Lockup death: ಚನ್ನಪಟ್ಟಣ ಠಾಣೆಯಲ್ಲಿ ಕಳ್ಳತನ ಆರೋಪಿ ಸಾವು, ಲಾಕಪ್ ಡೆತ್ ಆರೋಪ
Bengaluru: ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಕಳ್ಳತನ ಆರೋಪದಲ್ಲಿ ಪೊಲೀಸರು ರಮೇಶ್ ಎಂಬಾತನನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಈತ ಪೊಲೀಸ್ ಠಾಣೆಯಲ್ಲೇ ಸಾವನ್ನಪ್ಪಿದ್ದು, ಸಾವಿನ ಸುತ್ತ ಅನುಮಾನ ಮೂಡಿದೆ.


ಬೆಂಗಳೂರು: ಬೆಂಗಳೂರು (Bengaluru) ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ (Channapatna) ಕಳ್ಳತನ ಆರೋಪಿಯೊಬ್ಬನ ಶವ ಲಾಕಪ್‌ನಲ್ಲಿ ಕಂಡುಬಂದಿದ್ದು, ಲಾಕಪ್ ಡೆತ್ (Lockup death) ಆರೋಪ ಕೇಳಿ ಬಂದಿದೆ. ಕಳ್ಳತನ ಆರೋಪದಲ್ಲಿ ಬಂಧನವಾಗಿದ್ದ ಆರೋಪಿ ರಮೇಶ್ ಎಂಬಾತನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸ್ ಠಾಣೆಯಲ್ಲೇ ಈತ ಸಾವನ್ನಪ್ಪಿದ್ದು, ಇದು ಆತ್ಮಹತ್ಯೆಯಲ್ಲ ಲಾಕಪ್ ಡೆತ್ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಕಳ್ಳತನ ಆರೋಪದಲ್ಲಿ ಪೊಲೀಸರು ರಮೇಶ್ ಎಂಬಾತನನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಈತ ಪೊಲೀಸ್ ಠಾಣೆಯಲ್ಲೇ ಸಾವನ್ನಪ್ಪಿದ್ದು, ಸಾವಿನ ಸುತ್ತ ಅನುಮಾನ ಮೂಡಿದೆ. ಠಾಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಆತನೇ ನೇಣಿಗೆ ಶರಣಾದನಾ ಅಥವಾ ಪೊಲೀಸರ ಹೊಡೆತಕ್ಕೆ ಬಲಿಯಾದನಾ ಎನ್ನುವ ಅನುಮಾನ ಈ ಪ್ರಕರಣದಲ್ಲಿ ಮೂಡಿದೆ. ಮೃತ ರಮೇಶ್ ಕುಟುಂಬಸ್ಥರು ಇದು ಲಾಕಪ್ ಡೆತ್ ಎಂದು ಆಕ್ರೋಶ ಹೊರಹಾಕಿದ್ದಾರೆ.
ಎಸ್ಪಿ ಶ್ರೀನಿವಾಸ್ ಗೌಡ ಭೇಟಿ, ಪರಿಶೀಲನೆ
ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ. ಸ್ಥಳಕ್ಕೆ ಎಎಸ್ಪಿ ರಾಮಚಂದ್ರಯ್ಯ ಹಾಗೂ ಎಸ್ಪಿ ಶ್ರೀನಿವಾಸ್ ಗೌಡ ಸಹ ಭೇಟಿ ಪರಿಶೀಲನೆ ನಡೆಸಿದ್ದಾರೆ. ರಮೇಶ್ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರಿನ ದುಂಡನಹಳ್ಳಿ ನಿವಾಸಿಯಾಗಿದ್ದಾರೆ. ಚನ್ನಪಟ್ಟಣದ ಬೊಮ್ಮನಾಯಕನಹಳ್ಳಿ ಗ್ರಾಮದ ದೇವಸ್ಥಾನದ ಕಳ್ಳತನ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು. ರಮೇಶ್ ಜೊತೆಗೆ ಮಗ ಮಂಜು ಎಂಬಾತನನ್ನು ಸಹ ಬಂಧಿಸಿದ್ದರು. ಈಗ ಮಗ ಮಂಜು ಎಂ.ಕೆ.ದೊಡ್ಡಿ ಠಾಣೆಯಲ್ಲೇ ಇದ್ದಾನೆ.
ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ರಮೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪ್ಪನ ಸಾವಿಗೆ ಪೊಲೀಸರೇ ಕಾರಣ ಎಂದು ಆಸ್ಪತ್ರೆ ಬಳಿ ಮೃತನ ಮಕ್ಕಳಾದ ಉಷಾ, ಆಶಾ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Road Accident: ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ, ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವು