Crime News: ಚರಂಡಿಯಲ್ಲಿ ಪತ್ತೆಯಾಯ್ತು ಇನ್ಶೂರೆನ್ಸ್ ಏಜೆಂಟ್ ಶವ; ಬ್ಲ್ಯಾಕ್‌ಮೇಲ್ ಕಾರಣಕ್ಕೆ ನಡೀತಾ ಬರ್ಬರ ಕೊಲೆ?
Insurance Agent Found Dead: ಬೆದರಿಕೆ ಹಾಕಿದ ಎಂಬ ಕಾರಣಕ್ಕೆ ಯುವತಿಯೊಬ್ಬಳು ಇನ್ಶೂರೆನ್ಸ್ ಏಜೆಂಟ್ ಅನ್ನು ಕೊಲೆ ಮಾಡಿದ್ದಾಳೆ. ಈ ದುರ್ಘಟನೆ ಫರೀದಾಬಾದ್‌ನಲ್ಲಿ ನಡೆದಿದ್ದು, ಹತ್ಯೆ ಮಾಡಿ ಶವವನ್ನು ಚರಂಡಿಗೆ ಎಸೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಪೊಲೀಸರ ಪ್ರಕಾರ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕಾರಣದಿಂದ ಚಂದರ್‌ರನ್ನು ಕೊಲೆ ಮಾಡಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಚರಂಡಿಯಲ್ಲಿ ಶವ ಪತ್ತೆಯಾಗಿದೆ.
ಕೊಲೆ ಆರೋಪಿಗಳು -
ನವದೆಹಲಿ: ಚರಂಡಿಯಲ್ಲಿ ಇನ್ಶೂರೆನ್ಸ್ ಏಜೆಂಟ್(Insurance Agent)ನ ಶವ ಪತ್ತೆಯಾಗಿರುವ ಘಟನೆ ದೆಹಲಿ(Delhi)ಯ ಸಮೀಪದ ಫರೀದಾಬಾದ್(Faridabad)ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವತಿ ಹಾಗೂ ಆಕೆ ಫಿಯಾನ್ಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತನನ್ನು ಚಂದರ್(Chander) ಎಂದು ಗುರುತಿಸಲಾಗಿದ್ದು, ಬ್ಲಾಕ್‌ಮೇಲ್ ಮಾಡುತ್ತಿದ್ದ ಕಾರಣ ಆತನನ್ನು ಕೊಂದಿರುವುದಾಗಿ ಯುವತಿ ಒಪ್ಪಿಕೊಂಡಿದ್ದಾಳೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಮಹಿಳೆ ಲಕ್ಷ್ಮಿ(Laxmi) ತನ್ನ ಪ್ರಿಯಕರ ಕೇಶವ್(Keshav)ನೊಂದಿಗೆ ಸೇರಿ ಚಂದರ್ ಎಂಬ ಇನ್ಶುರೆನ್ಸ್ ಏಜೆಂಟ್‌ನನ್ನು ಕೊಂದಿದ್ದಾರೆ. ಬ್ಲಾಕ್‌ಮೇಲ್ ಮಾಡುತ್ತಿದ್ದ ಕಾರಣಕ್ಕೆ ಈ ಕೊಲೆ(Murder Case) ನಡೆದಿದೆ ಎಂದು ತಿಳಿದುಬಂದಿದೆ.
ಚರಂಡಿಯಲ್ಲಿ ಪತ್ತೆಯಾದ ಶವ- ಬೈಕ್ ನಂಬರ್‌ನಿಂದ ಗುರುತು ಪತ್ತೆ
ಪೊಲೀಸರ ಪ್ರಕಾರ, ಭಾನುವಾರ ಬೆಳಗ್ಗೆ ಫರೀದಾಬಾದ್‌ನ ಚರಂಡಿಯಲ್ಲಿ ಚಂದರ್ ಅವರ ಶವ ಪತ್ತೆಯಾಗಿದ್ದು, ಶವದ ಬಳಿ ನಿಲ್ಲಿಸಿದ್ದ ಬೈಕ್‌ನ ನಂಬರಿನಿಂದ ಅವರ ಗುರುತು ಪತ್ತೆಯಾಗಿದೆ. ತನಿಖೆಯಲ್ಲಿ ಚಂದರ್ ಅವರು ಫರೀದಾಬಾದ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ಪೂರ್ವ ದೆಹಲಿಯ ವಿನೋದ್ ನಗರದಲ್ಲಿ ವಾಸಿಸುತ್ತಿದ್ದರೆಂಬುದು ತಿಳಿದುಬಂದಿದೆ.
ಈ ಸುದ್ದಿಯನ್ನು ಓದಿ: Viral News: ಸರಿಯಾದ ಸಮಯಕ್ಕೆ ಬ್ಲೌಸ್ ನೀಡದ ಟೈಲರ್; 7000 ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶ
ಶವದ ತಲೆಯ ಮತ್ತು ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ಚಂದರ್ ಅವರ ಸಹೋದರ ಮದನ್ ಗೋಪಾಲ್ ನೀಡಿದ ದೂರು ಆಧಾರವಾಗಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಲಕ್ಷ್ಮಿ ಮತ್ತು ಕೇಶವ್ ಬಂಧನ
ತನಿಖೆಯ ವೇಳೆ ಪೊಲೀಸರು 29 ವರ್ಷದ ಲಕ್ಷ್ಮಿ ಮತ್ತು 26 ವರ್ಷದ ಕೇಶವ್‌ನನ್ನು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮಿ ಹೇಳಿಕೆ ಪ್ರಕಾರ, ಆಕೆ ಮತ್ತು ಚಂದರ್ ಸುಮಾರು ಐದು ವರ್ಷಗಳಿಂದ ಪರಿಚಯಸ್ಥರಾಗಿದ್ದರು. ಇತ್ತೀಚೆಗೆ ಆಕೆ ಕೇಶವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಇದರಿಂದ ಚಂದರ್ ಕೋಪಗೊಂಡು ಲಕ್ಷ್ಮಿಯನ್ನು ಬ್ಲಾಕ್‌ಮೇಲ್ ಮಾಡಲಾರಂಭಿಸಿದ್ದ. “ಮದುವೆಯಾಗಬೇಡ ಎಂದು ಬೆದರಿಕೆ ಹಾಕುತ್ತಿದ್ದ. ಅಲ್ಲದೇ ಹಣಕ್ಕೆ ಬೇಡಿಕೆ ಇಟ್ಟಿದ್ದ,” ಎಂದು ಲಕ್ಷ್ಮಿ ಹೇಳಿದ್ದಾಳೆ.
ಕೊಲೆ ಹೇಗೆ ನಡೆದಿದೆ?
ಬ್ಲಾಕ್‌ಮೇಲ್‌ನಿಂದ ಬೇಸತ್ತ ಲಕ್ಷ್ಮಿ ಮತ್ತು ಕೇಶವ್ ಕೊನೆಗೆ ಚಂದರ್‌ನ್ನು ಕೊಲ್ಲುವ ಪ್ಲಾನ್ ಮಾಡಿದ್ದಾರೆ ಎಂದು ಫರೀದಾಬಾದ್ ಪೊಲೀಸ್ ವಕ್ತಾರ ಯಶಪಾಲ್ ಸಿಂಗ್ ತಿಳಿಸಿದ್ದಾರೆ. ಅಕ್ಟೋಬರ್ 25ರಂದು ಲಕ್ಷ್ಮಿ ಚಂದರ್‌ರನ್ನು ತಾನು ವಾಸಿಸುತ್ತಿದ್ದ ದೆಹಲಿಯ ಮಿಥಾಪುರಕ್ಕೆ ಕರೆಸಿದ್ದಾಳೆ. ಅಲ್ಲಿಂದ ಚಂದರ್‌ನನ್ನು ಬೈಕ್‌ನಲ್ಲೇ ಕುಳಿತು ಫರೀದಾಬಾದ್‌ನ ಆತ್ಮದ್ಪುರದ ನಿರ್ಜನ ಪ್ರದೇಶಕ್ಕೆ ಕರೆತಂದಿದ್ದಾಳೆ.
ಅಲ್ಲಿ ಮೊದಲೇ ಹಾಜರಿದ್ದ ಕೇಶವ್ ಹಾಗೂ ಅವನ ಇಬ್ಬರು ಸ್ನೇಹಿತರು ಚಂದರ್ ಮೇಲೆ ಹಲ್ಲೆ ಮಾಡಿದ್ದಾರೆ. ಮೊದಲು ಉಸಿರುಗಟ್ಟಿಸಿ, ನಂತರ ತಲೆಗೆ ಮೇಲೆ ಬಲವಾಗಿ ಹೊಡೆದಿದ್ದಾರೆ. ಚಂದರ್ ಮೃತಪಟ್ಟ ಬಳಿಕ ಶವವನ್ನು ಚರಂಡಿಯಲ್ಲಿ ಎಸೆದು, ಅಲ್ಲಿಂದ ಪರಾರಿಯಾಗಿದ್ದಾರೆ. ಇದೀಗ ಆರೋಪಿಗಳಾದ ಲಕ್ಷ್ಮಿ ಹಾಗೂ ಕೇಶವನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಕೇಶವ್‌ನ ಇಬ್ಬರು ಸ್ನೇಹಿತರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.