Belagavi news: ಅನೈತಿಕ ಸಂಬಂಧದ ಶಂಕೆ, ಗಂಡನ ಮೇಲೆ ಕುದಿವ ಎಣ್ಣೆ ಸುರಿದ ಹೆಂಡತಿ
Illicit relationship: ಗಂಡ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಹೆಂಡತಿ ವೈಶಾಲಿಗೆ ಸಂಶಯವಿತ್ತು. ಈ ವಿಚಾರದಲ್ಲಿ ಇಬ್ಬರಿಗೂ ಜಗಳವಾಗುತ್ತಿತ್ತು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ, ಮನೆಗೆ ಬಂದ ಗಂಡನ ಮೇಲೆ ಸುಡುವ ಎಣ್ಣೆ ತಂದು ಹೆಂಡತಿ ಸುರಿದಿದ್ದಾಳೆ.

-

ಬೆಳಗಾವಿ: ಬೆಳಗಾವಿ (Belagavi news) ತಾಲೂಕಿನ ಮಚ್ಚೆ ಎಂಬಲ್ಲಿ ಗಂಡನ ಮೇಲೆ ಹೆಂಡತಿ ಕುದಿಯುತ್ತಿರುವ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ (Murder attempt) ಘಟನೆ ಮಂಗಳವಾರ ನಡೆದಿದೆ. ಗಂಡನ ಮೈಯೆಲ್ಲಾ ಸುಟ್ಟುಹೋಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನೈತಿಕ ಸಂಬಂಧದ (illicit relationship) ಶಂಕೆಯಿಂದ, ಗಂಡ ಸುಭಾಷ್ ಪಾಟೀಲ್ (55) ಮೇಲೆ ಹೆಂಡತಿ ವೈಶಾಲಿ ಪಾಟೀಲ್ ಸುಡುವ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾಳೆ.
ವೈಶಾಲಿ ಗಂಡ ಸುಭಾಷ್ ಸಿಲಿಂಡರ್ ವಿತರಣೆ ಕೆಲಸ ಮಾಡುತ್ತಿದ್ದರು. ಗಂಡ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಹೆಂಡತಿ ವೈಶಾಲಿಗೆ ಸಂಶಯವಿತ್ತು. ಈ ವಿಚಾರದಲ್ಲಿ ಇಬ್ಬರಿಗೂ ಜಗಳವಾಗುತ್ತಿತ್ತು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ, ಮನೆಗೆ ಬಂದ ಗಂಡನ ಮೇಲೆ ಸುಡುವ ಎಣ್ಣೆ ತಂದು ಹೆಂಡತಿ ಸುರಿದಿದ್ದಾಳೆ. ಗಾಯಾಳು ಸುಭಾಷ್‌ರನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: Caste census: ಜಾತಿ ಗಣತಿಗೆ ಆಧಾರ್ ಸಂಖ್ಯೆ ಜತೆ ಒಟಿಪಿ ಕೇಳುತ್ತಿರುವ ಸಮೀಕ್ಷಕರು; ಸೈಬರ್ ವಂಚನೆ ಭೀತಿಯಲ್ಲಿ ನಾಗರಿಕರು!
ತವರು ಮನೆಯಿಂದ ಬರಲೊಪ್ಪದ ಪತ್ನಿಯ ಕೊಲೆ
ಯಾದಗಿರಿ: ತವರು ಮನೆಯಿಂದ ಬರಲು ಒಪ್ಪದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಕೊಂದಿರುವ ಘಟನೆ ಜಿಲ್ಲೆಯ ಸುರಪುರ ನಗರದ ಡೋಣಿಗೇರಾದಲ್ಲಿ ನಡೆದಿದೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಪತಿ, ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಹತ್ಯೆಗೀಡಾದ ಮಹಿಳೆಯನ್ನು ಮರಿಯಮ್ಮ (35) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಸಂಗಪ್ಪ (40) ಸುರಪುರ ತಾಲೂಕಿನ ಕಕ್ಕೇರಿ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಮತ್ತು ಪತ್ನಿ ಮರಿಯಮ್ಮ ಮಧ್ಯೆ ವೈಮನಸ್ಸು ಶುರುವಾಗಿತ್ತು.ಹೀಗಾಗಿ ಮರಿಯಮ್ಮ ತನ್ನ ಗಂಡನೊಂದಿಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ತವರು ಮನೆ ಸೇರಿದ್ದಳು.
ಶನಿವಾರ ತಡರಾತ್ರಿ ಸಂಗಪ್ಪ ತನ್ನ ಪತ್ನಿಯನ್ನು ಮನೆಗೆ ಕರೆಯಲು ಡೋಣಿಗೇರಾದ ಆಕೆಯ ಮನೆಗೆ ಹೋಗಿದ್ದ. ಆದರೆ, ಮರಿಯಮ್ಮ ಗಂಡನ ಮನೆಗೆ ಬರಲು ನಿರಾಕರಿಸಿ, ವಾದ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಸಂಗಪ್ಪ, ಗಂಡನ ಮಾತಿಗೆ ಮರ್ಯಾದೆ ಕೊಡಲ್ವಾ. ಮನೆಗೆ ಬಂದಿಲ್ಲ ಎಂದರೆ ಬದುಕಿರಲೇ ಬೇಡ ಎಂದು ಮನೆಯಲ್ಲಿದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ತಲೆಗೆ ಗಂಭೀರ ಗಾಯವಾಗಿ, ಮರಿಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆ ನಂತರ ಸಂಗಪ್ಪ, ಸುರಪುರ ಪೊಲೀಸ್ ಠಾಣೆಗೆ ಹೋಗಿ, ತನ್ನ ಪತ್ನಿಯನ್ನು ಕೊಂದಿದ್ದೇನೆ ಎಂದ ಹೇಳಿ ಶರಣಾಗಿದ್ದಾನೆ.