Teacher hits student: ಅಬ್ಬಾ...ಈಕೆ ಎಂಥಾ ಶಿಕ್ಷಕಿ? ಸಿಟ್ಟಲ್ಲಿ ಬಾಲಕಿಯ ತಲೆಗೆ ಬ್ಯಾಗ್‍ನಿಂದ ಬಾರಿಸಿ ಬುರುಡೆ ಹೊಡೆದ್ಳು!
ಶಾಲಾ ತರಗತಿಯೊಂದರಲ್ಲಿ 11 ವರ್ಷದ ಬಾಲಕಿಗೆ ಶಿಕ್ಷಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯ ತಲೆಬುರುಡೆ ಬಿರುಕುಬಿಟ್ಟ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ತರಗತಿಯಲ್ಲಿ ದುರ್ವರ್ತನೆ ತೋರಿದ್ದಕ್ಕೆ ಸಿಟ್ಟಿಗೆದ್ದ ಶಿಕ್ಷಕಿಯು ಆಕೆಯ ತಲೆಗೆ ಶಾಲಾ ಬ್ಯಾಗ್‍ನಿಂದ ಹೊಡೆದಿದ್ದರು.

-

ಚಿತ್ತೂರು: ಶಿಕ್ಷಕಿಯೊಬ್ಬರು ತರಗತಿಯಲ್ಲಿ 11 ವರ್ಷದ ಬಾಲಕಿಗೆ ಶಾಲಾ ಬ್ಯಾಗ್‍ನಿಂದ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಆಸ್ಪತ್ರೆ (hospital) ಗೆ ದಾಖಲಾದ ಆಘಾತಕಾರಿ ಘಟನೆ ಆಂಧ್ರಪ್ರದೇಶ (Andhra Pradesh)ದ ಚಿತ್ತೂರು ಜಿಲ್ಲೆಯ ಪುಂಗನೂರಿನ ಶಾಂತ ಪಟ್ಟಣದಲ್ಲಿ ನಡೆದಿದೆ. ಏಟು ಕೊಟ್ಟ ತೀವ್ರತೆಗೆ ವಿದ್ಯಾರ್ಥಿನಿಯ ತಲೆಬುರುಡೆ (Teacher hits student) ಬಿರುಕುಬಿಟ್ಟಿದೆ ಎನ್ನಲಾಗಿದೆ.
ಸ್ಥಳೀಯ ಖಾಸಗಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಸಾತ್ವಿಕ ನಾಗಶ್ರೀ ಎಂಬ ಬಾಲಕಿ ಸೆಪ್ಟೆಂಬರ್ 10 ರಂದು ಹಿಂದಿ ತರಗತಿಯ ಸಮಯದಲ್ಲಿ ಸ್ವಲ್ಪ ದುರ್ವರ್ತನೆ ತೋರಿದ್ದಳು. ಈ ವೇಳೆ ಕೋಪಗೊಂಡ ಶಿಕ್ಷಕಿ ಶಾಲಾ ಚೀಲವನ್ನು ಹಿಡಿದು ವಿದ್ಯಾರ್ಥಿನಿಯ ತಲೆಯ ಮೇಲೆ ಹೊಡೆದಿದ್ದಾರೆ. ಆ ಸಮಯದಲ್ಲಿ ಅದೇನು ಅಂತಹ ದೊಡ್ಡ ವಿಷಯವಲ್ಲ ಎಂದು ತೋರಿದೆ. ಬಾಲಕಿಯ ತಾಯಿ ವಿಜೇತಾ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.
ತರಗತಿಯಲ್ಲಿ ಇದೆಲ್ಲಾ ಸಾಮಾನ್ಯ ಎಂದು ಬಾಲಕಿಯ ತಾಯಿ ಇದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ, ಬಾಲಕಿಗೆ ತಲೆಗೆ ಹೊಡೆದ ನೋವು ಕಡಿಮೆಯಾಗಲಿಲ್ಲ. ಕೆಲವು ದಿನಗಳ ನಂತರ, ಸಾತ್ವಿಕ ತನಗೆ ತಲೆನೋಯುತ್ತಿರುವ ಬಗ್ಗೆ ಪ್ರತಿದಿನ ದೂರುತ್ತಿದ್ದಳು. ವಿಪರೀತ ತಲೆನೋವಿಗೆ ಆಕೆ ಮೂರು ದಿನ ಶಾಲೆಗೂ ಹೋಗಿರಲಿಲ್ಲ. ಈ ವೇಳೆ ಪೋಷಕರಾದ ವಿಜೇತಾ ಹಾಗೂ ಆಕೆಯ ತಂದೆ ಹರಿ ಅವರಿಗೆ ಏನೋ ಸಮಸ್ಯೆಯಾಗಿದೆ ಎಂಬ ಸಂಶಯ ಬಂದಿದೆ. ಕೂಡಲೇ ಬಾಲಕಿಯನ್ನು ಪುಂಗನೂರಿನ ಖಾಸಗಿ ಚಿಕಿತ್ಸಾಲಯಕ್ಕೆ ಕರೆದೊಯ್ದರು.
ಇದನ್ನೂ ಓದಿ: Viral News: ನೇಪಾಳ ಜೈಲಿನಿಂದ ತಪ್ಪಿಸಿಕೊಂಡ ಖೈದಿಗಳು, ಉಗ್ರರು ಭಾರತಕ್ಕೆ ನುಸುಳಲು ಯತ್ನ!
ಪರಿಶೀಲನೆ ನಡೆಸಿದ ವೈದ್ಯರು, ಬೆಂಗಳೂರಿಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ವಿಷಯ ಗಂಭೀರವಾಗಿದೆ ಎಂದು ಅರಿತ ಪೋಷಕರು ಭಯಪಟ್ಟಿದ್ದಾರೆ. ಬೆಂಗಳೂರಿನ ಆಸ್ಪತ್ರೆಗೆ ತಲುಪಿದ ದಂಪತಿ ವೈದ್ಯರು ಸೂಚಿಸಿದಂತೆ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಈ ವೇಳೆ ಶಾಲಾ ಬ್ಯಾಗ್ ಹೊಡೆದ ರಭಸಕ್ಕೆ ಸಾತ್ವಿಕಾಳ ತಲೆಬುರುಡೆ ಮುರಿದಿರುವುದು ಸ್ಕ್ಯಾನಿಂಗ್‍ನಲ್ಲಿ ಪತ್ತೆಯಾಗಿದೆ.
ದುರ್ವರ್ತನೆ ಎಂದು ಪ್ರಾರಂಭವಾದದ ಈ ಘಟನೆಯು ಬಾಲಕಿಯ ಪ್ರಾಣಕ್ಕೇ ಕುತ್ತಾಗಿ ಮಾರ್ಪಟ್ಟಿದ್ದು ನಿಜಕ್ಕೂ ಬೇಸರದ ಸಂಗತಿ. ಬಾಲಕಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆ ಗುಣಮುಖಳಾಗುತ್ತಿದ್ದಾಳೆ. ಮಕ್ಕಳಿಗೆ ಏಟು ಕೊಡುವಾಗ ಎಷ್ಟು ಜಾಗರೂಕರಾಗಿರಬೇಕು ಅನ್ನೋದನ್ನು ಈ ಘಟನೆಯಿಂದ ತಿಳಿಯಬೇಕು. ಬಾಲಕಿಯ ಕುಟುಂಬವು ಈ ಆಘಾತದಿಂದ ತತ್ತರಿಸಿದೆ.
ಸೋಮವಾರ ರಾತ್ರಿ ಬಾಲಕಿಯ ತಾಯಿ ವಿಜೇತಾ ಮತ್ತು ಕೆಲವು ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದಕ್ಕಾಗಿ ಅನೇಕ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.
ವಿದ್ಯಾರ್ಥಿನಿ ಸಾತ್ವಿಕಾಳ ಈ ಕಥೆ ಕೇಳಿದ್ರೆ ನಿಮಗೆ ಆಶ್ಚರ್ಯವಾಗಬಹುದು. ಕೋಪದಲ್ಲಿ ತಲೆಗೆ ಬ್ಯಾಗ್‌ನಿಂದ ಹೊಡೆಯುವುದರಿಂದ ಯಾವ ರೀತಿಯ ಅಪಾಯ ಸಂಭವಿಸಿದೆ ಎಂಬುದನ್ನು ಇಲ್ಲಿ ತಿಳಿಯಬಹುದು. ಶಾಲೆಗಳು ಸುರಕ್ಷಿತ ತಾಣಗಳಾಗಿರಬೇಕು, ಸಣ್ಣ-ಸಣ್ಣ ವಿಚಾರಗಳಿಗೆ ಶಾಲೆಗಳು ಮಕ್ಕಳು ಗಾಯಗೊಳ್ಳುವ ಸ್ಥಳಗಳಾಗಬಾರದು.