Donald Trump: ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್‌ಗೆ ಗುಂಡು; ವೇದಿಕೆ ಮೇಲೆ ಪ್ರಾಣ ಬಿಟ್ಟ ಟ್ರಂಪ್ ಅತ್ಯಾಪ್ತ
ಯುವ ರಿಪಬ್ಲಿಕನ್ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅಧ್ಯಕ್ಷ ಟ್ರಂಪ್ ಅವರ ಆತ್ಮೀಯನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೆರಿಕದ ಉಟಾವಾ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿದ್ದಾರೆ. ಈ ರಾಜಕೀಯ ಹತ್ಯೆ ಅಮೆರಿಕವನ್ನು ಅಕ್ಷರಶಃ ಬೆಚ್ಚಿಬೀಳಿಸಿದ್ದು, ಎಲ್ಲೆಡೆ ಆತಂಕ ಮೂಡಿಸಿದೆ.

-

ವಾಷಿಂಗ್ಟನ್: ಯುವ ರಿಪಬ್ಲಿಕನ್ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅಧ್ಯಕ್ಷ ಟ್ರಂಪ್ ಅವರ ಆತ್ಮೀಯನನ್ನು (Donald Trump) ಗುಂಡಿಕ್ಕಿ ಕೊಲ್ಲಲಾಗಿದೆ. ಮೆರಿಕದ ಉಟಾವಾ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿದ್ದಾರೆ. ಈ ರಾಜಕೀಯ ಹತ್ಯೆ ಅಮೆರಿಕವನ್ನು ಅಕ್ಷರಶಃ ಬೆಚ್ಚಿಬೀಳಿಸಿದ್ದು, ಎಲ್ಲೆಡೆ ಆತಂಕ ಮೂಡಿಸಿದೆ. ದುಷ್ಕರ್ಮಿ ಹಾರಿಸಿದ ಒಂದೇ ಒಂದು ಗುಂಡಿನಿಂದ ಚಾರ್ಲಿ ಕಿರ್ಕ್ ಕೊನೆಯುಸಿರೆಳೆದಿದ್ದಾರೆ. ಅವರು ಭಾಷಣ ಮಾಡುತ್ತಿದ್ದ ವಿವಿ ಕ್ಯಾಂಪಸ್‌ನ್ನೂ ಈ ಗುಂಡಿನ ದಾಳಿಯ ನಂತರ ಫೂರ್ತಿ ಸೀಲ್ ಮಾಡಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಟರ್ನಿಂಗ್ ಪಾಯಿಂಟ್ ಯುಎಸ್‌ಎ ಎಂಬ ಸಂಸ್ಥೆಯ ಸಿಇಒ ಕೂಡ ಆಗಿರುವ 31 ವರ್ಷದ ಚಾರ್ಲಿ ಕಿರ್ಕ್, 'ದಿ ಅಮೆರಿಕನ್ ಕಾಮ್‌ಬ್ಯಾಕ್' ಪ್ರೂವ್ ಮೀ ರಾಂಗ್ ಎಂಬ ಘೋಷಣೆಗಳನ್ನು ಕೂಗುತ್ತಿರುವ ಸಮಾರಂಭವೊಂದಕ್ಕೆ ಭಾಗವಹಿಸಿದ್ದರು. ಆಗಲೇ ಅವರು ಮೇಲೆ ಗುಂಡನ್ನು ಹಾರಿಸಲಾಗಿದೆ. ಕಿರ್ಕ್ ಅವರು ತಮ್ಮ ಕತ್ತನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅವರ ಗಂಟಲಿನಿಂದ ರಕ್ತ ಸುರಿಯುತ್ತಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಆಗಿವೆ. ಚಾರ್ಲಿ ಕಿರ್ಕ್ ಅವರ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೇ, ವಿದ್ಯಾರ್ಥಿಗಳು ಭಯಭೀತರಾಗಿ ಓಡಿಹೋದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ರಾಜಕೀಯ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಟ್ರಂಪ್ ಆಕ್ರೋಶ
ಚಾರ್ಲಿ ಕಿರ್ಕ್ ಹತ್ಯೆಯನ್ನು ಖಂಡಿಸಿರುವ ಟ್ರಂಪ್ ಆಕ್ರೋಶ ಹೊರಹಾಕಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಯುವಕರ ಹೃದಯವನ್ನು ಚಾರ್ಲಿಗಿಂತ ಚೆನ್ನಾಗಿ ಯಾರೂ ಅರ್ಥಮಾಡಿಕೊಂಡಿಲ್ಲ ಅವರನ್ನು ಎಲ್ಲರೂ, ವಿಶೇಷವಾಗಿ ನಾನು ಪ್ರೀತಿಸುತ್ತಿದ್ದೆ ಮತ್ತು ಮೆಚ್ಚುತ್ತಿದ್ದೆ. ಅಮೆರಿಕನ್ ಮೌಲ್ಯಗಳಿಗಾಗಿ ತಮ್ಮ ಬದುಕನ್ನು ಮುಡುಪಿಟ್ಟಿದ್ದರೋ, ಮತ್ತು ಯಾವ ಅಮೆರಿಕನ್ ಮೌಲ್ಯಗಳಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೋ, ಆ ಮೌಲ್ಯಗಳಿಗೆ ಬದ್ಧರಾಗಬೇಕೆಂದು ನಾನು ಎಲ್ಲಾ ಅಮೆರಿಕನ್ನರಲ್ಲಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Donald Trump: ಚೀನಾಗೆ ಬುದ್ಧಿ ಕಲಿಸಲು ಹೋಗಿ ನಾನು ಭಾರತ-ರಷ್ಯಾವನ್ನು ಕಳೆದುಕೊಂಡೆ; ಬೇಸರದಿಂದ ಟ್ವೀಟ್ ಮಾಡಿದ ಟ್ರಂಪ್
ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್, "ಚಾರ್ಲಿ ಕಿರ್ಕ್ ಹತ್ಯೆಗೆ ಸಂಬಂಧಿಸಿದಂತೆ ಕಾನೂನು ಜಾರಿ ಅಧಿಕಾರಿಗಳು, ಘಟನಾ ಸ್ಥಳದಲ್ಲಿ ಓರ್ವ ಶಂಕಿತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಆತ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ, ಆತನನ್ನು ಬಿಡುಗಡೆ ಮಾಡಲಾಗಿದೆ. ನೈಜ ಕೊಲೆಗಾರನ ಬಂಧನಕ್ಕೆ ಶೋಧಕಾರ್ಯ ನಡೆಯುತ್ತಿದೆ" ಎಂದು ಸ್ಪಷ್ಟಪಡಿಸಿದ್ದಾರೆ.