ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಮಾದಕ ದ್ರವ್ಯದ ಅಮಲು, ; 3 ಜನರ ಪ್ರಾಣ ತೆಗೆದ ಭಾರತೀಯ ಟ್ರಕ್ ಚಾಲಕ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಸೆಮಿ-ಟ್ರಕ್ ಅಪಘಾತ ನಡೆದಿದ್ದು, 3 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣನಾದವನನ್ನು ಭಾರತೀಯ ಮೂಲದ 21 ವರ್ಷದ ಜಶನ್‌ಪ್ರೀತ್ ಸಿಂಗ್ ಎಂದು ತಿಳಿದು ಬಂದಿದೆ. ಸಿಂಗ್ 2022 ರಲ್ಲಿ ದಕ್ಷಿಣ ಅಮೆರಿಕದ ಗಡಿಯನ್ನು ದಾಟಿದ್ದಾನೆಂದು ಹೇಳಲಾಗಿದೆ.

3 ಜನರ ಪ್ರಾಣ ತೆಗೆದ  ಭಾರತೀಯ ಟ್ರಕ್ ಚಾಲಕ!

-

Vishakha Bhat Vishakha Bhat Oct 24, 2025 8:48 AM

ವಾಷಿಂಗ್ಟನ್‌: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಸೆಮಿ-ಟ್ರಕ್ (Road Accident) ಅಪಘಾತ ನಡೆದಿದ್ದು, 3 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣನಾದವನನ್ನು ಭಾರತೀಯ ಮೂಲದ 21 ವರ್ಷದ ಜಶನ್‌ಪ್ರೀತ್ ಸಿಂಗ್ ಎಂದು ತಿಳಿದು ಬಂದಿದೆ. ಈತ 3 ವರ್ಷಗಳ ಹಿಂದೆ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದ. ಜಶನ್‌ಪ್ರೀತ್ ಸಿಂಗ್ ಟ್ರಕ್‌ನ ಡ್ಯಾಶ್‌ಕ್ಯಾಮ್‌ನಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಟ್ರಕ್ ಮೊದಲು ಒಂದು SUVಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ಮೂರು ಜನರು ಸಾವನ್ನಪ್ಪಿದರು. ಟೈರ್ ಬದಲಾಯಿಸಲು ಸಹಾಯ ಮಾಡುತ್ತಿದ್ದ ರಸ್ತೆಬದಿಯ ಮೆಕ್ಯಾನಿಕ್ ಕೂಡ ಗಾಯಗೊಂಡಿದ್ದಾರೆ.

ಸಿಂಗ್ 2022 ರಲ್ಲಿ ದಕ್ಷಿಣ ಅಮೆರಿಕದ ಗಡಿಯನ್ನು ದಾಟಿದ್ದಾನೆಂದು ಹೇಳಲಾಗಿದೆ. ಸಿಂಗ್ ಮಾದಕ ವಸ್ತುಗಳನ್ನು ಸೇವಿಸಿದ್ದ, ಇದರಿಂದ ಟ್ರಕ್‌ ಆತನ ನಿಯಂತ್ರಣಕ್ಕೆ ಬಾರದೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷೆಗಳಲ್ಲಿ ಅವರು ಮಾದಕ ದ್ರವ್ಯ ಸೇವಿಸಿದ್ದು ಪತ್ತೆಯಾಗಿತ್ತು. ಈಗ ಜಶನ್‌ಪ್ರೀತ್ ಸಿಂಗ್ ಕಾನೂನುಬದ್ಧ ಸ್ಥಾನಮಾನವಿಲ್ಲದೆ ಅಮೆರಿಕದಲ್ಲಿದ್ದಾನೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ದೃಢಪಡಿಸಿದೆ. ಅವರ ಬಂಧನದ ನಂತರ ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಈಗ ವಲಸೆ ಬಂಧನ ಪ್ರಕರಣ ದಾಖಲಿಸಿದೆ.



ಅಪಘಾತದ ಕುರಿತು ಮಾಹಿತಿ ನೀಡಿದ ಪೊಲೀಸರು, ಅಪಘಾತದ ಬಳಿಕ ಆತನನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸದ್ಯ ಆತ ಆಸ್ಪತ್ರೆಯಲ್ಲಿದ್ದಾನೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಈ ಹಿಂದೆ ಮತ್ತೊಬ್ಬ ಭಾರತೀಯ ಮೂಲದ ಸಿಖ್ ಚಾಲಕ ಹರ್ಜಿಂದರ್ ಸಿಂಗ್ ಇದೇ ರೀತಿಯ ಅಪಘಾತವನ್ನು ಉಂಟುಮಾಡಿದ್ದರು. ಅವರು 2018ರಲ್ಲಿ ಗಡಿ ದಾಟಿದ್ದ ಅಕ್ರಮ ವಲಸಿಗನಾಗಿದ್ದ.

ಈ ಸುದ್ದಿಯನ್ನೂ ಓದಿ: Physical Abuse: 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ TDPಯ ದಲಿತ ಮುಖಂಡನ ಬಂಧನ

ಫ್ಲೋರಿಡಾದ ಫೋರ್ಟ್ ಪಿಯರ್ಸ್‌ನಲ್ಲಿ ಮೂರು ಜನರ ಸಾವಿಗೆ ಕಾರಣವಾದ ಮಾರಕ ಅಪಘಾತವನ್ನು ಉಂಟುಮಾಡಿದ ಆರೋಪ ಆತನ ಮೇಲಿದೆ. ಕ್ಯಾಲಿಫೋರ್ನಿಯಾ ವಾಣಿಜ್ಯ ಚಾಲನಾ ಪರವಾನಗಿ ಪಡೆಯುವ ಮೊದಲು ಅವರು ಇಂಗ್ಲಿಷ್ ಮತ್ತು ರಸ್ತೆ ಚಿಹ್ನೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.