ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rakesh Kishore: CJI ಗವಾಯಿ ಮೇಲೆ ಶೂ ಎಸೆದ ರಾಕೇಶ್ ಕಿಶೋರ್ ಯಾರು? ಘಟನೆ ಹಿಂದಿದೆಯಾ ಆ ಕಾರಣ?

ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಬಿರ್.ಆರ್ ಗವಾಯಿ ಅವರು ನ್ಯಾಯಾಲಯದಲ್ಲಿ ಕಲಾಪ ನಡೆಸುವ ವೇಳೆ ವಕೀಲ ರಾಕೇಶ್ ಕಿಶೋರ್ (Rakesh Kishore)ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದಾನೆ. ಹಾಗಾದ್ರೆ ಈ ಅಹಿತಕರ ಘಟನೆಗೆ ಕಾರಣವಾದ ರಾಕೇಶ್ ಕಿಶೋರ್ ಯಾರು...? ಅವರ ಈ ನಡೆಗೆ ಕಾರಣವೇನು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

CJI ಗವಾಯಿ ಮೇಲೆ ಶೂ ಎಸೆತ ಯತ್ನ ಮಾಡಿದ್ದೇಕೆ ಗೊತ್ತಾ..?

ಬಿ ಆರ್ ಗವಾಯಿ - ರಾಕೇಶ್ ಕಿಶೋರ್ -

Profile Sushmitha Jain Oct 7, 2025 11:24 AM

ನವದೆಹಲಿ: ಸುಪ್ರೀಂಕೋರ್ಟ್ (Supreme Court )​ ಮುಖ್ಯ ನ್ಯಾಯಮೂರ್ತಿ (CJI) ಬಿ ಆರ್ ಗವಾಯಿ (B. R. Gavai) ಅವರ ಮೇಲೆ ಶೂ ಎಸೆತದ ಘಟನೆಗೆ ಸಂಬಂಧಪಟ್ಟಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಸುಪ್ರೀಂ ಕೋರ್ಟ್ ನ ವಕೀಲರೊಬ್ಬರ ಈ ನಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ಟೋಬರ್ 06 ರಂದು ಈ ಘಟನೆ ನಡೆದಿದ್ದು, ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಬಿರ್.ಆರ್ ಗವಾಯಿ ಅವರು ನ್ಯಾಯಾಲಯದಲ್ಲಿ ಕಲಾಪ ನಡೆಸುವ ವೇಳೆ ವಕೀಲ ರಾಕೇಶ್ ಕಿಶೋರ್ (Rakesh Kishore) ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದಾನೆ. ಹಾಗಾದ್ರೆ ಈ ಅಹಿತಕರ ಘಟನೆಗೆ ಕಾರಣವಾದ ರಾಕೇಶ್ ಕಿಶೋರ್ ಯಾರು...? ಅವರ ಈ ನಡೆಗೆ ಕಾರಣವೇನು..? ಮಾಹಿತಿ ಇಲ್ಲಿದೆ.

ರಾಕೇಶ್ ಕಿಶೋರ್ ಯಾರು..?

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್‌ನ ನೋಂದಾಯಿತ ಸದಸ್ಯರಾಗಿರುವ ರಾಕೇಶ್ ಕಿಶೋರ್ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾಗಿದ್ದು, ಮೂಲತಃ ದೆಹಲಿಯ ಮಯೂರ್ ವಿಹಾರ್ ಪ್ರದೇಶದ ನಿವಾಸಿಯಾಗಿದ್ದಾರೆ. ಅವರು 2009ರಲ್ಲಿ ದೆಹಲಿ ಬಾರ್ ಕೌನ್ಸಿಲ್‌ನೊಂದಿಗೆ ನೋಂದಾಯಿಸಿಕೊಂಡಿದ್ದು,ಕಿಶೋರ್ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ (BHU) ವೈದ್ಯಕೀಯ ಕೀಟಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಾಗಿ ಕಾರ್ಯಚಾರಿಸಿದ್ದಾರೆ ಎಂದು ಹೇಳಿಕೊಂಡಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎನ್ನಲಾಗಿದೆ. ಅವರ ಬಗ್ಗೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​(SCBA) ಸದಸ್ಯರು ವಿಭಿನ್ನ ಅಭಿಪ್ರಾಯವನ್ನು ಹೊರ ಹಾಕಿದ್ದು, SCBA ಜಂಟಿ ಕಾರ್ಯದರ್ಶಿ ಮನೀಶ್ ದುಬೆ, 'ಅವರು 2011 ರಿಂದ SCBA ಯ ತಾತ್ಕಾಲಿಕ ಸದಸ್ಯರಾಗಿದ್ದರೂ ಕೋರ್ಟ್ ಅಲ್ಲಿ ಕಾಣಿಸಿಕೊಂಡಿದ್ದು ಮಾತ್ರ ವಿರಳ. ಶಾಶ್ವತ ಸದಸ್ಯತ್ವ ಪಡೆಯಲು ಸತತ ಎರಡು ವರ್ಷಗಳ ಕಾಲ ಕನಿಷ್ಠ 20 ಪ್ರಕರಣಗಳ ಭಾಗಿಯಾಗಿ ವಾದವನ್ನು ಮಂಡಿಸಬೇಕು. ಆದರೆ ಅವರು ನಿರ್ದಿಷ್ಟ ಪ್ರಕರಣ ಭಾಗಿಯಾಗಲೇ ಇಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಓದಿ; CJI BR Gavai: "ಸನಾತನ ಧರ್ಮಕ್ಕೆ ಅವಮಾನ ಮಾಡಿದ್ರೆ ಸಹಿಸಲ್ಲ"; ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ವಕೀಲ!

ಘಟನೆಗೆ ಕಾರಣವೇನು..?

ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಗೆ ಒಳಪಡುವ ಖಜುರಾಹೊ ದೇವಾಲಯ ಸಂಕೀರ್ಣದ ಭಾಗವಾಗಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್ನಿರ್ಮಿಸಲು ಮತ್ತು ಮರುಸ್ಥಾಪಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ಗವಾಯಿ ನೇತೃತ್ವದ ಪೀಠ ವಜಾಗೊಳಿಸಿತ್ತು. ಈ ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯ (ASI) ವ್ಯಾಪ್ತಿಯಲ್ಲಿ ಇದನ್ನು ಇತ್ಯರ್ಥಗೊಳಿಸಿಕೊಳ್ಳುವಂತೆ ಆದೇಶಿಸಿ ಅರ್ಜಿ ವಜಾಗೊಳಿಸಿತ್ತು. ಅಲ್ಲದೇ ನೀವು ಪ್ರಚಾರ ಹಿತಾಸಕ್ತಿಗಾಗಿ ಅರ್ಜಿಯನ್ನು ಸಲ್ಲಿಸಿದ್ದೀರಾ, ಆದ್ರೆ ಯಾವುದೇ ಕೆಲಸ ಮಾಡುವುದರಿದ್ದರೂ ಎಎಸ್‌ಐ ಅನುಮತಿ ಕಡ್ಡಾಯವಾಗಿದೆ. ಹೇಗಿದ್ದರೂ ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಹೋಗಿ ದೇವರಲ್ಲೇ ಏನಾದರೂ ಮಾಡುವಂತೆ ಬೇಡಿಕೊಳ್ಳಿ.ಈಗಲೇ ಹೋಗಿ ಪ್ರಾರ್ಥಿಸಿ ಮತ್ತು ಸ್ವಲ್ಪ ಧ್ಯಾನ ಮಾಡಿ ಎಂದು ಸಿಜೆಐ ಗವಾಯಿ ಹೇಳಿದ್ದರು. ಅವರ ಈ ಹೇಳಿಕೆಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಟೀಕೆಗೆ ಒಳಗಾಗಿತ್ತು. ಈ ಕುರಿತಾಗಿ ಮತ್ತೇ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ಬಹಿರಂಗವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಸಿಜೆಐ, ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಹಿಸಲಾಗುತ್ತಿದೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಹೇಳಿದ್ದರು. ಈ ಎಲ್ಲಾ ಹೇಳಿಕೆಗಳಿಂದ ಅಸಮಾಧನಕ್ಕೆ ಒಳಗಾದ ರಾಕೇಶ್ ಕಿಶೋರ್ ಉದ್ಧಟತನ ಪ್ರದರ್ಶಿಸಿದ್ದು, ಸಿಜೆಐ ಮೇಲೆಯೇ ಶೂ ಎಸೆಯಲು ವಿಫಲ ಪ್ರಯತ್ನ ಮಾಡಿದ್ದ. ಘಟನೆ ಬಳಿಕ ಮಧ್ಯಪ್ರವೇಶಿಸಿದ ಭದ್ರತಾ ಸಿಬ್ಬಂದಿ ತಕ್ಷಣ, ವಕೀಲನನ್ನು ಹೊರಗೆ ಕರೆದೊಯ್ದಿದ್ದರು, ಈ ವೇಳೆ, ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ’ ಅಂತ ರಾಕೇಶ್ ಕೂಗಿ ಹೇಳಿದ್ದರು.

ಘಟನೆ ಬಗ್ಗೆ ರಾಕೇಶ್ ಹೇಳೋದ್ದೇನು..?

ಸಿಜೆಐ ಮೇಲೆಯೇ ಶೂ ಎಸೆತ ಪ್ರಯತ್ನ ಮಾಡಿದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ವಕೀಲ ರಾಕೇಶ್ ಕಿಶೋರ್ ಹೇಳಿದ್ದು, ನಾನು ಮಾಡಿದ್ದು ಸರಿಯಿದೆ ಎಂದು ವಿತಂಡ ವಾದ ಮಾಡಿದ್ದಾರೆ. ಅಲ್ಲದೇ ಅವರ ಈ ಅಹಿತಕರ ಘಟನೆಗೆ ದೇವರೇ ನನ್ನನ್ನು ಪ್ರಚೋದಿಸಿದ್ದು ಎಂದು ಹೇಳಿದ್ದು, ಈ ಪ್ರಕರಣದ ಸಲುವಾಗಿ ನಾನು ಯಾವುದೇ ಪರಿಣಾಮ ಎದುರಿಸಲು ಸಿದ್ಧನಿದ್ದೇನೆ. ನಾನು ಜೈಲಿಗೆ ಹೋಗುತ್ತೇನೆ. ಅಲ್ಲಿನ ದೇವರ ಹೆಸರಿನಲ್ಲೇ ಎಲ್ಲವನ್ನೂ ಸಹಿಸುತ್ತೇನೆಂದು ಹೇಳಿದ್ದಾರೆ.

ಇನ್ನು ಘಟನೆಗೆ ಬಗ್ಗೆ ಬಹಳ ತಾಳ್ಮೆಯಿಂದ ಪ್ರತಿಕ್ರಿಯಿಸಿದ ಸಿಜೆಐ ಗವಾಯಿ, ಘಟನೆಯಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗಿಲ್ಲ. ಇಂತಹ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ’ ಅಂತ ಕೋರ್ಟ್‌ನಲ್ಲಿದ್ದ ವಕೀಲರಿಗೆ ವಾದ ಮುಂದುವರಿಸಲು ಸೂಚಿಸಿದ್ದರು.