ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

EPFO: ಗುಡ್‌ನ್ಯೂಸ್‌! ಇನ್ಮುಂದೆ ಈ ಕಾರಣಕ್ಕೆ ಪಿಎಫ್‌ ಕ್ಲೈಂ ರಿಜೆಕ್ಟ್‌ ಮಾಡುವಂತಿಲ್ಲ

ಇನ್ನು ಮುಂದೆ ಸೇವಾ ಅವಧಿಯಲ್ಲಿ ಓವರ್ ಲ್ಯಾಪ್ ಆಗಿದ್ದರೆ ನೌಕರರ ಪಿಎಫ್ ಕ್ಲೈಂ ಅನ್ನು ತಿರಸ್ಕರಿಸಲಾಗುವುದಿಲ್ಲ. ಇದರ ಹಿಂದಿರುವ ನೈಜ್ಯ ಕಾರಣಗಳನ್ನು ಪರಿಗಣಿಸಬೇಕು. ನೌಕರರು ಉದ್ಯೋಗಗಳನ್ನು ಬದಲಾಯಿಸಿದಾಗ ಪಿಎಫ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಮತ್ತು ನಿರಾಕರಣೆಗಳನ್ನು ತಡೆಯಬೇಕಿದೆ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಹೊರಡಿಸಿರುವ ಸುತ್ತೋಲೆಯಲ್ಲಿ ಆದೇಶಿಸಲಾಗಿದೆ.

ಇನ್ಮುಂದೆ ಈ ಕಾರಣಕ್ಕೆ ಪಿಎಫ್‌ ಕ್ಲೈಂ ರಿಜೆಕ್ಟ್‌ ಮಾಡುವಂತಿಲ್ಲ!

ನವದೆಹಲಿ: ಇನ್ನು ಮುಂದೆ ಸೇವಾ ಅವಧಿಯಲ್ಲಿ ಓವರ್ ಲ್ಯಾಪ್ ಆಗಿದ್ದರೆ ನೌಕರರ ಪಿಎಫ್ ಕ್ಲೈಂ ಅನ್ನು ತಿರಸ್ಕರಿಸಲಾಗುವುದಿಲ್ಲ. ಪಿಎಫ್ (PF) ಪ್ರಕ್ರಿಯೆಯಲ್ಲಿನ ವಿಳಂಬ ತಡೆಗಟ್ಟಲು ಹಾಗೂ ಸುಗಮ ಸೇವೆ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವಂತೆ ಪ್ರಾದೇಶಿಕ ಕಚೇರಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (Provident Fund Organisation) ಸ್ಪಷ್ಟ ಆದೇಶ ನೀಡಿದೆ. ಈ ಕುರಿತು ಮೇ 20ರಂದು ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಸೇವಾ ಅವಧಿಯನ್ನು ಅತಿಕ್ರಮಣದ ಕಾರಣಕ್ಕಾಗಿ ಪ್ರಾದೇಶಿಕ ಕಚೇರಿಗಳಲ್ಲಿ ಪಿಎಫ್ ಹಕ್ಕುಗಳನ್ನು ಇಪಿಎಫ್‌ಒ ತಿರಸ್ಕರಿಸುವಂತಿಲ್ಲ. ಸೇವೆಗಳಲ್ಲಿ ಅತಿಕ್ರಮಣ ವರ್ಗಾವಣೆಗಳನ್ನು ಜಾರಿಗೆ ತರುವಲ್ಲಿ ಅನರ್ಹತೆ ಎಂದು ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಿದೆ.

ಇನ್ನು ಮುಂದೆ ಸೇವಾ ಅವಧಿಯಲ್ಲಿ ಓವರ್ ಲ್ಯಾಪ್ ಆಗಿದ್ದರೆ ನೌಕರರ ಪಿಎಫ್ ಕ್ಲೈಂ ಅನ್ನು ತಿರಸ್ಕರಿಸಲಾಗುವುದಿಲ್ಲ. ಇದರ ಹಿಂದಿರುವ ನೈಜ್ಯ ಕಾರಣಗಳನ್ನು ಪರಿಗಣಿಸಬೇಕು. ನೌಕರರು ಉದ್ಯೋಗಗಳನ್ನು ಬದಲಾಯಿಸಿದಾಗ ಪಿಎಫ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಮತ್ತು ನಿರಾಕರಣೆಗಳನ್ನು ತಡೆಯಬೇಕಿದೆ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಹೊರಡಿಸಿರುವ ಸುತ್ತೋಲೆಯಲ್ಲಿ ಆದೇಶಿಸಲಾಗಿದೆ. ಸೇವಾ ಅವಧಿಯಲ್ಲಿ ಓವರ್ ಲ್ಯಾಪ್ ಆಗಿರುವ ಕಾರಣಕ್ಕೆ ಪ್ರಾದೇಶಿಕ ಕಚೇರಿಗಳಲ್ಲಿ ಪಿಎಫ್‌ ಕ್ಲೈಂ ತಿರಸ್ಕರಿಸುತ್ತಿರುವುದನ್ನು ಗಮನಿಸಲಾಗಿದೆ ಎಂದು ಇಪಿಎಫ್‌ಒ ಹೇಳಿದೆ.

2025ರ ಮೇ 20ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಒಬ್ಬ ಉದ್ಯೋಗಿಯ ಸೇವಾ ದಾಖಲೆಯು ಅತಿಕ್ರಮಿಸುವ ಉದ್ಯೋಗ ಅವಧಿಗಳನ್ನು ಹೊಂದಿದೆ ಎಂಬ ಕಾರಣಕ್ಕಾಗಿ ಹಲವಾರು ಪ್ರಾದೇಶಿಕ ಕಚೇರಿಗಳು ಭವಿಷ್ಯ ನಿಧಿ ವರ್ಗಾವಣೆ ಹಕ್ಕುಗಳನ್ನು ತಿರಸ್ಕರಿಸುತ್ತಿವೆ ಎಂಬುದನ್ನು ಗಮನಿಸಲಾಗಿದೆ. ಇದು ಉದ್ದೇಶಪೂರ್ವಕವಲ್ಲದ ಕಾರಣಗಳಿಂದ ಉಂಟಾಗಿರಬಹುದು ಎಂದು ಇಪಿಎಫ್‌ಒ ತಿಳಿಸಿದೆ.

ಹೆಚ್ಚಾಗಿ ಇದಕ್ಕೆ ಹಿಂದಿನ ಉದ್ಯೋಗದಾತರಿಂದ ಕೊನೆಯ ಕೆಲಸದ ದಿನವನ್ನು ದಾಖಲಿಸುವಲ್ಲಿ ವಿಳಂಬ, ಹೊಸ ಉದ್ಯೋಗದಾತರೊಂದಿಗೆ ಮುಂಚಿತವಾಗಿ ಸೇರುವ ದಿನಾಂಕ, ಸೇವಾ ದಾಖಲೆಗಳಲ್ಲಿನ ದೋಷಗಳು ಕಾರಣವಾಗುತ್ತವೆ. ಹೆಚ್ಚಾಗಿ ಇಂತಹ ಸಂದರ್ಭಗಳಲ್ಲಿ ಉದ್ಯೋಗಿಗಳಿಗೆ ದಂಡ ವಿಧಿಸಲಾಗುತ್ತದೆ. ಮಾತ್ರವಲ್ಲದೆ ಪಿಎಫ್ ವರ್ಗಾವಣೆ ಪ್ರಕ್ರಿಯೆಯನ್ನು ವಿಳಂಬ ಮಾಡಲಾಗುತ್ತದೆ. ಇದು ಸರಿಯಲ್ಲ ಎಂದು ಇಪಿಎಫ್‌ಒ ಹೇಳಿದೆ.

ಸೇವಾ ಅವಧಿಗಳ ಅತಿಕ್ರಮಣ ಎಂದರೇನು?

ಓವರ್‌ಲ್ಯಾಪಿಂಗ್ ಸೇವಾ ಅವಧಿ ಎಂದರೆ ಉದ್ಯೋಗಿಯೂ ಒಂದು ಸಂಸ್ಥೆಯಿಂದ ನಿರ್ಗಮಿಸಿದ ದಿನಾಂಕ ಮತ್ತು ಇನ್ನೊಂದು ಸಂಸ್ಥೆಗೆ ಸೇರುವ ದಿನಾಂಕದ ಮಧ್ಯದ ಅವಧಿಯಾಗಿದೆ. ಇದರಲ್ಲಿ ಕೆಲವೊಮ್ಮೆ ವ್ಯತ್ಯಾಸಗಳಾಗಿ ಉದ್ಯೋಗಿಯು ಏಕಕಾಲದಲ್ಲಿ ಎರಡು ಕಡೆ ಕೆಲಸ ಮಾಡುತ್ತಿರುವಂತೆ ಕಾಣುತ್ತದೆ. ಆದರೆ ಇದು ಕೇವಲ ವರದಿ ಮಾಡುವ ಅಥವಾ ನವೀಕರಿಸುವ ಹೊಂದಾಣಿಕೆ ಅವಧಿಯಾಗಿರುತ್ತದೆ.

ಇದನ್ನೂ ಓದಿ: RCB vs LSG: ಲಖನೌ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ನಲ್ಲಿ 2 ಬದಲಾವಣೆ ಸಾಧ್ಯತೆ!

ಪ್ರಾದೇಶಿಕ ಕಚೇರಿಗಳು ಏನು ಮಾಡಬಹುದು ?

ಓವರ್‌ ಲ್ಯಾಪ್‌ ವಿಚಾರಕ್ಕೆ ಭವಿಷ್ಯ ನಿಧಿ ವರ್ಗಾವಣೆ ಕ್ಲೈಮ್‌ಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬಾರದು ಎಂದು ಸೂಚಿಸಿರುವ ಇಪಿಎಫ್‌ಒ ಇದರಲ್ಲಿ ಅನುಮೋದನೆಗೆ ಮೊದಲು ಸ್ಪಷ್ಟೀಕರಣವನ್ನು ಪಡೆಯಬಹುದು. ಅಗತ್ಯ ಸ್ಪಷ್ಟೀಕರಣವನ್ನು ಪಡೆದ ಅನಂತರ ಹಕ್ಕುಗಳನ್ನು ಪ್ರಕ್ರಿಯೆಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಉದ್ಯೋಗಿಗಳು ಏನು ಮಾಡಬೇಕು?

ಉದ್ಯೋಗಗಳನ್ನು ಬದಲಾಯಿಸಿದ್ದರೆ ಮತ್ತು ಭವಿಷ್ಯ ನಿಧಿ ವರ್ಗಾವಣೆ ಕ್ಲೈಮ್ ನಲ್ಲಿ ಸೇವೆಯ ಅತಿಕ್ರಮಣವನ್ನು ತೋರಿಸುತ್ತಿದ್ದರೆ ಇದಕ್ಕೆ ಸರಿಯಾದ ಕಾರಣ ನೀಡಿ. ಭವಿಷ್ಯ ನಿಧಿ ವರ್ಗಾವಣೆ ಕ್ಲೈಮ್ ಅನ್ನು ಸಲ್ಲಿಸಲು ಯೋಜಿಸುತ್ತಿದ್ದರೆ ಹೊಸ ಸಂಸ್ಥೆ ಸೇರ್ಪಡೆ ಮತ್ತು ಹಳೆ ಸಂಸ್ಥೆಯಿಂದ ಬಿಡುಗಡೆ ಕುರಿತಾದ ಪತ್ರಗಳನ್ನು ಸಿದ್ಧವಾಗಿರಿಸಿ.

ಇಪಿಎಫ್‌ಒ ​​ಖಾತೆ ವಿವರಗಳನ್ನು ನವೀಕರಿಸಲಾಗಿದೆ, ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸ್ಪಷ್ಟೀಕರಣವನ್ನು ಕೇಳಿದರೆ ಅದಕ್ಕೆ ಬೇಕಾದ ದಾಖಲೆಗಳನ್ನು ಕೂಡಲೇ ಸಲ್ಲಿಸಿ.