Physical Abuse: ತನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ಮತ್ತೊಬ್ಬ ಬಾಲಕಿಯನ್ನು ರಕ್ಷಿಸಿದ ಅಪ್ರಾಪ್ತೆ- ಏನಿದು ಘಟನೆ?
Tamilnadu Physical Abuse: ತಾನು ಅತ್ಯಾಚಾರಕ್ಕೊಳಗಾದರೂ ಮತ್ತೊಂದು ಮಗುವನ್ನು ಕಿಡಿಗೇಡಿಯಿಂದ ಬಾಲಕಿ ಕಾಪಾಡಿರುವ ಘಟನೆ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ತನ್ನ ಅಜ್ಜಿಯ ಮನೆಗೆ ಹೋಗುತ್ತಿದ್ದ 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಲಾಗಿದೆ.


ಚೆನ್ನೈ: ಅಜ್ಜಿ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ(Physical Abuse) ಮಾಡಲಾಗಿದೆ. ತಾನು ಅತ್ಯಾಚಾರಕ್ಕೊಳಗಾದರೂ ಮತ್ತೊಂದು ಮಗುವನ್ನು ಕಿಡಿಗೇಡಿಯಿಂದ ಬಾಲಕಿ ಕಾಪಾಡಿರುವ ಘಟನೆ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯು ರೈಲಿನಲ್ಲಿ ಬಂದು ಮಾವಿನ ತೋಟದ ಹಿಂಭಾಗದ ಪ್ರವೇಶದ್ವಾರದ ಬಳಿ ಅಡಗಿ ಕುಳಿತಿದ್ದ. ಈ ವೇಳೆ ತನ್ನ ಅಜ್ಜಿಯ ಮನೆಗೆ ಹೋಗುತ್ತಿದ್ದ 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯು ಬಾಲಕಿಯ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದರೂ, ಆಕೆ ಅವನ ಹಿಡಿತದಿಂದ ತಪ್ಪಿಸಿಕೊಂಡು, ಅಪರಾಧ ನಡೆದ ಸ್ಥಳಕ್ಕೆ ಸಮೀಪಿಸುತ್ತಿದ್ದ ಮತ್ತೊಂದು ಮಗುವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ರೈಲಿನಿಂದ ಇಳಿದ ಆರೋಪಿಯು ಎರಡು ಮಾವಿನ ತೋಟಗಳ ನಡುವಿನ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಈ ವೇಳೆ ಮಗು ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ನೋಡಿ ಆಕೆಯನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಾನೆ. ನಂತರ ಆತನನ್ನು ಅಪಹರಿಸಿ ಮಾವಿನ ತೋಟದತ್ತ ಒಯ್ದಿದ್ದಾನೆ.
ಮಾವಿನತೋಟಕ್ಕೆ ಬಾಲಕಿಯನ್ನು ಎಳೆದೊಯ್ದ ಆರೋಪಿಯು ಆಕೆಯ ಮೇಲೆ ಥಳಿಸಿದ್ದಾನೆ. ದೇಹದ ಹಲವು ಭಾಗಗಳಲ್ಲಿ ಕಚ್ಚಿ ಗಾಯಗೊಳಿಸಿದ್ದಲ್ಲದೆ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿಲಾಗಿದೆ. ಅಪ್ರಾಪ್ತ ಬಾಲಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆರೋಪಿಯು ಅವಳನ್ನು ಹಿಂದಕ್ಕೆ ಎಳೆದುಕೊಂಡು ಮತ್ತೆ ಥಳಿಸಿದ್ದಾನೆ. ಈ ವೇಳೆ, ಆರೋಪಿಗೆ ಫೋನ್ ಕರೆಗಳು ಬಂದಿವೆ. ಆರೋಪಿ ಫೋನ್ ಕರೆಯಿಂದ ವಿಚಲಿತನಾಗುತ್ತಿದ್ದಂತೆ, ಅಪ್ರಾಪ್ತ ಬಾಲಕಿ ತಪ್ಪಿಸಿಕೊಳ್ಳಲು ಕೊನೆಯ ಪ್ರಯತ್ನ ಮಾಡಿದಳು. ನಂತರ ಅವಳು ರಸ್ತೆಯಲ್ಲಿ ಓಡಿಹೋದಳು. ಇನ್ನೊಬ್ಬ ಬಾಲಕಿ ತನ್ನ ಕಡೆಗೆ ನಡೆದು ಬರುವುದನ್ನು ನೋಡಿ ಅವಳನ್ನು ತಡೆದಳು, ನಂತರ ಅವರಿಬ್ಬರು ಓಡಿ ತಪ್ಪಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಪಾಕಿಸ್ತಾನದ ಹಿಂದೂ ಯುವಕ, ಅಪ್ರಾಪ್ತೆಯ ಮೃತದೇಹ ರಾಜಸ್ಥಾನದಲ್ಲಿ ಪತ್ತೆ; ನಿಗೂಢ ಸಾವಿಗೆ ಕಾರಣವೇನು?
ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿ ಬಾಲಕಿಯ ಬಾಯಿಯನ್ನು ಮುಚ್ಚಿ ಅಪಹರಿಸಿದ್ದಾನೆ. ಘಟನೆಯ ನಂತರ, ಬಾಲಕಿ ಮನೆಗೆ ಹಿಂತಿರುಗಿ ತನ್ನ ಅಜ್ಜಿಗೆ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಬಳಿಕ ಘಟನೆ ಬಗ್ಗೆ ಅರಂಬಕ್ಕಂ ಪೊಲೀಸರಿಗೆ ದೂರು ನೀಡಲಾಗಿದೆ. ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದು, ಈಗ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಆದಷ್ಟು ಬೇಗ ಆ ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿರುವಳ್ಳೂರು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶ್ರೀನಿವಾಸ ಪೆರುಮಾಳ್ ತಿಳಿಸಿದ್ದಾರೆ.