Self Harming: 2 ವರ್ಷದ ಮಗುವಿನ ಕತ್ತು ಹಿಸುಕಿ, ನೇಣು ಹಾಕಿಕೊಂಡ ದಂಪತಿ
ಕೆ.ಆರ್.ಪೇಟೆಯ ಜಯನಗರ ಬಡಾವಣೆ ಮನೆಯೊಂದರಲ್ಲಿ ದಂಪತಿ ಬಾಡಿಗೆಗೆ ಇದ್ದರು. ಇಂದು (ಮಾ.9) ಬೆಳಿಗ್ಗೆ ಕೌಟುಂಬಿಕ ಕಲಹದಿಂದಾಗಿ ತಮ್ಮ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮಗು ಅಸ್ವಸ್ಥಗೊಂಡಿದೆ. ಬಳಿಕ ದಂಪತಿ ನೇಣಿಗೆ ಶರಣಾಗಿದ್ದಾರೆ.
ಮೃತ ದರ್ಶನ್, ದಿವ್ಯಶ್ರೀ -
ಮಂಡ್ಯ, ಮಾರ್ಚ್ 9: ಕೌಟುಂಬಿಕ ಕಲಹ ಉಲ್ಬಣಿಸಿ 2 ವರ್ಷದ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣಿಗೆ (Self Harming) ಶರಣಾಗಿದ್ದಾರೆ. ಕತ್ತು ಹಿಸುಕಿದ್ದರಿಂದ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪಾರಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯದ (Mandya) ಕೆ.ಆರ್.ಪೇಟೆ (KR Pete) ಪಟ್ಟಣದಲ್ಲಿ ನಡೆದಿದೆ.
ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ನೇಣಿಗೆ ಶರಣಾದ ದಂಪತಿ. ತಮ್ಮ ಎರಡು ವರ್ಷದ ಮಗುವನ್ನು ಕತ್ತು ಹಿಸುಕಿ, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಈ ದಂಪತಿ ಕಳೆದ ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ಕೆ.ಆರ್.ಪೇಟೆಯ ಜಯನಗರ ಬಡಾವಣೆ ಮನೆಯೊಂದರಲ್ಲಿ ದಂಪತಿ ಬಾಡಿಗೆಗೆ ಇದ್ದರು. ಇಂದು (ಮಾ.9) ಬೆಳಿಗ್ಗೆ ಕೌಟುಂಬಿಕ ಕಲಹದಿಂದಾಗಿ ತಮ್ಮ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ.
ಈ ವೇಳೆ ಮಗು ಅಸ್ವಸ್ಥಗೊಂಡಿದೆ. ಬಳಿಕ ದಂಪತಿ ನೇಣಿಗೆ ಶರಣಾಗಿದ್ದಾರೆ. ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಬದುಕುಳಿದಿದೆ. ಈವರೆಗೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೆ.ಆರ್.ಪೇಟೆ ಟೌನ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಲೈವ್ ಸ್ಟ್ರೀಮಿಂಗ್‌ನಲ್ಲೇ ಖ್ಯಾತ ಬಿಗ್ ಬಾಸ್ ಮಾಜಿ ಸ್ಪರ್ಧಿ ಆತ್ಮಹತ್ಯೆಗೆ ಯತ್ನ!
ಷೇರಿನಲ್ಲಿ ಲಾಸ್, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ
ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಸ್ ಆಗಿದ್ದಕ್ಕೆ ಮನನೊಂದು ವ್ಯಕ್ತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ನಗರದ ಹೆಬ್ಬಾಳದಲ್ಲಿ (Hebbal) ನಡೆದಿದೆ. ವೆಂಕಟೇಶ್ (50) ಮೃತ ವ್ಯಕ್ತಿ. ಷೇರು ಮಾರುಕಟ್ಟೆಯಲ್ಲಿ ಲಾಸ್ ಆಗಿದ್ದಲ್ಲದೇ ಅನಾರೋಗ್ಯದಿಂದ ಕೂಡ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಮೃತ ವೆಂಕಟೇಶ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಸ್ ಕೂಡ ಆಗಿತ್ತು. ಜೊತೆಗೆ ಇತ್ತ ಸಾಲಗಾರರ ಕಾಟವು ಹೆಚ್ಚಾಗಿತ್ತು. ಇದೆಲ್ಲದರಿಂದ ಮನನೊಂದು ಹೆಬ್ಬಾಳ ಬಳಿಯಲ್ಲಿರುವ ರೈಲ್ವೆ ಟ್ರ‍್ಯಾಕ್‌ಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.