Rao Bahadur Teaser: "ರಾವ್ ಬಹದ್ದೂರ್" ಚಿತ್ರದ ಟೀಸರ್ ರಿಲೀಸ್ ಮಾಡಿದ ರಾಜಮೌಳಿ
ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ರಾವ್ ಬಹದ್ದೂರ್ ಚಿತ್ರದ ಬಹು ನಿರೀಕ್ಷಿತ ಟೀಸರ್‌ನ್ನು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಮಹೇಶ್ ಬಾಬು ಅವರ ಜಿಎಂಬಿ ಎಂಟರ್‌ಟೇನ್‌ಮೆಂಟ್ ಸಂಸ್ಥೆಯ ಮೂಲಕ, ಎ ಎಸ್ ಮೂವೀಸ್, ಶ್ರೀಚಕ್ರಾಸ್ ಎಂಟರ್‌ಟೇನ್‌ಮೆಂಟ್ಸ್ ಹಾಗೂ ಮಹಾಯಾನ ಮೋಷನ್ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ಚಿತ್ರ ಮೂಡಿ ಬಂದಿದೆ.

Rao Bahadur Teaser

ನವದೆಹಲಿ: ದಿಗ್ಗಜ ನಿರ್ದೇಶಕ ಎಸ್. ಎಸ್. ರಾಜಮೌಳಿ ಅವರು ಬಹುನಿರೀಕ್ಷಿತ 'ರಾವ್ ಬಹದ್ದೂರ್' (Rao Bahadur) ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದು ಸಿನಿಮಾದ ನಿರೀಕ್ಷೆ ಮತ್ತಷ್ಟು ಹೆಚ್ಚು ಮಾಡಿದೆ. ಇದು ಒಂದು ಥ್ರಿಲ್ಲರ್ ಮತ್ತು ಮನೋವೈಜ್ಞಾನಿಕ ಕಥೆಯಾಗಿದೆ. ಈ ಚಿತ್ರವನ್ನು 'ಉಮಾ ಮಹೇಶ್ವರ ಉಗ್ರ ರೂಪಸ್ಯ' ಎಂಬ ಉತ್ತಮ ಚಿತ್ರವನ್ನು ನೀಡಿದ ವೆಂಕಟೇಶ್ ಮಹಾ ಅವರು ನಿರ್ದೇಶಿಸುತ್ತಿದ್ದಾರೆ ಮತ್ತು ಅದೇ ಚಿತ್ರದ ನಾಯಕ ಸತ್ಯದೇವ್ ಇದರಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ.
ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ರಾವ್ ಬಹದ್ದೂರ್ ಚಿತ್ರದ ಬಹುನಿರೀಕ್ಷಿತ ಟೀಸರ್‌ನ್ನು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಮಹೇಶ್ ಬಾಬು ಅವರ ಜಿಎಂಬಿ ಎಂಟರ್‌ಟೇನ್‌ಮೆಂಟ್ ಸಂಸ್ಥೆಯ ಮೂಲಕ, ಎ ಎಸ್ ಮೂವೀಸ್, ಶ್ರೀಚಕ್ರಾಸ್ ಎಂಟರ್‌ಟೇನ್‌ಮೆಂಟ್ಸ್ ಹಾಗೂ ಮಹಾಯಾನ ಮೋಷನ್ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ಚಿತ್ರ ಮೂಡಿಬಂದಿದೆ.
Happy to see Satyadev evolving and portraying larger-than-life characters.
— rajamouli ss (@ssrajamouli) August 18, 2025
My best wishes to him and Maha for #RaoBahadur. Can't wait to see what you guys are up to…@ActorSatyaDev @mahaisnotanoun pic.twitter.com/hNAdkIJIAk
"ಇದು ಟೀಸರ್ ಅಲ್ಲ” ಎಂಬ ವಿಶಿಷ್ಟ ಶೀರ್ಷಿಕೆಯಲ್ಲಿ ಬಿಡುಗಡೆಯಾದ ಈ ದೃಶ್ಯ ಪ್ರೇಕ್ಷಕರ ಗಮನ ಸೆಳೆದಿದೆ. ಟೀಸರ್‌ನ ಮೊದಲ ಫ್ರೇಮ್‌ನಿಂದಲೇ ಸೈಕಾಲಜಿಕಲ್ ಡ್ರಾಮಾ, ರಿಯಾಲಿಸಮ್ ಹಾಗೂ ಇಮೋಷನಲ್ ದೃಶ್ಯ ಹೊಂದಿರುವ ಈ ಚಿತ್ರ ಸತ್ಯದೇವ್ ಅವರ ಅದ್ಭುತ ಅಭಿನಯ ಮುಖ್ಯ ಆಕರ್ಷಣೆಯಾಗಿದೆ. 'ಬಾಹುಬಲಿ' ಹಾಗೂ ‘ಆರ್‌ಆರ್‌ಆರ್’ ಚಿತ್ರದ ಮೂಲಕ ಭಾರತೀಯ ಸಿನೆ ಮಾದ ಖ್ಯಾತಿ ಹೆಚ್ಚಿಸಿದ ರಾಜಮೌಳಿ ಅವರೇ ಈ ಟೀಸರ್ ಬಿಡುಗಡೆ ಮಾಡಿರುವುದು ಚಿತ್ರದ ಮೇಲೆ ಇರುವ ನಿರೀಕ್ಷೆ ಇನ್ನಷ್ಟು ಸಾಕ್ಷಿಯಾಗಿದೆ.
"ಅನುಮಾನವು ಒಂದು ದೆವ್ವ'' (Doubt is a Demon) ಎಂಬ ಟ್ಯಾಗ್‌ಲೈನ್ ಚಿತ್ರದ ಕಥಾವಸ್ತುವಿನ ಒಂದು ಪ್ರಮುಖ ಅಂಶವನ್ನು ಸೂಚಿಸುತ್ತದೆ. ಟೀಸರ್‌ನಲ್ಲಿ ಸತ್ಯದೇವ್ ಅವರು 'ನನ್ನನ್ನು ಒಂದು ದೆವ್ವ ಆವರಿಸಿದೆ' ಎಂದು ಹೇಳುತ್ತಾರೆ, ಮತ್ತು ಆ ದೆವ್ವವೇ 'ಅನುಮಾನ' ಎಂದು ನಂತರ ತಿಳಿದು ಬರುತ್ತದೆ. ರಾವ್ ಬಹದ್ದೂರ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಸ ರೀತಿಯ ಸಿನೆಮಾ ಅನುಭವ ವನ್ನು ನೀಡಲಿದೆ ಎಂಬ ನಿರೀಕ್ಷೆ ಮೂಡಿಸಿದೆ.
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಈ ಟೀಸರ್ ನೋಡಿ ಬಹಳಷ್ಟು ಮೆಚ್ಚಿ ಕೊಂಡಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅವರು, "ಸತ್ಯದೇವ್ ಇಂತಹ ಪಾತ್ರ ಗಳನ್ನು ಮಾಡುತ್ತಿರುವುದನ್ನು ನೋಡಿ ಸಂತೋಷವಾಯಿತು. ಈ ತಂಡಕ್ಕೆ ನನ್ನ ಶುಭಾಶ ಯಗಳು. ಈ ಚಿತ್ರ ನೋಡಲು ಕಾತುರನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವು 2026 ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.