ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mumbai Crime News: ಪ್ರೀತಿ ಒಲ್ಲೆ ಎಂದಿದ್ದೇ ತಪ್ಪಾಯ್ತಾ? ಪ್ರೇಯಸಿಗೆ ಚಾಕು ಇರಿದ ಪಾಗಲ್‌ ಪ್ರೇಮಿ!

Man Stabs Girlfriend: 24 ವರ್ಷದ ವ್ಯಕ್ತಿ ಸೋನು ಬಾರೈ ಎಂಬಾತ ತನ್ನ ಮಾಜಿ ಪ್ರೇಯಸಿ ಮನೀಷಾ ಯಾದವ್‌ಗೆ ಬರ್ಬರವಾಗಿ ಇರಿದು ಹತ್ಯೆಗೆ ಯತ್ನಿಸಿದ್ದಾನೆ. ನಂತರ ತನ್ನನ್ನು ತಾನು ಚುಚ್ಚಿಕೊಂಡು ಸಾವನ್ನಪ್ಪಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮನಿಷಾ ಯಾದವ್‌ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಬ್ರೇಕ್‌ಅಪ್‌ ಎಂದ ಪ್ರೇಯಸಿಗೆ ಚಾಕು ಇರಿದ ಪಾಗಲ್‌ ಪ್ರೇಮಿ

-

Rakshita Karkera Rakshita Karkera Oct 24, 2025 4:38 PM

ಮುಂಬೈ: ಬ್ರೇಕ್‌ ಅಪ್‌ ಮಾಡಿಕೊಂಡ ಮಾಜಿ ಪ್ರೇಯಸಿಯನ್ನು ಬರ್ಬರವಾಗಿ ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ. 24 ವರ್ಷದ ವ್ಯಕ್ತಿ ಸೋನು ಬಾರೈ ಎಂಬಾತ ತನ್ನ ಮಾಜಿ ಪ್ರೇಯಸಿ ಮನೀಷಾ ಯಾದವ್‌ಗೆ ಬರ್ಬರವಾಗಿ ಇರಿದು ಹತ್ಯೆಗೆ(Mumbai Crime News) ಯತ್ನಿಸಿದ್ದಾನೆ. ನಂತರ ತನ್ನನ್ನು ತಾನು ಚುಚ್ಚಿಕೊಂಡು ಸಾವನ್ನಪ್ಪಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮನಿಷಾ ಯಾದವ್‌ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಜೋಡಿ ಕೆಲವು ತಿಂಗಳ ಹಿಂದೆಯೇ ಬ್ರೇಕಪ್‌ ಮಾಡಿಕೊಂಡಿತ್ತು. ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳ ಆಗಿದ್ದು, ಇದೇ ಕಾರಣಕ್ಕೆ ಸೋನು ಮನೀಷಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Triple Murder Case: ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ

ಏನಿದು ಪ್ರಕರಣ?

ಸೋನು ಬರೈ ಮತ್ತು ಮನಿಷಾ ಯಾದವ್ ಸ್ವಲ್ಪ ಸಮಯ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ ಯಾವುದೋ ಕಾರಣಕ್ಕೆ ಎಂಟು ದಿನಗಳ ಹಿಂದೆ ಇಬ್ಬರೂ ಬ್ರೇಕಪ್‌ ಮಾಡಿಕೊಂಡಿದ್ದರು. ಸೋನು ಸದಾ ಮನಿಷಾಳ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಬ್ರೇಕಪ್‌ ನಂತರವೂ ಆಕೆಯನ್ನು ನಿರಂತರ ಪೀಡಿಸುತ್ತಲೇ ಇದ್ದ. ಶುಕ್ರವಾರ ಬೆಳಿಗ್ಗೆ, ಸೋನು ತನ್ನ ತಾಯಿಗೆ ತಾನು ಹೊರಗೆ ಹೋಗುತ್ತಿದ್ದೇನೆ ಎಂದು ತಿಳಿಸಿದನು. ತನ್ನ ಜೊತೆಗೆ ಅಡುಗೆಮನೆಯ ಚಾಕುವನ್ನು ಕದ್ದೊಯ್ದಿದ್ದ

ನಂತರ ಅವನು ಮನಿಷಾಗೆ ಕರೆ ಮಾಡಿ ಕೊನೆಯ ಬಾರಿಗೆ ಭೇಟಿಯಾಗುವಂತೆ ನರ್ಸಿಂಗ್ ಹೋಂಗೆ ಕರೆದಿದ್ದ. ಅವರು ಭೇಟಿಯಾಗುತ್ತಿದ್ದಂತೆ, ಜಗಳವಾಯಿತು, ಮತ್ತು ಕೋಪಗೊಂಡ ಸೋನು, ಮನಿಷಾ ಯಾದವ್ ಗೆ ಚಾಕುವಿನಿಂದ ಇರಿದ. ಆಕೆಯ ಮೇಲೆ ದಾಳಿ ಮಾಡಿದ ನಂತರ, ತನ್ನನ್ನು ತಾನೇ ಇರಿದುಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸೋನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತ ಮನಿಷಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.