ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honeymoon Murder Case: ಹನಿಮೂನ್ ಕೊಲೆ ಪ್ರಕರಣ- ಸೋನಮ್ ನೋಡಲು ಯಾರೂ ಬಂದಿಲ್ಲ, ಆಕೆ ಯಾರಿಗೂ ಕರೆ ಮಾಡಿಲ್ಲ..

ಮದುವೆಯಾದ ತಿಂಗಳೊಳಗೆ ಪತಿಯನ್ನು ಕೊಂದು ಜೈಲು ಸೇರಿರುವ ಸೋನಮ್ ರಘುವಂಶಿಯನ್ನು (Sonam Raghuvanshi) ಕಾಣಲು ಅವಳ ಕುಟುಂಬದ ಸದಸ್ಯರು ಯಾರೂ ಬಂದಿಲ್ಲ. ತಾನು ಮಾಡಿರುವ ಕೃತ್ಯದ ಬಗ್ಗೆ ಅವಳಲ್ಲಿ ಯಾವುದೇ ವಿಷಾದವಿಲ್ಲ. ಜೈಲಿನ ಪರಿಸರಕ್ಕೆ ಹೊಂದಿಕೊಂಡು ಆಕೆ ಜೀವನ ನಡೆಸುತ್ತಿದ್ದಾಳೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಜೈಲಿನಲ್ಲಿರೋ ಸೋನಮ್ ರಘುವಂಶಿ ಸ್ಥಿತಿ ಹೇಗಿದೆ?

ನವದೆಹಲಿ: ಮದುವೆಯಾದ ತಿಂಗಳೊಳಗೆ ಪತಿಯನ್ನು ಕೊಂದು ಜೈಲು ಸೇರಿರುವ ಸೋನಮ್ ರಘುವಂಶಿಯನ್ನು (Sonam Raghuvanshi) ಕಾಣಲು ಅವಳ ಕುಟುಂಬದ ಸದಸ್ಯರು ಯಾರೂ ಬಂದಿಲ್ಲ. ತಾನು ಮಾಡಿರುವ ಕೃತ್ಯದ ಬಗ್ಗೆ ಅವಳಲ್ಲಿ ಯಾವುದೇ ವಿಷಾದವಿಲ್ಲ. ಜೈಲಿನ ಪರಿಸರಕ್ಕೆ ಹೊಂದಿಕೊಂಡು ಆಕೆ ಜೀವನ ನಡೆಸುತ್ತಿದ್ದಾಳೆ ಎಂದು ಜೈಲಿನ ಮೂಲಗಳು ತಿಳಿಸಿವೆ. ವಿವಾಹವಾದ ಕೆಲವು ದಿನಗಳ ಬಳಿಕ ಪತಿ ರಾಜ ರಘುವಂಶಿಯೊಂದಿಗೆ (Raja Raghuvanshi murder case) ಮೇಘಾಲಯಕ್ಕೆ ( Meghalaya) ಹನಿಮೂನ್ ಗೆ (Honeymoon Murder Case) ತೆರಳಿದ ಸೋನಮ್ ರಘುವಂಶಿ ಪತಿಯನ್ನು ಕೊಂದು ಬಳಿಕ ನಾಪತ್ತೆಯಾಗಿ ಬಳಿಕ ಉತ್ತರಪ್ರದೇಶದ ಘಾಜಿಪುರದಲ್ಲಿ ಪತ್ತೆಯಾಗಿದ್ದಳು.

ವಿಚಾರಣೆಯ ಬಳಿಕ ಶಿಲ್ಲಾಂಗ್ ಜೈಲು ಸೇರಿರುವ ಸೋನಮ್ ಅಲ್ಲಿ ಇದೀಗ ಒಂದು ತಿಂಗಳು ಕಳೆದಿದ್ದಾಳೆ. ಆದರೆ ಇಲ್ಲಿಯವರೆಗೆ ಅವಳು ತಾನು ಮಾಡಿರುವ ಕೃತ್ಯದ ಬಗ್ಗೆ ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ. ಅವಳ ಕುಟುಂಬ ಸದಸ್ಯರು ಯಾರೂ ಅವಳನ್ನು ಭೇಟಿ ಮಾಡಲು ಬಂದಿಲ್ಲ ಎನ್ನಲಾಗಿದೆ.

ಸೋನಮ್ ಜೈಲಿನಲ್ಲಿರುವ ಪರಿಸರಕ್ಕೆ ಹೊಂದಿಕೊಂಡಿದ್ದಾಳೆ. ಇತರ ಮಹಿಳಾ ಕೈದಿಗಳೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದಾಳೆ. ಪ್ರತಿದಿನ ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದು ಜೈಲು ನಿಯಮಗಳನ್ನು ಅನುಸರಿಸುತ್ತಿದ್ದಾಳೆ. ಆಕೆ ಪ್ರತಿದಿನ ಟಿವಿ ನೋಡುತ್ತಾಳೆ. ಆಕೆ ತಾನು ಮಾಡಿರುವ ಅಪರಾಧ ಅಥವಾ ವೈಯಕ್ತಿಕ ಜೀವನದ ಬಗ್ಗೆ ಇತರ ಕೈದಿಗಳೊಂದಿಗೆ ಅಥವಾ ಜೈಲು ಆಡಳಿತ ಸಿಬ್ಬಂದಿಯೊಂದಿಗೆ ಮಾತನಾಡುತ್ತಿಲ್ಲ. ಜೈಲು ವಾರ್ಡನ್ ಕಚೇರಿಯ ಬಳಿ ವಾಸಿಸುತ್ತಿರುವ ಅವಳೊಂದಿಗೆ ಇನ್ನಿಬ್ಬರು ವಿಚಾರಣಾಧೀನ ಮಹಿಳಾ ಕೈದಿಗಳಿದ್ದಾರೆ. ಈವರೆಗೆ ಜೈಲಿನಲ್ಲಿ ಸೋನಮ್‌ಗೆ ಯಾವುದೇ ವಿಶೇಷ ಕೆಲಸವನ್ನು ವಹಿಸಲಾಗಿಲ್ಲ. ಅವಳಿಗೆ ಹೊಲಿಗೆ ಮತ್ತು ಕೌಶಲಾಭಿವೃದ್ಧಿಗೆ ಸಂಬಂಧಿಸಿದ ಇತರ ಕೆಲಸಗಳನ್ನು ಕಲಿಸಲಾಗುವುದು ಎಂದು ಜೈಲು ಮೂಲಗಳು ತಿಳಿಸಿವೆ.

ಜೈಲು ನಿಯಮಗಳ ಪ್ರಕಾರ ಸೋನಮ್‌ಗೆ ತನ್ನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಮತ್ತು ಮಾತನಾಡಲು ಅವಕಾಶವಿದೆ. ಆದರೆ ಯಾರೂ ಅವಳನ್ನು ಭೇಟಿ ಮಾಡಿಲ್ಲ ಅಥವಾ ಕರೆ ಮಾಡಿಲ್ಲ ಎನ್ನಲಾಗಿದೆ. ಶಿಲ್ಲಾಂಗ್ ಜೈಲಿನಲ್ಲಿ ಒಟ್ಟು 496 ಕೈದಿಗಳಿದ್ದಾರೆ. ಅವರಲ್ಲಿ 20 ಮಂದಿ ಮಹಿಳೆಯರು. ಕೊಲೆ ಆರೋಪ ಹೊತ್ತಿರುವ ಜೈಲಿನಲ್ಲಿರುವ ಎರಡನೇ ಮಹಿಳಾ ಕೈದಿ ಸೋನಮ್. ಅವರ ಮೇಲೆ ಸಿಸಿಟಿವಿ ಕೆಮರಾಗಳ ಮೂಲಕ ನಿಗಾ ವಹಿಸಲಾಗುತ್ತಿದೆ.

ಇದನ್ನೂ ಓದಿ: AUS vs WI: ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲನೇ ಟಿ20ಐ ಗೆದ್ದು ಶುಭಾರಂಭ ಮಾಡಿದ ಆಸ್ಟ್ರೇಲಿಯಾ!

ಹನಿಮೂನ್ ಕೊಲೆ ಪ್ರಕರಣ

ಇಂದೋರ್ ಮೂಲದವರಾದ ರಾಜಾ ರಘುವಂಶಿ ಮತ್ತು ಸೋನಮ್ ಮೇ 11ರಂದು ವಿವಾಹವಾಗಿದ್ದು, ಹನಿಮೂನ್ ಗಾಗಿ ಮೇ 20 ರಂದು ಮೇಘಾಲಯಕ್ಕೆ ತೆರಳಿದ್ದರು. ಮೂರು ದಿನಗಳ ಕಾಲ ಸುತ್ತಾಡಿದ ದಂಪತಿ ಬಳಿಕ ನಾಪತ್ತೆಯಾಗಿದ್ದರು. ಅನಂತರ ತನಿಖೆ ತೀವ್ರಗೊಂಡಿದ್ದು, ಜೂನ್ 2ರಂದು ಕಮರಿನಲ್ಲಿ ರಾಜಾ ಅವರ ಮೃತ ದೇಹ ಪತ್ತೆಯಾಗಿತ್ತು. ಸೋನಮ್ ಜೂನ್ 7ರಂದು ರಾತ್ರಿ ಘಾಜಿಪುರದಲ್ಲಿ ಪತ್ತೆಯಾಗಿದ್ದಳು. ಆರಂಭದಲ್ಲಿ ಅಪಹರಣ ಕಥೆ ಕಟ್ಟಿ ಸೋತ ಆಕೆ ಅಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾಳೆ. ಅನಂತರ ಆಕೆಯ ಪ್ರಿಯಕರ ರಾಜ್ ಕುಶ್ವಾಹು ಸೇರಿದಂತೆ ಉಳಿದ ಮೂವರು ಹಂತಕರನ್ನು ಬಂಧಿಸಲಾಯಿತು.

ಈ ಘಟನೆಯ ಬಳಿಕ ಸೋನಮ್ ಅವರೊಂದಿಗೆ ಎಲ್ಲ ಸಂಬಂಧ ಕೊನೆಗೊಳಿಸಿರುವುದಾಗಿ ಅವರ ಸಹೋದರ ಹೇಳಿದ್ದರು. ಅಲ್ಲದೇ ರಾಜಾ ಅವರ ದುಃಖಿತ ಕುಟುಂಬ ಸದಸ್ಯರೊಂದಿಗೆ ನ್ಯಾಯಕ್ಕಾಗಿ ಹೋರಾಡುವುದಾಗಿ ತಿಳಿಸಿದ್ದರು.