ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Sushmitha Jain

[email protected]

Articles
ಮಿಗ್‌-29 ಪತನದ ವೈರಲ್‌ ವಿಡಿಯೋ ಸುಳ್ಳು; ಅದು ವಿಡಿಯೊ ಗೇಮ್‌ನ ದೃಶ್ಯ ಎಂದ ಸರ್ಕಾರ

ಮಿಗ್‌-29 ಪತನದ ಹೆಸರಿನಲ್ಲಿ ಸುಳ್ಳು ವಿಡಿಯೊ ವೈರಲ್‌

ಭಾರತೀಯ ವಾಯುಪಡೆಯ ಮಿಗ್‌-29 ಯುದ್ಧವಿಮಾನ ಇಳಿಯುವ ವೇಳೆ ಪತನಗೊಂಡಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೊ ಸುಳ್ಳು ಎಂದು ಸರ್ಕಾರದ ಸತ್ಯಾಸತ್ಯ ಪರಿಶೀಲನಾ ಘಟಕ ಸ್ಪಷ್ಟಪಡಿಸಿದೆ. ವೈರಲ್‌ ದೃಶ್ಯವು ನೈಜ ವಿಮಾನ ಅಪಘಾತದ್ದಲ್ಲ, ‘ವಾರ್ ಥಂಡರ್’ ವಿಡಿಯೋ ಗೇಮ್‌ನ ದೃಶ್ಯ ಎಂದು ಪರಿಶೀಲನೆಯಲ್ಲಿ ತಿಳಿದುಬಂದಿದೆ. ಹಳೆಯ ಮಿಗ್‌-29 ಅಪಘಾತದ ಚಿತ್ರಗಳನ್ನೂ ಇತ್ತೀಚಿನ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಯುಪಿಐ ಪಾವತಿಗೆ ಜಿಎಸ್‌ಟಿ ಎಂಬುದು ವದಂತಿ; ಹೊಸ ಶುಲ್ಕದ ಬಗ್ಗೆ ಸರ್ಕಾರದ ಸ್ಪಷ್ಟನೆ

2,000ಕ್ಕಿಂತ ಹೆಚ್ಚಿನ ವಹಿವಾಟಿನ ಶುಲ್ಕದ ಬಗ್ಗೆ ಸರ್ಕಾರದ ಸ್ಪಷ್ಟನೆ

2,000 ರು.ಗಳಿಗಿಂತ ಹೆಚ್ಚಿನ ಕೆಲವು ಯುಪಿಐ ವಹಿವಾಟುಗಳಿಗೆ ವ್ಯಾಪಾರಿ ರಿಯಾಯಿತಿ ದರ ಜಾರಿಗೆ ಬರಲಿದೆ. ಆದರೆ ಯುಪಿಐ ಪಾವತಿಸಿದ ಒಟ್ಟು ಮೊತ್ತದ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂಬುದು ವದಂತಿ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಹೊಸ ವ್ಯವಸ್ಥೆ ಅಕ್ಟೋಬರ್ 15ರಿಂದ ಜಾರಿಗೆ ಬರಲಿದ್ದು, ಈ ಶುಲ್ಕವನ್ನು ಗ್ರಾಹಕರಿಂದ ನೇರವಾಗಿ ವಸೂಲಿ ಮಾಡುವಂತಿಲ್ಲ.

‘ಅಸ್ಸಲಾಮ್‌ ಅಲೈಕುಮ್’ ಹೇಳಿದ ಐಪಿಎಸ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ; ಪಶ್ಚಿಮ ಬಂಗಾಳದಲ್ಲಿ ಚರ್ಚೆಗೆ ಗ್ರಾಸವಾಯ್ತು ಬುಷ್ರಾ ಬಾನು ಪ್ರಕರಣ

ಐಪಿಎಸ್ ಅಧಿಕಾರಿ ಬುಷ್ರಾ ಬಾನುಗೆ ವರ್ಗಾವಣೆ

Bushra Bano: ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿ ಬುಷ್ರಾ ಬಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಯುಪಿಎಸ್‌ಸಿ ಕುರಿತ ವಿಡಿಯೊದಲ್ಲಿ ‘ಅಸ್ಸಲಾಮು ಅಲೈಕುಮ್’, ‘ಇನ್‌ಶಾ ಅಲ್ಲಾ’ ಸೇರಿದಂತೆ ಕೆಲವು ಪದಗಳನ್ನು ಬಳಸಿದ್ದ ವಿಚಾರ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳ ಸರ್ಕಾರ ಅವರನ್ನು ಮತ್ತೊಂದು ಹುದ್ದೆಗೆ ವರ್ಗಾವಣೆ ಮಾಡಿದೆ. ಆದರೆ ವರ್ಗಾವಣೆ ಆದೇಶದಲ್ಲಿ ಕಾರಣವಾಗಿ ‘ಸಾರ್ವಜನಿಕ ಹಿತಾಸಕ್ತಿ’ ಎಂದು ಮಾತ್ರ ಉಲ್ಲೇಖಿಸಲಾಗಿದೆ. ವಿಡಿಯೊ ವಿವಾದವೇ ವರ್ಗಾವಣೆಗೆ ಕಾರಣ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.

ರಷ್ಯಾ ತೈಲ ಖರೀದಿಗೆ ಅಮೆರಿಕದ 100% ಸುಂಕದ ಬೆದರಿಕೆ; ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಾ?

ಭಾರತಕ್ಕೆ ಎದುರಾಗಲಿದೆಯೇ ಇಂಧನ ಬೆಲೆ ಸಂಕಷ್ಟ?

ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ದೇಶಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸುವ ಸಾಧ್ಯತೆ ಅಮೆರಿಕದಲ್ಲಿ ಚರ್ಚೆಯಲ್ಲಿದೆ. ಭಾರತ ರಷ್ಯಾದ ಪ್ರಮುಖ ತೈಲ ಖರೀದಿದಾರ ರಾಷ್ಟ್ರವಾಗಿರುವುದರಿಂದ ಈ ಬೆಳವಣಿಗೆ ಮಹತ್ವ ಪಡೆದಿದೆ. ಆದರೆ ಅಮೆರಿಕದ ಸುಂಕದ ಬೆದರಿಕೆ ಎಂದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಶೇ.100ರಷ್ಟು ಏರಿಕೆಯಾಗುತ್ತದೆ ಎಂದಲ್ಲ. ರಷ್ಯಾದ ತೈಲ ಆಮದು, ಪರ್ಯಾಯ ತೈಲದ ಬೆಲೆ, ಜಾಗತಿಕ ಕಚ್ಚಾ ತೈಲ ದರ ಮತ್ತು ರೂಪಾಯಿ–ಡಾಲರ್ ವಿನಿಮಯ ದರದಂತಹ ಅಂಶಗಳು ದೇಶೀಯ ಇಂಧನ ಬೆಲೆಯ ಮೇಲೆ ಪರಿಣಾಮ ಬೀರಬಹುದು.

Astro Tips: ಗುರುವಾರ ವಿಷ್ಣು ಆರಾಧನೆ: ಸಂಪತ್ತು ಮತ್ತು ಸಮೃದ್ಧಿಗಾಗಿ ಈ ಸರಳ ಕ್ರಮಗಳನ್ನು ಪಾಲಿಸಿ

ಧನದ ಕೊರತೆ ದೂರವಾಗಲು ಗುರುವಾರ ವಿಷ್ಣುವನ್ನು ಹೀಗೆ ಪೂಜಿಸಿ

ಗುರುವಾರವನ್ನು ಭಗವಾನ್‌ ವಿಷ್ಣುವಿನ ಆರಾಧನೆಗೆ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿ ತುಪ್ಪದ ದೀಪ ಬೆಳಗಿಸುವುದು, ಮಂತ್ರ ಜಪಿಸುವುದು, ತುಳಸಿ ಹಾಗೂ ಅರಿಶಿನ ಅರ್ಪಿಸುವುದು ಮತ್ತು ಬಾಳೆ ಗಿಡವನ್ನು ಪೂಜಿಸುವುದು ಶುಭಕರ. ಇದರಿಂದ ವಿಷ್ಣು ಹಾಗೂ ಲಕ್ಷ್ಮಿಯ ಅನುಗ್ರಹ, ಸಂಪತ್ತು ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆಯಿದೆ.

ಹೆಚ್ಚಿದ ಇಂಧನ ಬೇಡಿಕೆ: ಬಾಂಗ್ಲಾದೇಶಕ್ಕೆ ಭಾರತದಿಂದ 4 ಸಾವಿರ ಟನ್ ಡೀಸೆಲ್ ಪೂರೈಕೆ

ಬಾಂಗ್ಲಾದೇಶಕ್ಕೆ ಭಾರತದಿಂದ 47 ಲಕ್ಷ ಲೀಟರ್ ಡೀಸೆಲ್ ಪೂರೈಕೆ

Friendship Pipeline: ಇಂಧನದ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಭಾರತವು ಭಾರತ–ಬಾಂಗ್ಲಾದೇಶ ಸ್ನೇಹ ಪೈಪ್‌ಲೈನ್‌ ಮೂಲಕ ಸುಮಾರು 4,000 ಮೆಟ್ರಿಕ್‌ ಟನ್‌ ಡೀಸೆಲ್‌ ಪೂರೈಸಿದೆ. ಇದು ಪೈಪ್‌ಲೈನ್‌ ಮೂಲಕ ಸಾಗಿಸಲಾದ 72ನೇ ಕಂತಾಗಿದ್ದು, 2023ರ ಮಾರ್ಚ್‌ನಲ್ಲಿ ಪೈಪ್‌ಲೈನ್‌ ಆರಂಭವಾದ ಬಳಿಕ ಬಾಂಗ್ಲಾದೇಶವು 3,30,087 ಟನ್‌ ಡೀಸೆಲ್‌ ಆಮದು ಮಾಡಿಕೊಂಡಿದೆ.

ನರೇಂದ್ರ ಮೋದಿ–ಗಣಪತಿ ಒಟ್ಟಿಗೆ ಟೀ ಕುಡಿಯುವ ಪ್ರತಿಮೆ; ಗಣೇಶೋತ್ಸವದಲ್ಲಿ ರಾಜಕೀಯ ವಾಕ್ಸಮರ

ಗಣೇಶೋತ್ಸವದಲ್ಲಿ ಮೋದಿ–ಗಣೇಶ ಥೀಮ್‌ಗೆ ಟಿಎಂಸಿ ವಿರೋಧ

Narendra Modi: ಪಶ್ಚಿಮ ಬಂಗಾಳದ ಹೌರಾದ ಗಣೇಶ ಪೂಜಾ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಗವಾನ್ ಗಣಪತಿ ಜತೆಗೆ ಚಹಾ ಕುಡಿಯುತ್ತಿರುವ ರೀತಿಯಲ್ಲಿ ಪ್ರದರ್ಶಿಸಿದ ವಿಗ್ರಹ ವಿವಾದಕ್ಕೆ ಕಾರಣವಾಗಿದೆ. ‘ಹಿಂದೂ ರಾಷ್ಟ್ರ’ ಎಂಬ ಬರಹ ಹಾಗೂ ಕೇಸರಿ ಭಾರತದ ನಕ್ಷೆಯೂ ಥೀಮ್‌ನಲ್ಲಿದೆ. ಆಯೋಜಕ ಖೋಕನ್ ಕನ್ರಾ ಇದು ತಮ್ಮ ವೈಯಕ್ತಿಕ ಕಲ್ಪನೆ ಎಂದು ಸ್ಪಷ್ಟಪಡಿಸಿದ್ದು, ಯಾವುದೇ ಧರ್ಮಕ್ಕೆ ಧಕ್ಕೆ ತರುವ ಉದ್ದೇಶವಿಲ್ಲ ಎಂದಿದ್ದಾರೆ. ಈ ಕುರಿತು ತೃಣಮೂಲ ಕಾಂಗ್ರೆಸ್ ನಾಯಕ ಅರೂಪ್ ರಾಯ್ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಓಂ ಪ್ರಕಾಶ್ ಸಿಂಗ್ ಥೀಮ್‌ನಲ್ಲಿ ತಪ್ಪೇನಿಲ್ಲ ಎಂದು ಸಮರರ್ಥಿಸಿಕೊಂಡಿದ್ದಾರೆ.

ಇಪಿಎಫ್‌ ಖಾತೆದಾರರಿಗೆ ಗುಡ್‌ನ್ಯೂಸ್‌: ವೇತನ ಮಿತಿ 15,000 ರೂಪಾಯಿಂದ 25,000 ರೂಪಾಯಿಗೆ ಏರಿಕೆ

ಇಪಿಎಫ್‌ಒ ವೇತನ ಮಿತಿ ಹೆಚ್ಚಳಕ್ಕೆ ಸಂಪುಟ ಅಸ್ತು; ಸೆ.17ರಿಂದ ಜಾರಿ

EPFO: ಕೇಂದ್ರ ಸಚಿವ ಸಂಪುಟವು ಇಪಿಎಫ್‌ಒ ಅಡಿಯಲ್ಲಿ ಕಡ್ಡಾಯವಾಗಿ ಸೇರ್ಪಡೆಯಾಗುವ ಮಾಸಿಕ ವೇತನ ಮಿತಿಯನ್ನು ₹15,000ರಿಂದ ₹25,000ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ. ಪರಿಷ್ಕೃತ ಮಿತಿ ಸೆಪ್ಟೆಂಬರ್ 17ರಂದು ಜಾರಿಗೆ ಬರಲಿದ್ದು, ಇದರಿಂದ ₹15,000ಕ್ಕಿಂತ ಹೆಚ್ಚು ಹಾಗೂ ₹25,000ರವರೆಗೆ ವೇತನ ಪಡೆಯುವ ಹೆಚ್ಚಿನ ಉದ್ಯೋಗಿಗಳು ಸಾಮಾಜಿಕ ಭದ್ರತಾ ಸೌಲಭ್ಯಗಳ ವ್ಯಾಪ್ತಿಗೆ ಬರಲಿದ್ದಾರೆ.

ಬ್ರಿಕ್ಸ್‌ ಶೃಂಗಸಭೆ ಭದ್ರತಾ ಕರ್ತವ್ಯದ ವೇಳೆಯಲ್ಲೇ ಬಂದೂಕು ಹಿಡಿದು ರೀಲ್ಸ್; ದೆಹಲಿ ಪೊಲೀಸ್ ಪೇದೆ ಅಮಾನತು

ಭದ್ರತಾ ಕರ್ತವ್ಯದಲ್ಲೇ ಬಂದೂಕು ಪ್ರದರ್ಶಿಸಿ ರೀಲ್ಸ್; ಪೇದೆ ಅಮಾನತು

BRICS Summit 2026: ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಿಕ್ಸ್‌ನ 18ನೇ ಶೃಂಗಸಭೆಯ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ದೆಹಲಿ ಪೊಲೀಸ್ ಪೇದೆ ದೀಪಕ್ ಬಂಗಾರ್ ಲಘು ಯಂತ್ರ ಬಂದೂಕು ಮತ್ತು ಪಿಸ್ತೂಲ್ ಪ್ರದರ್ಶಿಸಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಂಚಿಕೊಂಡ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾರೆ. ವಿಯೊಗಳು ವೈರಲ್ ಆದ ಬಳಿಕ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ಈ ಕುರಿತು ಇಲಾಖಾ ವಿಚಾರಣೆ ನಡೆಯುತ್ತಿದೆ.

ಮೆಕ್ಕಾ ಗುರಿಯಾಗಿಸಿಕೊಂಡ ಹೌತಿ ದಾಳಿ: ಸೌದಿಯಲ್ಲಿ ಮೊದಲ ಬಾರಿಗೆ ವೈಮಾನಿಕ ಎಚ್ಚರಿಕೆ

ಹೌತಿ ದಾಳಿ ಆರೋಪದ ಬೆನ್ನಲ್ಲೇ ಮೆಕ್ಕಾ, ಜೆಡ್ಡಾ, ತಾಇಫ್‌ನಲ್ಲಿ ಅಲರ್ಟ್

Air Raid Alert: ಯೆಮೆನ್‌ನ ಹೌತಿ ಬಂಡುಕೋರರು ಮೆಕ್ಕಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಮೆಕ್ಕಾ, ಜೆಡ್ಡಾ ಮತ್ತು ತಾಇಫ್ ಪ್ರದೇಶಗಳಲ್ಲಿ ವೈಮಾನಿಕ ಬೆದರಿಕೆ ಎಚ್ಚರಿಕೆ ನೀಡಲಾಗಿದೆ. ಮೆಕ್ಕಾದಲ್ಲಿ ಇಂತಹ ಎಚ್ಚರಿಕೆ ನೀಡಿರುವುದು ಇದೇ ಮೊದಲ ಬಾರಿ.

UPI ಪಾವತಿಯಲ್ಲಿ ಹೊಸ ನಿಯಮ; 2,000 ರೂಪಾಯಿ ಮೇಲ್ಪಟ್ಟ ವಹಿವಾಟಿಗೆ ಶೇಕಡಾ 0.4 MDR

UPI ಮೂಲಕ ದೊಡ್ಡ ಮೊತ್ತ ಪಾವತಿಸುವವರಿಗೆ ಹೊಸ ನಿಯಮ

UPI charges: 2,000ಕ್ಕಿಂತ ಹೆಚ್ಚಿನ ಮೊತ್ತದ ಕೆಲವು ವ್ಯಾಪಾರಿ UPI ಪಾವತಿಗಳಿಗೆ 0.4% ಮರ್ಚೆಂಟ್ ಡಿಸ್ಕೌಂಟ್ ರೇಟ್‌ (MDR) ವಿಧಿಸುವ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಆದರೆ ಈ ಶುಲ್ಕವನ್ನು ಗ್ರಾಹಕರಿಂದ ನೇರವಾಗಿ ವಸೂಲಿ ಮಾಡಲು ಅವಕಾಶವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ UPI ವರ್ಗಾವಣೆಗಳು ಹಾಗೂ ₹2,000ರವರೆಗಿನ ಪಾವತಿಗಳು ಎಂದಿನಂತೆ ಉಚಿತವಾಗಿರಲಿವೆ. ಸಣ್ಣ ವ್ಯಾಪಾರಿಗಳಿಗೂ ಕೆಲವು ವಿನಾಯಿತಿಗಳು ದೊರೆಯಲಿವೆ

Firozabad Horror: ತುಂಬು ಗರ್ಭಿಣಿಯ ಹೊಟ್ಟೆಗೆ ಒದ್ದ ಪೊಲೀಸಪ್ಪ; ಗಂಡು ಮಗುವಿಗೆ ಜನ್ಮ ನೀಡಿ ಅಸುನೀಗಿದ ಮಹಿಳೆ

ಉತ್ತರ ಪ್ರದೇಶದಲ್ಲಿ ಗರ್ಭಿಣಿಯನ್ನು ಒದ್ದು ಕೊಂದ ಪೊಲೀಸ್

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಕಳವು ಪ್ರಕರಣದಲ್ಲಿ ಪತಿಯನ್ನು ಬಂಧಿಸಲು ಮನೆಗೆ ಬಂದಿದ್ದ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 28 ವರ್ಷದ ಗರ್ಭಿಣಿ ಅಂಜಲಿ ಅವರ ಹೊಟ್ಟೆಗೆ ಪೊಲೀಸ್ ಸಿಬ್ಬಂದಿಯೋರ್ವ ಒದ್ದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದು, ಬಳಿಕ ಅವರು ಗಂಡು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳು ಸೇರಿ ಆರು ಪೊಲೀಸ್ ಸಿಬ್ಬಂದಿಯನ್ನು ನಿರ್ಲಕ್ಷ್ಯದ ಆರೋಪದಡಿ ಅಮಾನತುಗೊಳಿಸಲಾಗಿದೆ.

ಪ್ರವಾಹದ ನಡುವೆಯೂ ಪಾಠಕ್ಕೆ ವಿರಾಮವಿಲ್ಲ; ಬಿಹಾರದಲ್ಲಿ ದೋಣಿಯೇ ಮಕ್ಕಳ ತರಗತಿ! ಕಲಿಕಾಸಕ್ತಿಗೆ ದೇಶವೇ ಫಿದಾ

ನೆರೆಯಿಂದ ಊರೇ ಮುಳುಗಿದಾಗ ದೋಣಿಯನ್ನೇ ತರಗತಿಯಾಗಿಸಿದ ಶಿಕ್ಷಕ

Bihar Flood: ಬಿಹಾರದ ಕತಿಹಾರ್‌ ಜಿಲ್ಲೆಯಲ್ಲಿ ಭಾರಿ ಪ್ರವಾಹದಿಂದ ಶಾಲೆ, ಮನೆ ಹಾಗೂ ಕೋಚಿಂಗ್‌ ಕೇಂದ್ರಗಳು ಜಲಾವೃತವಾಗಿವೆ. ಶಾಲೆಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಖಾಸಗಿ ಶಿಕ್ಷಕರೊಬ್ಬರು ದೋಣಿಯಲ್ಲೇ ತರಗತಿಗಳನ್ನು ನಡೆಸುತ್ತಿದ್ದಾರೆ. ಪೋಷಕರ ಒಪ್ಪಿಗೆ ಪಡೆದು ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಪಾಠ ಮುಂದುವರಿಸಲಾಗುತ್ತಿದ್ದು, ಪ್ರವಾಹದ ನಡುವೆಯೂ ಶಿಕ್ಷಣದ ಮಹತ್ವವನ್ನು ಮಕ್ಕಳು ಸಾರಿದ್ದಾರೆ.

ಪಿಎಫ್ ಖಾತೆದಾರರಿಗೆ ಗುಡ್‌ನ್ಯೂಸ್‌; ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲೇ ಮಾಹಿತಿ: ಅಧಿಕೃತ ಚಾನೆಲ್ ಆರಂಭಿಸಿದ ಇಪಿಎಫ್‌ಒ

ಇನ್ಮುಂದೆ ಬೆರಳಂಚಿನಲ್ಲಿ ಪಿಎಫ್‌ ಮಾಹಿತಿ; ವಾಟ್ಸ್‌ಆ್ಯಪ್‌ ಚಾನೆಲ್ ಆರಂಭ

EPFO Launches WhatsApp Channel: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ ತನ್ನ ಸದಸ್ಯರು ಹಾಗೂ ಪಿಂಚಣಿದಾರರಿಗೆ ಪ್ರಮುಖ ಮಾಹಿತಿ ಮತ್ತು ಸೇವಾ ನವೀಕರಣಗಳನ್ನು ಸುಲಭವಾಗಿ ತಲುಪಿಸಲು ಅಧಿಕೃತ ವಾಟ್ಸ್‌ಆ್ಯಪ್‌ ಚಾನೆಲ್ ಆರಂಭಿಸಿದೆ. ಆದರೆ ಈ ಚಾನೆಲ್‌ನಲ್ಲಿ ವೈಯಕ್ತಿಕ ಪಿಎಫ್ ಮೊತ್ತ, ಖಾತೆ ವಿವರ ಅಥವಾ ಅರ್ಜಿ ಸ್ಥಿತಿ ಪರಿಶೀಲಿಸುವ ಸೌಲಭ್ಯವಿದೆ ಎಂದು ಇಪಿಎಫ್‌ಒ ತಿಳಿಸಿಲ್ಲ.

ಅಮೆರಿಕದ ಸುರಂಗ ರೈಲು ಹಳಿಯಲ್ಲಿ ಭಾರತೀಯ ಯುವತಿ ಸೇರಿ ಇಬ್ಬರ ದಾರುಣ ಅಂತ್ಯ; ನಿಗೂಢ ಸಾವಿನ ರಹಸ್ಯ ಬೇಧಿಸಲು ಮುಂದಾದ ಪೊಲೀಸರು

ನ್ಯೂಯಾರ್ಕ್‌ನಲ್ಲಿ ರೈಲು ಹರಿದು ಭಾರತೀಯ ಯುವತಿ ಸಾವು

Subway Train In New York: ಅಮೆರಿಕದ ನ್ಯೂಯಾರ್ಕ್‌ನ ಲೋವರ್ ಮ್ಯಾನ್‌ಹ್ಯಾಟನ್‌ನ ಸ್ಪ್ರಿಂಗ್ ಸ್ಟ್ರೀಟ್ ಸುರಂಗ ರೈಲು ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಘಟನೆಯಲ್ಲಿ ಭಾರತೀಯ ಮೂಲದ 24 ವರ್ಷದ ಮಲೈಕಾ ಚಿತ್ರೆ ಹಾಗೂ ಆಕೆಯ ಸ್ನೇಹಿತ ನೇಪಾಳಿ-ಅಮೆರಿಕ ನಿವಾಸಿ ನವಮ್ ಕೌಲ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬರು ಹಳಿಗೆ ಬಿದ್ದಿದ್ದು, ಮತ್ತೊಬ್ಬರು ಸಹಾಯ ಮಾಡಲು ಹಳಿಗೆ ಇಳಿದಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.

ಹತ್ಯೆಗೀಡಾದ ಸುವೇಂದು ಅಧಿಕಾರಿ ಆಪ್ತ ಸಹಾಯಕನ ತಾಯಿಗೆ ನಂದಿಗ್ರಾಮ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್

ನಂದಿಗ್ರಾಮ ಉಪಚುನಾವಣೆ: ಹಸಿರಾಣಿ ರಾಥ್‌ಗೆ ಬಿಜೆಪಿ ಟಿಕೆಟ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಹತ್ಯೆಗೀಡಾದ ಆಪ್ತ ಸಹಾಯಕ ಚಂದ್ರನಾಥ್ ರಾಥ್ ಅವರ ತಾಯಿ ಹಸಿರಾಣಿ ರಾಥ್ ಅವರನ್ನು ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಸುವೇಂದು ಅಧಿಕಾರಿ ಅವರೇ ಹಸಿರಾಣಿ ರಾಥ್ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ.

ಗುರುಗ್ರಾಮ್ ಹಿಟ್‌ ಆ್ಯಂಡ್‌ ರನ್‌ ಪ್ರಕರಣ: ಬೈಕ್‌ಗೆ ಡಿಕ್ಕಿ ಹೊಡೆದ ಕಲ್ಯಾಣ್ ಬೈನ್ಸ್ಲಾ ಫಸ್ಟ್‌ ರಿಯಾಕ್ಷನ್‌ ಇದು

ಗುರುಗ್ರಾಮ್ ಹಿಟ್‌ ಆ್ಯಂಡ್‌ ರನ್‌ ಪ್ರಕರಣ: ಆರೋಪಿ ಕಲ್ಯಾಣ್ ಸ್ಪಷ್ಟನೆ

Kalyan Bainsla: ಹರಿಯಾಣದ ಗುರುಗ್ರಾಮ್‌ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್‌ಗೆ ಕಾರಿನಿಂದ ಡಿಕ್ಕಿ ಹೊಡೆದ ಪ್ರಕರಣದಲ್ಲಿ ಆರೋಪಿ ಕಲ್ಯಾಣ್ ಬೈನ್ಸ್ಲಾ ತಾನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ ಎಂದು ಹೇಳಿದ್ದಾರೆ. ಬೈಕ್‌ನಲ್ಲಿ ಮಹಿಳೆ ಇದ್ದಾಳೆ ಎಂಬುದೂ ತನಗೆ ತಿಳಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜಸ್ಥಾನ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಭರ್ಜರಿ ಮುನ್ನಡೆ, ಕಾಂಗ್ರೆಸ್‌ಗೆ ಭಾರಿ ಮುಖಭಂಗ

ರಾಜಸ್ಥಾನ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ

Urban Local Body Polls: ರಾಜಸ್ಥಾನದ 309 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ನಡೆದಿದ್ದು, ಆಡಳಿತಾರೂಢ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಹಲವು ವಾರ್ಡ್‌ಗಳಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದೆ. ಸೆಪ್ಟೆಂಬರ್ 9 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.

ಟೀ, ಅಪ್ಪುಗೆ, ಶೇಕ್‌ ಹ್ಯಾಂಡ್‌: ಬ್ರಿಕ್ಸ್ ಶೃಂಗಸಭೆಯಲ್ಲಿ ವಿಶ್ವ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಆತ್ಮೀಯ ಕ್ಷಣಗಳು; ಅಪರೂಪದ ದೃಶ್ಯ ವೈರಲ್‌

ಪುಟಿನ್, ಜಿನ್‌ಪಿಂಗ್ ಜತೆ ಮೋದಿ; ಬ್ರಿಕ್ಸ್‌ನ ಅಪರೂಪದ ದೃಶ್ಯಗಳು ವೈರಲ್

BRICS 2026: ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಸೇರಿದಂತೆ ಹಲವು ವಿಶ್ವ ನಾಯಕರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ ಅಪರೂಪದ ದೃಶ್ಯಗಳು ಗಮನ ಸೆಳೆದಿವೆ. ಚಹಾ ಮಾತುಕತೆ, ಹಸ್ತಲಾಘವ, ಅಪ್ಪುಗೆ ಸೇರಿದಂತೆ ಶೃಂಗಸಭೆಯ ಅನೌಪಚಾರಿಕ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪಾಕಿಸ್ತಾನದ ಮತ್ತೊಂದು ಕಳ್ಳಾಟ ಬಯಲು; ದೆಹಲಿಯ ಬ್ರಿಕ್ಸ್ ಶೃಂಗಸಭೆ ವೇಳೆ ಸ್ಫೋಟ ಸಂಭವಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಚಳಿ ಬಿಡಿಸಿದ ಕೇಂದ್ರ ಸರ್ಕಾರ

ಬ್ರಿಕ್ಸ್ ಶೃಂಗಸಭೆ ಕುರಿತು ಸುಳ್ಳು ಪ್ರಚಾರ; ಕೇಂದ್ರದಿಂದ ಸ್ಪಷ್ಟನೆ

ಬ್ರಿಕ್ಸ್ ಶೃಂಗಸಭೆಯ ವೇಳೆ ನವದೆಹಲಿಯಲ್ಲಿ ಸ್ಫೋಟ ಸಂಭವಿಸಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂಬ ಸಾಮಾಜಿಕ ಜಾಲತಾಣದ ಸುದ್ದಿ ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವೈರಲ್ ವಿಡಿಯೋ 2025ರ ನವೆಂಬರ್‌ನಲ್ಲಿ ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ಹಳೆಯ ದೃಶ್ಯವಾಗಿದ್ದು, ಅದನ್ನು ಬ್ರಿಕ್ಸ್ ಶೃಂಗಸಭೆಯ ಸಂದರ್ಭದ ಘಟನೆ ಎಂದು ತಪ್ಪಾಗಿ ಬಿಂಬಿಸಲಾಗಿದೆ.

ಕ್ಷಿ ಜಿನ್‌ಪಿಂಗ್‌ ಜತೆ ನರೇಂದ್ರ ಮೋದಿ ಮಾತುಕತೆ ಬೆನ್ನಲ್ಲೇ ಭಾರತದ ಗಡಿಯಲ್ಲಿನ ಚೀನಾ ಸೈನಿಕರ ಸಂಖ್ಯೆಯಲ್ಲಿ ಕಡಿತ: ಸವಾಲು ಇಷ್ಟಕ್ಕೇ ಮುಗಿದಿಲ್ಲ!

ಭಾರತದ ಗಡಿಯಲ್ಲಿನ ಚೀನಾ ಸೈನಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆ

Line of Actual Control: ಭಾರತದಲ್ಲಿನ ಉತ್ತರ ಗಡಿಯಲ್ಲಿನ ಚೀನಾದ ಸೇನಾ ನಿಯೋಜನೆ ಗಣನೀಯವಾಗಿ ಕಡಿಮೆಯಾಗಿದ್ದು, ವಾಸ್ತವಿಕ ನಿಯಂತ್ರಣ ರೇಖೆಯ (LAC) ಎದುರು ಹಾಗೂ ಸಾಂಪ್ರದಾಯಿಕ ತರಬೇತಿ ಪ್ರದೇಶಗಳಲ್ಲಿ ಸುಮಾರು ಹತ್ತು ಬ್ರಿಗೇಡ್‌ಗಳಷ್ಟು ಚೀನೀ ಪಡೆಗಳು ನಿಯೋಜನೆಯಲ್ಲಿವೆ ಎಂದು ಭಾರತೀಯ ಸೇನೆಯ ವಾರ್ಷಿಕ ವರದಿ ತಿಳಿಸಿದೆ.

Ganesha Festival: ಗಣೇಶ ಚತುರ್ಥಿಯಂದು ಈ 4 ವಸ್ತುಗಳನ್ನು ಮನೆಗೆ ತನ್ನಿ; ವಾಸ್ತು ಪ್ರಕಾರ ಸಿಗಲಿದೆ ಶುಭಫಲ

ಗಣೇಶ ಚತುರ್ಥಿಯಂದು ಮನೆಗೆ ತರಬೇಕಾದ 4 ಶುಭ ವಸ್ತುಗಳು

ಗಣೇಶ ಚತುರ್ಥಿಯಂದು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಿಶೇಷ. ವಾಸ್ತು ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಲಕ್ಷ್ಮೀ ಗಣಪತಿ, ಸ್ಪಟಿಕ, ಕವಡೆ ಮತ್ತು ಕಮಲದ ಬೀಜಗಳನ್ನು ಮನೆಗೆ ತಂದು ಪೂಜೆಯಲ್ಲಿ ಬಳಸುವುದರಿಂದ ಸಕಾರಾತ್ಮಕತೆ, ಸಂತೋಷ, ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಕಮಲದ ಬೀಜವನ್ನು ಗಣೇಶನ ಮೂರ್ತಿಯ ಬಲಭಾಗದಲ್ಲಿ ಪೂರ್ವ ದಿಕ್ಕಿಗೆ ಇರಿಸಿ ಪೂಜಿಸುವುದು ಶುಭಕರವೆಂದು ಹೇಳಲಾಗುತ್ತದೆ.

Ganesh Chaturthi 2026: ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಶುಭ ಮೂಹೂರ್ತ ಯಾವುದು? ಪೂಜೆ ವಿಧಾನ, ಚಂದ್ರದರ್ಶನ ನಿಯಮ ಇಲ್ಲಿದೆ

ಗಣಪತಿ ಪ್ರತಿಷ್ಠಾಪನೆಗೆ ಶುಭ ಸಮಯ ಯಾವುದು?

2026ರ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 14ರಂದು ಆಚರಿಸಲಾಗುತ್ತದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬೆಳಗ್ಗೆ 11:20ರಿಂದ ಮಧ್ಯಾಹ್ನ 1:48ರವರೆಗೆ ಶುಭ ಮುಹೂರ್ತವಿದೆ. ಈ ದಿನ ಗಣಪತಿಗೆ ವಿಶೇಷ ಪೂಜೆ, ಗರಿಕೆ, ಮೋದಕ ಹಾಗೂ ನೈವೇದ್ಯ ಅರ್ಪಿಸುವ ಸಂಪ್ರದಾಯವಿದೆ. ಚತುರ್ಥಿಯಂದು ಬೆಳಗ್ಗೆ 9:06ರಿಂದ ರಾತ್ರಿ 8:04ರವರೆಗೆ ಚಂದ್ರದರ್ಶನ ಮಾಡಬಾರದು ಎಂಬ ಧಾರ್ಮಿಕ ನಂಬಿಕೆಯಿದ್ದು, ತಪ್ಪಾಗಿ ಚಂದ್ರನನ್ನು ನೋಡಿದರೆ ಸ್ಯಮಂತಕ ಮಂತ್ರ ಪಠಿಸುವ ಸಂಪ್ರದಾಯವಿದೆ.

ಬ್ರಿಕ್ಸ್‌ ನಾಯಕರಿಗೆ ಭರ್ಜರಿ ಶಾಖಾಹಾರಿ ಔತಣ; ಮೆನುವಿನಲ್ಲಿ ಮಿಲ್ಲೆಟ್ ಪಲಾವ್‌, ಬೀಟ್‌ರೂಟ್‌ ರಾಯ್ತ ಸೇರಿ ಏನೇನಿದೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಬ್ರಿಕ್ಸ್‌ ನಾಯಕರ ಗಾಲಾ ಡಿನ್ನರ್‌ನಲ್ಲಿ ವಿಶೇಷ ಖಾದ್ಯಗಳು

BRICS Gala Dinner Menu: ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯ ಹಿನ್ನೆಲೆಯಲ್ಲಿ ವಿಶ್ವ ನಾಯಕರು ಹಾಗೂ ಗಣ್ಯರಿಗೆ ವಿಶೇಷ ಗಾಲಾ ಡಿನ್ನರ್‌ ಆಯೋಜಿಸಲಾಗಿತ್ತು. ಭಾರತದ ಪಾಕ ವೈವಿಧ್ಯವನ್ನು ಪರಿಚಯಿಸುವ ಉದ್ದೇಶದಿಂದ ಸಿದ್ಧಪಡಿಸಲಾದ ಮೆನುವಿನಲ್ಲಿ ಮಿಲ್ಲೆಟ್‌ ಪಲಾವ್‌, ಬೀಟ್‌ರೂಟ್‌ ರಾಯ್ತ, ಖುಂಬ್‌ ಗಲೌಟಿ ಸೇರಿ ಹಲವು ವಿಶೇಷ ಖಾದ್ಯಗಳಿದ್ದವು. ಸಿಹಿತಿಂಡಿ ವಿಭಾಗದಲ್ಲಿ ಹಳೆಯ ದೆಹಲಿಯ ಫ್ರೂಟ್‌ ಕ್ರೀಮ್‌ ಕೂಡ ಸ್ಥಾನ ಪಡೆದಿತ್ತು.

Loading...