Director SS David: ಕನ್ನಡದ ಖ್ಯಾತ ನಿರ್ದೇಶಕ ಎಸ್.ಎಸ್.ಡೇವಿಡ್ ಹೃದಯಾಘಾತದಿಂದ ನಿಧನ
Director SS David: ನಿರ್ದೇಶಕ ಡೇವಿಡ್ ಅವರು ಭಾನುವಾರ ಮೆಡಿಕಲ್ ಶಾಪ್‌ಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
-
Prabhakara R
Sep 1, 2025 10:22 PM
ಬೆಂಗಳೂರು. ಸೆ.1: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ, ನಟ ಎಸ್.ಎಸ್. ಡೇವಿಡ್ (Director SS David) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಡೇವಿಡ್ ಅವರು ಭಾನುವಾರ ಮೆಡಿಕಲ್ ಶಾಪ್‌ಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ನಿರ್ದೇಶನ, ಚಿತ್ರಕಥೆ ಹಾಗೂ ತಮ ವಿಶಿಷ್ಟ ಮ್ಯಾನರಿಸಂ ಸಂಭಾಷಣೆಯಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಗಳಿಸಿದ್ದ ಡೇವಿಡ್ ಅವರು ಸಾಯಿಕುಮಾರ್ ನಟನೆಯ ಪೊಲೀಸ್ ಸ್ಟೋರಿ, ಅಗ್ನಿ ಐಪಿಎಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮಂಡ್ಯ, ಕಿಚ್ಚ ಸುದೀಪ್ ನಟನೆಯ ತಿರುಪತಿ ಮುಂತಾದ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದರಲ್ಲದೆ, ಗಡಿಪಾರು, ಪೊಲೀಸ್ ಡಾಗ್ ಸೇರಿದಂತೆ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.
ಎಸ್.ಎಸ್.ಡೇವಿಡ್ ಅವರ ನಿಧನಕ್ಕೆ ಸಾಹಸ ನಿರ್ದೇಶಕ ಥ್ರಿಲ್ಲರ್‌ಮಂಜು ಸೇರಿ ಹಲವಾರು ಕಲಾವಿದರು, ಸಾಹಸ ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.