ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಭಾರತೀಯ ಮೂಲದ ವ್ಯಕ್ತಿಗೆ‌ ಲಂಡನ್‌ನಲ್ಲಿ 34 ವರ್ಷ ಜೈಲು ಶಿಕ್ಷೆ

ಮಹಿಳೆಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ, ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಪರಾಧಿಯನ್ನು ಐಲ್‌ವರ್ತ್ ಕ್ರೌನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ನಂತರ 34 ವರ್ಷದ ಗಗನ್‌ದೀಪ್ ಸಿಂಗ್‌ ಎಂದು ಗುರುತಿಸಲಾಗಿದೆ.

ಭಾರತೀಯ ಮೂಲದ ವ್ಯಕ್ತಿಗೆ‌ ಲಂಡನ್‌ನಲ್ಲಿ 34 ವರ್ಷ ಜೈಲು ಶಿಕ್ಷೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 13, 2026 10:39 AM

ಲಂಡನ್‌: ಮಹಿಳೆಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ, ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಯುನೈಟೆಡ್ (Physical Assault) ಕಿಂಗ್‌ಡಮ್‌ನಲ್ಲಿ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಪರಾಧಿಯನ್ನು ಐಲ್‌ವರ್ತ್ ಕ್ರೌನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ನಂತರ 34 ವರ್ಷದ ಗಗನ್‌ದೀಪ್ ಸಿಂಗ್‌ ಎಂದು ಗುರುತಿಸಲಾಗಿದ್ದು, ಫೆಬ್ರವರಿಯಲ್ಲಿ ಈತ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದ. ತಪ್ಪಿತಸ್ಥನೆಂದು ಸಾಬೀತಾದ ನಂತರ ಶುಕ್ರವಾರ ಈತನಿಗೆ ಶಿಕ್ಷೆಯನ್ನು ವಿಧಿಸಲಾಗಿದೆ.

ಗಗನ್‌ದೀಪ್ ಸಿಂಗ್ 28 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಲಿದ್ದಾರೆ ಮತ್ತು ನಂತರ ಆರು ವರ್ಷಗಳ ವಿಸ್ತೃತ ಪರವಾನಗಿ ಅವಧಿಯನ್ನು ಪಡೆಯಲಿದ್ದಾರೆ. ಕನಿಷ್ಠ 18 ವರ್ಷ ಜೈಲು ಶಿಕ್ಷೆ ಅನುಭವಿಸುವವರೆಗೆ ಅಥವಾ ಅವರ ಕಸ್ಟಡಿ ಅವಧಿಯ ಮೂರನೇ ಎರಡರಷ್ಟು ಭಾಗಕ್ಕೆ ಸಮನಾದ ಅವಧಿಯನ್ನು ಪೂರೈಸುವವರೆಗೆ ಅವರು ಪೆರೋಲ್‌ಗೆ ಅರ್ಹರಾಗಿರುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

2024ರ ಜೂನ್ ತಿಂಗಳಿನಲ್ಲಿ 24 ವರ್ಷದ ಯುವತಿಯೊಬ್ಬಳಿಗೆ ಥೈಲ್ಯಾಂಡ್‌ನಿಂದ ಯುಕೆಗೆ ಸೂಟ್‌ಕೇಸ್ ಒಂದನ್ನು ತಲುಪಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಸೂಟ್‌ಕೇಸ್‌ನಲ್ಲಿ ಏನಿದೆ ಎಂದು ತಿಳಿಯದ ಕಾರಣ ಆಕೆ ಅದನ್ನು ತರಲು ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ದುಷ್ಕರ್ಮಿ, ಆಕೆ ಬರ್ಮಿಂಗ್‌ಹ್ಯಾಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪಶ್ಚಿಮ ಲಂಡನ್‌ನ ಹ್ಯಾನ್‌ವೆಲ್‌ನಲ್ಲಿರುವ ತಮ್ಮ ಮನೆಗೆ ಅಪಹರಿಸಿಕೊಂಡು ಹೋಗಿದ್ದರು.

4 ವರ್ಷಗಳ ಕಾಲ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಬಾಕ್ಸಿಂಗ್ ಕೋಚ್ ವಿರುದ್ಧ ದೂರು

ಗಗನ್‌ದೀಪ್ ಸಿಂಗ್ ಆಕೆಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿ, ತೀವ್ರ ಹಿಂಸೆ ನೀಡಿದ್ದಾನೆ. ಸಂತ್ರಸ್ತೆಯನ್ನು ಹೊಡೆದು, ಥಳಿಸಿ, ವಿವಸ್ತ್ರಗೊಳಿಸಿ, ಚಾಟಿ ಬೀಸಿ, ಸುಟ್ಟು ಹಾಕಿ, ಪದೇ ಪದೇ ಹಲ್ಲೆ ನಡೆಸಿ, ಕೊನೆಗೆ ಬಿಡುಗಡೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ತನ್ನ ವಿರುದ್ಧ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಆಕೆ ತನ್ನ ತಾಯಿಯ ಸಹಾಯದಿಂದ ದೂರನ್ನು ನೀಡಿದ್ದಳು. ಯುವತಿ ಆರಂಭದಲ್ಲಿ ಹೆದರಿ ಪ್ರಕರಣವನ್ನು ಮುಂದುವರೆಸುವುದು ಬೇಡ ಎಂದಿದ್ದಳು. ಆದರೆ ಪ್ರಕರಣದ ಗಂಭೀರತೆ ಅರಿತ ಪೊಲೀಸರು ಆಕೆಗೆ ಧೈರ್ಯ ತುಂಬಿ ಪ್ರಕರಣದ ತನಿಖೆ ಮುಂದುವರೆಸಿದರು. ಆಕೆಯ ಮೇಲೆ ಅತ್ಯಾಚಾರ ನಡೆದಾಗ ಯುವತಿ ಧರಿಸಿದ್ದ ಬಟ್ಟೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಗಗನ್‌ದೀಪ್ ಸಿಂಗ್ ಸಿಕ್ಕಿಬಿದ್ದಿದ್ದಾನೆ.