Actor Darshan: ಥೈಲ್ಯಾಂಡ್‌ನಲ್ಲಿ ದರ್ಶನ್ ಜಾಲಿ ಪಾರ್ಟಿ, ಯಾಚ್ ರೈಡ್, ವಿಡಿಯೋ ಇಲ್ಲಿದೆ
Actor Darshan: ಬೆನ್ನು ನೋವಿಗೆ ಸರ್ಜರಿ ಮಾಡಿಸಬೇಕು ಎಂಬ ಕಾರಣ ನೀಡಿ ಕರ್ನಾಟಕ ಹೈಕೋರ್ಟ್‌ನಿಂದ ದರ್ಶನ್ ಜಾಮೀನು ಪಡೆದಿದ್ದರು. ನಂತರ ಡೆವಿಲ್ ಚಿತ್ರೀಕರಣಕ್ಕಾಗಿ, ವಿದೇಶಕ್ಕೆ ಹೋಗಲು ಕೋರ್ಟ್‌ನಿಂದ ವಿನಾಯಿತಿ ಪಡೆದುಕೊಂಡಿದ್ದರು. ಸ್ವಿಡ್ಜರ್‌ಲ್ಯಾಂಡ್‌ಗೆ ಚಿತ್ರೀಕರಣಕ್ಕಾಗಿ ಹೋಗಬೇಕಿತ್ತು. ಆದರೆ ಸ್ವಿಸ್ ಸರಕಾರ ಕ್ರಿಮಿನಲ್ ಹಿನ್ನೆಲೆಯ ಕಾರಣ ದರ್ಶನ್‌ಗೆ ವೀಸಾ ನಿರಾಕರಿಸಿತ್ತು.


ಬೆಂಗಳೂರು: ಒಂದು ಕಡೆ ನಟ ದರ್ಶನ್‌ಗೆ (Actor Darshan) ದೊರೆತಿರುವ ಜಾಮೀನು (Bali) ರದ್ದು ಮಾಡಿಸಲು ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ (Supreme court) ಒದ್ದಾಡುತ್ತಿದ್ದರೆ, ಇನ್ನೊಂದು ಕಡೆ ದರ್ಶನ್ ಥೈಲ್ಯಾಂಡ್‌ನಲ್ಲಿ (Thailand) ಬಿಂದಾಸ್ ಆಗಿ ತಮ್ಮ ಚಿತ್ರದ ಚಿತ್ರೀಕರಣ, ಪಾರ್ಟಿ ಹಾಗೂ ಯಾಚ್ ರೈಡ್‌ಗಳಲ್ಲಿ ಮಗ್ನರಾಗಿರುವುದು ಕಂಡುಬಂದಿದೆ. ಈ ಕುರಿತ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ.
ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಥೈಲ್ಯಾಂಡ್ ಸಮುದ್ರದಲ್ಲಿ ದರ್ಶನ್ ಯಾಚ್‌ನಲ್ಲಿ ಜಾಲಿ ರೈಡ್ ನಡೆಸುತ್ತಿರುವುದು ಕಂಡುಬಂದಿದೆ. ಯಾಚ್‌ನಲ್ಲಿ ದಾಸ ಬಣ್ಣಬಣ್ಣದ ಅಂಗಿ ಧರಿಸಿ ಡ್ರೈವ್ ಮಾಡುತ್ತ ದಶಾವತಾರ ತೋರಿಸಿದ್ದಾರೆ. ಕಾರು, ಬೈಕ್ ಕ್ರೇಜ್ ಹೊಂದಿರುವ ಜತೆಗೆ ಯಾಚ್‌ನಲ್ಲೂ ದರ್ಶನ್ ಡ್ರೈವ್ ಮಾಡಿದ್ದಾರೆ. ಈ ಯಾಚ್ ಚಿತ್ರೀಕರಣದ ಭಾಗ ಎಂದು ಹೇಳಲಾಗಿದೆ.
ಇನ್ನೊಂದು ವಿಡಿಯೋದಲ್ಲಿ ಥೈಲ್ಯಾಂಡ್‌ನ ದುಬಾರಿ ರೆಸ್ಟುರಾದಲ್ಲಿ ದರ್ಶನ್ ಬಿಂದಾಸ್ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಡೆವಿಲ್ ಸಿನಿಮಾದ ಶೂಟಿಂಗ್‌ಗಾಗಿ ಥೈಲ್ಯಾಂಡ್‌ಗೆ ಹೋಗಿರುವ ದರ್ಶನ್, ಚಿತ್ರೀಕರಣ ಮುಗಿಸಿ ಗೆಳೆಯರ ಜೊತೆಗೆ ಪಾರ್ಟಿ ಮಾಡಿದ್ದಾರೆ. ಡೆವಿಲ್ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿರುವ ದರ್ಶನ್, 10 ದಿನಗಳ ಕಾಲ ಥೈಲ್ಯಾಂಡ್‌ನಲ್ಲೇ ವಾಸ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ಬೆನ್ನು ನೋವಿಗೆ ಸರ್ಜರಿ ಮಾಡಿಸಬೇಕು ಎಂಬ ಕಾರಣ ನೀಡಿ ಕರ್ನಾಟಕ ಹೈಕೋರ್ಟ್‌ನಿಂದ ದರ್ಶನ್ ಜಾಮೀನು ಪಡೆದಿದ್ದರು. ನಂತರ ಡೆವಿಲ್ ಚಿತ್ರೀಕರಣಕ್ಕಾಗಿ, ವಿದೇಶಕ್ಕೆ ಹೋಗಲು ಕೋರ್ಟ್‌ನಿಂದ ವಿನಾಯಿತಿ ಪಡೆದುಕೊಂಡಿದ್ದರು. ಸ್ವಿಡ್ಜರ್‌ಲ್ಯಾಂಡ್‌ಗೆ ಚಿತ್ರೀಕರಣಕ್ಕಾಗಿ ಹೋಗಬೇಕಿತ್ತು. ಆದರೆ ಸ್ವಿಸ್ ಸರಕಾರ ಕ್ರಿಮಿನಲ್ ಹಿನ್ನೆಲೆಯ ಕಾರಣ ದರ್ಶನ್‌ಗೆ ವೀಸಾ ನಿರಾಕರಿಸಿತ್ತು. ಹೀಗಾಗಿ ಥೈಲ್ಯಾಂಡ್‌ಗೆ ತೆರಳಿದ್ದರು.
ಈ ನಡುವೆ, ದರ್ಶನ್‌ಗೆ ದೊರೆತಿರುವ ಬೇಲ್ ರದ್ದುಪಡಿಸಲು ಕೋರಿ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಗುರುವಾರ ಇದು ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಜಾಮೀನು ಕುರಿತು ಅಸಮಾಧಾನವನ್ನು ನ್ಯಾಯಪೀಠ ಪ್ರದರ್ಶಿಸಿತ್ತು. ಜೊತೆಗೆ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿತ್ತು.
ಇದನ್ನೂ ಓದಿ: Actor Darshan: ದರ್ಶನ್‌ಗೆ ಜಾಮೀನು ನೀಡುವಾಗ ಕರ್ನಾಟಕ ಹೈಕೋರ್ಟ್ ವಿವೇಚನೆ ಬಳಸಿಲ್ಲ; ಸುಪ್ರೀಂ ಕೋರ್ಟ್ ಆಕ್ಷೇಪ