ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mumbai serial blasts: ಮುಂಬೈ ಸರಣಿ ಸ್ಫೋಟದ ಪಾತಕಿಗಿಲ್ಲ ಬಿಡುಗಡೆ ಭಾಗ್ಯ- 60ವರ್ಷ ಜೈಲೂಟ ಖಾಯಂ!

1993ರ ಮುಂಬೈ ಸರಣಿ ಸ್ಫೋಟದ ಅಪರಾಧಿಯಾಗಿರುವ ದರೋಡೆಕೋರ ಅಬು ಸಲೇಂನನ್ನು ಶಿಕ್ಷೆ ಕಡಿತಗೊಳಿಸುವಂತೆ ವಿನಾಯಿತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದೆ. ಆತನ ಶಿಕ್ಷೆ ಪೂರ್ಣಗೊಳ್ಳುವ ಮೊದಲು ಜೈಲಿನಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುಂಬೈ ಸರಣಿ ಸ್ಫೋಟ: ಅಬು ಸಲೇಂಗೆ 60ವರ್ಷ ಶಿಕ್ಷೆ ಖಾಯಂ!

ಮುಂಬೈ: ಉತ್ತಮ ನಡವಳಿಕೆ ಅಥವಾ ಇತರ ಅಂಶಗಳ ಆಧಾರದ ಮೇಲೆ 1993ರ ಮುಂಬೈ ಸರಣಿ ಸ್ಫೋಟದ (1993 Mumbai serial blasts) ಅಪರಾಧಿಯಾಗಿರುವ ದರೋಡೆಕೋರ ಅಬು ಸಲೇಂನನ್ನು (Gangster Abu Salem) ಶಿಕ್ಷೆ ಪೂರ್ಣಗೊಳ್ಳುವ ಮೊದಲೇ ಜೈಲಿನಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ. 1993ರಲ್ಲಿ ಆತನಿಗೆ 60 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ಕಳೆದ ಜುಲೈ 14ರಂದು ಮಹಾರಾಷ್ಟ್ರ ಸರ್ಕಾರ (Maharashtra government) ಹೊರಡಿಸಿರುವ ಆದೇಶದಲ್ಲಿ ಆತ ಸದ್ಯಕ್ಕೆ ಜೈಲು ಶಿಕ್ಷೆಯಿಂದ ವಿನಾಯಿತಿ ಪಡೆಯಲು ಅರ್ಹನಲ್ಲ ಎಂದು ಹೇಳಿದೆ.

1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಅಬು ಸಲೇಂ 1993ರಲ್ಲಿ ಅಪರಾಧಿ ಎಂದು ಸಾಬೀತಾಗಿದ್ದು, ಆತನಿಗೆ 60 ವರ್ಷಗಳ ಪೂರ್ಣ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಆತ 60 ವರ್ಷಗಳ ಪೂರ್ಣ ಜೈಲು ಶಿಕ್ಷೆಯನ್ನು ಅನುಭವಿಸಬೇಕು. 2025ರ ಜುಲೈ 14ರಂದು ಹೊರಡಿಸಿರುವ ಆದೇಶದಲ್ಲಿ ಸಲೇಂ ಸದ್ಯಕ್ಕೆ ವಿನಾಯಿತಿ ಪಡೆಯಲು ಅರ್ಹನಲ್ಲ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಉತ್ತಮ ನಡವಳಿಕೆ ಅಥವಾ ಇತರ ಅಂಶಗಳ ಆಧಾರದ ಮೇಲೆ ಕೆಲವರಿಗೆ ರಾಜ್ಯವು ಶಿಕ್ಷೆಯು ಪೂರ್ಣಗೊಳ್ಳುವ ಮೊದಲೇ ಬಿಡುಗಡೆಗೆ ಅವಕಾಶವನ್ನು ನೀಡುತ್ತದೆ. ಆದರೆ ಶಿಕ್ಷೆಯ ಅವಧಿ ಕಡಿಮೆ ಮಾಡಲಾಗುವುದಿಲ್ಲಎಂದು ಹೇಳಿದೆ. ವಿಚಾರಣಾಧೀನ ಕೈದಿಯಾಗಿ ಶಿಕ್ಷೆ ಅನುಭವಿಸಿದ ಸಮಯ ಮತ್ತು ವರ್ಷಗಳಲ್ಲಿ ಗಳಿಸಿದ ವಿನಾಯಿತಿಯನ್ನು ಸೇರಿಸಿ 25 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿರುವ ಸಲೇಂ ಮಾರ್ಚ್ 31ರಂದು ತಾನು ಬಿಡುಗಡೆಗೊಳ್ಳಲು ಅರ್ಹನೆಂದು ಹೇಳಿ ವಕೀಲೆ ಫರ್ಹಾನಾ ಶಾ ಮೂಲಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು.

ನಾಶಿಕ್ ರಸ್ತೆಯ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಅರುಣಾ ಎ ಮುಗುತರಾವ್ ಅವರು ಸಲೇಂ ಅವರ ಹಕ್ಕನ್ನು ತಿರಸ್ಕರಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸಲೇಂ ವಿನಾಯಿತಿ ಪಡೆಯ ಬೇಕಾದರೆ 60 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಅವರನ್ನು ಹಸ್ತಾಂತರಿಸುವ ಸಮಯದಲ್ಲಿ ಪೋರ್ಚುಗಲ್‌ಗೆ ನೀಡಲಾದ ಭರವಸೆಯಂತೆ 25 ವರ್ಷಗಳ ಕಸ್ಟಡಿಯನ್ನು ಪೂರ್ಣಗೊಳಿಸಿದ ಅನಂತರವೇ ಬಿಡುಗಡೆ ಮಾಡಬಹುದು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಇದು ವಿನಾಯಿತಿಗಳನ್ನು ಹೊರತುಪಡಿಸಿ ಎಂದು ಅವರು ಅಫಿಡವಿಟ್‌ ನಲ್ಲಿ ತಿಳಿಸಿದ್ದಾರೆ.

ಸೇಲಂ ಅವರನ್ನು 1993ರ ಅಕ್ಟೋಬರ್ 15ರಂದು ಅಪರಾಧಿ ಎಂದು ಘೋಷಿಸಲಾಯಿತು. 2002ರ ಸೆಪ್ಟೆಂಬರ್ 18ರಂದು ಲಿಸ್ಬನ್‌ನಲ್ಲಿ ಬಂಧಿಸಲಾಯಿತು. ಸೇಲಂಗೆ ಮರಣದಂಡನೆ ಅಥವಾ 25 ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆ ವಿಧಿಸುವುದಿಲ್ಲ ಎಂದು ಭಾರತವು ಪೋರ್ಚುಗೀಸ್ ಸರ್ಕಾರಕ್ಕೆ ಭರವಸೆ ನೀಡಿದ ಅನಂತರ ಆತನನ್ನು 2005ರ ನವೆಂಬರ್ 10ರಂದು ಪೋರ್ಚುಗಲ್‌ನಿಂದ ಹಸ್ತಾಂತರಿಸಲಾಯಿತು. ಆತನ ಹಸ್ತಾಂತರಕ್ಕೆ ಭಾರತ ಈ ಭರವಸೆ ನೀಡಲೇಬೇಕಿತ್ತು.

1993ರ ಮುಂಬೈ ಸರಣಿ ಸ್ಫೋಟಗಳಲ್ಲಿ 257 ಜನರನ್ನು ಸಾವನ್ನಪ್ಪಿದ್ದು, 1,400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದಕ್ಕೆ ಸಂಬಂಧಿಸಿದ ಅನೇಕ ಗಂಭೀರ ಅಪರಾಧಗಳಿಗೆ ಶಿಕ್ಷೆಗೊಳಗಾದ ಸಲೇಂಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಈ ಸುದ್ದಿಯನ್ನೂ ಓದಿ: Viral Video: ಸೇತುವೆ ಅಂಚಿನಲ್ಲಿ ನೇತಾಡುತ್ತಾ ಪುಲ್-ಅಪ್ ಮಾಡಿದ ಭೂಪ! ಎದೆ ಝಲ್ಲೆನಿಸೋ ವಿಡಿಯೊ

ಹಲವು ಅಪರಾಧಗಳನ್ನು ಮಾಡಿದ ಅನಂತರ ದೇಶದಿಂದ ಪರಾರಿಯಾದ ಸೇಲಂನ ಬಿಡುಗಡೆ ಪ್ರಸ್ತಾವನೆಯನ್ನು ಸಲಹಾ ಮಂಡಳಿ, ವಿಚಾರಣಾ ನ್ಯಾಯಾಲಯ, ಪೊಲೀಸ್, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಜೈಲು ಅಧಿಕಾರಿಗಳ ಶಿಫಾರಸುಗಳೊಂದಿಗೆ ರಾಜ್ಯ ಗೃಹ ಇಲಾಖೆಗೆ ಕಳುಹಿಸಿರುವುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದನ್ನು ರಾಜ್ಯ ಗೃಹ ಇಲಾಖೆ ತಿರಸ್ಕರಿಸಿದ್ದು, ಸ್ಫೋಟದ ಬಲಿಪಶುಗಳು ಜೀವನ ಪೂರ್ತಿ ಇದರ ಶಿಕ್ಷೆಯನ್ನು ಅನುಭವಿಸುತ್ತಾರೆ. ಇದರ ಅಪರಾಧಿಯಾಗಿರುವ ಸಲೇಂ ಬಿಡುಗಡೆಗೆ ಆತ 60 ವರ್ಷ ಶಿಕ್ಷೆ ಅನುಭವಿಸಿದ ಮೇಲೆ ಪರಿಗಣಿಸುವುದಾಗಿ ತಿಳಿಸಿದೆ.