Indian Railway: ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್! ಹಬ್ಬಕ್ಕಾಗಿ ಭರ್ಜರಿ ಆಫರ್
"ರೌಂಡ್ ಟ್ರಿಪ್ ಪ್ಯಾಕೇಜ್ ಫಾರ್ ಫೆಸ್ಟಿವಲ್ ರಶ್" ಯೋಜನೆಯಡಿ ಭಾರತೀಯ ರೈಲ್ವೆಯು ಮುಂಗಡವಾಗಿ ಬುಕ್ ಮಾಡುವ ರಿಟರ್ನ್ ಜರ್ನಿ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಇದರ ಪ್ರಕಾರ ಹಬ್ಬದ ವೇಳೆ ಮುಂಗಡವಾಗಿ ಬುಕ್ ಮಾಡುವ ರಿಟರ್ನ್ ಜರ್ನಿ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಲಾಗಿದೆ.


ನವದೆಹಲಿ: ಸಾಲು ಸಾಲು ಹಬ್ಬಗಳು ಬರುತ್ತಿದ್ದಂತೆ ಭಾರತೀಯ ರೈಲ್ವೆಯು (Indian Railway) ಮುಂಗಡವಾಗಿ ಬುಕ್ ಮಾಡುವ ರಿಟರ್ನ್ ಜರ್ನಿ ಟಿಕೆಟ್‌ಗಳ (Return Journey Tickets) ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. "ರೌಂಡ್ ಟ್ರಿಪ್ ಪ್ಯಾಕೇಜ್ ಫಾರ್ ಫೆಸ್ಟಿವಲ್ ರಶ್" (Round Trip Package for Festival Rush) ಯೋಜನೆಯಡಿಯಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಅಕ್ಟೋಬರ್ 13 ರಿಂದ 26 ರವರೆಗೆ ನಿಗದಿಪಡಿಸಲಾಗುವ ಪ್ರಯಾಣಗಳಿಗೆ ಬುಕ್ಕಿಂಗ್ ಆಗಸ್ಟ್ 14 ರಿಂದ ತೆರೆಯಲಿದೆ. ಹಬ್ಬದ ಋತುವಿನಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಿ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ.
"ರೌಂಡ್ ಟ್ರಿಪ್ ಪ್ಯಾಕೇಜ್ ಫಾರ್ ಫೆಸ್ಟಿವಲ್ ರಶ್" ಪ್ರಾಯೋಗಿಕ ಯೋಜನೆಯ ಕುರಿತು ಶುಕ್ರವಾರ ಭಾರತೀಯ ರೈಲ್ವೆ ಮಂಡಳಿಯ ಸುತ್ತೋಲೆಯನ್ನು ಪ್ರಕಟಿಸಿದೆ. ಇದರ ಪ್ರಕಾರ ಹಿಂದಿರುಗುವ ಪ್ರಯಾಣಕ್ಕಾಗಿ ದೃಢೀಕೃತ ಟಿಕೆಟ್‌ಗಳನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ ರಿಟರ್ನ್ ಪ್ರಯಾಣದ ಮೂಲ ದರದಲ್ಲಿ ಶೇ. 20 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಇದರಿಂದ ಜನಸಂದಣಿಯನ್ನು ಮರುಹಂಚಿಕೆ ಮಾಡುವುದು, ತೊಂದರೆ-ಮುಕ್ತ ಬುಕ್ಕಿಂಗ್, ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಲು ಅನುಕೂಲವಾಗುವುದು. ಈ ಯೋಜನೆಯ ಮೂಲಕ ರೈಲು ಸೇವೆಗಳ ಬಳಕೆಯನ್ನು ಹೆಚ್ಚಿಸುವ ಗುರಿಯನ್ನು ಭಾರತೀಯ ರೈಲ್ವೆಯು ಹೊಂದಿದೆ.
ಅಕ್ಟೋಬರ್ 13 ರಿಂದ 26ರ ನಡುವೆ ನಿಗದಿಪಡಿಸಲಾದ ಪ್ರಯಾಣಗಳಿಗೆ ಆಗಸ್ಟ್ 14ರಿಂದ ಬುಕ್ಕಿಂಗ್ ತೆರೆಯಲಿದೆ. ನವೆಂಬರ್ 17ರಿಂದ ಡಿಸೆಂಬರ್ 1ರ ನಡುವಿನ ಪ್ರಯಾಣಕ್ಕಾಗಿ ಕನೆಕ್ಟಿಂಗ್ ಪ್ರಯಾಣ ವೈಶಿಷ್ಟ್ಯವನ್ನು ಬಳಸಿಕೊಂಡು ಅನುಗುಣವಾದ ರಿಟರ್ನ್ ಪ್ರಯಾಣವನ್ನು ಬುಕ್ ಮಾಡಬೇಕು. ಮುಂಗಡ ಕಾಯ್ದಿರಿಸುವಿಕೆ ವೇಳೆ ನಿಗದಿಪಡಿಸಿರುವ ಮಾನದಂಡಗಳು ರಿಟರ್ನ್ ಪ್ರಯಾಣ ಬುಕಿಂಗ್‌ಗೆ ಅನ್ವಯವಾಗುವುದಿಲ್ಲ. ಎಲ್ಲಾ ವರ್ಗಗಳು ಮತ್ತು ರೈಲುಗಳಲ್ಲಿ ಈ ಯೋಜನೆ ಮಾನ್ಯವಾಗಿದ್ದು, ದೃಢಪಡಿಸಿದ ಟಿಕೆಟ್‌ಗಳಿಗೆ ಮಾತ್ರ ಅನ್ವಯಾವಾಗುವುದು.
ಇದನ್ನೂ ಓದಿ: ಮಗಳ ಮೇಲೆ ಕಣ್ಣಿಡಲು ಆಕೆಯ ಪೋಷಕರು ಮಾಡಿದ್ದೇನು ಗೊತ್ತಾ? ಇಂಥವರೂ ಇರ್ತಾರೆ!
ಪ್ರಯಾಣದ ಟಿಕೆಟ್‌ಗಳನ್ನು ಆನ್ ಲೈನ್ ಅಥವಾ ಮೀಸಲಾತಿ ಕಚೇರಿಗಳಲ್ಲಿ ಬುಕ್ ಮಾಡಬೇಕು. ಇದರ ಪಿಎನ್ ಆರ್ ಗಳಿಗೆ ಯಾವುದೇ ಹೆಚ್ಚುವರಿ ದರ ಹಾಕಲಾಗುವುದಿಲ್ಲ. ಬುಕ್ ಮಾಡಿದ ಟಿಕೆಟ್‌ಗಳಿಗೆ ಶುಲ್ಕ ಮರುಪಾವತಿ ಮಾಡಲಾಗುವುದಿಲ್ಲ. ಫ್ಲೆಕ್ಸಿ ದರ ಹೊಂದಿರುವ ರೈಲುಗಳನ್ನು ಹೊರತುಪಡಿಸಿ ವಿಶೇಷ ರೈಲುಗಳು ಸೇರಿದಂತೆ ಎಲ್ಲಾ ವರ್ಗಗಳು ಮತ್ತು ರೈಲುಗಳು ಈ ಯೋಜನೆಗೆ ಒಳಪಡುತ್ತದೆ. ರೈಲು ಪ್ರಯಾಣ ಕೂಪನ್‌ಗಳು, ವೋಚರ್‌ಗಳು, ಪಾಸ್‌ಗಳು ಮತ್ತು ಪಿಟಿಒಗಳ ಬಳಕೆಯನ್ನು ಹೊರತಾಗಿ ಇದರಲ್ಲಿ ಯಾವುದೇ ಮಾರ್ಪಾಡುಗಳು ಅಥವಾ ಹೆಚ್ಚುವರಿ ರಿಯಾಯಿತಿಗಳಿಗೆ ಅನುಮತಿ ಇಲ್ಲ ಎಂದು ರೈಲ್ವೆ ಮಂಡಳಿಯು ವಲಯ ರೈಲ್ವೆಗಳಿಗೆ ನಿರ್ದೇಶನ ನೀಡಿದೆ.