ಜ್ಯುವೆಲ್ಲರಿ ಮಾಲೀಕನ ಮೇಲೆ ಆ್ಯಸಿಡ್ ಎರಚಿ ಕಳ್ಳತನಕ್ಕೆ ಯತ್ನ; ದರೋಡೆಕೋರರನ್ನು ಹಿಡಿದ ಸ್ಥಳೀಯರು
ತಮಿಳುನಾಡಿನ ಸೇಲಂ ಜಿಲ್ಲೆಯ ಆತೂರ್ ಟೌನ್ ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ, ಆಘಾತಕಾರಿ ಘಟನೆ ನಡೆದಿದೆ. ಇಬ್ಬರು ವ್ಯಕ್ತಿಗಳು ಆಭರಣ ಅಂಗಡಿಯ ಮಾಲೀಕ ಮತ್ತು ಅಲ್ಲಿನ ಸಿಬ್ಬಂದಿಯ ಮೇಲೆ ಆ್ಯಸಿಡ್ ದಾಳಿ ಮಾಡಿ ಚಿನ್ನ ಕದ್ದು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಸಾರ್ವಜನಿಕರಿಂದ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ದೃಶ್ಯ

ಚೆನ್ನೈ: ತಮಿಳುನಾಡಿನ (Tamil Nadu) ಸೇಲಂ (Salem) ಜಿಲ್ಲೆಯ ಆತೂರ್ ಟೌನ್ ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಇಬ್ಬರು ವ್ಯಕ್ತಿಗಳು ಆಭರಣ ಅಂಗಡಿಯ (Jewelry Shop) ಮಾಲೀಕ ಮತ್ತು ಅಲ್ಲಿನ ಸಿಬ್ಬಂದಿಯ ಮೇಲೆ ಆ್ಯಸಿಡ್ (Acid) ದಾಳಿ ಮಾಡಿ ಚಿನ್ನ ಕದ್ದು (Gold Robbery) ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಸಾರ್ವಜನಿಕರಿಂದ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 8, ರಾತ್ರಿ 8:45ಕ್ಕೆ ಕಳ್ಳತನ ಯತ್ನ ನಡೆದಿದೆ. ಎವಿಎಸ್ ಜ್ಯುವೆಲರ್ಸ್‌ನ ಮಾಲೀಕ ವೈದೀಶ್ವರನ್ಅ ವರ ಪತ್ನಿ ಸೆಲ್ವ ಲಕ್ಷ್ಮೀ ಮತ್ತು ಸಿಬ್ಬಂದಿ ವಸಂತಿ ಅವರ ಮೇಲೆ ಆ್ಯಸಿಡ್ ಎರಚಿ 640 ಗ್ರಾಂ ಚಿನ್ನವನ್ನು ಕದಿಯಲು ಯತ್ನಿಸಿದ್ದಾರೆ. ಗ್ರಾಹಕರಂತೆ ಆಭರಣದಂಗಡಿಗೆ ಬಂದ ಇಬ್ಬರು ದುಷ್ಕರ್ಮಿಗಳು, ಆಭರಣಗಳನ್ನು ತೋರಿಸುವಾಗ ಇದ್ದಕ್ಕಿದ್ದಂತೆ ವೈದೀಶ್ವರನ್ ಮತ್ತು ಅವರ ಪತ್ನಿ ಮೇಲೆ ಆ್ಯಸಿಡ್ ಎರಚಿದರು.
சேலம்: ஆத்தூரில் நகைக்கடை உரிமையாளர்கள் மீது ஆசிட் வீசி நகைக் கொள்ளை முயற்சி; துப்பாக்கியுடன் வந்த இருவரை பொதுமக்கள் விரட்டி பிடித்து போலீசாரிடம் ஒப்படைத்தனர்#Salem | #Theft | #JewelleryShop | #CCTV pic.twitter.com/3XX7zkN4BK
— PttvOnlinenews (@PttvNewsX) August 8, 2025
ಈ ಸುದ್ದಿಯನ್ನು ಓದಿ:Viral video: ಬೈಕ್ ಸವಾರನ ಮೇಲೆ ಕುಸಿದು ಬಿದ್ದ ಗೋಡೆ; ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರು
ಚಿನ್ನವನ್ನು ಕದಿಯಲು ಯತ್ನಿಸಿದ ವೇಳೆ ವೈದೀಶ್ವರನ್ ಅವರಿಗೆ ಅಡ್ಡಿಯಾದಾಗ ಆರೋಪಿಗಳು ಆಭರಣಗಳ ಮೇಲೆಯೂ ಆ್ಯಸಿಡ್ ಎರಚಿ, ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಲು ಯತ್ನಿಸಿದರು. ಗಾಯಗೊಂಡಿದ್ದರೂ ವೈದೀಶ್ವರನ್ ಒಬ್ಬ ಆರೋಪಿಯನ್ನು ಅಂಗಡಿಯೊಳಗೆ ಹಿಡಿದು, ಕಳ್ಳತನವನ್ನು ತಡೆದರು. ಎರಡನೇ ಆರೋಪಿಯು ರಿವಾಲ್ವರ್‌ನೊಂದಿಗೆ ಶಾಪಿಂಗ್ ರಸ್ತೆಯಲ್ಲಿ ಓಡಿಹೋದ. ಆದರೆ, ಎಚ್ಚರಿಕೆಯಿಂದಿರುವ ಸ್ಥಳೀಯರು ಆತನನ್ನು ಸುಮಾರು ಒಂದು ಕಿಲೋಮೀಟರ್ ಬೆನ್ನಟ್ಟಿ, ರಿವಾಲ್ವರ್ ಕಿತ್ತುಕೊಂಡು ಹಿಡಿಯಲು ಯಶಸ್ವಿಯಾದರು.
ಆತೂರ್ ಟೌನ್ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ದಾಳಿಯಲ್ಲಿ ಬಳಸಿದ ರಿವಾಲ್ವರ್ ಅನ್ನು ವಶಪಡಿಸಿಕೊಂಡ ಪೊಲೀಸರು, ಆರೋಪಿಗಳ ಗುರುತು ಮತ್ತು ಹಿನ್ನೆಲೆಯ ಕುರಿತು ತನಿಖೆ ಆರಂಭಿಸಿದ್ದಾರೆ. ದಾಳಿಯಿಂದ ಗಾಯಗೊಂಡ ವೈದೀಶ್ವರನ್, ಸೆಲ್ವ ಲಕ್ಷ್ಮೀ ಮತ್ತು ವಸಂತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಠಾಣೆಗೆ ಇಷ್ಟು ಸಮೀಪದಲ್ಲಿ ನಡೆದ ಈ ದಾಳಿಯು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಸ್ಥಳೀಯರ ಧೈರ್ಯದ ಕ್ರಮವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.