ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: 1 ವರ್ಷದಲ್ಲಿ ಶೇ. 30ಕ್ಕೂ ಹೆಚ್ಚು ಲಾಭ ನೀಡಿದ ಮ್ಯೂಚುವಲ್‌ ಫಂಡ್ಸ್ ಯಾವುದು?

Share Market: ಕಳೆದ ಸ್ವಾತಂತ್ರ್ಯ ದಿನಾಚರಣೆಯಿಂದ ಇಲ್ಲಿಯವರೆಗೆ, ಒಂದು ವರ್ಷದ ಅವಧಿಯಲ್ಲಿ 16 ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು ಶೇ. 30ಕ್ಕೂ ಹೆಚ್ಚು ರಿಟರ್ನ್‌ ಹೂಡಿಕೆದಾರರಿಗೆ ಕೊಟ್ಟಿವೆ. ಅದರಲ್ಲೂ ಮಿರಾಯ್‌ ಅಸೆಟ್‌ ಹ್ಯಾಂಗ್‌ ಸೆಂಗ್‌ ಟೆಕ್‌ ಇಟಿಎಫ್‌ ಶೇ. 82.37 ರಿಟರ್ನ್‌ ಕೊಟ್ಟಿದೆ. ಟಾಪ್‌ ಪರ್ಫಾಮೆನ್ಸ್‌ ನೀಡಿರುವ ಮ್ಯೂಚುವಲ್‌ ಫಂಡ್‌ಗಳಲ್ಲಿ ಬಹುತೇಕ ಅಂತಾರಾಷ್ಟ್ರೀಯ ಫಂಡ್‌ಗಳಾಗಿವೆ.

1 ವರ್ಷದಲ್ಲಿ ಶೇ. 30ಕ್ಕೂ ಹೆಚ್ಚು ಲಾಭ ನೀಡಿದ ಮ್ಯೂಚುವಲ್‌ ಫಂಡ್ಸ್

ಸಾಂದರ್ಭಿಕ ಚಿತ್ರ.

Profile Siddalinga Swamy Aug 16, 2025 8:50 PM

ಮುಂಬಯಿ: ಕಳೆದ ಸ್ವಾತಂತ್ರ್ಯ ದಿನಾಚರಣೆಯಿಂದ ಇಲ್ಲಿಯವರೆಗೆ, ಒಂದು ವರ್ಷದ ಅವಧಿಯಲ್ಲಿ 16 ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು 30%ಗೂ ಹೆಚ್ಚು ರಿಟರ್ನ್‌ ಅನ್ನು ಹೂಡಿಕೆದಾರರಿಗೆ (Stock Market) ಕೊಟ್ಟಿವೆ. ಅದರಲ್ಲೂ ಮಿರಾಯ್‌ ಅಸೆಟ್‌ ಹ್ಯಾಂಗ್‌ ಸೆಂಗ್‌ ಟೆಕ್‌ ಇಟಿಎಫ್‌ 82.37% ರಿಟರ್ನ್‌ ಕೊಟ್ಟಿದೆ. ಟಾಪ್‌ ಪರ್ಫಾಮೆನ್ಸ್‌ ನೀಡಿರುವ ಮ್ಯೂಚುವಲ್‌ ಫಂಡ್‌ಗಳಲ್ಲಿ ಬಹುತೇಕ ಅಂತಾರಾಷ್ಟ್ರೀಯ ಫಂಡ್ಸ್‌ಗಳಾಗಿವೆ. ಕಳೆದ ಒಂದು ವರ್ಷದಲ್ಲಿ ಮಾರುಕಟ್ಟೆಯಲ್ಲಿ 619 ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು ಲಭ್ಯವಿತ್ತು. ಇದರಲ್ಲಿ ಟಾಪ್‌ ಪರ್ಫಾಮೆನ್ಸ್‌ ಕೊಟ್ಟಿರುವ 16 ಮ್ಯೂಚುವಲ್‌ ಫಂಡ್‌ಗಳ ಪಟ್ಟಿಯ ಮಾಹಿತಿ ಇಲ್ಲಿದೆ.



ಈಕ್ವಿಟಿ ಮ್ಯೂಚುವಲ್‌ ಪಂಡ್ಸ್:‌ 1 ವರ್ಷದಲ್ಲಿ 30%ಕ್ಕಿಂತ ಹೆಚ್ಚು ರಿಟರ್ನ್‌

ಮಿರಾಯ್‌ ಅಸೆಟ್‌ ಹ್ಯಾಂಗ್‌ ಸೆಂಗ್‌ ಟೆಕ್‌ ಇಟಿಎಫ್‌ FoF: 82.37%

ಮಿರಾಯ್‌ ಅಸೆಟ್‌ NYSE FANG+ETF FoF: 67.35%

ಇನ್ವೆಸ್ಕೊ ಇಂಡಿಯಾ-ಇನ್ವೆಸ್ಕೊ ಗ್ಲೋಬಲ್‌ ಕನ್‌ಸ್ಯೂಮರ್‌ ಟ್ರೆಂಡ್ಸ್‌ FoF: 57.46%

ಮಿರಾಯ್‌ ಅಸೆಟ್‌ S&P 500 ಟಾಪ್‌ 50 ETF FoF: 47.50%

ಎಡಿಲ್‌ವೈಸ್‌ Gr ಚೈನಾ ಎಕ್ಸ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ & ಟೆಕ್ನಾಲಜಿ ETF FoF: 39.25%

ಎಕ್ಸಿಸ್‌ ಗ್ರೇಟರ್‌ ಚೈನಾ ಈಕ್ವಿಟಿ FoF: 36.67%

ನಿಪ್ಪೋನ್‌ ಇಂಡಿಯಾ ತೈವಾನ್‌ ಈಕ್ವಿಟಿ ಫಂಡ್‌: 36.63%

ಕೋಟಕ್‌ ನಾಸ್‌ ಡಾಕ್‌ 100 FoF: 31.31%

ಎಡಿಲ್‌ವೈಸ್‌ ಯುರೋಪ್‌ ಡೈನಾಮಿಕ್‌ ಈಕ್ವಿಟಿ ಆಫ್-ಶೋರ್‌ ಫಂಡ್:‌ 30.85%

ನವಿ ಯುಎಸ್‌ ನಾಸ್‌ ಡಾಕ್‌ 100 FoF: 30.68%

ಐಸಿಐಸಿಐ ಪ್ರು ನಾಸ್‌ ಡಾಕ್‌ 100 ಇಂಡೆಕ್ಸ್‌ ಫಂಡ್:‌ 30.54%

ಮೋತಿಲಾಲ್‌ ಓಸ್ವಾಲ್‌ ನಾಸ್‌ ಡಾಕ್‌ 100 FoF: 30.3%

ಮಿರಾಯ್‌ ಅಸೆಟ್‌ ಗ್ಲೋಬಲ್‌ ಎಲೆಕ್ಟ್ರಿಕ್‌ & ಆಟೊನೊಮಸ್‌ ವೆಹಿಕಲ್ಸ್‌ ಈಕ್ವಿಟಿ ಪ್ಯಾಸಿವ್‌ FoF: 30.28%

ಇನ್ವೆಸ್ಕೊ ಇಂಡಿಯಾ-ಇನ್ವೆಸ್ಕೊ EQQQ ನಾಸ್‌ಡಾಕ್-‌100 ETF FoF: 30.24%

ಒಂದು ವರ್ಷದಲ್ಲಿ ಎರಡಂಕಿಯಲ್ಲಿ ನಷ್ಟಕ್ಕೀಡಾದ ಮ್ಯೂಚುವಲ್‌ ಫಂಡ್‌ಗಳು

ಕ್ವಾಂಟ್‌ ಮಾನ್ಯುಫಾಕ್ಚರಿಂಗ್‌ ಫಂಡ್:‌ -16.67%

ಕ್ವಾಂಟ್‌ PSU ಫಂಡ್:‌ 16.49%

ಸ್ಯಾಮ್ಕೊ ಫ್ಲೆಕ್ಸಿ ಕ್ಯಾಪ್‌ ಫಂಡ್:‌ 15.30%

ಕ್ವಾಂಟ್‌ ಕನ್‌ ಸಮ್ಷನ್‌ ಫಂಡ್:‌ 14.26%

ಕ್ವಾಂಟ್‌ ಬಿಸಿನೆಸ್‌ ಸೈಕಲ್‌ ಫಂಡ್:‌ 13.99%

ಕ್ವಾಂಟ್‌ ಮಲ್ಟಿ ಕ್ಯಾಪ್‌ ಫಂಡ್:‌ 13.48%

ಕ್ವಾಂಟ್‌ ಇಎಸ್‌ಜಿ ಇಂಟಿಗ್ರೇಶನ್‌ ಸ್ಟ್ರಾಟಜಿ ಫಂಡ್:‌ 12.51%

ಕ್ವಾಂಟ್‌ ಮಿಡ್‌ ಕ್ಯಾಪ್‌ ಫಂಡ್:‌ 12.27%

ಟಾಟಾ ಇನ್‌ಫ್ರಾಸ್ಟ್ರಕ್ಚರ್‌ ಫಂಡ್: 12.20%

ಕ್ವಾಂಟ್‌ ಲಾರ್ಜ್‌ & ಮಿಡ್‌ ಕ್ಯಾಪ್‌ ಫಂಡ್: 11.56%‌

ಎನ್‌ಜಿ ಫ್ಲಿಕ್ಸಿ ಕ್ಯಾಪ್‌ ಫಂಡ್:‌ 11.50%

ಕ್ವಾಂಟ್‌ ಟೆಕ್‌ ಫಂಡ್:‌ 11.37%

ಸ್ಯಾಮ್ಕೊ ಸ್ಪೆಷಲ್‌ ಅಪಾರ್ಚುನಿಟಿಸ್‌ ಫಂಡ್:‌ -11.21%

ಇದು ಯಾವುದೂ ರೆಕಮಂಡೇಶನ್ ಅಲ್ಲ. 2024ರ ಆಗಸ್ಟ್‌ 15ರಿಂದ 2025ರ ಆಗಸ್ಟ್‌ 13ರ ತನಕದ ಒಂದು ವರ್ಷದಲ್ಲಿ ಮ್ಯೂಚುವಲ್‌ ಫಂಡ್‌ಗಳ ಪರ್ಫಾಮೆನ್ಸ್‌ ಲೆಕ್ಕಾಚಾರದಲ್ಲಿ ಸಿದ್ಧಪಡಿಸಿರುವ ವರದಿ ಇದಾಗಿದೆ ಎಂದು ಇಕನಾಮಿಕ್ ಟೈಮ್ಸ್‌ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Wedding Nail Art Trend: ಶ್ರಾವಣದ ವೆಡ್ಡಿಂಗ್ ಸೀಸನ್‌ನಲ್ಲಿ ಹೆಚ್ಚಾಯ್ತು ನೇಲ್ ಆರ್ಟ್ ಕ್ರೇಝ್!