಾರಣ ವನ್ನಿಟ್ಟುಕೊಂಡು ಕೆ.ಪಿ.ಓಲಿ ನೇತೃತ್ವದ ಸರಕಾರವನ್ನು ಹಣಿಯಲು ಯುವ ಸಮೂಹ ಕಠ್ಮಂಡುವಿನಲ್ಲಿ ಕ್ಷಿಪ್ರ ಕ್ರಾಂತಿಯನ್ನೇ ಮಾಡಿ ಬಿಟ್ಟಿತು.

-

ಕರಿಯಪ್ಪ ಹೆಗ್ಗಡದಿನ್ನಿ
ನೆಪೋ ಕಿಡ್ಸ್ ಮೇಲಿನ ಆಕ್ರೋಶ, ಆಳುಗ ವರ್ಗದ ಭ್ರಷ್ಟಾಚಾರ ಜೆನ್‌ಝೀ ಸಮೂಹವನ್ನು ಕೆರಳಿ ಕೆಂಡವಾಗಿಸಿತು. 5 ದಿನಗಳ ಜೆನ್‌ಝೀ ಯುವ ಸಮೂಹದ ಆಕ್ರೋಶದ ಫಲ. ನೇಪಾಳ ಸರಕಾರ ಪತನಗೊಂಡಿತು. ಪ್ರಧಾನಿ ಕೆ.ಪಿ. ಶರ್ಮಾ ಓಲಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟರು. ಸದ್ಯ ಕಠ್ಮಂಡುವಿನಲ್ಲಿ ಪರಿಸ್ಥಿತಿ ತಹಬದಿಗೆ ಬಂದಿದ್ದು, ಮಧ್ಯಂತರ ಸರಕಾರ ರಚನೆ ಆಗಿದೆ. ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಯಾರಿವರು ನೆಪೋ ಕಿಡ್ಸ್? ಜೆನ್‌ಝೀ ಸಮೂಹ ಇವರ ಮೇಲೆ ಏಕೆ ಆಕ್ರೋಶ ಎನ್ನುವುದನ್ನು ಇಲ್ಲಿ ತಿಳಿಯೋಣ.
ಬಾಲಿವುಡ್ ನೆಪೋಟಿಸಂ ಆಗಾಗ ಚರ್ಚೆಯಾಗುತ್ತಿರುವ ವಿಷಯ. ಸಾಮಾನ್ಯರ ಮಕ್ಕಳಿಗಿಂತ ಚಿತ್ರೋದ್ಯಮದಲ್ಲಿ ನೆಲೆಯೂರಿದ ಹೈ ಪ್ರೋಫೈಲ್ ವ್ಯಕ್ತಿಗಳ ಸಂತತಿಯೇ ಹೆಚ್ಚು ಅವಕಾಶಗಳನ್ನು ಪಡೆಯುತ್ತಿದೆ ಎನ್ನುವುದು ಆರೋಪ. ನೆರೆಯ ನೇಪಾಳದಲ್ಲಿಯೂ ರಾಜಕಾರಣಿಗಳ ಮಕ್ಕಳು ಐಷರಾಮಿ ಜೀವನ, ಪೋಷಕರ ಕೃಪೆಯಿಂದ ಆಯಕಟ್ಟಿನ ಜಾಗದಲ್ಲಿ ಅಧಿಕಾರ ಮಾಡುತ್ತಿರು ವುದು. ಸಾಮಾನ್ಯರ ಮಕ್ಕಳಾದ ಜೆನ್‌ಝೀ ಸಮೂಹವನ್ನು ಕೆರಳಿಸಿತು. ಮೀತಿ ಮೀರಿದ ನಿರುದ್ಯೋಗ, ಏರುತ್ತಿರುವ ಹಣದುಬ್ಬರ, ತೀವ್ರ ಬಡತನ ತಾಂಡವ ಆಡುತ್ತಿರುವ ಹೊತ್ತಿನಲ್ಲಿ ರಾಜಕಾರಣಿ ಮಕ್ಕಳು ತಾವು ಅನುಭವಿಸುತ್ತಿರುವ ಐಷಾರಾಮಿ ಜೀವನವನ್ನು ಜಾಲತಾಣಗಳಲ್ಲಿ ಎಲ್ಲರ ಎದುರು ಪ್ರದರ್ಶಿಸಿರುವುದು ಜೆನ್‌ಝೀ ಕೆಂಗಣ್ಣಿಗೆ ಗುರಿ ಆಯ್ತು.
ಇನ್ನೊಂದು ಕಡೆ ಸರಕಾರದ ನಿಯಮಾವಳಿಗೆ ಒಳಪಟ್ಟಿಲ್ಲ ಎಂದು ನೇಪಾಳ ಸರಕಾರ ದಿಢೀರ್ ಆಗಿ ಫೇಸ್‌ಬುಕ್, ಇನ್ ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್, ಎಕ್ಸ್, ಟಿಕ್‌ಟಾಕ್ ಸೇರಿ 26 ಸೋಷಿಯಲ್ ಮೀಡಿಯಾಗಳನ್ನು ನಿಷೇಧ ಮಾಡಿತು.
1996 ರಿಂದ 2010 ಕಾಲಾವಧಿಯಲ್ಲಿ ಜನಿಸಿದ ಜೆನ್‌ಝೀ. ಸದಾ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾದಲ್ಲೇ ಮುಳುಗಿದ ಯುವ ಸಮೂಹ. ಸೋಷಿಯಲ್ ಮೀಡಿಯಾ ನಿಷೇಧ ಜೀರ್ಣಿಸಿ ಕೊಳ್ಳಲು ಇವರಿಗೆ ಆಗಲಿಲ್ಲ. ಸರಕಾರದ ಭ್ರಷ್ಟಾಚಾರ, ಸೋಷಿಯಲ್ ಮೀಡಿಯಾ ನಿಷೇಧ ಸೇರಿ ಹಲವು ಕಾರಣವನ್ನಿಟ್ಟುಕೊಂಡು ಕೆ.ಪಿ.ಓಲಿ ನೇತೃತ್ವದ ಸರಕಾರವನ್ನು ಹಣಿಯಲು ಯುವ ಸಮೂಹ ಕಠ್ಮಂಡುವಿನಲ್ಲಿ ಕ್ಷಿಪ್ರ ಕ್ರಾಂತಿಯನ್ನೇ ಮಾಡಿ ಬಿಟ್ಟಿತು.
ಇದನ್ನೂ ಓದಿ: Vishweshwar Bhat Column: ಟೇಕಾಫ್ ಪ್ರಕ್ರಿಯೆಗಳು
ಪ್ರತಿಭಟನೆಯಲ್ಲಿ 26 ಮಂದಿ ಸಾವನ್ನಪ್ಪಿದರು. ಉದ್ರಿಕ್ತರು ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ಬೆಂಕಿ ಇಟ್ಟ ಬೆನ್ನಲ್ಲೇ ಬಚಾವ್ ಆಗಲು ಪ್ರಧಾನಿ ಹುದ್ದೆಗೆ ಖಡ್ಗ ಪ್ರಸಾದ್ ಶರ್ಮಾ ಓಲಿ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದರು.
ಯಾರಿವರು ನೆಪೋ ಕಿಡ್ಸ್?
ನೆಪೋಟಿಸಂ ಎಂದರೆ, ಪ್ರಭಾವಿ ಸ್ಥಾನದಲ್ಲಿರುವ ಜನರು ತಮ್ಮ ಸ್ಥಾನಮಾನವನ್ನು ಬಳಸಿಕೊಂಡು ತಮ್ಮ ಸಂಬಂಧಿಕರಿಗೆ, ವಿಶೇಷವಾಗಿ ಮಕ್ಕಳಿಗೆ, ಅನಗತ್ಯ ಲಾಭಗಳು ಮತ್ತು ಅವಕಾಶಗಳನ್ನು ಒದಗಿಸುವುದು. ಈ ಪ್ರಕ್ರಿಯೆಯಿಂದಾಗಿ, ಅರ್ಹತೆ ಇಲ್ಲದಿದ್ದರೂ, ಸುಲಭವಾಗಿ ಉನ್ನತ ಸ್ಥಾನ ಗಳನ್ನು ಅಥವಾ ಅವಕಾಶಗಳನ್ನು ಪಡೆಯುತ್ತಾರೆ. ಚಲನಚಿತ್ರ ಮತ್ತು ಮನರಂಜನಾ ಉದ್ಯಮ, ಪ್ರಸಿದ್ಧ ನಟ-ನಟಿಯರು ಅಥವಾ ನಿರ್ದೇಶಕರ ಮಕ್ಕಳು.
ಇವರು ತಮ್ಮ ಪೋಷಕರ ಪ್ರಭಾವದಿಂದಾಗಿ ಸುಲಭವಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಾರೆ. ರಾಜಕೀಯ ಕ್ಷೇತ್ರದಲ್ಲೂ ನೆಪೋಟಿಸಂ ಬಲವಾಗಿ ಬೇರೂರಿದೆ. ಪ್ರಭಾವಿ ರಾಜಕಾರಣಿಗಳ ಮಕ್ಕಳು. ಇವರು ಯಾವುದೇ ಸಾರ್ವಜನಿಕ ಅನುಭವವಿಲ್ಲದಿದ್ದರೂ, ತಮ್ಮ ಕುಟುಂಬದ ಪ್ರಭಾವದಿಂದಾಗಿ ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ.
ಕಾರ್ಪೊರೇಟ್ ಮತ್ತು ಉದ್ಯಮ ಕ್ಷೇತ್ರದಲ್ಲೂ ದೊಡ್ಡ ಕಂಪನಿಗಳ ಮಾಲೀಕರ ಮಕ್ಕಳು. ತಮಗೆ ಯಾವುದೇ ಅನುಭವವಿಲ್ಲದಿದ್ದರೂ, ನೇರವಾಗಿ ಕಂಪನಿಯ ನಿರ್ವಾಹಕ ಸ್ಥಾನಗಳಿಗೆ ಅಥವಾ ಪ್ರಮುಖ ಹುದ್ದೆಗಳಿಗೆ ಬಂದು ಸೇರುತ್ತಾರೆ. ಹಾಗಾಗಿ, ನೆಪೋ ಕಿಡ್ಸ್ ಎಂಬ ಪದವನ್ನು ಹೆಚ್ಚಾಗಿ ನಕಾರಾತ್ಮಕ ಅರ್ಥದಲ್ಲಿ ಬಳಸಲಾಗುತ್ತದೆ. ಇದು ಅರ್ಹತೆ ಮತ್ತು ಕಷ್ಟಪಟ್ಟು ದುಡಿಯುವವರಿಗೆ ಸಿಗಬೇಕಾದ ಅವಕಾಶಗಳನ್ನು ಕಬಳಿಸುತ್ತದೆ ಎಂಬ ಭಾವನೆಯನ್ನು ಸೃಷ್ಟಿಸುತ್ತದೆ.
ನೇಪಾಳದ ಸಂದರ್ಭದಲ್ಲಿ, ರಾಜಕೀಯ ಮತ್ತು ಆರ್ಥಿಕ ಅಧಿಕಾರವು ಕೆಲವೇ ಕೆಲವು ಕುಟುಂಬಗಳ ಕೈಯಲ್ಲಿ ಕೇಂದ್ರೀಕೃತವಾಗಿರುವುದನ್ನು ವಿರೋಧಿಸಲು ನೇಪೋಟಿಸಂ ಎಂಬ ಪದ ಬಳಸಲಾಗು ತ್ತದೆ.
ನೇಪಾಳದ ರಾಜಕಾರಣ
17ನೇ ಶತಮಾನದಿಂದಲೂ 2008ರ ವರೆಗೆ ನೇಪಾಳ ರಾಜಪ್ರಭುತ್ವ ಆಳ್ವಿಕೆಗೆ ಒಳಪಟ್ಟಿತ್ತು. 1961 ರಲ್ಲಿ ರಾಜನಾಗಿದ್ದ ಮಹೇಂದ್ರ ಸಿಂಗ್ ಕಾಲಾವಧಿಯಲ್ಲಿ ನೇಪಾಳದಲ್ಲಿ ಮೊದಲ ಬಾರಿ ಪ್ರಜಾ ಪ್ರಭುತ್ವದ ಕೂಗು ಮೊಳಗಿತು. ಪ್ರಜಾಪ್ರಭುತ್ವ ರಾಷ್ಟ್ರ ಘೋಷಣೆಗಾಗಿ 1961 ರಿಂದ 2008ರ ವರೆಗೆ ಸಾಕಷ್ಟು ನಾಗರಿಕ ಹೋರಾಟಗಳು ಆಗಿವೆ. 2006ರಲ್ಲಿ ತೀವ್ರಗತಿಯಲ್ಲಿ ನಡೆದ ನಾಗರಿಕ ಹೋರಾ ಟದ ಫಲವಾಗಿ 2008ರಲ್ಲಿ ರಾಜಪ್ರಭುತ್ವ ಕೊನೆಗೊಂಡಿತು. ಕೊನೆಯ ರಾಜ ಜ್ಞಾನೇಂದ್ರ ನೇಪಾಳ ವನ್ನು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಬಿಟ್ಟುಕೊಟ್ಟರು.
2015ರಲ್ಲಿ ನೇಪಾಳ ಹೊಸ ಸಂವಿಧಾನ ಅಂಗೀಕರಿಸಿತು. ಕೆ.ಪಿ.ಶರ್ಮಾ ಓಲಿ ಅಕ್ಟೋಬರ್ 2015ರಲ್ಲಿ ಮೊದಲ ಬಾರಿಗೆ ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಪುನಃ 2018 ಮತ್ತು 2021ರಲ್ಲಿ ಪ್ರಧಾನಿಯಾದರು. 2024ರಲ್ಲಿ ನಾಲ್ಕನೇ ಬಾರಿಗೆ ಓಲಿ ಮತ್ತೆ ಪ್ರಧಾನಿಯಾಗಿ ಆಯ್ಕೆ ಯಾದರು.
2015ರಿಂದ ನೆಪೋ ಕಿಡ್ಸ್ ಹಾವಳಿ ಹಾಗೂ ಓಲಿಯ ಸರಕಾರದ ತೀವ್ರ ಭಷ್ಟಾಚಾರದಿಂದ ಬೇಸತ್ತು ಜೆನ್‌ಝೀ ಯುವ ಸಮೂಹ ದಂಗೆ ಎದ್ದಿತು. ಕಠ್ಮಂಡುವಿನ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿ, ಓಲಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಸದ್ಯ ಮಧ್ಯಂತರ ಸರಕಾರ ರಚನೆ ಆಗಿದೆ.
ಸುಡಾನ್ ಗುರುಂಗ್
ಸಂದೇಶ ಪ್ರತಿಭಟನೆಗೆ ಕಿಚ್ಚು
ೇಪಾಳಿ ಜೆನ್‌ಝೀ ಯುವ ಸಮೂಹದ ಪ್ರತಿಭಟನೆಯ ಹಿಂದೆಯಿದ್ದ ವ್ಯಕ್ತಿ 36 ವರ್ಷದ ಸುಡಾನ್ ಗುರುಂಗ್, ನೇಪಾಳದ ಹಾಮಿ ನೇಪಾಳ ಎಂಬ ಎನ್‌ಜಿಒ ಹೊಂದಿರುವ ಈತ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವಂತೆ, ಶಾಂತಿಯುತ ರ‍್ಯಾಲಿ ನಡೆಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಿದ್ದ. ಇನ್‌ಸ್ಟಾಗ್ರಾಂ ನಿರ್ಬಂಧದಕ್ಕೂ ಮುನ್ನ ಪ್ರತಿಭಟನೆಯ ಮಾರ್ಗ ಮತ್ತು ಸುರಕ್ಷತಾ ಸೂಚನೆಗಳನ್ನು ಪೋಸ್ಟ್ ಮಾಡಿದ್ದ. ಈತನ ಕರೆ ಮೇರೆಗೆ ಪ್ರತಿಭಟನೆ ನಡೆಸಿದ್ದರು. ಗುರುಂಗ್ ಸಂದೇಶವೇ ನೇಪಾಳ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಲು ಕಾರಣ.
ಜಾಗತಿಕ ಹವಾಮಾನ ಮುಷ್ಕರ
೨೦೧೮-೨೦೧೯
ಗ್ರೇಟಾ ಥನ್‌ಬರ್ಗ್‌ನಿಂದ ಪ್ರಾರಂಭವಾದ ಜಾಗತಿಕ ಹವಾಮಾನ ವೈಪರೀತ್ಯದ ಕುರಿತ ಪ್ರತಿಭಟನೆ. ೧೬೩ ದೇಶಗಳಿಗೆ ವ್ಯಾಪಿಸಿತು. ಲಕ್ಷಾಂತರ ಯುವಜನರು ಹೋರಾಟಕ್ಕೆ ಬೆಂಬಲಿಸಿದರು. ಹಸಿರು ಮನೆ ಅನಿಲದ ಪರಿಣಾಮ, ಓಜೋನ್ ಪದರ ಕ್ಷೀಣತೆ ಮೇಲೆ ಆಯಾ ದೇಶಗಳ ಸರಕಾರಗಳು ತುರ್ತು ಕ್ರಮ ಕೈಗೊಳ್ಳಲು ಸಹಕಾರಿ ಆಯಿತು.
ಬ್ಲ್ಯಾಕ್ ಲೈವ್ಸ್ ಮ್ಯಾಟರ್
೨೦೨೦ ಅಮೆರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ ಯುವ ಜನಾಂಗ ನ್ಯಾಯ ಮತ್ತು ವ್ಯವಸ್ಥಿತ ಪೊಲೀಸ್ ಹಿಂಸೆಯ ಅಂತ್ಯಕ್ಕೆ ಆಗ್ರಹಿಸಿತು. ಜನಾಂಗೀಯ ಅಸಮಾನತೆ ವಿರೋಧಿಸಿ ಪ್ರತಿಭಟನೆ ವಿಶ್ವದಲ್ಲೇ ಗಮನ ಸೆಳೆಯಿತು.
ಹಾಂಗ್ ಕಾಂಗ್
೨೦೧೯-೨೦೨೦ ವಿದ್ಯಾರ್ಥಿಗಳು ಮತ್ತು ಯುವಜನರು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳನ್ನು ರಕ್ಷಿಸಲು ಮತ್ತು ಹಾಂಗ್ ಕಾಂಗ್‌ನ ಸ್ವಾಯತ್ತತೆಗೆ ಧಕ್ಕೆ ತರುವಂತಹ ಗಡಿಪಾರು ಕಾನೂನು ಗಳನ್ನು ವಿರೋಧಿಸಿ ಬೃಹತ್ ಹೋರಾಟ ನಡೆಸಿದರು. ಈ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಡಿಪಾರು ಕಾನೂನುಗಳ ವಿಮರ್ಶೆಗೆ ಕಾರಣವಾಯಿತು.
ಥೈಲ್ಯಾಂಡ್
೨೦೨೦-೨೦೨೨ ಥೈಲ್ಯಾಂಡ್‌ನಲ್ಲಿ ರಾಜಪ್ರಭುತ್ವ ಪ್ರಶ್ನಿಸಿ ಸಾವಿರಾರು ವಿದ್ಯಾರ್ಥಿಗಳು ತೀವ್ರ ಹೋರಾಟ ನಡೆಸಿದರು. ಸಾಂವಿಧಾನಿಕ ಸುಧಾರಣೆಗಳಿಗಾಗಿ ಒತ್ತಾಯಿಸಿದರು.
ಫ್ರೆಂಚ್ ವಿದ್ಯಾರ್ಥಿ ಕಿಡಿ
1968 ಫ್ರೆಂಚ್ ವಿದ್ಯಾರ್ಥಿಗಳು ನಿರಂಕುಶ ಪ್ರಭುತ್ವ, ಬಂಡವಾಳಶಾಹಿ ಮತ್ತು ಸಾಂಪ್ರದಾಯಿಕ ವ್ಯವಸ್ಥೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದರು. ಇದು ಫ್ರಾನ್ಸ್‌ನಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆ ತರಲು ಕಾರಣವಾಯಿತು.
ನೇಪಾಳ ಆಡಳಿತ
1951ಕ್ಕಿಂತ ಮೊದಲು, ನೇಪಾಳವನ್ನು ವಿವಿಧ ರಾಜವಂಶಗಳ ರಾಜರು ಆಳುತ್ತಿದ್ದರು. ಅದರಲ್ಲಿ ರಾಜರು ಪ್ರಧಾನಮಂತ್ರಿಯನ್ನು ಅನುವಂಶಿಕವಾಗಿ ಪಡೆದ ವ್ಯವಸ್ಥೆಯ ಮೂಲಕ ಆಯ್ಕೆ ಮಾಡುತ್ತಿದ್ದರು. 1951ರಲ್ಲಿ ಪ್ರಜಾಪ್ರಭುತ್ವ ಪರ ಚಳವಳಿಗಳಿಂದ ರಾಜರನ್ನು ಪದಚ್ಯುತಿಗೊಳಿಸ ಲಾಯಿತು. ಸಂಸದೀಯ ಪ್ರಜಾಪ್ರಭುತ್ವವು ಸ್ಥಾಪಿಸಲ್ಪಟ್ಟಿತು.
1961ರಲ್ಲಿ ರಾಜಮಹೇಂದ್ರನು ರಾಜಕೀಯ ಪಕ್ಷಗಳನ್ನು ನಿಷೇಧಿಸಿ ಪಂಚಾಯತ್ ಎಂದು ಕರೆಯ ಲ್ಪಡುವ ತನ್ನ ಅಧಿಕಾರವನ್ನು ಬಲಪಡಿಸುವ ಕೇಂದ್ರೀಕೃತ ಸರಕಾರಿ ವ್ಯವಸ್ಥೆಗೆ ಮರಳು ವಂತೆ ಹೇರಿದನು.
೧೯೯೦ರಲ್ಲಿ ಕೆಲವು ಪಕ್ಷಗಳು ಬಹು-ಪಕ್ಷ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಅಭಿಯಾನ ವನ್ನು ಪ್ರಾರಂಭಿಸಿ ಪ್ರತಿಭಟನೆಗಳನ್ನು ನಡೆಸಿದಾಗ ವ್ಯವಸ್ಥೆಯ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದರು. ಆಗಿನ ರಾಜ ಬೀರೇಂದ್ರ ಅವರನ್ನು ರಾಜಕೀಯ ಪಕ್ಷಗಳ ಮೇಲಿನ ನಿಷೇಧವನ್ನು ತೆಗೆದು ಹಾಕಲು ಒತ್ತಾಯಿಸಿತು. ಪಂಚಾಯತ್ ವ್ಯವಸ್ಥೆಯನ್ನು ಕೊನೆಗೊಳಿಸಿತು.
೧೯೯೬ ನೇಪಾಳದ ಎಡಪಂಥೀಯ ಮಾವೋವಾದಿಗಳು ರಾಜಮನೆತನದ ಸಂಸದೀಯ ವ್ಯವಸ್ಥೆ ಯನ್ನು ಜನತಾ ಗಣರಾಜ್ಯದೊಂದಿಗೆ ಬದಲಾಯಿಸಲು ಹಿಂಸಾತ್ಮಕ ಪ್ರಯತ್ನವನ್ನು ಪ್ರಾರಂಭಿಸಿ ದರು. ಇದು ದಶಕದ ಕಾಲದ ಅಂತರ್ಯುದ್ಧಕ್ಕೆ ಕಾರಣವಾಯಿತು.
೨೦೦೬-೨೦೧೫
೨೦೦೬ರಲ್ಲಿ ನಾಗರಿಕರು ರಾಜಪ್ರಭುತ್ವದ ವಿರುದ್ಧ ಪ್ರತಿಭಟಿಸಿದರು. ೨೦೦೮ರಲ್ಲಿ ನೇಪಾಳ ದೇಶ ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ ದೇಶವಾಯಿತು. ೨೦೧೫ರಲ್ಲಿ ನೇಪಾಳ ಹೊಸ ಸಂವಿಧಾನ ಅಂಗೀಕರಿಸಿತು.