ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ಅತ್ಯಾಚಾರ ಪ್ರಕರಣದಲ್ಲಿ ಖ್ಯಾತ ನಟ, ನಿರ್ದೇಶಕ ಉತ್ತರ್ ಕುಮಾರ್ ಅರೆಸ್ಟ್‌

Haryanvi Actor Arrested: ಹರಿಯಾಣ ಚಿತ್ರರಂಗದ ಜನಪ್ರಿಯ ನಟ-ನಿರ್ದೇಶಕ ಉತ್ತರ್ ಕುಮಾರ್‌ ಅವರನ್ನು 25 ವರ್ಷದ ಗಾಯಕಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆರೋಪದ ಮೇಲೆ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧನದ ನಂತರ ಆರೋಗ್ಯ ಸಮಸ್ಯೆಯಿಂದ ಕುಮಾರ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಚೇತರಿಕೆಗೊಂಡ ನಂತರ ಮತ್ತೆ ಬಂಧನಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪ; ಖ್ಯಾತ ನಿರ್ದೇಶಕ, ನಟ ಅರೆಸ್ಟ್

ನಟ-ನಿರ್ದೇಶಕ ಉತ್ತರ್ ಕುಮಾರ್‌ -

Profile Sushmitha Jain Sep 16, 2025 6:13 PM

ಗಾಜಿಯಾಬಾದ್: ಹರಿಯಾಣ ಚಿತ್ರರಂಗದ (Haryana Cinema) ಜನಪ್ರಿಯ ನಟ-ನಿರ್ದೇಶಕ ಉತ್ತರ್ ಕುಮಾರ್‌ (Uttar Kumar) ಅವರನ್ನು 25 ವರ್ಷದ ಗಾಯಕಿಯೊಬ್ಬರ (Singer) ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆರೋಪದ ಮೇಲೆ ಗಾಜಿಯಾಬಾದ್ (Ghaziabad) ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧನದ ನಂತರ ಆರೋಗ್ಯ ಸಮಸ್ಯೆಯಿಂದ ಕುಮಾರ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರಿಂದ ಆರೋಗ್ಯದ ಬಗ್ಗೆ ಮಾಹಿತಿ ಬಂದ ನಂತರ ಮತ್ತೆ ಬಂಧನಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಕಿಯ ದೂರಿನ ಪ್ರಕಾರ, 2020ರಿಂದ 2023ರವರೆಗೆ ಉತ್ತರ್ ಕುಮಾರ್ ಚಿತ್ರರಂಗದಲ್ಲಿ ಪಾತ್ರಗಳನ್ನು ನೀಡುವ ಮತ್ತು ಮದುವೆಯಾಗುವ ಭರವಸೆ ನೀಡಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಗಾಜಿಯಾಬಾದ್‌ನ ಕಚೇರಿ ಮತ್ತು ಅಮ್ರೋಹಾದ ಫಾರ್ಮ್‌ಹೌಸ್‌ನಲ್ಲಿ ಆಕೆಯನ್ನು ಮದ್ಯ ಕುಡಿಯಲು ಒತ್ತಾಯಿಸಿ, ಚಿತ್ರನಿರ್ಮಾಪಕರನ್ನು ಭೇಟಿಯಾಗುವಂತೆ ಒತ್ತಡ ಹೇರಿದ್ದಾರೆ. ಆಕೆ ನಿರಾಕರಿಸಿದಾಗ, ಮದುವೆಯ ಭರವಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜುಲೈ 18 ರಂದು ದಾಖಲಾದ FIRನಲ್ಲಿ ದೌರ್ಜನ್ಯ, ಜಾತಿ ನಿಂದನೆ, ಮತ್ತು ಧಮ್ಕಿಯ ಆರೋಪಗಳಿವೆ. SC/ST ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಓದಿ: Viral News: ನೇಪಾಳ ಜೈಲಿನಿಂದ ತಪ್ಪಿಸಿಕೊಂಡ ಖೈದಿಗಳು, ಉಗ್ರರು ಭಾರತಕ್ಕೆ ನುಸುಳಲು ಯತ್ನ!

ಬಂಧನದ ವೇಳೆ ಕುಮಾರ್ ಆರೋಗ್ಯ ಹಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. DCP ನಿಮಿಷ್ ಪಾಟೀಲ್, “ಆರೋಪಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಗ್ಯ ಸರಿಯಾದ ನಂತರ ಬಂಧನ ಮಾಡಲಾಗುವುದು” ಎಂದಿದ್ದಾರೆ. ಕುಮಾರ್‌ ಅವನ ಇನ್‌ಸ್ಟಾಗ್ರಾಮ್‌ನಲ್ಲಿ, “ಬಂಧನದ ವೇಳೆ ಆತನ ದೇಹದಲ್ಲಿ ವಿಷ ಕಂಡುಬಂದಿದೆ, ಆದರೆ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿಲ್ಲ” ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ.

ಗಾಜಿಯಾಬಾದ್‌ನ ಕುಮಾರ್, 2004ರಲ್ಲಿ ‘ಧಾಕಡ್ ಚೋರಾ’ ಚಿತ್ರದಿಂದ ಖ್ಯಾತರಾದರು. 20 ವರ್ಷಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ‘ಕುನ್ವರ್ ಸಹಾಬ್’, ‘ಚಾಚಾ ಭಟಿಜಾ’ನಂತಹ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹರಿಯಾಣವಿ ಸಂಸ್ಕೃತಿಯ ಕತೆಗಳಿಂದ ಅವರು ಜನಪ್ರಿಯರಾಗಿದ್ದಾರೆ. ಈ ಆರೋಪಗಳು ಕುಮಾರ್‌ ಅವರ ವೃತ್ತಿಜೀವನಕ್ಕೆ ಧಕ್ಕೆ ತರಬಹುದು. ಸಾಮಾಜಿಕ ಮಾಧ್ಯಮದಲ್ಲಿ ಗಾಯಕಿಗೆ ಬೆಂಬಲ ವ್ಯಕ್ತವಾಗಿದ್ದು, ಚಿತ್ರರಂಗದಲ್ಲಿ ದೌರ್ಜನ್ಯ ತಡೆಗಟ್ಟುವ ಬಗ್ಗೆ ಚರ್ಚೆ ಆರಂಭವಾಗಿದೆ.