Chikkaballapur News: ನಿರಂತರ ರಚನಾತ್ಮಕ ಅಧ್ಯಯನದಿಂದ ದೊಡ್ಡ ಸಾಧನೆ ಸಾಧ್ಯ : ಐಐಟಿ ವಿದ್ಯಾರ್ಥಿ ಕಿಶೋರ್ ಪ್ರೀತಂ
ಗುರುಗಳು, ತಾಯಿ-ತಂದೆಯ ಮಾರ್ಗದರ್ಶನ ಮತ್ತು ಅಜ್ಜಿಯ ಪ್ರೀತಿಯ ಬೆಂಬಲ ನನ್ನ ಸಾಧನೆಗೆ ಮುಖ್ಯವಾದ ಕಾರಣಗಳಾಗಿವೆ. ಈವರೆಗಿನ ಅಧ್ಯಯನ ಕ್ರಮದ ಜೊತೆಗೆ ಮುಂದೆ ಇನ್ನೂ ಆಧುನಿಕ ಉಪಕ್ರಮಗಳನ್ನು ಅಳವಡಿಸಿಕೊಂಡು ಹೆಚ್ಚಿನ ಸಾಧನೆ ಮಾಡುವ ವಿಶ್ವಾಸವಿದೆ. ನಾನು ಮ್ಯೆಕಾ ನಿಕಲ್ ಇಂಜಿನಿಯರ್ ಕ್ಷೇತ್ರದಲ್ಲಿ ಉನ್ನತ ಸಾಧನೆಮಾಡಿ ಸಮಾಜ ಮತ್ತು ದೇಶಕ್ಕೆ ಅಳಿಲಿನಷ್ಟು ಸೇವೆ ಸಲ್ಲಿಸ ಬೇಕೆಂಬ ಬಯಕೆ ನನಗಿದೆ

ನಿರಂತರ ರಚನಾತ್ಮಕ ಅಧ್ಯಯನದಿಂದ ಉನ್ನತ ಶಿಕ್ಷಣದ ಅವಕಾಶಗಳನ್ನು ಗಳಿಸಿಕೊಳ್ಳಲು ಸಾಧ್ಯವೆಂದು ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ಸ್ಥಾನಗಳಿಸಿ ಮದ್ರಾಸಿನ ಐ.ಐ.ಟಿಯಲ್ಲಿ ಸೀಟು ಗಿಟ್ಟಿಸಿಕೊಂಡಿರುವ ಕಿಶೋರ್ ಪ್ರೀತಮ್ ಅನುಭವ ಹಂಚಿಕೊಂಡರು.

ಚಿಕ್ಕಬಳ್ಳಾಪುರ ; ನಿರಂತರ ರಚನಾತ್ಮಕ ಅಧ್ಯಯನದಿಂದ ಉನ್ನತ ಶಿಕ್ಷಣದ ಅವಕಾಶಗಳನ್ನು ಗಳಿಸಿಕೊಳ್ಳಲು ಸಾಧ್ಯವೆಂದು ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಗಳಿಸಿ ಮದ್ರಾಸಿನ ಐ.ಐ.ಟಿಯಲ್ಲಿ ಸೀಟು ಗಿಟ್ಟಿಸಿಕೊಂಡಿರುವ ಕಿಶೋರ್ ಪ್ರೀತಮ್ ಅನುಭವ ಹಂಚಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜುಗಳು ನೀಡಿದ ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡುತ್ತಾ, ಗುರುಗಳ ಜೊತೆಗೆ ತಾಯಿ-ತಂದೆ ಹಾಗೂ ಅಜ್ಜಿಯ ಪ್ರೋತ್ಸಾಹ ದಾರಿ ಬೆಳಕಾಯಿತೆಂದು ತನ್ನ ಅನುಭವ ತೆರೆದಿಟ್ಟರು.
ಪ್ರಾಧ್ಯಾಪಕ ಡಾ.ಎಂ.ಶಂಕರ್ ಮತ್ತು ಶಿಕ್ಷಕಿ ಗಾಯಿತ್ರಿ ಅವರ ಪುತ್ರನಾದ ಕಿಶೋರ್ ಪ್ರೀತಮ್ ತನ್ನ ಸಾಧನೆಯ ದಾರಿ ವಿವರಿಸುತ್ತಾ ಪಠ್ಯಪುಸ್ತಕಗಳು, ಆಧಾರ ಪುಸ್ತಕಗಳ ಅಭ್ಯಾಸ ಮತ್ತು ಓದಿದ ವಿಷಯಗಳ ಪುನರ್ ಮನನ ಮಾಡುವುದನ್ನು ಪಾಲಿಸಿದ್ದರಿಂದ ಪರೀಕ್ಷೆಯಲ್ಲಿ 697ನೇ ರ‍್ಯಾಂಕ್ ಪಡೆದು ಮದ್ರಾಸಿನ ಐ.ಐ.ಟಿಯಲ್ಲಿ ಮ್ಯಕಾನಿಕಲ್ ಇಂಜಿನಿಯರ್ ಕೋರ್ಸಿನ ಸೀಟು ಪಡೆಯಲು ಸಾಧ್ಯವಾಯಿತು.
ಇದನ್ನೂ ಓದಿ: Chikkaballapur News: ಕಸಾಪದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಗುರುಗಳು, ತಾಯಿ-ತಂದೆಯ ಮಾರ್ಗದರ್ಶನ ಮತ್ತು ಅಜ್ಜಿಯ ಪ್ರೀತಿಯ ಬೆಂಬಲ ನನ್ನ ಸಾಧನೆಗೆ ಮುಖ್ಯವಾದ ಕಾರಣಗಳಾಗಿವೆ. ಈವರೆಗಿನ ಅಧ್ಯಯನ ಕ್ರಮದ ಜೊತೆಗೆ ಮುಂದೆ ಇನ್ನೂ ಆಧುನಿಕ ಉಪಕ್ರಮಗಳನ್ನು ಅಳವಡಿಸಿಕೊಂಡು ಹೆಚ್ಚಿನ ಸಾಧನೆ ಮಾಡುವ ವಿಶ್ವಾಸವಿದೆ. ನಾನು ಮ್ಯೆಕಾ ನಿಕಲ್ ಇಂಜಿನಿಯರ್ ಕ್ಷೇತ್ರದಲ್ಲಿ ಉನ್ನತ ಸಾಧನೆಮಾಡಿ ಸಮಾಜ ಮತ್ತು ದೇಶಕ್ಕೆ ಅಳಿಲಿನಷ್ಟು ಸೇವೆ ಸಲ್ಲಿಸಬೇಕೆಂಬ ಬಯಕೆ ನನಗಿದೆ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಡಾ. ಕೋಡಿರಂಗಪ್ಪ ಮಾತನಾಡಿ ಪ್ರತಿ ವಿದ್ಯಾರ್ಥಿಯಲ್ಲೂ ಯಾವುದೋ ಒಂದು ಅಥವಾ ಹಲವು ಸಾಮರ್ಥ್ಯಗಳಿರುತ್ತವೆ. ಸಕಾಲದಲ್ಲಿ ಪ್ರತಿಭೆಯನ್ನು ಗುರುತಿಸಿ ನಿರಂತರ ಅಧ್ಯಯನ ಮುಂದುವರೆಸಿದರೆ ಸಾಧನೆ ನಮ್ಮದಾಗುತ್ತದೆ. ಅದಮ್ಯ ಆತ್ಮವಿಶ್ವಾಸ, ಸ್ಪಷ್ಟ ಗುರಿ, ಪಠ್ಯ ಮತ್ತು ಆಧಾರ ಪುಸ್ತಕಗಳ ಆಳವಾದ ಅಧ್ಯಯನದಿಂದ ಪರಿಣಿತಿ ಹಾಗೂ ರ‍್ಯಾಂಕ್‌ಗಳಿಸಬಹುದು. ಗುರುಗಳು ಮತ್ತು ಪೋಷಕರ ಸಹಕಾರಕ್ಕಿಂತ ಅತಿದೊಡ್ಡ ಶಕ್ತಿ ನಿಮ್ಮದೇ ಆಗಬೇಕು. ಆಧುನಿಕ ಅಧ್ಯಯನ ತಂತ್ರಗಳು, ಸ್ವಯಂ ಅಧ್ಯಯನ ಮತ್ತು ವಸ್ತುನಿಷ್ಠ ಬರವಣಿಗೆ ಸಾಮರ್ಥ್ಯಗಳು ಉನ್ನತ ಸ್ಥಾನಮಾನಗಳಿಗೆ ಪ್ರೇರಣೆಯಾಗುತ್ತವೆ. ಆದರೆ ಹಣ, ಅಧಿಕಾರ ಅಂತಸ್ತಿನ ಹಿಂದೆ ಬೀಳದೇ ಆಳವಾದ ಅಧ್ಯಯನ ಮತ್ತು ರಚನಾತ್ಮಕ ಕಾರ್ಯದಲ್ಲಿ ಮುಳುಗಿಹೋಗಬೇಕೆಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜಿ.ಪಿ. ಬಾಹುಬಲಿ ಅಧ್ಯಯನಶೀಲತೆಯ ಬಗೆಗಿನ ದೃಷ್ಠಾಂತ ಗಳನ್ನು ನೀಡಿ ಪ್ರತಿಯೊಬ್ಬರೂ ಗುರಿಸಾಧನೆಗೆ ಸೂಕ್ತ ಮಾರ್ಗವನ್ನು ರೂಪಿಸಿಕೊಂಡು ಮುಂದು ವರೆಯಬೇಕು ಎಂದರು. ಪ್ರಾಧ್ಯಾಪಕ ಡಾ. ಎಂ. ಶಂಕರ್ ಮಗನ ಸಾಧನೆಯನ್ನು ಅಭಿನಂದಿಸಿ, ಅವನ ಅಧ್ಯಯನ ಸ್ವಭಾವವನ್ನು ತಿಳಿಸಿದರು. ಕಸಾಪ ಕಾರ್ಯಕಾರಿ ಸಮಿತಿಯ ಸಿ.ಚನ್ನಮಲ್ಲಿ ಕಾರ್ಜುನಯ್ಯ, ಅಮೃತ್ ಕುಮಾರ್, ಎಸ್.ಸತೀಶ್, ಕೆ.ಎಂ.ರೆಡ್ಡಪ್ಪ, ಟಿ.ನಾರಾಯಣಸ್ವಾಮಿ, ಪ್ರೇಮಲೀಲಾ ಮತ್ತು ವೆಂಕಟೇಶ್, ಜಯಮ್ಮ, ವಿಜಯಲಕ್ಷ್ಮೀರವರು ಪ್ರೀತಮ್‌ಗೆ ಶುಭ ಕೋರಿದರು.
ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜಿನ ಅಧ್ಯಾಪಕರಾದ ಮಹೇಶ್, ನಾಗರಾಜ್, ಸಂತೋಷ್, ಮಂಜುಳ ಮತ್ತು ಲಕ್ಷ್ಮೀನರಸಿಂಹ ಹಾಗೂ ಬಿ.ಇಡಿ ತರಬೇತಿ ಶಿಕ್ಷಕರು ಪಾಲ್ಗೊಂಡಿದ್ದರು.