Murder Case: ಪತ್ನಿ, ಮಗುವಿನ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
Udupi news: ಪತ್ನಿ, ಮಗುವಿನೊಂದಿಗೆ ಮಲಗಿದ್ದ ವಿನಯ್ ಕೋಣೆಗೆ ಹೋಗಿ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ತಡೆಯಲು ಹೋಗಿದ್ದ ವಿನಯ್ ಪತ್ನಿ ಕೈಗೆ ಗಂಭೀರ ಗಾಯವಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಉಡುಪಿ : ಉಡುಪಿಯಲ್ಲಿ ಮತ್ತೊಂದು ಭೀಕರ ಮರ್ಡರ್ (Udupi crime news) ನಡೆದಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ (murder case) ಮಾಡಲಾಗಿದೆ. ಉಡುಪಿ ನಗರದ ಪುತ್ತೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವಿನಯ್ ದೇವಾಡಿಗ (35) ಎಂಬವರನ್ನು ಕೊಲೆ ಮಾಡಲಾಗಿದೆ. ವಿನಯ್ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆತನ ಕೋಣೆಗೇ ಹೋಗಿ ಪತ್ನಿ, ಮಗುವಿನೊಂದಿಗೆ ಮಲಗಿದ್ದ ವಿನಯ್ ಮೇಲೆ ಅಟ್ಯಾಕ್ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗಾರರ ತಂಡದಲ್ಲಿ ಮೂವರು ಇದ್ದರು ಎಂದು ಗೊತ್ತಾಗಿದೆ.
ನಿನ್ನೆ ರಾತ್ರಿ 11 ಗಂಟೆಗೆ ವಿನಯ್ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿ ವಿನಯ್ ಇದ್ದನಾ ಎಂದು ವಿಚಾರಿಸಿದ್ದಾರೆ. ಸ್ನೇಹಿತರು ಇರಬಹುದು ಎಂದು ಕುಟುಂಬಸ್ಥರು ಮನೆಯೊಳಗೆ ಬಿಟ್ಟುಕೊಂಡಿದ್ದಾರೆ. ಪತ್ನಿ, ಮಗುವಿನೊಂದಿಗೆ ಮಲಗಿದ್ದ ವಿನಯ್ ಕೋಣೆ ಹೋಗಿ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ತಡೆಯಲು ಹೋಗಿದ್ದ ವಿನಯ್ ಪತ್ನಿ ಕೈಗೆ ಗಂಭೀರ ಗಾಯವಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಪೊಲೀಸರು ಎಲ್ಲ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Hassan Murder Case: ತಂದೆಯ ಸಾವಿನಿಂದಲೇ ಬಯಲಾಯ್ತು ಮಗನ ಕೊಲೆಯ ರಹಸ್ಯ! ಕಿರಿಯ ಮಗನೇ ತೋರಿಸಿದ ಅಸ್ಥಿಪಂಜರ