ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಚಾಲಕ, ಕಂಡಕ್ಟರ್ ಬಂಧನ
Physical Assault: ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೇ. ಆರೋಪದ ಮೇಲೆ ಬಸ್ ಚಾಲಕ ಹಾಗೂ ಕಂಡಕ್ಟರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಇಂಟರ್ ನೆಟ್ ಚಿತ್ರ -
ನವದೆಹಲಿ: ಉತ್ತರ ಪ್ರದೇಶದಿಂದ ತಮ್ಮ ಸಂಬಂಧಿಕರ ಮನೆಗೆ (Physical Assault ) ತೆರಳುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಸ್ಲೀಪರ್ ಬಸ್‌ನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ದೆಹಲಿ ಎನ್‌ಸಿಆರ್ (Delhi NCR) ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ಮಾರ್ಗಮಧ್ಯೆ ತಪ್ಪಾಗಿ ಬೇರೆ ನಿಲ್ದಾಣದಲ್ಲಿ ಇಳಿದಿದ್ದಳು ಇನ್ನಲಾಗಿದೆ. ರಾತ್ರಿ ವೇಳೆ ಅಪರಿಚಿತ ಪ್ರದೇಶದಲ್ಲಿ ಸಿಲುಕಿದ್ದ ಆಕೆ ಆ ಮಾರ್ಗವಾಗಿ ತೆರಳುತ್ತಿದ್ದ ಖಾಲಿ ಸ್ಲೀಪರ್ ಬಸ್‌ಗೆ ಸಹಾಯ ಕೋರಿ ನಿಲ್ಲಿಸಿದ್ದಳು. ಈ ವೇಳೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ.
ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮೈನ್‌ಪುರಿ ಮೂಲದ 11ನೇ ತರಗತಿಯ ವಿದ್ಯಾರ್ಥಿನಿ, ಆಗಸ್ಟ್ 4ರಂದು ಕುಟುಂಬದವರೊಂದಿಗೆ ಮನಸ್ತಾಪ ಮಾಡಿಕೊಂಡು ನೋಯ್ಡಾದಲ್ಲಿರುವ ತಮ್ಮ ಸೋದರಸಂಬಂಧಿ ಮನೆಗೆ ಹೊರಟಿದ್ದಳು. ಆದರೆ, ರಾತ್ರಿ ವೇಳೆ ಭಾರಿ ಮಳೆಯಿಂದಾಗಿ ಆಕೆ ತಪ್ಪಾಗಿ ನೋಯ್ಡಾದ ಪರಿ ಚೌಕ್ ಎಂಬಲ್ಲಿ ಇಳಿದುಕೊಂಡಿದ್ದಳು. ಈ ವೇಳೆ ಸ್ಲೀಪರ್ ಬಸ್‌ಗೆ ಸಹಾಯ ಕೋರಿ ಬಾಲಕಿ ಬಸ್ ನಿಲ್ಲಿಸಿದ್ದಾಳೆ. ಬಾಲಕಿಯ ಸಂಕಷ್ಟದಲ್ಲಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಸಹಾಯ ಮಾಡುವುದಾಗಿ ನಂಬಿಸಿ 47 ಕಿಲೋಮೀಟರ್‌ಗಳಷ್ಟು ದೂರ ಕರೆದೊಯ್ಯುದು ಕೃತ್ಯ ಎಸಗಿದ್ದಾರೆ.
ಬಸ್ ಚಲಿಸಲು ಪ್ರಾರಂಭಿಸಿದ ತಕ್ಷಣವೇ ಬಸ್ ನಿರ್ವಾಹಕ ಸಂದೀಪ್ ಬಾಲಕಿಗೆ ಅಸಭ್ಯವಾಗಿ ವರ್ತಿಸಲು ಶುರುಮಾಡಿದ್ದಾನೆ. ನಂತರ ಚಾಲಕ ಕುಲದೀಪ್ ಮತ್ತು ಸಂದೀಪ್ ಇಬ್ಬರೂ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ವಿರೋಧಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಮತ್ತೆ ಪೆರೋಲ್‌ನಲ್ಲಿ ಜೈಲಿನಿಂದ ಹೊರಗೆ ಬಂದ ಗುರುಮೀತ್ ರಾಮ್ ರಹೀಮ್; ಅತ್ಯಾಚಾರ ಆರೋಪಿಗೆ ವಿಐಪಿ ಟ್ರೀಟ್‌ಮೆಂಟ್?
ಕೃತ್ಯ ಎಸಗಿದ ಬಳಿಕ ಬಾಲಕಿಯನ್ನು ದೆಹಲಿಯ ಕಾಶ್ಮೀರಿ ಗೇಟ್ ರಸ್ತೆ ಬಳಿ ಇಳಿಸಿ ಪರಾರಿಯಾಗಿದ್ದರು. ಘಟನೆಯ ನಂತರ ಭಯಭೀತಳಾದ ಬಾಲಕಿ ತಕ್ಷಣವೇ ಕಾಶ್ಮೀರಿ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಳೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿ ಎನ್ನಲಾದ ಸ್ಲೀಪರ್ ಬಸದದ ಅನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಯು ದೆಹಲಿ ಪ್ರದೇಶದಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ಕುರಿತು ಮತ್ತೆ ದೊಡ್ಡ ಮಟ್ಟದ ಆತಂಕವನ್ನು ಹುಟ್ಟುಹಾಕಿದೆ.